ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಕರುಣ್‌ ನಾಯರ್‌ ಔಟ್‌, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

India's Probable Playing Xi: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಟೆಸ್ಟ್‌ ಸರಣಿಯಲ್ಲಿ ಮೂರು ಪಂದ್ಯಗಳು ಮುಗಿದಿವೆ. ಇದೀಗ ಉಭಯ ತಂಡಗಳು ಜುಲೈ 23 ರಂದು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಆರಂಭವಾಗುವ ನಾಲ್ಕನೇ ಟೆಸ್ಟ್‌ಗೆ ತಯಾರಿ ನಡೆಸುತ್ತಿವೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.

ನಾಲ್ಲನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ

Profile Ramesh Kote Jul 16, 2025 4:48 PM

ನವದೆಹಲಿ: ಭಾರತ ತಂಡ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ (IND vs ENG) 22 ರನ್‌ಗಳಿಂದ ಸೋಲು ಅನುಭವಿಸಿತ್ತು. ಇಂಗ್ಲೆಂಡ್‌ (England) ತಂಡವನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡ 192 ರನ್‌ಗಳಿಗೆ ಆಲ್‌ಔಟ್‌ ಮಾಡಿತ್ತು. ಆ ಮೂಲಕ 193 ರನ್‌ಗಳ ಗುರಿಯನ್ನು ಟೀಮ್‌ ಇಂಡಿಯಾ (India) ಸುಲಭವಾಗಿ ತಲುಪಬಹುದಿತ್ತು. ಆದರೆ, ಕಂಡೀಷನ್ಸ್‌ ಬ್ಯಾಟಿಂಗ್‌ಗೆ ಕಠಿಣವಾಗಿದ್ದ ಕಾರಣ ಭಾರತ ಐದನೇ ದಿನ ಒಂದೊಂದು ರನ್‌ ಗಳಿಸಲು ಪರದಾಟ ನಡಸಿತ್ತು. ರವೀಂದ್ರ ಜಡೇಜಾ (61 ರನ್‌) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಟೀಮ್‌ ಇಂಡಿಯಾ 170 ರನ್‌ಗಳಿಗೆ ಸೀಮಿತವಾಗಿತ್ತು ಹಾಗೂ ಸೋಲಿನ ನಿರಾಶೆ ಅನುಭವಿಸಿತ್ತು.

ಭಾರತ ಆಡಿದ ಮೂರೂ ಪಂದ್ಯಗಳನ್ನು ಗೆಲ್ಲುವ ಅವಕಾಶವಿತ್ತು. ಆದರೆ, ಲೀಡ್ಸ್‌ ಟೆಸ್ಟ್‌ ಹಾಗೂ ಲಾರ್ಡ್ಸ್‌ ಟೆಸ್ಟ್‌ ಪಂದ್ಯಗಳ ಕೆಲ ನಿರ್ಣಾಯಕ ಸನ್ನಿವೇಶಗಳಲ್ಲಿ ಎಡವಿತ್ತು. ಇದರ ಪರಿಣಾಮವಾಗಿ ಟೀಮ್‌ ಇಂಡಿಯಾ ಸೋಲು ಅನುಭವಿಸಿತ್ತು. ಅಂದ ಹಾಗೆ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ ಪಂದ್ಯದಲ್ಲಿ 336 ರನ್‌ಗಳ ಭರ್ಜರಿ ಗೆಲುವು ಪ;ಡೆದಿತ್ತು.

IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್‌ ವಿರುದ್ಧ ಆರ್‌ ಅಶ್ವಿನ್‌ ಕಿಡಿ!

ಲಾರ್ಡ್ಸ್‌ ಟೆಸ್ಟ್‌ನ ಸೋಲಿನ ಪರಿಣಾಮ ಭಾರತ ತಂಡ ನಾಲ್ಕನೇ ಟೆಸ್ಟ್‌ ಪಂದ್ಯದ ನಿಮಿತ್ತ ತನ್ನ ಪ್ಲೇಯಿಂಗ್‌ XIನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಜಸ್‌ಪ್ರೀತ್‌ ಬುಮ್ರಾ ಈ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಲಿದ್ದಾರೆಂದು ನಿರೀಕ್ಷೆ ಮಾಡಲಾಗಿದೆ. ಈಗಗಲೇ ಅವರು ಎರಡು ಪಂದ್ಯಗಳಲ್ಲಿ ಆಡಿದ್ದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಆಡಬಹುದು. ಅಂದಹಾಗೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಹಾಗಾಗಿ ಅವರ ಬದಲು ಅರ್ಷದೀಪ್‌ ಸಿಂಗ್‌ಗೆ ಅವಕಾಶ ಕೊಟ್ಟರೂ ಅಚ್ಚರಿ ಇಲ್ಲ.

ಮತ್ತೊಂದೆಡೆ 8 ವರ್ಷಗಳ ಬಳಿಕ ಭಾರತ ಟೆಸ್ಟ್‌ ತಂಡಕ್ಕೆ ಮರಳಿದ್ದ ಕರುಣ್‌ ನಾಯರ್‌ಗೆ ಆರಂಭಿಕ ಮೂರೂ ಪಂದ್ಯಗಳಲ್ಲಿ ಆಡಿಸಲಾಗಿತ್ತು. ಆದರೆ, ಆಡಿದ ಆರೂ ಇನಿಂಗ್ಸ್‌ಗಳಲ್ಲಿ ವಿಫಲರಾಗಿದ್ದಾರೆ. ಇದರಲ್ಲಿ ಅವರಿಂದ ಒಂದೇ ಒಂದು ದೊಡ್ಡ ಇನಿಂಗ್ಸ್‌ ಮೂಡಿ ಬಂದಿಲ್ಲ. ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಎ ತಂಡದ ನಾಯಕ ಅಭಿಮನ್ಯು ಈಶ್ವರನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.

IND vs ENG: ಜಡೇಜಾ ಏಕಾಂಗಿ ಹೋರಾಟ ವ್ಯರ್ಥ, ಲಾರ್ಡ್ಸ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದ ಭಾರತ!

ನಾಲ್ಕನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌ (ಆರಂಭಿಕ ಬ್ಯಾಟ್ಸ್‌ಮನ್‌)

ಕೆಎಲ್‌ ರಾಹುಲ್‌ (ಆರಂಭಿಕ ಬ್ಯಾಟ್ಸ್‌ಮನ್‌)

ಅಭಿಮನ್ಯು ಈಶ್ವರನ್‌ (ಬ್ಯಾಟ್ಸ್‌ಮನ್‌)

ಶುಭಮನ್‌ ಗಿಲ್‌ (ನಾಯಕ, ಬ್ಯಾಟ್ಸ್‌ಮನ್)‌

ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌)

ನಿತೀಶ್‌ ರೆಡ್ಡಿ (ಆಲ್‌ರೌಂಡರ್‌)

ವಾಷಿಂಗ್ಟನ್‌ ಸುಂದರ್‌ (ಆಲ್‌ರೌಂಡರ್‌)

ರವೀಂದ್ರ ಜಡೇಜಾ ( ಆಲ್‌ರೌಂಡರ್‌)

ಆಕಾಶ್‌ ದೀಪ್‌ (ವೇಗದ ಬೌಲರ್‌)

ಮೊಹಮ್ಮದ್‌ ಸಿರಾಜ್‌ (ವೇಗದ ಬೌಲರ್‌)

ಅರ್ಷದೀಪ್‌ ಸಿಂಗ್‌ (ವೇಗದ ಬೌಲರ್‌)

ಪಂದ್ಯದ ವಿವರ

ಭಾರತ vs ಇಂಗ್ಲೆಂಡ್‌

ನಾಲ್ಕನೇ ಟೆಸ್ಟ್‌

ದಿನಾಂಕ: ಜುಲೈ 23, 2025

ಸಮಯ: ಮಧ್ಯಾಹ್ನ 03: 30ಕ್ಕೆ (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಹಾಟ್‌ಸ್ಟಾರ್‌