ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಸ್ಟ್ರೈಕ್‌ ರೇಟ್‌ ಕಡೆಗೆ ಗಮನ ಕೊಡಬೇಡಿʼ-ಕುಚುಕು ಗೆಳೆಯ ವಿರಾಟ್‌ ಕೊಹ್ಲಿಗೆ ಎಬಿಡಿ ಮಹತ್ವದ ಸಲಹೆ!

AB De Villiers on Virat Kohli's Strike rate: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌ 2025) ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಸ್ಟ್ರೈಕ್‌ ರೇಟ್‌ ಕಡೆಗೆ ಗಮನ ನೀಡುವುದಕ್ಕಿಂತ ಮುಖ್ಯವಾಗಿ ಸ್ಮಾರ್ಟ್‌ ಕ್ರಿಕೆಟ್‌ ಆಡಬೇಕೆಂದು ದಕ್ಷಿಣ ಆಫ್ರಿಕಾ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ ಸಲಹೆ ನೀಡಿದ್ದಾರೆ.

ವಿರಾಟ್‌ ಕೊಹ್ಲಿ ಸ್ಮಾರ್ಟ್‌ ಕ್ರಿಕೆಟ್‌ ಆಡಬೇಕೆಂದ ಎಬಿ ಡಿ ವಿಲಿಯರ್ಸ್‌!

ವಿರಾಟ್‌ ಕೊಹ್ಲಿಗೆ ಎಬಿಡಿ ಮಹತ್ವದ ಸಲಹೆ ನೀಡಿದ್ದಾರೆ.

Profile Ramesh Kote Mar 18, 2025 9:01 PM

ಬೆಂಗಳೂರು: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಗೆ ಸಜ್ಜಾಗುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹಿರಿಯ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಗೆ (Virat Kohli) ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ (AB De Villiers) ಮಹತ್ವದ ಸಲಹೆಯನ್ನು ನೀಡಿದ್ದಾರೆ. ವಿರಾಟ್‌ ಕೊಹ್ಲಿ ಐಪಿಎಲ್‌ ಟೂರ್ನಿಯಲ್ಲಿ ತಮ್ಮ ಸ್ಟ್ರೈಕ್‌ ರೇಟ್‌ ಅನ್ನು ಹೆಚ್ಚಿಸಿಕೊಳ್ಳುವುದರ ಬದಲು ಸ್ಮಾರ್ಟ್‌ ಕ್ರಿಕೆಟ್‌ ಆಡುವ ಕಡೆಗೆ ಗಮನ ಕೊಡಬೇಕೆಂದು ಆರ್‌ಸಿಬಿ ದಿಗ್ಗಜ ಎಬಿಡಿ ಹೇಳಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಸ್ಟ್ರೈಕ್‌ ರೇಟ್‌ ವಿಚಾರವಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಕಾರಣ ವಿರಾಟ್‌ ಕೊಹ್ಲಿ ಮುಂದಿನ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮುಕ್ತವಾಗಿ ಬ್ಯಾಟ್‌ ಮಾಡಬಹುದಾ ಎಂದು ಎಬಿ ಡಿ ವಿಲಿಯರ್ಸ್‌ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಬಿಡಿ, ವಿರಾಟ್‌ ಕೊಹ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ತುಂಬಾ ಶಾಂತ ರೀತಿಯಲ್ಲಿ ಕಂಡು ಬಂದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅತ್ಯಂತ ಸ್ಪೋಟಕ ಬ್ಯಾಟ್ಸ್‌ಮನ್‌ ಆಗಿರುವ ಫಿಲ್‌ ಸಾಲ್ಟ್‌ ಜೊತೆಗೆ ಇನಿಂಗ್ಸ್‌ ಆರಂಭಿಸಲಿರುವ ವಿರಾಟ್‌ ಕೊಹ್ಲಿ, ಸ್ಟ್ರೈಕ್‌ ರೇಟ್‌ ಅನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ʻಹೌದು! ನಿಮಗೆ ಕುಟುಂಬದ ಅಗತ್ಯವಿದೆ ಆದರೆ...ʼ: ವಿರಾಟ್‌ ಕೊಹ್ಲಿ ಹೇಳಿಕೆಗೆ ಕಪಿಲ್‌ ದೇವ್‌ ಪ್ರತಿಕ್ರಿಯೆ!

ವಿರಾಟ್‌ ಕೊಹ್ಲಿ ಸ್ಟ್ರೈಕ್‌ ರೇಟ್‌ ಹೆಚ್ಚಿಸುವ ಕಡೆಗೆ ಗಮನ ಕೊಡಬಾರದು

"18ನೇ ಸಂಖ್ಯೆಯ ಜೆರ್ಸಿಯನ್ನು ಧರಿಸುವ ವಿರಾಟ್‌ ಕೊಹ್ಲಿ ಈ ಬಾರಿ ಉತ್ತಮ ಪ್ರದರ್ಶನ ತೋರಬಹುದೆಂದು ನನಗೆ ಅನಿಸುತ್ತಿದೆ. ಈ ಬಾರಿ ಐಪಿಎಲ್‌ ಟೂರ್ನಿಯ ಆರ್‌ಸಿಬಿ ತಂಡ ಅತ್ಯಂತ ಸಮತೋಲನದಿಂದ ಕಾಣುತ್ತಿದೆ. ಹೌದು, ವಿರಾಟ್‌ ಕೊಹ್ಲಿ ಕಳೆದ ಪಂದ್ಯಗಳಲ್ಲಿ ನೋಡಿದಂತೆ ತುಂಬಾ ತಾಳ್ಮೆ ಮತ್ತು ಸಂಯೋಜನೆಯಿಂದ ಕಾಣುತ್ತಿದ್ದಾರೆ. ಅವರು ತಮ್ಮ ಕ್ರಿಕೆಟ್‌ ಅನ್ನು ಆನಂದಿಸುತ್ತಿದ್ದಾರೆಂದು ನಮಗೆ ಅನಿಸುತ್ತಿದೆ. ಕಳೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅವರನ್ನು ನಾನು ತುಂಬಾ ಸ್ಪಷ್ಟವಾಗಿ ವೀಕ್ಷಿಸಿದ್ದೇನೆ ಹಾಗೂ ಅವರು ತಮ್ಮ ಬ್ಯಾಟಿಂಗ್‌ ಅನ್ನು ಆನಂದಿಸುತ್ತಿದ್ದರು. ಫಿಲ್‌ ಸಾಲ್ಟ್‌ ಜೊತೆ ಬ್ಯಾಟ್‌ ಮಾಡುವುದರಿಂದ ವಿರಾಟ್‌ ಕೊಹ್ಲಿ ತಮ್ಮ ಸ್ಟ್ರೈಕ್‌ ರೇಟ್‌ ಹೆಚ್ಚಿಸಿಕೊಳ್ಳಲಿದ್ದಾರೆಂದು ನನಗೆ ಅನಿಸುತ್ತಿಲ್ಲ. ಫಿಲ್‌ ಸಾಲ್ಟ್‌ ಅತ್ಯಂತ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಎಂಬುದನ್ನು ನಾವು ಐಪಿಎಲ್‌ ಹಾಗೂ ಇತರೆ ಟೂರ್ನಿಗಳಲ್ಲಿ ನೋಡಿದ್ದೇವೆ," ಎಂದು ಸ್ಟಾರ್‌ ಸ್ಪೋರ್ಟ್ಸ್‌ ಪ್ರೆಸ್‌ ರೂಮ್‌ನಲ್ಲಿ ಎಬಿ ಡಿ ವಿಲಿಯರ್ಸ್‌ ತಿಳಿಸಿದ್ದಾರೆ.

'ಈ ಸಲ ಕಪ್‌ ನಮ್ದೆ' ಎಂದು ಕರೆಯಬೇಡಿ ಎಂದು ವಿರಾಟ್‌ ಕೊಹ್ಲಿ ನನಗೆ ಹೇಳಿದ್ದಾರೆ: ಎಬಿಡಿ!

ವಿರಾಟ್‌ ಕೊಹ್ಲಿ ಸ್ಮಾರ್ಟ್‌ ಕ್ರಿಕೆಟ್‌ ಆಡಬೇಕು: ಎಬಿಡಿ

ವಿರಾಟ್‌ ಕೊಹ್ಲಿಯ ಆಟದ ತಿಳುವಳಿಕೆಯನ್ನು ಶ್ಲಾಘಿಸಿದ ಎಬಿಡಿ, ತಮ್ಮ ಸ್ಮಾರ್ಟ್‌ ಕ್ರಿಕೆಟ್‌ ಆಡುವ ಮೂಲಕ ಬ್ಯಾಟಿಂಗ್‌ ವಿಭಾಗಕ್ಕೆ ನಾಯಕರಾಗಬೇಕೆಂದು ಬಯಸುತ್ತಿದ್ದಾರೆ.

"ಫಿಲ್‌ ಸಾಲ್ಟ್‌ ಅವರು ವಿರಾಟ್‌ ಕೊಹ್ಲಿ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತಾರೆಂದು ನಾನು ಭಾವಿಸುತ್ತೇನೆ. ಕಳೆದ ಹಲವು ವರ್ಷಗಳಿಂದ ವಿರಾಟ್‌ ಕೊಹ್ಲಿ ಏನು ಮಾಡಿದ್ದಾರೆ, ಇದೀಗ ಅದೇ ಕೆಲಸವನ್ನು ಅವರು ಮುಂದುವರಿಸಬೇಕು. ಆಟವನ್ನು ಅವರು ನಿಯಂತ್ರಿಸಬೇಕು. ಅವರು ಯಾವುದೇ ಆಟಗಾರನಿಗಿಂತ ಅತ್ಯುತ್ತಮವಾದ ಪ್ರವೃತ್ತಿಯನ್ನು ಹೊಂದಿದ್ದಾರೆ. ಯಾವ ಸನ್ನಿವೇಶದಲ್ಲಿ ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳಬೇಕು ಅಥವಾ ಯಾವ ಸನ್ನಿವೇಶದಲ್ಲಿ ಕಡಿಮೆ ಅಪಾಯವನ್ನು ತೆಗೆದುಕೊಳ್ಳಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಬಾರಿ ತಂಡ ಸಾಕಷ್ಟು ಪ್ರಯಾಣವನ್ನು ಮಾಡಬೇಕಾಗಿದೆ ಹಾಗೂ ವಿವಿಧ ಸ್ಥಳಗಳಲ್ಲಿ ಪಂದ್ಯವನ್ನು ಆಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವಿಭಾಗಕ್ಕೆ ನಾಯಕನಾಗಬೇಕಾದ ಅಗತ್ಯವಿದೆ. ಏಕೆಂದರೆ ನಾವು ಯಾವುದೇ ಪಂದ್ಯದಲ್ಲಿ ಬ್ಯಾಟಿಂಹ್‌ ಕುಸಿತವನ್ನು ನೋಡುವಂತಾಗಬಾರದು. ವಿರಾಟ್‌ ಕೊಹ್ಲಿ ಅವರು ತಮ್ಮ ಸುತ್ತು-ಮುತ್ತು ಸಾಕಷ್ಟು ಸ್ಟ್ರೈಕ್‌ ರೇಟ್‌ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸ್ಮಾರ್ಟ್‌ ಕ್ರಿಕೆಟ್‌ ಆಡುವ ಕಡೆಗೆ ಗಮನ ಕೊಡಬೇಕಾಗಿದೆ," ಎಂದು ಎಬಿಡಿ ಸಲಹೆ ನೀಡಿದ್ದಾರೆ.

IPL 2025: ತಾನು ಎದುರಿಸಿದ ಅತ್ಯಂತ ಕಠಿಣ ವೇಗಿಯನ್ನು ಹೆಸರಿಸಿದ ವಿರಾಟ್‌ ಕೊಹ್ಲಿ!

2024ರಲ್ಲಿ 741 ರನ್‌ ಸಿಡಿಸಿದ್ದ ವಿರಾಟ್‌ ಕೊಹ್ಲಿ

ವಿರಾಟ್‌ ಕೊಹ್ಲಿ ಅವರು 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅವರು ಆಡಿದ್ದ 15 ಇನಿಂಗ್ಸ್‌ಗಳಿಂದ 61.75ರ ಸರಾಸರಿ ಹಾಗೂ 154.69ರ ಸ್ಟ್ರೈಕ್‌ ರೇಟ್‌ನಲ್ಲಿ 741 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು ಒಂದು ಶತಕ ಹಾಗೂ ಐದು ಅರ್ಧಶತಕಗಳನ್ನು ಬಾರಿಸಿದ್ದರು. ಇನ್ನು 2023ರ ಐಪಿಎಲ್‌ ಟೂರ್ನಿಯಲ್ಲಿ ಅವರು 639 ರನ್‌ಗಳನ್ನು ಕಲೆ ಹಾಕಿದ್ದರು.