RCB vs KKR: ಸ್ಪೋಟಕ ಅರ್ಧಶತಕ ಸಿಡಿಸಿ ಟೀಕಾಕಾರರಿಗೆ ತಿರುಗೇಟು ನೀಡಿದ ಅಜಿಂಕ್ಯ ರಹಾನೆ!
Ajinkya Rahane scored Fifty: ರಾಯಲ್ ಚಾಂಲೆಂಜರ್ಸ್ ಬೆಂಗಳೂರು ವಿರುದ್ಧ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಸ್ಪೋಟಕ ಅರ್ಧಶತಕ ಸಿಡಿಸಿದರು. 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಅವರು, 31 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಸಿಕ್ಸರ್‌ಗಳೊಂದಿಗೆ 56 ರನ್‌ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದರು.

ಅರ್ಧಶತಕ ಸಿಡಿಸಿದ ಅಜಿಂಕ್ಯ ರಹಾನೆ.

ಕೋಲ್ಕತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆರಂಭಿಕ ಪಂದ್ಯದಲ್ಲಿ (RCB vs KKR) ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ಬೌಲರ್‌ಗಳಿಗೆ ಬೆವರಿಳಿಸಿದ ರಹಾನೆ ಕೇವಲ 25 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಕೆಕೆಆರ್ ತಂಡಕ್ಕೆ ಭರ್ಜರಿ ಆರಂಭ ತಂದುಕೊಡುವಲ್ಲಿ ನೆರವು ನೀಡಿದರು. ತನ್ನ ಈ ಅಬ್ಬರದ ಬ್ಯಾಟಿಂಗ್ ಮೂಲಕ ಅಜಿಂಕ್ಯಾ ರಹಾನೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದರು.
ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ಕ್ವಿಂಟನ್ ಡಿ ಕಾಕ್ ಬಹುಬೇಗ ವಿಕೆಟ್ ಒಪ್ಪಿಸಿದರು. ಪಂದ್ಯದ ಮೊದಲನೇ ಓವರ್‌ನಲ್ಲಿ ಜಾಶ್ ಹೇಝಲ್‌ವುಡ್ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಕ್ಯಾಚ್ ಕೊಟ್ಟಿದ್ದರು. ಆದರೆ, ಸುಯಾಶ್ ಶರ್ಮಾ ಕ್ಯಾಚ್ ಡ್ರಾಪ್ ಮಾಡಿದ್ದರು. ಆದರೆ ಧೃತಿಗೆಡದೆ ಬೌಲ್ ಮಾಡಿದ ಜಾಶ್ ಹೇಝಲ್‌ವುಡ್ ಇನ್‌ಸ್ವಿಂಗ್ ಮೂಲಕ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದರು.
IPL 2025: ʻರೋಹಿತ್ ಶರ್ಮಾ ರೀತಿ ಬ್ಯಾಟ್ ಮಾಡಬೇಡಿʼ-ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ಆರೋನ್ ಫಿಂಚ್!
ಅರ್ಧಶತಕ ಸಿಡಿಸಿದ ರಹಾನೆ
ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಅಜಿಂಕ್ಯ ರಹಾನೆ ತಮ್ಮ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿಯಾಗಿ ಕಂಡು ಬಂದರು. ಮತ್ತೊಂದು ತುದಿಯಲ್ಲಿ ಸುನೀಲ್ ನರೇನ್ ಇದ್ದರೂ ಅಜಿಂಕ್ಯ ರಹಾನೆ ತಾವೇ ಆರ್‌ಸಿಬಿ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಅಜಿಂಕ್ಯ ರಹಾನೆ ಹಾಗೂ ಸುನೀಲ್ ನರೇನ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಕೆಕೆಆರ್ ಪವರ್‌ಪ್ಲೇನಲ್ಲಿ 60 ರನ್‌ಗಳನ್ನು ಕಲೆ ಹಾಕಿತು. ಒಂದು ತುದಿಯಲ್ಲಿ ಅಜಿಂಕ್ಯ ರಹಾನೆ ಸ್ಪೋಟಕ ಬ್ಯಾಟ್ ಮಾಡಿದರು. ಇವರು ಆಡಿದ 31 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಸಿಕ್ಸರ್‌ಗಳೊಂದಿಗೆ 56 ರನ್‌ಗಳನ್ನು ಚಚ್ಚಿದರು. ಆ ಮೂಲಕ ಕೆಕೆಆರ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು.
First game as captain. First 5️⃣0️⃣ as captain 🫡💜pic.twitter.com/VrvUdwUrPg
— KolkataKnightRiders (@KKRiders) March 22, 2025
ಅಜಿಂಕ್ಯ ರಹಾನೆ ಸ್ಪೋಟಕ ಬ್ಯಾಟ್ ಮಾಡುತ್ತಿದ್ದ ವೇಳೆ ಮತ್ತೊಂದು ತುದಿಯಲ್ಲಿ ಸುನೀಲ್ ನರೇನ್ ಸ್ಟನ್ ಆದರು. 56 ರನ್‌ಗಳನ್ನು ಸಿಡಿಸುವ ಜೊತೆಗೆ ಅಜಿಂಕ್ಯ ರಹಾನೆ ಮುರಿಯದ ಎರಡನೇ ವಿಕೆಟ್‌ಗೆ ಸುನೀಲ್ ನರೇನ್ ಜೊತೆ 103 ರನ್‌ಗಳನ್ನು ಸಿಡಿಸಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಸುನೀಲ್ ನರೇನ್, ಆಡಿದ 26 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 44 ರನ್ ಗಳಿಸಿದರು. ಆದರೆ, ರಸಿಖ್ ದಾರ್ ಸಲಾಮ್ ಎಸೆತದಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.
Half a ton but not yet done 💜
— KolkataKnightRiders (@KKRiders) March 22, 2025
Picture abhi baaki hai mere dost pic.twitter.com/EcawBCb6Qn
ಟೀಕೆಗಳಿಗೆ ಉತ್ತರ ನೀಡಿದ ರಹಾನೆ
ಚೆನ್ನೈ ಸೂಪರ್ ಕಿಂಗ್ಸ್ ಪರ ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನವನ್ನು ತೋರುವಲ್ಲಿ ಅಜಿಂಕ್ಯ ರಹಾನೆ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮೆಗಾ ಹರಾಜಿಗೆ ಚೆನ್ನೈ ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ಮೆಗಾ ಹರಾಜಿನ ಮೊದಲನೇ ದಿನ ಅನ್‌ಸೋಲ್ಡ್ ಆಗಿದ್ದ ರಹಾನೆ ಅವರನ್ನು, ಎರಡನೇ ದಿನ ಕೋಲ್ಕತಾ ಫ್ರಾಂಚೈಸಿ ಖರೀದಿಸಿತ್ತು. ಆದರೆ, ಇತ್ತೀಚೆಗೆ ಅವರಿಗೆ ಕೆಕೆಆರ್ ನಾಯಕತ್ವವನ್ನು ನೀಡಲಾಗಿತ್ತು. ಈ ವೇಳೆ ಹಲವು ಮಾಜಿ ಕ್ರಿಕೆಟಿಗರು ರಹಾನೆಗೆ ನಾಯಕತ್ವ ನೀಡಿದ್ದ ಕೋಲ್ಕತಾ ಫ್ರಾಂಚೈಸಿ ನಿರ್ಧಾರವನ್ನು ಟೀಕಿಸಿದ್ದರು. ಆದರೆ, ಆರ್‌ಸಿಬಿ ವಿರುದ್ಧ ತಮ್ಮ ಮೊದಲನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಟೀಕಾಕಾರರ ಬಾಯಿಯನ್ನು ಮುಚ್ಚಿಸಿದರು.