Vaibhav Suryavanshi: ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ದಾಖಲೆ ಬರೆದ ಸೂರ್ಯವಂಶಿ
ಔಟ್ ಆಗಿ ಪೆವಿಲಿಯನ್‌ಗೆ ಮರಳುವ ವೇಳೆ ವೈಭವ್ ಸೂರ್ಯವಂಶಿ ಭಾವುಕರಾಗಿ ಕಣ್ಣೀರು ಸುರಿಸಿದರು. ರಾಜಸ್ಥಾನ್ ತಂಡ ಕಳೆದ ಮೆಗಾ ಹರಾಜಿನಲ್ಲಿ 1.10 ಕೋಟಿ ನೀಡಿ ಖರೀದಿ ಮಾಡಿತ್ತು. ಆಗ ಅವರಿಗೆ 13 ವರ್ಷ ವಯಸ್ಸಾಗಿತ್ತು. ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಅವರು ಭಾರತ ತಂಡದ ಭವಿಷ್ಯದ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.


ಜೈಪುರ: ಐಪಿಎಲ್(IPL 2025) ಆಡಿದ ಅತೀ ಕಿರಿಯ ಆಟಗಾರನೆಂಬ ದಾಖಲೆ ನಿರ್ಮಿಸಿದ 14 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Suryavanshi), ತಾನು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ದಿಗ್ಗಜರ ಜತೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಐಪಿಎಲ್‌ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ 10ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಬ್ಯಾಟಿಂಗ್ ವೈಭವ ತೋರಿದ ಸೂರ್ಯವಂಶಿ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ನೆರವಿನಿಂದ 34 ರನ್ ಗಳಿಸಿದರು.
ಔಟ್ ಆಗಿ ಪೆವಿಲಿಯನ್‌ಗೆ ಮರಳುವ ವೇಳೆ ಭಾವುಕರಾಗಿ ಕಣ್ಣೀರು ಸುರಿಸಿದರು. ರಾಜಸ್ಥಾನ್ ತಂಡ ಕಳೆದ ಮೆಗಾ ಹರಾಜಿನಲ್ಲಿ 1.10 ಕೋಟಿ ನೀಡಿ ಖರೀದಿ ಮಾಡಿತ್ತು. ಆಗ ಅವರಿಗೆ 13 ವರ್ಷ ವಯಸ್ಸಾಗಿತ್ತು. ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಅವರು ಭಾರತ ತಂಡದ ಭವಿಷ್ಯದ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಸಿಕ್ಕಿದ್ದು ಸೂರ್ಯವಂಶಿಗೆ ತಮ್ಮ ಕ್ರಿಕೆಟ್ ಕೌಶಲ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳುವಲ್ಲಿ ಉತ್ತಮ ಅವಕಾಶ ಸಿಕ್ಕಂತಾಗಿದೆ.
ಮೊದಲ ಎಸೆದಲ್ಲೇ ಸಿಕ್ಸರ್ ಬಾರಿಸಿದ ಆಟಗಾರರು
ಕೆವೊನ್ ಕೂಪರ್
ಆಂಡ್ರೆ ರಸೆಲ್
ಕಾರ್ಲೋಸ್ ಬ್ರಾಥ್‌ವೈಟ್
ಅನಿಕೇತ್ ಚೌಧರಿ
ಜಾವೊನ್ ಸೀರ್ಲ್ಸ್
ಸಿದ್ಧೇಶ್ ಲಾಡ್
ಮಹೇಶ್ ತೀಕ್ಷಣ
ಸಮೀರ್ ರಿಜ್ವಿ
ವೈಭವ್ ಸೂರ್ಯವಂಶಿ
𝐌𝐀𝐊𝐈𝐍𝐆. 𝐀. 𝐒𝐓𝐀𝐓𝐄𝐌𝐄𝐍𝐓 🫡
— IndianPremierLeague (@IPL) April 19, 2025
Welcome to #TATAIPL, Vaibhav Suryavanshi 🤝
Updates ▶️ https://t.co/02MS6ICvQl#RRvLSG | @rajasthanroyals pic.twitter.com/MizhfSax4q
ಐಪಿಎಲ್ ಆಡಿದ ಅತಿ ಕಿರಿಯ ಆಟಗಾರರು
ವೈಭವ್ ಸೂರ್ಯವಂಶಿ- 14 ವರ್ಷ
ಪ್ರಯಾಸ್ ರೇ ವರ್ಮನ್- 16 ವರ್ಷ
ಮುಜೀಬ್ ಉರ್ ರೆಹಮಾನ್- 17
ರಿಯಾನ್ ಪರಾಗ್ - 17 ವರ್ಷ
ಸರ್ಫರಾಜ್ ಖಾನ್ - 17 ವರ್ಷ
ಪಂದ್ಯ ಸೋತ ರಾಜಸ್ಥಾನ್
ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಕ್ನೋ ತಂಡ, ಐಡೆನ್ ಮಾರ್ಕ್ರಮ್ ಹಾಗೂ ಆಯುಷ್ ಬದೋನಿ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 180 ರನ್‌ಗಳನ್ನು ಕಲೆ ಹಾಕಿತು.
ಗುರಿ ಬೆನ್ನಟ್ಟಿದ ರಾಜಸ್ಥಾನ್ 17ನೇ ಓವರ್‌ವರೆಗೂ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಾದ ಅವಕಾಶವನ್ನು ಹೊಂದಿತ್ತು. ಆದರೆ 18 ಮತ್ತು 20ನೇ ಓವರ್‌ನಲ್ಲಿ ಆವೇಶ್ ಖಾನ್ ಪರಿಣಾಮಕಾರಿ ಬೌಲಿಂಗ್ ನಡೆಸಿ ರಾಜಸ್ಥಾನ್ ತಂಡವನ್ನು ಕಟ್ಟಿ ಹಾಕಿದರು. ಕೇವಲ 2 ರನ್ ಅಂತರದಿಂದ ರಾಜಸ್ಥಾನ್ ಸೋಲು ಕಂಡಿತು.