ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಂದೇ ಭಾರತ್ ರೈಲಿನಲ್ಲಿ ಅಶಿಸ್ತಿನ ವರ್ತನೆ: ನೆಲದ ತುಂಬೆಲ್ಲಾ ಕಸ ಎಸೆದ ಪ್ರಯಾಣಿಕರು!

Viral Video: ವಂದೇ ಭಾರತ್ ಕೋಚ್‌ನ ಒಳಗೆ ಪ್ರಯಾಣಿಕರು ಬಳಸಿದ ಕಪ್ , ಪ್ಲೇಟ್‌ಗಳು ಮತ್ತು ತಿಂಡಿ ಪ್ಯಾಕೆಟ್‌ಗಳನ್ನು ಕಸದ ಬುಟ್ಟಿಗೆ ಹಾಕುವ ಬದಲಾಗಿ ರೈಲಿನ ನೆಲದ ಮೇಲೆಯೇ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಪ್ರಯಾಣಿಕರ ಅಶಿಸ್ತಿನ ನಡವಳಿಕೆ ಬಗ್ಗೆ ಕಿಡಿಕಾರಿದ್ದಾರೆ.

ವಂದೇ ಭಾರತ್‌ನಲ್ಲಿ ನೆಲದ ತುಂಬೆಲ್ಲಾ ಕಸ ಎಸೆದ ಪ್ರಯಾಣಿಕರು!

ವಂದೇ ಭಾರತ್‌ನಲ್ಲಿ ಕಳಪೆ ನಾಗರಿಕ ಪ್ರಜ್ಞೆ -

Profile
Pushpa Kumari Feb 12, 2026 1:59 PM

ನವದೆಹಲಿ,ಫೆ.12: ಇತ್ತೀಚೆಗೆ ರೈಲು ಪ್ರಯಾಣಕ್ಕಾಗಿ ಹೆಚ್ಚಿನವರು ಆಧ್ಯತೆ ನೀಡುತ್ತಾರೆ. ಆರಾಮದಾಯಕ ಅನುಭವದ ಜೊತೆಗೆ ಪ್ರಯಾಣ ವೆಚ್ಚವು ಅಗ್ಗವಾಗಿರುತ್ತದೆ. ಆದರೆ ಪ್ರಯಾಣಿಕರಲ್ಲಿ ಕಳಪೆ ನಾಗರಿಕ ಪ್ರಜ್ಞೆಯು ಭಾರತೀಯ ರೈಲ್ವೆ ಅಧಿಕಾರಿಗಳಿಗೆ ತಲೆನೋವಾಗಿ ಕಾಡಿದೆ. ಇದೀಗ ವಂದೇ ಭಾರತ್ ಕೋಚ್‌ನ ಒಳಗೆ ಪ್ರಯಾಣಿಕರು ಬಳಸಿದ ಕಪ್ , ಪ್ಲೇಟ್‌ಗಳು ಮತ್ತು ತಿಂಡಿ ಪ್ಯಾಕೆಟ್‌ಗಳನ್ನು ಕಸದ ಬುಟ್ಟಿಗೆ ಹಾಕುವ ಬದಲಾಗಿ ರೈಲಿನ ನೆಲದ ಮೇಲೆಯೇ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದಾರೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದ್ದು ನೆಟ್ಟಿಗರು ಪ್ರಯಾಣಿಕರ ಅಶಿಸ್ತಿನ ನಡವಳಿಕೆ ಬಗ್ಗೆ ಕಿಡಿಕಾರಿದ್ದಾರೆ.

‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ನಾಗರಿಕ ಪ್ರಜ್ಞೆಯ ಕೊರತೆ ಮತ್ತೊಮ್ಮೆ ಎದ್ದು ಕಾಣಿಸಿದೆ. ಕೋಚ್‌ಗಳ ನೆಲಹಾಸಿನ ಮೇಲೆ ಯಾರೋ ಪ್ರಯಾಣಿಕರು ಬಳಸಿದ ಕಾಗದ ತಟ್ಟೆಗಳು ಮತ್ತು ಪ್ಯಾಕೇಟ್ ಗಳನ್ನು ಅಲ್ಲೆ ಹಾಕಿರುವ ದೃಶ್ಯ ನೋಡಬಹುದು.ಅತ್ಯಾಧುನಿಕ ಸೌಕರ್ಯಗಳು ಹಾಗೂ ಸ್ವಚ್ಛತೆಗೆ ಹೆಸರಾದ ರೈಲಿನ ಒಳಗೆಯೇ ಕಸವನ್ನು ಎಲ್ಲೆಡೆ ಹಾಕಿ ಹೋಗಿದ್ದಾರೆ.

ವಿಡಿಯೋ ನೋಡಿ:



ಈ ದೇಶದಲ್ಲಿ ಕೆಲವು ಜನರು ಉತ್ತಮ ಸೌಲಭ್ಯಗಳಿಗೆ ಅರ್ಹರಾಗುವುದಿಲ್ಲ. ವಂದೇ ಭಾರತ್‌ನಂತಹ ಪ್ರೀಮಿಯಂ, ಉತ್ತಮವಾಗಿ ನಿರ್ವಹಿಸಲ್ಪಟ್ಟ ರೈಲಿನಲ್ಲಿಯೂ ಸಹ, ಜನರು ತಮ್ಮ ಕೆಟ್ಟ ಅಭ್ಯಾಸ ಗಳನ್ನು ತಂದು ಅದನ್ನು ಅವ್ಯವಸ್ಥೆಯನ್ನಾಗಿ ಮಾಡುತ್ತಾರೆ. ಈ ಮನಸ್ಥಿತಿ ಯಾವಾಗ ಬದಲಾ ಗುತ್ತದೆ? ಎಂದು ವಿಡಿಯೊ ಶೇರ್ ಮಾಡಿದ ವ್ಯಕ್ತಿ ಪ್ರಶ್ನಿಸಿದ್ದಾರೆ.

Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?

ಬಳಕೆದಾರರೊಬ್ಬರು "ಕೆಲವು ಜನರಿಗೆ ಇಂತಹ ಸುಧಾರಿತ ಸೌಲಭ್ಯಗಳು ಅರ್ಹವಲ್ಲ. ಇವರಿಗೆ ಎಷ್ಟೇ ಒಳ್ಳೆಯ ಸೌಕರ್ಯ ಕೊಟ್ಟರೂ ತಮ್ಮ ಹಳೆಯ ಕೆಟ್ಟ ಅಭ್ಯಾಸಗಳನ್ನು ಮಾತ್ರ ಬಿಡು ವುದಿಲ್ಲ," ಎಂದು ಕಿಡಿಕಾರಿದ್ದಾರೆ."ಭಾರತದಲ್ಲಿ ರೈಲುಗಳನ್ನು ಆಧುನೀಕರಿಸಬಹುದು, ಆದರೆ ಜನರ ಮನಸ್ಥಿತಿಯನ್ನು ಬದಲಿಸುವುದು ಕಷ್ಟ ಎಂದು ಮತ್ತೊಬ್ಬರು ಬರೆದು ಕೊಂಡಿದ್ದಾರೆ. ಪ್ರತಿಷ್ಠಿತ ರೈಲುಗಳಲ್ಲಿ ಇಂತಹ ಘಟನೆಗಳು ಪದೇ ಪದೇ ಕಂಡು ಬರುವುದು ರೈಲ್ವೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.