ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs LSG: ಮುಂಬೈ ಎದುರು ಸೋಲಿನ ಬೇಸರದಲ್ಲಿದ್ದ ರಿಷಭ್‌ ಪಂತ್‌ಗೆ ಮತ್ತೊಂದು ಆಘಾತ!

ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್‌ 54 ರನ್‌ ಜಯ ಗಳಿಸಿತು. ಈ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ಎಲ್‌ಎಸ್‌ಜಿ ನಾಯಕ ರಿಷಭ್‌ ಪಂತ್‌ಗೆ 24 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ.

IPL 2025: ಸೋಲಿನ ಬೇಸರದಲ್ಲಿದ್ದ ರಿಷಭ್‌ ಪಂತ್‌ಗೆ ಮತ್ತೊಂದು ಆಘಾತ!

ರಿಷಭ್‌ ಪಂತ್‌ಗೆ ದಂಡ.

Profile Ramesh Kote Apr 27, 2025 11:07 PM

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಲಖನೌ ಸೂಪರ್‌ ಜಯಂಟ್ಸ್‌ (Lucknow Super Giants) ತಂಡ, ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ (Mumabi Indians) ವಿರುದ್ಧ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ 54 ರನ್‌ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದ ಸೋಲಿನ ಬೆನ್ನಲ್ಲೆ ನಿಧಾನಗತಿಯ ಬೌಲಿಂಗ್‌ ಕಾರಣ ಎಲ್‌ಎಸ್‌ಜಿ ನಾಯಕ ರಿಷಭ್‌ ಪಂತ್‌ಗೆ 24 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ. ಆ ಮೂಲಕ ಸೋಲಿನ ಬೇಸರದಲ್ಲಿದ್ದ ಪಂತ್‌ಗೆ ಮತ್ತೊಂದು ಆಘಾತವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ 215 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಖನೌ 161 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ರಿಷಭ್ ಪಂತ್ 2 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು.

ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಖನೌ ಸೂಪರ್ ಜಯಂಟ್ಸ್ ನಾಯಕ ರಿಷಭ್ ಪಂತ್‌ಗೆ ದಂಡ ವಿಧಿಸಲಾಗಿದೆ. ಸ್ಲೋ ಓವರ್‌ ರೇಟ್‌ ಕಾರಣ ರಿಷಭ್ ಪಂತ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇನ್ನುಳಿದ ತಂಡದ ಹನ್ನೊಂದರ ಆಟಗಾರರಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 54 ರನ್‌ಗಳಿಂದ ಸೋಲಿಸಿತು.

MI vs LSG: ಲಖನೌಗೆ ಮತ್ತೊಂದು ಆಘಾತ, ವಿಲ್‌ ಜ್ಯಾಕ್ಸ್‌ ಆಲ್‌ರೌಂಡ್‌ ಆಟದಿಂದ ಗೆದ್ದ ಮುಂಬೈ ಇಂಡಿಯನ್ಸ್!

"ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಅವರ ತಂಡದ ಎರಡನೇ ಅಪರಾಧ ಇದಾಗಿದ್ದು, ಇದು ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದೆ" ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಆದ್ದರಿಂದ, ಪಂತ್ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಋತುವಿನಲ್ಲಿ ಲಖನೌ ಸೂಪರ್‌ ಜಯಂಟ್ಸ್ ಎರಡನೇ ಬಾರಿ ನಿಧಾನಗತಿಯ ಬೌಲಿಂಗ್‌ ಪ್ರಮಾದವನ್ನು ಎಸಗಿದೆ.



ಸೋಲಿನ ಬಗ್ಗೆ ರಿಷಭ್‌ ಪಂತ್‌ ಹೇಳಿಕೆ

"ಒಂದು ತಂಡವಾಗಿ ಮೊದಲು ಬೌಲ್‌ ಮಾಡುವ ನಿರ್ಧಾರ ನಮಗೆ ಸರಿಯಾಗಿದೆ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ನಾವು ಹೆಚ್ಚಿನ ಸಮಯವನ್ನು ನಮ್ಮ ಬ್ಯಾಟಿಂಗ್ ಅನ್ನು ಅವಲಂಬಿಸಿದ್ದೇವೆ. ಹೌದು, ಬೌಲರ್‌ಗಳಿಗೆ ನಾವು ಅವರಿಗೆ ಉತ್ತಮ ಕಂಡೀಷನ್ಸ್‌ ನೀಡಲು ಬಯಸುತ್ತೇವೆ, ಆದರೆ ಇಂದು ನಮ್ಮ ದಿನವಾಗಿರಲಿಲ್ಲ. ಎದುರಾಳಿ ತಂಡ ಕೂಡ ಉತ್ತಮ ಪ್ರದರ್ಶವನ್ನು ತೋರಿದೆ. ನಮ್ಮನ್ನ ನಾವು ಪ್ರಶ್ನೆ ಮಾಡುವುದಕ್ಕಿಂತ ಎದುರಾಳಿ ತಂಡವನ್ನು ಶ್ಲಾಘಿಸಬೇಕಾಗಿದೆ," ಎಂದು ರಿಷಭ್‌ ಪಂತ್‌ ತಿಳಿಸಿದ್ದಾರೆ.

IPL 2025: 4 ವಿಕೆಟ್‌ ಕಿತ್ತು ಲಸಿತ್‌ ಮಾಲಿಂಗರ ಎರಡು ದಾಖಲೆ ಮುರಿದ ಜಸ್‌ಪ್ರೀತ್‌ ಬುಮ್ರಾ!

ರಿಷಭ್‌ ಪಂತ್‌ ಸತತ ವೈಫಲ್ಯ

2025ರ ಐಪಿಎಲ್ ರಿಷಭ್ ಪಂತ್‌ಗೆ ಉತ್ತಮವಾಗಿರಲಿಲ್ಲ. ಅವರು 10 ಪಂದ್ಯಗಳಲ್ಲಿ ಕೇವಲ 110 ರನ್ ಗಳಿಸಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಏಕೈಕ ಅರ್ಧಶತಕವನ್ನು ಸಿಡಿಸಿದ್ದರು.ಲಖನೌ ಸೂಪರ್ ಜಯಂಟ್ಸ್‌ ಪ್ರಸ್ತುತ ಪಾಯಿಂಟ್ಸ್‌ ಟೇಬಲ್‌ನಲ್ಲಿ ಏಳನೇ ಸ್ಥಾನದಲ್ಲಿದೆ. ತಂಡವು ಮುಂದಿನ ಪಂದ್ಯವನ್ನು ಮೇ 4 ರ ಭಾನುವಾರ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.