ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025 2025: ನಿಕೋಲಸ್‌ ಪೂರನ್‌ಗೆ ಅಗ್ರ ಸ್ಥಾನ, ವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು!

Fastest Fifties In IPL 2025: ಪ್ರಸ್ತುತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ನಡೆಯುತ್ತಿದೆ. ಇದೀಗ ಏಳು ಪಂದ್ಯಗಳು ಮುಗಿದಿದ್ದು, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ದಾಖಲೆಗಳು ಮೂಡಿ ಬಂದಿವೆ. ಇಲ್ಲಿಯ ತನಕ ಈ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ ಮೂಡಿ ಬಂದ ಐದು ಅರ್ದಶತಕಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

IPL 2025: ಅತ್ಯಂತ ವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು!

ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ನಿಕೋಲಸ್‌ ಪೂರನ್‌.

Profile Ramesh Kote Mar 28, 2025 3:58 PM

ನವದೆಹಲಿ: ಪ್ರಸ್ತುತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿ ನಡೆಯುತ್ತಿದೆ. ಈಗಾಗಲೇ ಏಳು ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಈ ಎಲ್ಲಾ ಪಂದ್ಯಗಳಲ್ಲಿಯೂ ರನ್‌ ಹೊಳೆ ಹರಿದಿವೆ. ಹಲವು ತಂಡಗಳ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಿಕೋಲಸ್‌ ಪೂರನ್‌ (Nicholar Pooran), ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಟ್ರಾವಿಸ್‌ ಹೆಡ್‌ (Travis Head), ಇಶಾನ್‌ ಕಿಶನ್‌, ಫಿಲ್‌ ಸಾಲ್ಟ್‌ ಸೇರಿದಂತೆ ಹಲವು ಬ್ಯಾಟ್ಸ್‌ಮನ್‌ಗಳು ಅತ್ಯಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ್ದಾರೆ.

ಗುರುವಾರ ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 190 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಏಡೆನ್‌ ಮಾರ್ಕ್ರಮ್‌ ಬಹುಬೇಗ ವಿಕೆಟ್‌ ಕಳೆದುಕೊಂಡರು.

SRH vs LSG: ಸನ್‌ರೈಸರ್ಸ್‌ ಹೈದರಾಬಾದ್‌ ಅಬ್ಬರಕ್ಕೆ ಕಡಿವಾಣ ಹಾಕಿದ ಲಖನೌ ಸೂಪರ್‌ ಜಯಂಟ್ಸ್‌!

ಲಖನೌ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಿಕೋಲಸ್‌ ಪೂರನ್‌, ಎಸ್‌ಆರ್‌ಎಚ್‌ ತವರು ಅಂಗಣದಲ್ಲಿಯೇ ಅಬ್ಬರಿಸಿದರು. ಮೊಹಮ್ಮದ್‌ ಶಮಿ, ಪ್ಯಾಟ್‌ ಕಮಿನ್ಸ್‌ ಯಾವುದೇ ಬೌಲರ್‌ಗಳಿಗೆ ಮುಲಾಜಿಲ್ಲದೆ ಬ್ಯಾಟ್‌ ಬೀಸಿದರು. ಅವರು ಕೇವಲ 26 ಎಸೆತಗಳಲ್ಲಿ 70 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು ತಲಾ 6 ಸಿಕ್ಸರ್‌ ಹಾಗೂ 6 ಬೌಂಡರಿಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು 269.23ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಮಾಡಿದ್ದು ಎಲ್ಲರ ಗಮನವನ್ನು ಸೆಳೆದಿದ್ದರು. ಅವರು ಕೇವಲ 18 ಎಸೆತಗಳಲ್ಲಿ ಅರ್ಧಶತಕಗವನ್ನು ಸಿಡಿಸಿದ್ದರು. ಇದು 2025ರ ಐಪಿಎಲ್‌ ಟೂರ್ನಿಯಲ್ಲಿ ಮೂಡಿ ಬಂದ ಅತ್ಯಂತ ವೇಗದ ಅರ್ಧಶತಕವಾಗಿದೆ.

ನಿಕೋಲಸ್‌ ಪೂರನ್‌ ಜೊತೆ ದೊಡ್ಡ ಜೊತೆಯಾಟವನ್ನು ಆಡಿದ್ದ ಮಿಚೆಲ್‌ ಮಾರ್ಷ್‌ ಕೂಡ ಅರ್ಧಶತಕವನ್ನು ಬಾರಿಸಿದ್ದರು. ಅವರು 31 ಎಸೆತಗಳಲ್ಲಿ 52 ರನ್‌ಗಳನ್ನು ಸಿಡಿಸಿದ್ದರು. ಅಂದಹಾಗೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 21 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಡೆಲ್ಲಿ ಎದುರು ಲಖನೌ ಸೋಲು ಅನುಭವಿಸಿತ್ತು. ರಾಜಸ್ಥಾನ್‌ ರಾಯಲ್ಸ್‌ ಎದುರು 21 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ ಟ್ರಾವಿಸ್‌ ಹೆಡ್‌ ಎರಡನೇ ಸ್ಥಾನದಲ್ಲಿದ್ದಾರೆ. ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದದ ಪಂದ್ಯದಲ್ಲಿಯೂ ಎಸ್‌ಆರ್‌ಎಚ್‌ ಓಪನರ್‌ 28 ಎಸೆತಗಳಲ್ಲಿ 47 ರನ್‌ಗಳನ್ನು ಗಳಿಸಿ ಪ್ರಿನ್ಸ್‌ ಯಾದವ್‌ಗೆ ಕ್ಲೀನ್‌ ಬೌಲ್ಡ್‌ ಆಗಿದ್ದರು.

SRH vs LSG: ಟ್ರಾವಿಸ್‌ ಹೆಡ್‌ರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಪ್ರಿನ್ಸ್‌ ಯಾದವ್‌ ಯಾರು?

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಋತುರಾಜ್‌ ಗಾಯಕ್ವಾಡ್‌ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಅವರು ಮುಂಬೈ ಇಂಡಿಯನ್ಸ್‌ ವಿರುದ್ಧ ತನ್ನ ಆರಂಭಿಕ ಪಂದ್ಯದಲ್ಲಿ 22 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು.ಇವರ ಅರ್ಧಶತಕದ ಬಲದಿಂದ ಸಿಎಸ್‌ಕೆ ಗೆಲುವು ಪಡೆದಿತ್ತು. ಈ ಪಂದ್ಯದ ಗೆಲುವಿನಲ್ಲಿ ಆರಂಭಿಕ ರಚಿನ್‌ ರವೀಂದ್ರ ಕೂಡ ಉಪಯುಕ್ತ ಕೊಡುಗೆಯನ್ನು ನೀಡಿದ್ದರು. ಅವರು ಅಜೇಯ 65 ರನ್‌ಗಳನ್ನು ಬಾರಿಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ 24 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದ ನಿಕೋಲಸ್‌ ಪೂರನ್‌ ಅವರೇ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಎರಡು ಪಂದ್ಯಗಳಿಂದ 145 ರನ್‌ಗಳನ್ನು ಕಲೆ ಹಾಕುವ ಮೂಲಕ ನಿಕೋಲಸ್‌ ಪೂರನ್‌ ಅವರು ಆರೆಂಜ್‌ ಕ್ಯಾಪ್‌ ಅನ್ನು ಹೊಂದಿದ್ದಾರೆ. ಇದೇ ಲಯವನ್ನು ಅವರು ಮುಂದಿನ ಪಂದ್ಯಗಳಲ್ಲಿಯೂ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಇನ್ನು ಲಖನೌ ಸೂಪರ್‌ ಜಯಂಟ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಶಾರ್ದುಲ್‌ ಠಾಕೂರ್‌ 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್‌ ಕ್ಯಾಪ್‌ ಪಡೆದಿದ್ದಾರೆ.