IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್ ಆಡುವುದು ಪಕ್ಕಾ ಎಂದ ರಾಬಿನ್ ಉತ್ತಪ್ಪ!
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ ಹಾಗೂ ಪ್ಲೇಆಫ್ಸ್‌ಗೆ ಈಗಾಗಲೇ ಪ್ರವೇಶ ಮಾಡಿದೆ. ಇದೀಗ ಆರ್‌ಸಿಬಿ ತಂಡ ಮೊಲದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. ಆರ್‌ಸಿಬಿ ತಂಡದ ಬಗ್ಗೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ದೊಡ್ಡ ಭವಿಷ್ಯವನ್ನು ನುಡಿದಿದ್ದಾರೆ.

ಫೈನಲ್ ತಲುಪಬಲ್ಲ ಎರಡು ತಂಡಗಳನ್ನು ಆರಿಸಿದ ರಾಬಿನ್ ಉತ್ತಪ್ಪ.

ಲಖನೌ: ಚೊಚ್ಚಲ ಐಪಿಎಲ್ ಕಪ್ ಕನಸನ್ನು ನನಸು ಮಾಡಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಕ್ಕೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಅತ್ಯುತ್ತಮ ಅವಕಾಶವಿದೆ. ಅದರಂತೆ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಟೂರ್ನಿಯ ಪ್ಲೇಆಫ್ಸ್‌ಗೆ ಈಗಾಗಲೇ ಅರ್ಹತೆ ಪಡೆದಿದೆ. ಇದೀಗ ಬೆಂಗಳೂರು ತಂಡ, ಮಂಗಳವಾರ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಗೆದ್ದು ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದೆ. ಇದರ ನಡುವೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ (Robin Uthappa) ಆರ್‌ಸಿಬಿ ಬಗ್ಗೆ ದೊಡ್ಡ ಭವಿಷ್ಯವನ್ನು ನುಡಿದಿದ್ದಾರೆ.
ಆರ್‌ಸಿಬಿ ತಂಡ ಇಲ್ಲಿಯ ತನಕ ಮೂರು ಬಾರಿ ಫೈನಲ್‌ಗೆ ಪ್ರವೇಶ ಮಾಡಿದ್ದರೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, 2016ರ ಬಳಿಕ ಇದೇ ಮೊದಲ ಬಾರಿ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. ಜಿಯೊ ಹಾಟ್‌ಸ್ಟಾರ್ ಜೊತೆ ಮಾತನಾಡಿದ ಕನ್ನಡಿಗ ರಾಬಿನ್ ಉತ್ತಪ್ಪ, ಪಂದ್ಯಗಳನ್ನು ಯಶಸ್ವಿಯಾಗಿ ಮುಗಿಸುವಲ್ಲಿನ ಆರ್‌ಸಿಬಿ ತಂಡದ ಅಸಮರ್ಥತೆಯನ್ನು ಉಲ್ಲೇಖಿಸಿದ್ದಾರೆ. ಇದರ ಜತೆಗೆ ಈ ಸಲ ಐಪಿಎಲ್ ಟೂರ್ನಿಯ ಫೈನಲ್‌ಗೆ ಪಂಜಾಬ್ ಕಿಂಗ್ಸ್ ಜೊತೆ ಆರ್‌ಸಿಬಿ ಕೂಡ ಪ್ರವೇಶ ಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IPL 2025: ಫೈನಲ್ ತಲುಪಬಲ್ಲ ಎರಡು ತಂಡಗಳನ್ನು ಆರಿಸಿದ ಆಕಾಶ್ ಚೋಪ್ರಾ!
ಆರ್‌ಸಿಬಿ-ಪಂಜಾಬ್ ಫೈನಲ್‌ಗೆ ಲಗ್ಗೆ ಇಡಲಿವೆ: ಉತ್ತಪ್ಪ
"ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಫೈನಲ್‌ಗೆ ಪ್ರವೇಶ ಮಾಡಲಿವೆ ಎಂದು ನಾನು ಆರಂಭದಿಂದಲೂ ಹೇಳುತ್ತಾ ಬಂದಿದ್ದೇನೆ. ಅವರು (ಆರ್‌ಸಿಬಿ) ಗೆಲುವಿನ ಲಯವನ್ನು ಕಂಡುಕೊಂಡಿದ್ದಾರೆ ಹಾಗೂ ಉತ್ತಮವಾಗಿ ಬೌಲಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಆದರೆ, ಆರ್‌ಸಿಬಿ ಪಂದ್ಯವನ್ನು ಪರಿಣಾಮಕಾರಿಯಾಗಿ ಮುಗಿಸುವ ಅಗತ್ಯವಿದೆ ಹಾಗೂ ವಿರಾಟ್ ಕೊಹ್ಲಿ ಚೇಸ್ ಮಾಸ್ಟರ್ ಎಂಬುದು ನಮಗೆಲ್ಲರಿಗೂ ಗೊತ್ತಿದೆ ಮತ್ತು ಅವರು 20 ಓವರ್‌ಗಳನ್ನು ಮುಗಿಸುತ್ತಾರೆ. ಅವರು ಈ ಕೆಲಸವನ್ನು ಮಾಡಿದರೆ, ಎದುರಾಳಿ ತಂಡಗಳ ಮೇಲೆ, ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಒತ್ತಡ ಬೀಳುತ್ತದೆ," ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಆರ್‌ಸಿಬಿಗೆ ಜಾಶ್ ಹೇಝಲ್‌ವುಡ್ ಬಲ
ಆಸ್ಟ್ರೇಲಿಯಾದ ವೇಗದ ಬೌಲರ್ ಜಾಶ್ ಹೇಝಲ್‌ವುಡ್ ಆರ್‌ಸಿಬಿ ತಂಡಕ್ಕೆ ಮರಳಿರುವುದು ಅವರ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಸಿಕ್ಕಂತಾಗಿದೆ ಎಂದು ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ.
"ಬೌಲರ್‌ಗಳು ಕೂಡ ಪುಟಿದೇಳಬೇಕಾದ ಅಗತ್ಯವಿದೆ. ಜಾಶ ಹೇಝಲ್‌ವುಡ್ ಮರಳಿರುವುದರಿಂದ ನನಗೆ ಖುಷಿಯಾಗಿದೆ ಹಾಗೂ ಅವರು ಭುವನೇಶ್ವರ್ ಕುಮಾರ್‌ಗೆ ನೆರವು ನೀಡಲಿದ್ದಾರೆ. ಡೆತ್ ಓವರ್‌ಗಳಲ್ಲಿ ಯಶ್ ದಯಾಳ್ ಅವರು ಯೋಗ್ಯ ಪ್ರದರ್ಶನವನ್ನು ತೋರುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸುಯಶ್ ಶರ್ಮಾ ಎಡವಿದ್ದಾರೆ. ಆದರೆ, ಅವರು ಶಿಸ್ತುಬದ್ದವಾಗಿ ಬೌಲ್ ಮಾಡಿದರೆ, ಆರಂಭದಲ್ಲಿ ತೋರಿದ್ದ ರೀತಿ ಪರಿಣಾಮಕಾರಿಯಾಗಿ ಬೌಲ್ ಮಾಡಬಲ್ಲರು. ಕೃಣಾಲ್ ಪಾಂಡ್ಯ ಕೂಡ ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದಾರೆ," ಎಂದು ರಾಬಿನ್ ಉತ್ತಪ್ಪ ಶ್ಲಾಘಿಸಿದ್ದಾರೆ.
RCB vs LSG: ಲಖನೌ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ನಲ್ಲಿ 2 ಬದಲಾವಣೆ ಸಾಧ್ಯತೆ!
ಅಗ್ರ ಎರಡರ ಸ್ಥಾನದ ಮೇಲೆ ಆರ್‌ಸಿಬಿ ಕಣ್ಣು
ಇಲ್ಲಿಯ ತನಕ ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡ ಆಡಿದ್ದ 13 ಪಂದ್ಯಗಳಿಂದ 17 ಅಂಕಗಳನ್ನು ಕಲೆ ಹಾಕಿದೆ. ಇದರೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಮಂಗಳವಾರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ಗೆದ್ದರೆ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡರಲ್ಲಿ ಸ್ಥಾನವನ್ನು ಅಲಂಕರಿಸಲಿದೆ. ಆ ಮೂಲಕ ಮೊದಲನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ಎದುರು ಆಡಲಿದೆ.