ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ತಮ್ಮ ಬ್ಯಾಟಿಂಗ್‌ ಯಶಸ್ಸಿನ ಶ್ರೇಯ ಬ್ರಿಯಾನ್‌ ಲಾರಾಗೆ ಸಲ್ಲಬೇಕೆಂದ ಶಶಾಂಕ್‌ ಸಿಂಗ್‌!

Shashank Singh on his batting: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಶಶಾಂಕ್‌ ಸಿಂಗ್‌, ಪಂಜಾಬ್‌ ಕಿಂಗ್ಸ್‌ ತಂಡದ 18 ರನ್‌ಗಳ ಗೆಲುವಿಗೆ ನೆರವು ನೀಡಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ಶಶಾಂಕ್‌ ಸಿಂಗ್‌, ತಮ್ಮ ಬ್ಯಾಟಿಂಗ್‌ ಸಕ್ಸಸ್‌ನ ಶ್ರೇಯವನ್ನು ದಿಗ್ಗಜ ಬ್ರಿಯಾನ್‌ ಲಾರಾಗೆ ಸಮರ್ಪಿಸಿದ್ದಾರೆ.

ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಬ್ರಿಯಾನ್‌ ಲಾರಾ ಕಾರಣ ಎಂದ ಶಶಾಂಕ್‌ ಸಿಂಗ್‌!

ತಮ್ಮ ಬ್ಯಾಟಿಂಗ್‌ ಯಶಸ್ಸಿಗೆ ಬ್ರಿಯಾನ್‌ ಲಾರಾ ಕಾರಣ ಎಂದ ಶಶಾಂಕ್‌ ಸಿಂಗ್‌.

Profile Ramesh Kote Apr 9, 2025 2:03 PM

ಚಂಡೀಗಢ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನದ ಶ್ರೇಯವನ್ನು ವೆಸ್ಟ್‌ ಇಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾಗೆ (Brian Lara) ಪಂಜಾಬ್‌ ಕಿಂಗ್ಸ್‌ ಬ್ಯಾಟ್ಸ್‌ಮನ್‌ ಶಶಾಂಕ್‌ ಸಿಂಗ್‌ (Shashank Singh) ಸಮರ್ಪಿಸಿದ್ದಾರೆ. ಮಂಗಳವಾರ ಮುಲ್ಲಾನ್‌ಪುರದ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಶಶಾಂಕ್‌ ಸಿಂಗ್‌ ಸ್ಪೋಟಕ ಅರ್ಧಶತಕವನ್ನು ಸಿಡಿಸಿದ್ದರು. ಆ ಮೂಲಕ ಪಂಜಾಬ್‌ ತಂಡ 219 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಅದರಂತೆ ಈ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ 18 ರನ್‌ಗಳಿಂದ ಗೆಲುವು ಪಡೆದಿತ್ತು.

ಪಂಜಾಬ್‌ ಕಿಂಗ್ಸ್‌ಗೆ ಬರುವುದಕ್ಕೂ ಮುನ್ನ ಶಶಾಂಕ್‌ ಸಿಂಗ್‌ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡಿದ್ದರು. ಈ ವೇಳೆ ಹೈದರಾಬಾದ್‌ ಕೋಚಿಂಗ್‌ ವಿಭಾಗದಲ್ಲಿ ವೆಸ್ಟ್‌ ಇಂಡೀಸ್‌ ಮಾಜಿ ನಾಯಕ ಬ್ರಿಯಾನ್‌ ಲಾರಾ ಇದ್ದರು. ಈ ವೇಳೆ ಬ್ರಿಯಾನ್‌ ಲಾರಾ ಅವರ ಅಡಿಯಲ್ಲಿ ಶಶಾಂಕ್‌ ಸಿಂಗ್‌ ಸಾಕಷ್ಟು ಅಭ್ಯಾಸ ನಡೆಸಿದ್ದಾರೆ. ವಿಂಡೀಸ್‌ ದಿಗ್ಗಜನಿಂದ ಪಂಜಾಬ್‌ ಆಟಗಾರ ಸಾಕಷ್ಟು ಸಲಹೆಗಳನ್ನು ಪಡೆದಿದ್ದರು. ಇದು ತಮ್ಮ ಬ್ಯಾಟಿಂಗ್‌ನಲ್ಲಿ ವಿಶ್ವಾಸ ಹೆಚ್ಚಿಸಿಕೊಳ್ಳಲು ನೆರವಾಗಿದೆ ಎಂದು ಪಂಜಾಬ್‌ ಕಿಂಗ್ಸ್‌ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

IPL 2025: ವೇಗದ ಶತಕ ಸಿಡಿಸಿದ ಬಳಿಕ ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ಪ್ರಿಯಾಂಶ್‌ ಆರ್ಯ!

ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸೇರಿದ ಬಳಿಕ ಶಶಾಂಕ್‌ ಸಿಂಗ್‌ ಕೀ ಆಟಗಾರರಾಗಿದ್ದಾರೆ. ಕಳೆದ ಸೀಸನ್‌ನಲ್ಲಿಯೂ ಶಶಾಂಕ್‌ ಪಂಜಾಬ್‌ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದರು. ಪ್ರಸಕ್ತ ಆವೃತ್ತಿಯಲ್ಲಿಯೂ ಅವರು ಗಮನ ಸೆಳೆದಿದ್ದಾರೆ. ಮಂಗಳವಾರ ಐದು ಬಾರಿ ಚಾಂಪಿಯನ್ಸ್‌ ವಿರುದ್ದದ ಪಂದ್ಯದಲ್ಲಿ ಶಶಾಂಕ್‌ ಸಿಂಗ್‌ ಕೇವಲ 36 ಎಸೆತಗಳಲ್ಲಿ ಅಜೇಯ 52 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು ಮೂರು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳನ್ನು ಸಿಡಿಸಿದ್ದರು.

ಬ್ರಿಯಾನ್‌ ಲಾರಾ ಸಲಹೆ ನೆನೆದ ಶಶಾಂಕ್‌ ಸಿಂಗ್‌

"ನಿಸ್ಸಂಶಯವಾಗಿ ನನ್ನ ಬ್ಯಾಟಿಂಗ್‌ ಯಶಸ್ಸಿನ ಶ್ರೇಯ ಬ್ರಿಯಾನ್‌ ಲಾರಾಗೆ ಸಲ್ಲಬೇಕು. ಏಕೆಂದರೆ ಮೂರು ವರ್ಷಗಳ ಕಾಲ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡುವಾಗ 7 ಅಥವಾ 8 ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವುದೆಂದರೆ ಕೇವಲ ಪವರ್‌ ಹಿಟ್ಟಿಂಗ್‌ ಅಲ್ಲ ಎಂದು ಅವರು ನನಗೆ ತಿಳಿಸಿದ್ದರು. ಈ ಬ್ಯಾಟಿಂಗ್‌ ಕ್ರಮಾಂಕಗಳ ಬಗ್ಗೆ ಯೋಚನೆ ಮಾಡಿದಾಗ, ಚೆಂಡಿಗೆ ಚೆನ್ನಾಗಿ ಟೈಮ್‌ ಮಾಡಬಲ್ಲ ಆಂಡ್ರೆ ರಸೆಲ್‌ ಹಾಗೂ ಕೈರೊನ್‌ ಪೊಲಾರ್ಡ್‌ ಅವರಂಥ ಆಟಗಾರರನ್ನು ನೀವು ನೋಡಬೇಕಾಗುತ್ತದೆ. ನೀವು 6 ಅಥವಾ 7 ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತೀರಿ ಎಂದಾದರೆ, ಬೇರೊಬ್ಬರನ್ನು ನೋಡುವ ಬದಲು ನಿಮ್ಮ ಕೌಶಲ ಹಾಗೂ ಸಾಮರ್ಥ್ಯಕ್ಕೆ ಬೆಂಬಲ ನೀಡಿ ಎಂದು ಲಾರಾ ಸಲಹೆ ನೀಡಿದ್ದರು. ಇದು ನನ್ನಲ್ಲಿ ವಿಶ್ವಾಸವನ್ನು ಹೆಚ್ಚಿಸಿತು. ನಾನು ಪವರ್‌ ಹಿಟ್ಟರ್‌ ಅಲ್ಲ ಎಂದು ಮನವರಿಕೆ ಮಾಡಿಕೊಂಡ ಬಳಿಕ ನನಗೆ ಸರಿಯಾದ ಆಂಗಲ್‌ಗಳ ಕಡೆಗೆ ಗಮನ ನೀಡಬೇಕಾದ ಅಗತ್ಯವಿದೆ. ಇದೀಗ ನಾನುಇದನ್ನೇ ಅನುಸರಿಸುತ್ತಿದ್ದೇನೆ," ಎಂದು ಸುದ್ದಿಗೋಷ್ಠಿಯಲ್ಲಿ ಶಶಾಂಕ್‌ ಸಿಂಗ್‌ ವಿವರಿಸಿದ್ದಾರೆ.



ಶ್ರೇಯಸ್‌ ಅಯ್ಯರ್‌ ಸುಲಭವಾಗಿ ಸಂಪರ್ಕಿಸಬಹುದಾದ ನಾಯಕ

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಪಂಜಾಬ್‌ ಮೂರರಲ್ಲಿ ಗೆಲುವು ಪಡೆದಿದೆ ಹಾಗೂ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಶ್ರೇಯಸ್‌ ಅಯ್ಯರ್‌ ಸುಲಭವಾಗಿ ಸಂಪರ್ಕಿಸಬಹುದಾದ ನಾಯಕ ಎಂದು ಶಶಾಂಕ್‌ ಸಿಂಗ್‌ ಗುಣಗಾನ ಮಾಡಿದ್ದಾರೆ.

IPL 2025: 39 ಎಸೆತಗಳಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಪ್ರಿಯಾಂಶ್‌ ಆರ್ಯ!

"ಪಂಜಾಬ್‌ ಕಿಂಗ್ಸ್‌ ಕ್ಯಾಂಪ್‌ಗೆ ಸೇರ್ಪಡೆಯಾದ ಮೊದಲನೇ ದಿನವೇ ಶ್ರೇಯಸ್‌ ಅಯ್ಯರ್‌ ಸುಲಭವಾಗಿ ಸಂಪರ್ಕಿಸಬಹುದಾದ ನಾಯಕ ಎಂದು ನನಗೆ ಮನವರಿಕೆಯಾಗಿತ್ತು. ಕೇವಲ ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಅವರು ಲಭ್ಯರಾಗಿದ್ದಾರೆ. ಕಳೆದ 12 ವರ್ಷಗಳಿಂದ ಅಯ್ಯರ್‌ ನನಗೆ ಗೊತ್ತು, ಯಾವುದೇ ಯುವ ಆಟಗಾರ ನೇರವಾಗಿ ಹೋಗಿ ಅವರ ಬಳಿ ಮಾತನಾಡಬಹುದು. ಅವರು ಯಾವಾಗಲೂ ಸಕಾರಾತ್ಮಕವಾಗಿರುತ್ತಾರೆ. ಅವರು ಯಾವಾಗಲೂ ಸಕಾರಾತ್ಮಕವಾಗಿ ಮಾತನಾಡುತ್ತಾರೆ, ಇದು ಭಾಷೆಯಲ್ಲಿ ಒಂದು ಭಾಗವಾಗಿದೆ. ಇದು ತಂಡದ ಪಾಲಿಗೆ ಅದ್ಭುತವಾಗಿದೆ," ಎಂದು ಶಶಾಂಕ್‌ ಸಿಂಗ್‌ ತಮ್ಮ ನಾಯಕನನ್ನು ಗುಣಗಾನ ಮಾಡಿದ್ದಾರೆ.