IPL 2025: ಆರ್‌ಸಿಬಿಗೆ ಅವಮಾನ ಮಾಡಿದ್ರಾ ಎಸ್ ಬದ್ರಿನಾಥ್? ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ ವಿಡಿಯೊ!
S Bardinath on RCB vs CSK Rivalry: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್2025) ಟೂರ್ನಿಯ ಆರಂಭಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಮಾರ್ಚ್ 22 ರಂದು ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳುಯ ಕಾದಾಟ ನಡೆಸುವ ಮೂಲಕ ಹದಿನನೆಂಟನೇ ಆವೃತ್ತಿಯ ಟೂರ್ನಿ ಆರಂಭವಾಗಲಿದೆ. ಇದರ ನಡುವೆ ಎಸ್ ಬದ್ರಿನಾಥ್, ಆರ್‌ಸಿಬಿ ತಂಡದ ಕಾಲೆಳೆದಿದ್ದಾರೆ.

ಆರ್‌ಸಿಬಿ ಕಾಲೆಳೆದ ಎಸ್ ಬದ್ರಿನಾಥ್

ಬೆಂಗಳೂರು: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್ 22 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ (RCB vs KKR) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೂಲಕ ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಅಂದ ಹಾಗೆ ಮಾರ್ಚ್ 28 ರಂದು ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಣ ಪಂದ್ಯ ಅತ್ಯಂತ ತೀವ್ರ ಕುತೂಹಲ ಕೆರಳಿಸಿದೆ. ಅಂದ ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಎಸ್ ಬದ್ರಿನಾಥ್ (S Badrinath) ಆರ್‌ಸಿಬಿ ತಂಡವನ್ನು ಹಾಸ್ಯಮಯವಾಗಿ ಕಾಲೆಳೆದಿದ್ದಾರೆ.
ಕಳೆದ 2024ರ ಐಪಿಎಲ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಮುಖಾಮುಖಿಯಾಗಿದ್ದವು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಚೆನ್ನೈ ವಿರುದ್ದ ಗೆದ್ದು ಆರ್‌ಸಿಬಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿತ್ತು. ಈ ಸೋಲಿನ ಮೂಲಕ ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ನಾಕ್‌ಔಟ್ ಹಂತಕ್ಕೆ ಪ್ರವೇಶ ಮಾಡುವಲ್ಲಿ ವಿಫಲವಾಗಿತ್ತು. ಈ ವೇಳೆ ಆರ್‌ಸಿಬಿ ತಂಡದ ಆಟಗಾರರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದ್ದರು ಹಾಗೂ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಕೂಡ ಅತಿರೇಕ ತಲುಪಿತ್ತು.
IPL 2025: ಅಭಿಷೇಕ್ ಶರ್ಮಾ or ಇಶಾನ್ ಕಿಶನ್? ಸನ್‌ರೈಸರರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ XI ವಿವರ
2025ರ ಐಪಿಎಲ್ ಟೂರ್ನಿಯ ಆರಂಭಕ್ಕೂ ಎರಡು ದಿನಗಳ ಮುನ್ನ ದೇಶಿ ಕ್ರಿಕೆಟ್ ದಿಗ್ಗಜ ಎಸ್ ಬದ್ರಿನಾಥ್ ತಾವು ಹಂಚಿಕೊಂಡಿರುವ ವಿಡಿಯೊದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಾಸ್ಯಮಯವಾಗಿ ಕಾಲೆಳೆದಿದ್ದಾರೆ. ಈ ವಿಡಿಯೊದಲ್ಲಿ ಎಸ್ ಬದ್ರಿನಾಥ್ ಅವರು, ಎಲ್ಲಾ ತಂಡಗಳಿಗೂ ಹಸ್ತಲಾಘವ ನೀಡುತ್ತಾರೆ. ಆದರೆ ಆರ್‌ಸಿಬಿ ತಂಡಕ್ಕೆ ಹಸ್ತಲಾಘವ ನೀಡಲು ನಿರಾಕರಿಸುತ್ತಾರೆ. ಬದ್ರಿನಾಥ್ ಅವರ ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಬಹುಬೇಗ ವೈರಲ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ ಒಂದೇ ಒಂದು ಬಾರಿಯೂ ಗೆದ್ದಿಲ್ಲ. ಐಪಿಎಲ್ ಇತಿಹಾಸದಲ್ಲಿಯೇ ಸಿಎಸ್‌ಕೆ ಅತ್ಯಂತ ಸ್ಥಿರ ಪ್ರದರ್ಶನ ತೋರುವ ತಂಡವಾಗಿದೆ. 2011ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಮುಖಾಮುಖಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿಯನ್ನು ಮಣಿಸಿದ್ದ ಸಿಎಸ್‌ಕೆ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
ಐಪಿಎಲ್ ಇತಿಹಾಸದಲ್ಲಿಯೇ ಆರ್‌ಸಿಬಿ ಮೂರು ಬಾರಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ, ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಕೊನೆಯ ಬಾರಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಆರ್‌ಸಿಬಿ ರನ್ನರ್ ಅಪ್ ಆಗಿತ್ತು.
IPL 2025: ಚೆಂಡಿಗೆ ಎಂಜಲು ಬಳಕೆ ನಿಷೇಧ ತೆರವುಗೊಳಿಸಿದ ಬಿಸಿಸಿಐ
ಆರ್‌ಸಿಬಿ ತಂಡಕ್ಕೆ ರಜತ್ ಪಾಟಿದಾರ್ ನಾಯಕ
ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. ಆ ಮೂಲಕ ಫಾಫ್ ಡು ಪ್ಲೆಸಿಸಸ್ ಸ್ಥಾನವನ್ನು ತುಂಬಲಿದ್ದಾರೆ. ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿ ಉಳಿಸಿಕೊಂಡಿರಲಿಲ್ಲ.
ಋತುರಾಜ್ ಗಾಯಕ್ವಾಡ್ ಅವರು ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. 2024ರ ಐಪಿಎಲ್‌ಗೂ ಮುನ್ನ ಎಂಎಸ್ ಧೋನಿ ಅವರು ಸಿಎಸ್‌ಕೆ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್‌ಗೆ ಬಿಟ್ಟುಕೊಟ್ಟಿದ್ದರು. ಆದರೆ, ಚೆನ್ನೈ ತಂಡ ಕಳೆದ ಸಾಲಿನಲ್ಲಿ ಎರಡನೇ ಸುತ್ತಿಗೆ ಅರ್ಹತೆ ಪಡೆದಿರಲಿಲ್ಲ. ಅಂದ ಹಾಗೆ ಗಾಯಕ್ವಾಡ್ ನಾಯಕತ್ವದ ಭಾರತ ತಂಡ, 2023ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿತ್ತು.