ʻಆರ್‌ಸಿಬಿಯನ್ನು ತೊರೆಯಲು ನಿರ್ಧರಿಸಿದ್ದೆʼ-ಕಠಿಣ ದಿನಗಳನ್ನು ನೆನೆದ ವಿರಾಟ್ ಕೊಹ್ಲಿ!
Virat Kohli on leaving RCB: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ತನ್ನ ವೃತ್ತಿ ಜೀವನದ ಕಠಿಣ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಒಮ್ಮೆ ಆರ್‌ಸಿಬಿಯನ್ನು ತೊರೆಯಲು ನಿರ್ಧರಿಸಿದ್ದ ಎಂಬುದನ್ನು ಅವರು ಇದೀಗ ರಿವೀಲ್ ಮಾಡಿದ್ದಾರೆ.

ಆರ್‌ಸಿಬಿ ಫ್ಯಾನ್ಸ್‌ಗೆ ಬೇಸರ ತರಿಸುವ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ.

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಎಲ್ಲಾ ಆವೃತ್ತಿಗಳಲ್ಲಿ ಏಕೈಕ ತಂಡವನ್ನು ಪ್ರತಿನಿಧಿಸಿದ ಆಟಗಾರ ಎಂಬ ದಾಖಲೆ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿದೆ. 2008ರ ಉದ್ಘಾಟನಾ ಆವೃತ್ತಿಯಿಂದ ಹಿಡಿದು ಇಲ್ಲಿಯವರೆಗೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಮ್ಮ ಐಪಿಎಲ್ ವೃತ್ತಿ ಜೀವನದ 18 ವರ್ಷಗಳನ್ನು ವಿರಾಟ್ ಕೊಹ್ಲಿ ಆರ್‌ಸಿಬಿ ಜೊತೆ ಕಳೆದಿದ್ದಾರೆ. ಇದೀಗ ಅವರು ಆರ್‌ಸಿಬಿ ಅಭಿಮಾನಿಗಳಿಗೆ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಆರ್‌ಸಿಬಿ ತಂಡದ ಐಪಿಎಲ್ ಟೂರ್ನಿಯನ್ನು ಆಡುವಾಗ ತಾವು ಎದುರಿಸಿದ ಕಠಿಣ ವರ್ಷಗಳನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅವರು ಒಮ್ಮೆ ಆರ್‌ಸಿಬಿಯನ್ನು ತೊರೆಯುವ ಬಗ್ಗೆಯೂ ಯೋಚಿಸಿದ್ದರು. ಈ ಬಗ್ಗೆ ವಿರಾಟ್ ಕೊಹ್ಲಿಯೇ ಮಾಹಿತಿ ನೀಡಿದ್ದಾರೆ. ಆದರೆ, ಅವರು ಅಂತಿಮವಾಗಿ ಆರ್‌ಸಿಬಿಯಲ್ಲಿಯೇ ಉಳಿಯಲು ನಿರ್ಧರಿಸಿದ್ದರು. ಏಕೆಂದರೆ ಆರ್‌ಸಿಬಿಯೊಂದಿಗೆ ವಿರಾಟ್ ಕೊಹ್ಲಿ ʻಪರಸ್ಪರ ಗೌರವʼ ಹಾಗೂ ʻಅರ್ಥ ಪೂರ್ಣ ಸಂಬಂಧʼ ಬೇರೆ ತಂಡಗಳ ಆಕರ್ಷಣೆಯನ್ನು ಮೀರಿಸಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
IPL 2025: ಭಾರತ, ಆರ್‌ಸಿಬಿ ನಾಯಕತ್ವವನ್ನು ತೊರೆಯಲು ಕಾರಣ ತಿಳಿಸಿದ ವಿರಾಟ್ ಕೊಹ್ಲಿ!
ಅಂದು ಆರ್‌ಸಿಬಿಯನ್ನು ತೊರೆಯುವ ಬಗೆ ಯೋಚಿಸಿದ್ದೆ
"ನಾನು ಪ್ರಲೋಭನೆಗೆ ಒಳಗಾಗಿದ್ದೆ ಎಂದು ಹೇಳುವುದಿಲ್ಲ, ಆದರೆ ನಾನು ಅದರ ಬಗ್ಗೆ (ಆರ್‌ಸಿಬಿಯನ್ನು ತೊರೆಯುವ ಬಗ್ಗೆ) ಯೋಚಿಸಿದ್ದೆ. ನನಗೆ ಅತ್ಯಂತ ಮೌಲ್ಯಯುತವಾದದ್ದು ಯಾವುದು? ಎಂಬುದನ್ನು ನನಗೆ ನಾನೇ ಕೇಳಿಕೊಂಡಿದ್ದೆ. ಭಾರತ ತಂಡದ ಪರ ಆಡುವಾಗ ನಾನು ಸಾಕಷ್ಟು ಸಂಗತಿಗಳನ್ನು ಗೆದ್ದಿದ್ದೇನೆ. ಬಹಳಷ್ಟು ಪ್ರಶಂಶೆಯನ್ನು ಗಳಿಸಿದ್ದೇನೆ," ಎಂದು ಆರ್‌ಸಿಬಿ ಮಾಜಿ ನಾಯಕ ತಿಳಿಸಿದ್ದಾರೆ.
“𝘞𝘩𝘢𝘵’𝘴 𝘮𝘰𝘳𝘦 𝘪𝘮𝘱𝘰𝘳𝘵𝘢𝘯𝘵 𝘪𝘴 𝘵𝘩𝘦 𝘳𝘦𝘭𝘢𝘵𝘪𝘰𝘯𝘴𝘩𝘪𝘱 𝘢𝘯𝘥 𝘵𝘩𝘦 𝘮𝘶𝘵𝘶𝘢𝘭 𝘳𝘦𝘴𝘱𝘦𝘤𝘵 𝘰𝘷𝘦𝘳 𝘴𝘰 𝘮𝘢𝘯𝘺 𝘺𝘦𝘢𝘳𝘴, 𝘢𝘯𝘥 𝘐’𝘮 𝘨𝘰𝘪𝘯𝘨 𝘵𝘰 𝘴𝘦𝘦 𝘪𝘵 𝘵𝘩𝘳𝘰𝘶𝘨𝘩 𝘯𝘰𝘸! 𝘛𝘩𝘪𝘴 𝘪𝘴 𝘮𝘺 𝘏𝘖𝘔𝘌. 𝘛𝘩𝘦 𝘭𝘰𝘷𝘦 𝘐 𝘩𝘢𝘷𝘦… pic.twitter.com/n0DErxgonp
— Royal Challengers Bengaluru (@RCBTweets) May 6, 2025
"ಆ ಸಂದರ್ಭದಲ್ಲಿ ನಾನು ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ಒಂದು ವೇಳೆ ನಾನು ಹೊಸ ಫ್ರಾಂಚೈಸಿಗೆ ಸೇರ್ಪಡೆಯಾದರೆ, ಮತ್ತೆ ಹೊಸ ಸಂಗತಿಗಳನ್ನು ಮತ್ತೆ ಹೊರಗೆಳೆಯಬೇಕಾಗುತ್ತದೆ. ಆಗ ನಾನು ಇಲ್ಲಿ (ಆರ್‌ಸಿಬಿ) ನಿರ್ಮಿಸಿರುವ ಸಂಬಂಧವು ಹೆಚ್ಚು ಮೌಲ್ಯಯುತವಾಗಿದೆ ಎಂದು ಅರಿತುಕೊಂಡೆ ಮತ್ತು ಹಲವು ವರ್ಷಗಳಿಂದ ಬೆಳೆಸಿದ ಪರಸ್ಪರ ಗೌರವವೂ ಅಷ್ಟೇ ಮೌಲ್ಯಯುತವಾಗಿದೆ ಎಂಬುದು ಅರಿವಾಯಿತು. ಇದೀಗ ನಾನು ಆರ್‌ಸಿಬಿ ಪರ ಗೆಲ್ಲಲ್ಲಿ ಅಥವಾ ಸೋಲಲಿ, ಏನಾದರೂ ಪರವಾಗಿಲ್ಲ. ಇದೇ ನಮ್ಮ ತವರು ತಂಡ," ಎಂದು ಬಲಗೂ ಬ್ಯಾಟ್ಸ್‌ಮನ್ ಹೇಳಿದ್ದಾರೆ.
IPL 2025: ಆರ್‌ಸಿಬಿ ಪರ 300 ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ!
ಐಪಿಎಲ್ ಟೂರ್ನಿಯಲ್ಲಿ ಅದ್ಭುತ ದಾಖಲೆ
ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಅವರು ಇಲ್ಲಿಯವರೆಗೂ ಆರ್‌ಸಿಬಿ ಪರ ಆಡಿದ 263 ಪಂದ್ಯಗಳಿಂದ 39.58ರ ಸರಾಸರಿ ಮತ್ತು 132.61ರ ಸ್ಟ್ರೈಕ್ ರೇಟ್‌ನಲ್ಲಿ 8509 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು 8 ಶತಕಗಳು ಹಾಗೂ 62 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2025ರ ಐಪಿಎಲ್ ಟೂರ್ನಿಯಲ್ಲಿಯೂ ಕೊಹ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ.ಅವರು ಆಡಿದ 11 ಪಂದ್ಯಗಳಿಂದ 7 ಅರ್ಧಶತಕಗಳಿಂದ 505 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.