ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026 Mini Auction: ಮೊಹಮ್ಮದ್‌ ಶಮಿ ಮೇಲೆ ಕಣ್ಣಿಟ್ಟಿರುವ ಎರಡು ಫಾಂಚೈಸಿಗಳು!

Mohammed Shami's IPL Future: ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ಭವಿಷ್ಯ ಕೂಡ ಆತಂಕದಲ್ಲಿದೆ. ಏಕೆಂದರೆ, ಶಮಿ ಅವರನ್ನು ಮಿನಿ ಹರಾಜಿಗೆ ಬಿಡುಗಡೆ ಮಾಡಲು ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ನೋಡುತ್ತಿದೆ.

ಮೊಹಮ್ಮದ್‌ ಶಮಿ ಮೇಲೆ ಕಣ್ಣಿಟ್ಟಿರುವ ಎರಡು ಫ್ರಾಂಚೈಸಿಗಳು!

ಮೊಹಮ್ಮದ್‌ ಶಮಿ ಮೇಲೆ ಎರಡು ಫ್ರಾಂಚೈಸಿಗಳು ಕಣ್ಣಿಟ್ಟಿವೆ. -

Profile
Ramesh Kote Nov 13, 2025 8:54 PM

ನವದೆಹಲಿ: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ (Mohammed Shami) ಅವರು ಸದ್ಯ ಕಠಿಣ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಹಾಗೂ ಒಡಿಐ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಶಮಿ ವಿಫಲರಾಗಿದ್ದಾರೆ. ಹಾಗಾಗಿ ಅವರು ಪಶ್ಚಿಮ ಬಂಗಾಳ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂದುವರಿಯುತ್ತಿದ್ದಾರೆ. ಇದೀಗ ಅವರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ವೃತ್ತಿ ಜೀವನದ ಕೂಡ ಆತಂಕದಲ್ಲಿದೆ. ಕಳೆದ ಸೀಸನ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (SRH) ಪರ ವಿಫಲರಾಗಿದ್ದ ಶಮಿಯವರನ್ನು ಹೈದರಾಬಾದ್‌ ಫ್ರಾಂಚೈಸಿ ಮಿನಿ ಹರಾಜಿಗೆ ಬಿಡುಗಡೆ ಮಾಡಲು ಎದುರು ನೋಡುತ್ತಿದೆ.

ಕಳೆದ ವರ್ಷ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಮೊಹಮ್ಮದ್‌ ಶಮಿ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 10 ಕೋಟಿ ರು. ಗಳಿಗೆ ಖರೀದಿಸಿತ್ತು. ಆದರೆ, ಶಮಿ ಅವರು ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಇವರು ಆಡಿದ್ದ 10 ಪಂದ್ಯಗಳಿಂದ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ಜೊತೆಗೆ11.23ರ ಎಕಾನಮಿ ರೇಟ್‌ನಲ್ಲಿ ರನ್‌ ಕೊಟ್ಟಿದ್ದರು.

ಕಳೆದ ತಿಂಗಳು ಮೊಹಮ್ಮದ್‌ ಶಮಿ ಅವರನ್ನು ರಿಲೀಸ್‌ ಮಾಡಲಿದೆ ಎಂಬ ಸುದ್ದಿ ಹರಿದಾಡಿತ್ತು. ಆ ಮೂಲಕ ಹೆಚ್ಚುವರಿ 10 ಕೋಟಿ ರು. ಗಳನ್ನು ತಮ್ಮ ಖಾತೆಯಲ್ಲಿ ಉಳಿಸಿಕೊಳ್ಳಲು ಎಸ್‌ಆರ್‌ಎಚ್‌ ಬಯಸಿತ್ತು. ಆದರೆ, ಇದೀಗ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಶಮಿಯನ್ನು ಟ್ರೇಡ್‌ ಡೀಲ್‌ ಮಾಡಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ಎದುರು ನೋಡುತ್ತಿವೆ.

IPL 2026 Mini Auction: ಸಂಜು ಅಥವಾ ಸುಂದರ್?; ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಸಿಎಸ್‌ಕೆ ಸಿಇಒ ಮಹತ್ವದ ಹೇಳಿಕೆ

ಮೊಹಮ್ಮದ್‌ ಶಮಿಯನ್ನು ಟ್ರೇಡ್‌ ಡೀಲ್‌ ಮಾಡಿಕೊಳ್ಳಲು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬಳಿಕ ಎರಡು ಫ್ರಾಂಚೈಸಿಗಳು ಆಸಕ್ತಿ ತೋರಿವೆ ಎಂದು ಕ್ರಿಕ್‌ಬಝ್‌ ವರದಿ ಮಾಡಿದೆ. ಈ ವಿಷಯದ ಬಗ್ಗೆ ಇನ್ನೂ ಹೈದರಾಬಾದ್‌ ಫ್ರಾಂಚೈಸಿಯ ನಿರ್ಧಾರ ಏನೆಂದು ತಿಳಿದುಬಂದಿಲ್ಲ. ಶಮಿಯನ್ನು ಬಿಟ್ಟು ಕೊಡಬೇಕಾ? ಅಥವಾ ಅವರನ್ನು ಮಿನಿ ಹರಾಜಿಗೆ ಬಿಡುಗಡೆ ಮಾಡಬೇಕಾ? ಎಂಬ ಬಗ್ಗೆ ಇನ್ನೂ ಎಸ್‌ಆರ್‌ಎಚ್‌ ಚಿಂತಿಸುತ್ತಿದೆ. ಆದರೆ, ನಾಳೆ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.

ವರದಿಯ ಪ್ರಕಾರ, ಒಪ್ಪಂದವು ಡೆಲ್ಲಿ ಕ್ಯಾಪಿಟಲ್ಸ್‌ ಅಥವಾ ಲಖನೌ ಸೂಪರ್‌ ಜಯಂಟ್ಸ್‌ ಜೊತೆ ನಡೆದರೆ, ಅದು ಸಂಪೂರ್ಣ ನಗದು ವ್ಯವಹಾರವಾಗಿರುತ್ತದೆ. ಇದರರ್ಥ ಎಸ್‌ಆರ್‌ಎಚ್‌ ಅವರ ಹರಾಜಿನ ಪರ್ಸ್‌ನಲ್ಲಿ 10 ಕೋಟಿ ರೂ. ಬೋನಸ್ ಸೇರ್ಪಡೆಯಾಗಲಿದೆ. ಮತ್ತೊಂದೆಡೆ, ಡೆಲ್ಲಿ ಅಥವಾ ಲಖನೌದ ಸ್ಟಾರ್ ವೇಗಿಯನ್ನು ಖರೀದಿಸಲು ಬಯಸಿದರೆ, ಅದೇ ಮೊತ್ತವನ್ನು ಫ್ರಾಂಚೈಸಿಗೆ ನೀಡಬೇಕಾಗುತ್ತದೆ.

IPL 2026: 2 ಕೋಟಿ ರು. ಗಳಿಗೆ ಲಖನೌದಿಂದ ಮುಂಬೈ ಇಂಡಿಯನ್ಸ್‌ಗೆ ಸೇರಿದ ಶಾರ್ದುಲ್‌ ಠಾಕೂರ್‌!

ಮೊಹಮ್ಮದ್‌ ಶಮಿ ಈ ಹಿಂದೆ 2014 ರಿಂದ 2018 ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. 2013 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಜೊತೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿ, 2019 ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಸೇರಿದ್ದರು ಹಾಗೂ 2022 ರವರೆಗೆ ಇಲ್ಲಿ ಆಡಿದ್ದರು. 2022ರಲ್ಲಿ ಗುಜರಾತ್ ಟೈಟನ್ಸ್ ಪ್ರಶಸ್ತಿ ಗೆಲುವಿನಲ್ಲಿ ಶಮಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ನಂತರ 2023 ರಲ್ಲಿ ಪರ್ಪಲ್ ಕ್ಯಾಪ್ ಗೆದ್ದಿದ್ದರು.