RCB vs CSK: ಅಬ್ಬಬ್ಬಾ... ಎಂಥಾ ಶಾಟ್! ಕಬ್ಬನ್ ಪಾರ್ಕ್‌ಗೆ ಸಿಕ್ಸರ್ ಬಾರಿಸಿದ ಟಿಮ್ ಡೇವಿಡ್! ವಿಡಿಯೊ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಿಮ್ ಡೇವಿಡ್ ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ ಒಂದೇ ಒಂದು ಸಿಕ್ಸರ್‌ನಲ್ಲಿ ಚೆಂಡನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರಗಡೆ ಕಳುಹಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿನ್ನಸ್ವಾಮಿ ಸೇಡಿಯಂನಿಂದ ಚೆಂಡನ್ನು ಹೊರಕ್ಕೆ ಕಳುಹಿಸಿದ ಟಿಮ್ ಡೇವಿಡ್. -
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ (RCB vs CSK) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್‌ಮನ್‌ಗಳು ಬೌಂಡರಿ-ಸಿಕ್ಸರ್ ಮೂಲಕ ರನ್ ಹೊಳೆ ಹರಿಸಿದರು. ಇವರ ಪೈಕಿ ವಿಶೇಷವಾಗಿ ಟಿಮ್ ಡೇವಿಡ್ (Tim David) ತಮ್ಮ ಬ್ಯಾಟಿಂಗ್‌ನಲ್ಲಿ ಉಗ್ರ ರೂಪವನ್ನು ತಾಳಿದರು. ಅವರು ಒಮ್ಮೆ ಜೇಮಿ ಓವರ್ಟನ್ ಅವರ ಎಸೆತದಲ್ಲಿ ಚೆಂಡನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರಕ್ಕೆ ಕಳುಹಿಸಿದರು. ಈ ವೇಳೆ ಸಿಎಸ್‌ಕೆ ಆಟಗಾರರು ಆಘಾತಕ್ಕೀಡಾದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಆಸೀಸ್ ಆಟಗಾರನನ್ನು ಗುಣಗಾನ ಮಾಡಿದ್ದಾರೆ.
ಭಾನುವಾರ ಎರಡನೇ ಹೆಡ್ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ತಂಡ ಮೊದಲು ಬ್ಯಾಟ್ ಮಾಡುವಂತಾಯಿತು. ಎಂದಿನಂತೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಿದರು. ಈ ಜೋಡಿ 37 ರನ್‌ಗಳ ಜೊತೆಯಾಟವನ್ನು ಆಡಿತು. ಕೊಹ್ಲಿ 28 ರನ್ ಹಾಗೂ ಸಾಲ್ಟ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ದೇವದತ್ ಪಡಿಕ್ಕಲ್ಲ ತಮ್ಮ ಎರಡನೇ ಅರ್ಧಶತಕ ಬಾರಿಸಿ ಔಟ್ ಆದರು. ನಂತರ ಕ್ರೀಸ್‌ಗೆ ಬಂದ ಟಿಮ್ ಡೇವಿಡ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದರು.
IPL 2026: 28 ರನ್‌ಗೆ ಔಟಾದರೂ ರೋಹಿತ್ ಶರ್ಮಾರ ದೊಡ್ಡ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಸ್ಪೋಟಕ ಅರ್ಧಶತಕ ಬಾರಿಸಿದ ಡೇವಿಡ್
ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್ ಮಾಡುತ್ತಿದ್ದ ರಜತ್ ಪಾಟಿದಾರ್, ಕೇವಲ 19 ಎಸೆತಗಳಲ್ಲಿ ಅಜೇಯ 48 ರನ್ ಸಿಡಿಸಿದ್ದರು. ಇವರು ತಮ್ಮ ಅರ್ಧಶತಕವನ್ನು ಬೇಗ ಮುಗಿಸಬಹುದಿತ್ತು. ಆದರೆ, ಟಿಮ್ ಡೇವಿಡ್ ಇದಕ್ಕೆ ಅವಕಾಶ ನೀಡಲಿಲ್ಲ. ಅವರು ಹೆಚ್ಚು ಹೆಚ್ಚು ಸ್ಟ್ರೈಕ್ ತೆಗೆದುಕೊಂಡರು ಹಾಗೂ 25 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 70 ರನ್ ಚಚ್ಚಿದರು ಹಾಗೂ ಈ ಸೀಸನ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿದರು.
Tim David launched it on the roof of stadium!🤯🤯🤯#RCBvsCsk #Timdavid pic.twitter.com/QllcTwu43M
— Salman (@Salman_Sk50) April 5, 2026
ಸ್ಟೇಡಿಯಂನಿಂದ ಹೊರಕ್ಕೆ ಸಿಕ್ಸರ್ ಬಾರಿಸಿದ ಟಿಮ್
ಟಿಮ್ ಡೇವಿಡ್ ತಮ್ಮ ಬ್ಯಾಟಿಂಗ್ ಆರ್ಭಟದಿಂದ ಸಿಎಸ್‌ಕೆ ಬೌಲರ್‌ಗಳಿಗೆ ಭಯ ಮೂಡಿಸಿದ್ದರು. ಅವರು ಬರೋಬ್ಬರಿ 8 ಸಿಕ್ಸರ್‌ಗಳನ್ನು ಬಾರಿಸಿದ್ದರು, ಆದರೆ, ಇವುಗಳ ಪೈಕಿ ಒಂದು ಸಿಕ್ಸರ್ ಮಾತ್ರ ಸ್ಟೇಡಿಯಂನಿಂದ ಹೊರಕ್ಕೆ ಕಳುಹಿಸಿದ್ದರು. 19ನೇ ಓವರ್‌ನ ಮೊದಲನೇ ಎಸೆತವನ್ನು ಜೇಮಿ ಓವರ್ಟನ್ ಬಾಡಿ ಲೈನ್‌ನಲ್ಲಿ ಶಾಟ್ ಹಾಕಿದರು, ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಟಿಮ್ ಡೇವಿಡ್ ಅವರು ಡೀಪ್ ಸ್ಕೈರ್ ಲೆಗ್ ಭಾಗದಲ್ಲಿ ಸ್ಟೇಡಿಯಂ ಮೇಲ್ಚಾವಣಿಗೆ ಚೆಂಡನ್ನು ಕಳುಹಿಸಿದರು.
TIM DAVID IS BOSSING AT THE CHINNASWAMY STADIUM. 🥶 pic.twitter.com/bk7Iie6YZt
— Mufaddal Vohra (@mufaddal_vohra) April 5, 2026
ಈ ವೇಳೆ ಟಿಮ್ ಡೇವಿಡ್ ಪ್ರತಿಕ್ರಿಯೆ ನೀಡಿದರು. ಅವರು ಅಂಪೈರ್ ರೀತಿ ಸಿಕ್ಸರ್ ಸಿಗ್ನಲ್ ನೀಡಿದರು. ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಚೆಂಡಿಗೆ ಬೈ..ಬೈ ಎಂದು ಹೇಳುವ ರೀತಿ ಸನ್ನೆ ಮಾಡಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆರ್‌ಸಿಬಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿಂದೆ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್ ಹಾಗೂ ಎಬಿ ಡಿ ವಿಲಿಯರ್ಸ್ ಅವರು ಕೂಡ ಹಲವು ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಿಂದ ಹೊರಕ್ಕೆ ಚೆಂಡನ್ನು ಹೊಡೆದಿದ್ದರು.