ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027 Mini Auction: ಆಟಗಾರರ ರಿಲೀಸ್‌ ಬಳಿಕ ತಂಡಗಳ ಖಾತೆಯಲ್ಲಿ ಎಷ್ಟು ಹಣವಿದೆ? ಆರ್‌ಸಿಬಿ ಪರ್ಸ್‌ ಹೇಗಿದೆ?

2027ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿದೆ. ಲಖನೌ ಸೂಪರ್ ಜಯಂಟ್ಸ್ 47.45 ಕೋಟಿ ರು. ಗಳೊಂದಿಗೆ ಅತಿ ಹೆಚ್ಚು ಹಣ ಹೊಂದಿದೆ. ಗುಜರಾತ್ ಟೈಟನ್ಸ್ 8.75 ಕೋಟಿಯೊಂದಿಗೆ ಕೊನೆಯ ಸ್ಥಾನದಲ್ಲಿದೆ. ಮಿನಿ ಹರಾಜಿನಲ್ಲಿ ಒಟ್ಟು 297.95 ಕೋಟಿ ಖರ್ಚು ಮಾಡಲು ಅವಕಾಶವಿದೆ.

IPL 2027: ಆಟಗಾರರ ರಿಲೀಸ್‌ ಬಳಿಕ ತಂಡಗಳ ಖಾತೆಯಲ್ಲಿ ಎಷ್ಟು ಹಣವಿದೆ?

ಎಲ್ಲಾ 10 ತಂಡಗಳ ಖಾತೆಯಲ್ಲಿರುವ ಬಾಕಿ ಹಣದ ವಿವರ. -

Profile
Ramesh Kote Nov 17, 2026 10:59 PM

ಬೆಂಗಳೂರು: ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಗೆ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಿವೆ. 20ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ರಂದು (ಬುಧವಾರ) ಗೋವಾದಲ್ಲಿ ನಡೆಯಲಿದೆ. ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ನಡೆದಿದ್ದ ಆಟಗಾರರ ಹರಾಜು ಪ್ರಕ್ರಿಯೆ ಈ ಬಾರಿ ಭಾರತದಲ್ಲಿಯೇ ನಡೆಯಲಿದೆ.

ಕಳೆದ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಲಖನೌ ಸೂಪರ್ ಜಯಂಟ್ಸ್‌ (LSG) ತಂಡ ಈ ಬಾರಿ ಅತಿ ಹೆಚ್ಚು ಹಣದೊಂದಿಗೆ ಹರಾಜಿಗೆ ಪ್ರವೇಶಿಸಲಿದೆ. 27 ಕೋಟಿ ರು. ಮೌಲ್ಯದ ರಿಷಭ್ ಪಂತ್ ಅವರನ್ನು ಟ್ರೇಡ್ ಮೂಲಕ ತಂಡದಿಂದ ಹೊರ ಕಳುಹಿಸಿರುವ ಲಖನೌ, ಆಟಗಾರರ ಖರೀದಿಗೆ ಬರೋಬ್ಬರಿ 47.45 ಕೋಟಿ ರು ಹಣವನ್ನು ಹೊಂದಿದೆ. ಇನ್ನೊಂದೆಡೆ, ಗುಜರಾತ್ ಟೈಟನ್ಸ್ (GT) ತಂಡದ ಬಳಿ ಅತ್ಯಂತ ಕಡಿಮೆ ಹಣವಿದೆ. ಹರಾಜಿನಲ್ಲಿ 10 ಕೋಟಿ ರು ಗಳಿಗಿಂತ ಕಡಿಮೆ ಹಣ ಹೊಂದಿರುವ ಏಕೈಕ ತಂಡ ಗುಜರಾತ್ ಆಗಿದ್ದು, ಅದರ ಬಳಿ 8.75 ಕೋಟಿ ಉಳಿದಿದೆ.

IPL 2027 Retention: ಟ್ರಾವಿಸ್‌ ಹೆಡ್‌, ಧೋನಿ ಸೇರಿದಂತೆ ಹಲವು ಸ್ಟಾರ್‌ಗಳಿಗೆ ಕೊಕ್‌, ಎಲ್ಲಾ 10 ತಂಡಗಳಿಂದ ರಿಲೀಸ್‌ ಆಟಗಾರರ ವಿವರ!

ಹತ್ತು ತಂಡಗಳು ಒಟ್ಟಾಗಿ ಹರಾಜಿನಲ್ಲಿ ಗರಿಷ್ಠ 297.95 ಕೋಟಿ ಹಣವನ್ನು ಖರ್ಚು ಮಾಡಬಹುದಾಗಿದೆ. ಒಟ್ಟು 66 ಆಟಗಾರರಿಗೆ ಹರಾಜಿನಲ್ಲಿ ಅವಕಾಶವಿದ್ದು, ಗರಿಷ್ಠ 25 ವಿದೇಶಿ ಆಟಗಾರರನ್ನು ತಂಡಗಳು ಖರೀದಿಸಬಹುದಾಗಿದೆ. ಹರಾಜಿನಲ್ಲಿ ಭಾಗವಹಿಸಲಿರುವ ಆಟಗಾರರ ಅಂತಿಮ ಪಟ್ಟಿ ಹರಾಜಿಗೆ ಒಂದು ವಾರ ಮುಂಚಿತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇನ್ನು ಆಟಗಾರರ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಟ್ರೇಡ್ ವಿಂಡೋ ತೆರೆದಿರಲಿದೆ. ಹರಾಜಿಗೆ ಒಂದು ವಾರ ಮುಂಚಿತವಾಗಿ ಟ್ರೇಡ್ ವಿಂಡೋ ಮುಚ್ಚಲಿದ್ದು, ಅಷ್ಟರೊಳಗೆ ತಂಡಗಳು ಪರಸ್ಪರ ಆಟಗಾರರ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ತಂಡಗಳ ಬಳಿ ಇರುವ ಹರಾಜಿನ ಹಣದಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ.

ಹರಾಜಿನಲ್ಲಿ ಕಾಣಿಸಿಕೊಳ್ಳದ ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್

ಬಿಡುಗಡೆಯಾದ ಆಟಗಾರರ ಪೈಕಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಪ್ರಮುಖ ಹೆಸರುಗಳಾಗಿದ್ದಾರೆ. ಆದರೆ ಈ ಇಬ್ಬರೂ 2027ರ ಐಪಿಎಲ್ ಆವೃತ್ತಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ಅವರು ಮುಂದಿನ ಆವೃತ್ತಿಯಲ್ಲಿ ಆಡದಿರಲು ತೀರ್ಮಾನಿಸಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.

10 ತಂಡಗಳ ಬಳಿ ಇರುವ ಹಣ ಮತ್ತು ಖಾಲಿ ಸ್ಥಾನಗಳ ವಿವರ

ತಂಡ ಉಳಿದಿರುವ ಹಣ ಖಾಲಿ ಸ್ಥಾನಗಳು (ವಿದೇಶಿ ಆಟಗಾರರು)
ಲಖನೌ ಸೂಪರ್ ಜೈಂಟ್ಸ್ (LSG) ₹47.45 ಕೋಟಿ 7 (3)
ಕೋಲ್ಕತಾ ನೈಟ್ ರೈಡರ್ಸ್ (KKR) ₹41.65 ಕೋಟಿ 8 (3)
ಸನ್‌ರೈಸರ್ಸ್ ಹೈದರಾಬಾದ್ (SRH) ₹40.15 ಕೋಟಿ 7 (3)
ಡೆಲ್ಲಿ ಕ್ಯಾಪಿಟಲ್ಸ್ (DC) ₹39.50 ಕೋಟಿ 9 9 (4)
ಮುಂಬೈ ಇಂಡಿಯನ್ಸ್ (MI) ₹32.60 ಕೋಟಿ 9 (2)
ಚೆನ್ನೈ ಸೂಪರ್ ಕಿಂಗ್ಸ್ (CSK) ₹28.05 ಕೋಟಿ 6 (2)
ರಾಜಸ್ಥಾನ್ ರಾಯಲ್ಸ್ (RR) ₹27.05 ಕೋಟಿ 6 (2)
ಪಂಜಾಬ್ ಕಿಂಗ್ಸ್ (PBKS) ₹18.60 ಕೋಟಿ 6 (2)
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ₹14.15 ಕೋಟಿ 5 (1)
ಗುಜರಾತ್ ಟೈಟನ್ಸ್ (GT) ₹8.75 ಕೋಟಿ 3 (2)