ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ಎಂಎಸ್‌ ಧೋನಿಯ ಐಪಿಎಲ್‌ ಭವಿಷ್ಯ ನುಡಿದ ಮೊಹಮ್ಮದ್‌ ಕೈಫ್‌!

ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ವೃತ್ತಿಜೀವನದ ಅಂತ್ಯ ಸಮೀಪಿಸುತ್ತಿದೆ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ. ಧೋನಿ ಅವರ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮುಂದುವರಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸಂಜು ಸ್ಯಾಮ್ಸನ್ ಸೇರಿದಂತೆ ಹೊಸ ಆಟಗಾರರನ್ನು ಸೇರಿಸಿಕೊಳ್ಳುವ ಮೂಲಕ ಭವಿಷ್ಯದ ತಂಡ ನಿರ್ಮಾಣಕ್ಕೆ ಮುಂದಾಗಿದೆ.

ಎಂಎಸ್‌ಡಿಯ ಐಪಿಎಲ್‌ ಭವಿಷ್ಯ ನುಡಿದ ಮೊಹಮ್ಮದ್‌ ಕೈಫ್‌!

ಎಂಎಸ್‌ ಧೋನಿ ಐಪಿಎಲ್‌ ಭವಿಷ್ಯ ನುಡಿದ ಮೊಹಮ್ಮದ್‌ ಕೈಫ್‌. -

Profile
Ramesh Kote Nov 12, 2026 11:02 PM

ನವದೆಹಲಿ: ಟೀಮ್‌ ಇಂಡಿಯಾ ಆಟಗಾರ ಮೊಹಮ್ಮದ್ ಕೈಫ್ (Mohammed Kaif) ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಧೋನಿ ಅವರ ಕ್ರಿಕೆಟ್ ವೃತ್ತಿಜೀವನದ ಅಂತ್ಯ ಸಮೀಪಿಸುತ್ತಿದೆ ಎಂಬುದು ಅವರಿಗೆ ತಿಳಿದಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಧೋನಿ ಅವರನ್ನು ಮೀರಿ ಮುಂದಿನ ಭವಿಷ್ಯದತ್ತ ಹೆಜ್ಜೆ ಇಡಬೇಕಾಗಿದೆ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

2027ರ ಐಪಿಎಲ್ ಆಟಗಾರರ ರಿಟೆನ್ಷನ್ ಗಡುವು ನವೆಂಬರ್ 17ಕ್ಕೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಗಾಯದ ಸಮಸ್ಯೆಯಿಂದಾಗಿ 2026ರ ಐಪಿಎಲ್ ಸಂಪೂರ್ಣ ಆವೃತ್ತಿಯಿಂದ ಹೊರಗುಳಿದಿದ್ದರು. ಮೊಣಕಾಲು ಹಾಗೂ ಹೆಬ್ಬೆರಳಿನ ಗಾಯದ ಸಮಸ್ಯೆ ಅವರನ್ನು ಕಾಡಿತ್ತು. ಹೀಗಾಗಿ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಅವರು ಆಡುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.

ಇದರ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ನಾಲ್ವರು ಆಟಗಾರರ ವಿನಿಮಯ ಒಪ್ಪಂದ ಮಾಡಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಾಕ್ ಎಡ್ವರ್ಡ್ಸ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಖಲೀಲ್ ಅಹ್ಮದ್ ಮತ್ತು ನೇಥನ್ ಎಲ್ಲಿಸ್ ಅವರನ್ನು ಹೈದರಾಬಾದ್ ತಂಡಕ್ಕೆ ಬಿಟ್ಟುಕೊಟ್ಟಿದೆ.

U-19 Asia Cup 2026: ಆಫ್ಘನ್‌ ವಿರುದ್ಧ ಗೆದ್ದ ಭಾರತಕ್ಕೆ ಫೈನಲ್‌ನಲ್ಲಿ ಪಾಕಿಸ್ತಾನ ಎದುರಾಳಿ!

ಧೋನಿ ಅವರ ಭವಿಷ್ಯದ ಕುರಿತು ಮಾತನಾಡಿರುವ ಮೊಹಮ್ಮದ್ ಕೈಫ್, ತಮ್ಮ ಮುಂದಿನ ಯೋಜನೆಗಳನ್ನು ಧೋನಿ ಎಂದಿಗೂ ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. 2026ರ ಐಪಿಎಲ್ ಸಂದರ್ಭದಲ್ಲಿ ಧೋನಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರೂ ಪಂದ್ಯಗಳಲ್ಲಿ ಕಾಣಿಸಿಕೊಳ್ಳದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು ಎಂದು ತಿಳಿಸಿದ್ದಾರೆ.

"ಧೋನಿ ಯಾವಾಗ ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ? ಹೀಗಿರುವಾಗ ಅವರು ಡಿಸೆಂಬರ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾವು ಹೇಗೆ ಹೇಳಲು ಸಾಧ್ಯ? ಅವರು ಈಗ ಏನಾದರೂ ಹೇಳಿರಬಹುದು. ಆದರೆ ತಮ್ಮ ನಿರ್ಧಾರವನ್ನು ಬಹಿರಂಗಪಡಿಸುವುದಿಲ್ಲ. ಕಳೆದ ವರ್ಷ ಅವರು ಹಲವು ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೋಗಳು ಕಾಣಿಸುತ್ತಿದ್ದವು. ಇದನ್ನು ನೋಡಿದಾಗ ಮುಂದಿನ ಪಂದ್ಯದಲ್ಲಿ ಆಡಬಹುದು ಎಂದು ನಾವು ಭಾವಿಸುತ್ತಿದ್ದೆವು. ಆದರೆ ಅವರು ಆಡಲೇ ಇಲ್ಲ. ಹೀಗೆ ಇಡೀ ಆವೃತ್ತಿ ಮುಂದುವರಿಯಿತು," ಎಂದು ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನ ವಿಡಿಯೋದಲ್ಲಿ ಹೇಳಿದ್ದಾರೆ.

IND vs NZ: ಭಾರತ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದು ಅಚ್ಚರಿ ತಂದಿತ್ತು ಎಂದ ಆಕಿಬ್‌ ನಬಿ!

ಧೋನಿ ಅವರ ಕೊನೆಯ ಪಂದ್ಯ ಯಾವುದು ಎಂಬ ಬಗ್ಗೆ ಕಳೆದ ಆವೃತ್ತಿಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅವರ ಪೋಷಕರು ಪಂದ್ಯ ವೀಕ್ಷಿಸಲು ಆಗಮಿಸಿದ್ದಾಗಲೂ ಇದು ಧೋನಿ ಅವರ ಕೊನೆಯ ಪಂದ್ಯವಾಗಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಅವರ ಮುಂದಿನ ನಿರ್ಧಾರ ಏನು ಎಂಬುದು ಯಾರಿಗೂ ತಿಳಿದಿಲ್ಲ ಎಂದು ಕೈಫ್ ಹೇಳಿದ್ದಾರೆ.

"ಇಡೀ ಐಪಿಎಲ್ ಆವೃತ್ತಿ ಮುಗಿದರೂ ಅವರು ಆಡಲಿಲ್ಲ. ಆದರೆ ಅವರನ್ನು (ಎಂಎಸ್‌ ಧೋನಿ) ಅಧಿಕೃತವಾಗಿ ಟೂರ್ನಿಯಿಂದ ಹೊರಗಿಟ್ಟಿರಲಿಲ್ಲ. ಅವರ ಪೋಷಕರು ಕೂಡ ಪಂದ್ಯ ವೀಕ್ಷಿಸಲು ಬಂದಿದ್ದರು. ಆಗ ಇದೇ ಅವರ ಕೊನೆಯ ಪಂದ್ಯವಾಗಿರಬಹುದು ಎಂದು ಅನಿಸಿತ್ತು. ಆದರೆ ಧೋನಿ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲ. ಅವರ ಮುಂದಿನ ನಿರ್ಧಾರ ಏನು ಎಂಬುದನ್ನು ಕಾದು ನೋಡಬೇಕಿದೆ. ಅವರ ಕ್ರಿಕೆಟ್ ವೃತ್ತಿಜೀವನದ ಅಂತ್ಯ ಸಮೀಪಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ಕೂಡ ಈ ವಿಚಾರ ತಿಳಿದಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದುವರಿಯಲೇಬೇಕು. ಈಗಾಗಲೇ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ," ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

IND vs NZ: ನಾಲ್ಕನೇ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸೂಚಿಸಿದ ಆಕಾಶ್‌ ಚೋಪ್ರಾ!

ಸಿಎಸ್‌ಕೆ ಯೋಜನೆಯಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಪಾತ್ರವೇನು?

ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು 6 ಕೋಟಿ ಹಾಗೂ ಜಾಕ್ ಎಡ್ವರ್ಡ್ಸ್ ಅವರನ್ನು 3 ಕೋಟಿ ರು. ಗಳಿಗೆ ಪಡೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ತಂಡದ ಬಲವರ್ಧನೆಗೆ ಮುಂದಾಗಿದೆ. ಈ ಆಟಗಾರರ ಸೇರ್ಪಡೆಯಿಂದ ತಂಡದ ವಿದೇಶಿ ಆಟಗಾರರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದ್ದು, ಮುಂದಿನ ಆವೃತ್ತಿಯಲ್ಲಿ ತಂಡಕ್ಕೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿವೆ.

ಚೆನ್ನೈನಲ್ಲಿ ನಡೆಯುವ ಪಂದ್ಯಗಳ ಪಿಚ್ ಪರಿಸ್ಥಿತಿಯಲ್ಲೂ ಬದಲಾವಣೆಯಾಗಿದೆ. ಈ ಹಿಂದೆ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತಿದ್ದ ಪಿಚ್‌ಗಳಲ್ಲಿ ಇದೀಗ ಬ್ಯಾಟರ್‌ಗಳು ಉತ್ತಮ ರನ್ ಗಳಿಸುತ್ತಿದ್ದಾರೆ. ಹೀಗಾಗಿ ಲಿವಿಂಗ್‌ಸ್ಟೋನ್ ತಂಡಕ್ಕೆ ಉಪಯುಕ್ತವಾಗಲಿದ್ದಾರೆ ಎಂದು ಕೈಫ್ ಹೇಳಿದ್ದಾರೆ.

"ಲಿವಿಂಗ್‌ಸ್ಟೋನ್ ಸೇರ್ಪಡೆಯಿಂದ ಚೆನ್ನೈ ತಂಡಕ್ಕೂ ಲಾಭವಾಗಲಿದೆ ಎಂದು ನಾನು ಭಾವಿಸುತ್ತೇನೆ. ಈಗ ಚೆನ್ನೈ ಪಿಚ್‌ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಅಲ್ಲಿ ಕೂಡ ಉತ್ತಮ ರನ್‌ಗಳು ದಾಖಲಾಗುತ್ತಿವೆ. ಸ್ಪಿನ್ನರ್‌ಗಳ ಪಾತ್ರವೂ ಸ್ವಲ್ಪ ಕಡಿಮೆಯಾಗಿದೆ," ಎಂದು ಕೈಫ್ ಹೇಳಿದ್ದಾರೆ.