ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

PAK vs SL: ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ ಕಿತ್ತು ದಾಖಲೆ ಬರೆದ ಸಾಕಿಬ್‌ ಖಾನ್!

ಪಾಕಿಸ್ತಾನದ ವೇಗಿ ಸಾಕಿಬ್ ಖಾನ್ ಶ್ರೀಲಂಕಾ ವಿರುದ್ಧದ ಚೊಚ್ಚಲ ಟೆಸ್ಟ್‌ನಲ್ಲೇ 130 ರನ್ ನೀಡಿ ಏಳು ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಪದಾರ್ಪಣೆಯಲ್ಲಿ ಏಳು ವಿಕೆಟ್ ಪಡೆದ ಪಾಕಿಸ್ತಾನದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಅವರ ಸ್ವಿಂಗ್ ಬೌಲಿಂಗ್ ಶ್ರೀಲಂಕಾ ಇನಿಂಗ್ಸ್ ಕುಸಿಯಲು ಪ್ರಮುಖ ಕಾರಣವಾಯಿತು.

ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ ಕಿತ್ತ ಸಾಕಿಬ್‌ ಖಾನ್‌!

ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ ಕಿತ್ತ ಸಾಕಿಬ್‌ ಖಾನ್‌. -

Profile
Ramesh Kote Nov 12, 2026 10:06 PM

ನವದೆಹಲಿ: ಪಾಕಿಸ್ತಾನದ ಯುವ ವೇಗದ ಬೌಲರ್ ಸಾಕಿಬ್‌ ಖಾನ್ ( Saqib Khan) ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಶ್ರೀಲಂಕಾ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ (PAK vs SL) ನಾಲ್ಕನೇ ದಿನ ಏಳು ವಿಕೆಟ್‌ಗಳನ್ನು ಕಬಳಿಸಿ ಪಾಕಿಸ್ತಾನದ ಪರ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.

31ರ ವಯಸ್ಸಿನ ವರ್ಷದ ಬಲಗೈ ವೇಗಿ ಸಾಕಿಬ್ ಖಾನ್ 34 ಓವರ್‌ಗಳಲ್ಲಿ 130 ರನ್ ನೀಡಿ ಏಳು ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಪದಾರ್ಪಣೆಯ ಇನಿಂಗ್ಸ್‌ನಲ್ಲೇ ಏಳು ವಿಕೆಟ್ ಪಡೆದ ಪಾಕಿಸ್ತಾನದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಮೊಹಮ್ಮದ್ ನಜೀರ್, ಮೊಹಮ್ಮದ್ ಜಾಹಿದ್ ಮತ್ತು ಅಬ್ರಾರ್ ಅಹ್ಮದ್ ಈ ಸಾಧನೆ ಮಾಡಿದ್ದರು.

IND vs NZ: ನಾಲ್ಕನೇ ಒಡಿಐಗೆ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ವಿವರ!

ಸಾಕಿಬ್ ಖಾನ್ ಯಾರು?

ಕರಾಚಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುವ ಮೂಲಕ ತಮ್ಮ ಕ್ರಿಕೆಟ್ ಪಯಣ ಆರಂಭಿಸಿದ ಸಾಕಿಬ್‌ ಖಾನ್, ನಂತರ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡರು. ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರಿಗೆ ಸಾಕಷ್ಟು ಸಮಯ ಬೇಕಾಯಿತು.

2024ರಲ್ಲಿ 29ನೇ ವಯಸ್ಸಿನಲ್ಲಿ ಕರಾಚಿ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2025-26ರ ಖೈದ್-ಎ-ಅಜಂ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಅವರು, ಒಂಬತ್ತು ಪಂದ್ಯಗಳಲ್ಲಿ 47 ವಿಕೆಟ್ ಪಡೆದು ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.



ಇದುವರೆಗೆ 19 ಪ್ರಥಮ ದರ್ಜೆ ಪಂದ್ಯಗಳಲ್ಲಿ 81 ವಿಕೆಟ್, ಎಂಟು ಲಿಸ್ಟ್ ಎ ಪಂದ್ಯಗಳಲ್ಲಿ 15 ವಿಕೆಟ್ ಹಾಗೂ 17 ಟಿ20 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ. 2026ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಪರವೂ ಆಡಿದ್ದರು.

U-19 Asia Cup 2026: ಆಫ್ಘನ್‌ ವಿರುದ್ಧ ಗೆದ್ದ ಭಾರತಕ್ಕೆ ಫೈನಲ್‌ನಲ್ಲಿ ಪಾಕಿಸ್ತಾನ ಎದುರಾಳಿ!

ಶ್ರೀಲಂಕಾ ವಿರುದ್ಧ ಸಾಕಿಬ್ ಅಬ್ಬರ

ಶ್ರೀಲಂಕಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 404 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು. ಧನಂಜಯ ಡಿ ಸಿಲ್ವಾ 167 ರನ್ ಹಾಗೂ ನಾಯಕ ಕುಸಲ್ ಮೆಂಡಿಸ್ 119 ರನ್ ಗಳಿಸಿ ತಂಡಕ್ಕೆ ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದರು. ಆದರೆ ನಾಲ್ಕನೇ ದಿನ ಸಾಕಿಬ್ ಖಾನ್ ಅವರ ಸ್ವಿಂಗ್ ಬೌಲಿಂಗ್ ಎದುರು ಶ್ರೀಲಂಕಾ ಬ್ಯಾಟರ್‌ಗಳು ಪರದಾಡಿದರು.

ಸಾಕಿಬ್‌ಬ್ ತಮ್ಮ ಎಂಟು ಓವರ್‌ಗಳ ಅದ್ಭುತ ಸ್ಪೆಲ್‌ನಲ್ಲಿ ಕೇವಲ 25 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಧನಂಜಯ ಡಿ ಸಿಲ್ವಾ ಅವರನ್ನು ಔಟ್ ಮಾಡುವ ಮೂಲಕ 249 ರನ್‌ಗಳ ಜೊತೆಯಾಟವನ್ನು ಮುರಿದರು. ನಂತರ ಕುಸಲ್ ಮೆಂಡಿಸ್, ಸೋನಲ್ ದಿನೂಷಾ ಸೇರಿದಂತೆ ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಅಂತಿಮವಾಗಿ ಶ್ರೀಲಂಕಾ 117.2 ಓವರ್‌ಗಳಲ್ಲಿ 446 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ತನ್ನ ಮೊದಲ ಇನಿಂಗ್ಸ್‌ನಲ್ಲಿ 434 ರನ್‌ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತ್ತು. ಹೀಗಾಗಿ ಶ್ರೀಲಂಕಾ ಕೇವಲ 12 ರನ್‌ಗಳ ಅಲ್ಪ ಮುನ್ನಡೆ ಪಡೆಯಿತು.

IND vs NZ: ಕೊನೆಯ ಎರಡು ಏಕದಿನ ಪಂದ್ಯಗಳಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ!

ಪಾಕಿಸ್ತಾನಕ್ಕೆ ಮುನ್ನಡೆ

ಎರಡನೇ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ನಾಲ್ಕನೇ ದಿನದಾಟದ ಅಂತ್ಯಕ್ಕೆ 21.2 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 57 ರನ್ ಗಳಿಸಿತ್ತು. ಆ ಮೂಲಕ ಒಟ್ಟಾರೆ 45 ರನ್‌ಗಳ ಮುನ್ನಡೆ ಸಾಧಿಸಿತ್ತು. ಅಜಾನ್ ಅವೈಸ್ ಮತ್ತು ಮೊಹಮ್ಮದ್ ತಾಹಾ ಕ್ರೀಸ್‌ನಲ್ಲಿದ್ದರು. ಆದರೆ ಮಂದ ಬೆಳಕು ಮತ್ತು ನಂತರ ಸುರಿದ ಮಳೆಯಿಂದಾಗಿ ದಿನದಾಟವನ್ನು ಬೇಗನೆ ಅಂತ್ಯಗೊಳಿಸಲಾಯಿತು. ಇನ್ನೂ ಒಂಬತ್ತು ವಿಕೆಟ್‌ಗಳು ಕೈಯಲ್ಲಿರುವ ಪಾಕಿಸ್ತಾನ ಅಂತಿಮ ದಿನದಾಟದಲ್ಲಿ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.