IND vs IRE: ಮೊಟ್ಟ ಮೊದಲ ಬಾರಿ ಭಾರತ ತಂಡವನ್ನು ಮಣಿಸಿ ಇತಿಹಾಸ ಬರೆದ ಐರ್ಲೆಂಡ್!
IND vs IRE LIVE Highlights: ಲಾರ್ಕನ್ ಟಕ್ಕರ್ ಅರ್ಧಶತಕ ಹಾಗೂ ಮ್ಯಾಥ್ಯೂ ಹೊಲಾರ್ಡ್ ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಐರ್ಲೆಂಡ್ ತಂಡ, ಭಾರತದ ಎದುರು ಮೊದಲನೇ ಟಿ20ಐ ಪಂದ್ಯದಲ್ಲಿ 34 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಎದುರು ಐರ್ಲೆಂಡ್‌ಗೆ ಮೊಟ್ಟ ಮೊದಲ ಗೆಲುವಾಗಿದೆ.
ಐರ್ಲೆಂಡ್ ಎದುರು ಭಾರತ ತಂಡಕ್ಕೆ ಸೋಲು. -
ಬೆಲ್‌ಫಾಸ್ಟ್: ಲಾರ್ಕನ್ ಟಕ್ಕರ್ (Lorcan Tucker) ಅರ್ಧಶತಕ ಹಾಗೂ ಮ್ಯಾಥ್ಯೂ ಹೊಲಾರ್ಡ್ (Matthew Hollard) ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಐರ್ಲೆಂಡ್ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ(IND vs IRE) 34 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಇದು ಐರ್ಲೆಂಡ್ ತಂಡಕ್ಕೆ ಭಾರತದ ಎದುರು ಮೊಟ್ಟ ಮೊದಲ ಜಯವಾಗಿದೆ. ಈ ಗೆಲುವಿನ ಬಳಿಕ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಭಾರತ ತಂಡದ ಚೇಸಿಂಗ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ 3 ವಿಕೆಟ್‌ಗಳನ್ನು ಕಬಳಿಸಿ ಮ್ಯಾಥ್ಯೂ ಹೊಲಾರ್ಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶುಕ್ರವಾರ ಇಲ್ಲಿನ ಸಿವಿಲ್ ಸರ್ವೀಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಐರ್ಲೆಂಡ್ ನೀಡಿದ್ದ 183 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಸುಲಭವಾಗಿ ಗೆಲುವು ಪಡೆಯಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ತವರು ಅಂಗಣದಲ್ಲಿನ ಲಾಭವನ್ನು ಪಡೆದ ಐರ್ಲೆಂಡ್ ಬೌಲರ್‌ಗಳು, ಟಿ20 ವಿಶ್ವಕಪ್ ಚಾಂಪಿಯನ್ಸ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
IND vs IRE: ಬೆಲ್‌ಫಾಸ್ಟ್‌ನಲ್ಲಿ ಟಾಸ್‌ಗೆ ಬಂದು ರೋಹಿತ್ ಶರ್ಮಾರ ದಾಖಲೆ ಮುರಿದ ಶ್ರೇಯಸ್ ಅಯ್ಯರ್!
ವಿಶೇಷವಾಗಿ ಮ್ಯಾಥ್ಯೂ ಹೋಲಾರ್ಡ್ ಅವರು ಮಾರಕ ಬೌಲಿಂಗ್ ದಾಳಿ ನಡೆಸಿ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ವಾಷಿಂಗ್ಟನ್ ಸುಂದರ್ ಸೇರಿ ಮೂರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಭಾರತ ಮೂಲದ ಜೈ ಮೂಂದ್ರಾ ಅವರು ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೇ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ವಿಫಲರಾದರು. ಭಾರತದ ಪರ ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ50 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಶಿವಂ ದುಬೇ ಅವರು 25 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿವ ವಿಫಲರಾದರು. ಭಾರತ ತಂಡ 18.5 ಓವರ್‌ಗಳಿಗೆ 148 ರನ್‌ಗಳಿಗೆ ಆಲ್‌ಔಟ್ ಆಯಿತು.
Ireland win the first T20I in Belfast by 34 runs.#TeamIndia will now aim to level the series on Sunday.
— BCCI (@BCCI) June 26, 2026
Scorecard ▶️ https://t.co/gdoXw2dAKR#IREvIND pic.twitter.com/kxnHM9ApeV
182 ರನ್ ಕಲೆ ಹಾಕಿದ ಐರ್ಲೆಂಡ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆತಿಥೇಯ ಐರ್ಲೆಂಡ್ ತಂಡ, ಪವರ್‌ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದರೂ ನಾಯಕ ಲಾರ್ಕನ್ ಟಕ್ಕರ್ (50 ರನ್) ಹಾಗೂ ಗೆರೆಥ್ ಡೆಲಾನಿ (49 ರನ್) ಅವರ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 183 ರನ್‌ಗಳ ಗುರಿಯನ್ನು ನೀಡಿತು.
Abhishek Sharma doing what he does best 💥
— BCCI (@BCCI) June 26, 2026
The #TeamIndia opener cruises to a 1️⃣9️⃣-ball FIFTY 👊
Updates ▶️ https://t.co/gdoXw2dAKR#IREvIND | @OfficialAbhi04 pic.twitter.com/b2semHbeOh
ಐರ್ಲೆಂಡ್‌ಗೆ ಆರಂಭಿಕ ಆಘಾತ
ಐರ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್ ಅವರು ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸುವ ಮೂಲಕ ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ರಾಸ್ ಅಡೈರ್ (12) ಹಾಗೂ ಟಿಮ್ ಟೆಕ್ಟರ್ (17) ಅವರನ್ನು ಹರ್ಷಿತ್ ರಾಣಾ ಔಟ್ ಮಾಡಿದರೆ, ಅರ್ಷದೀಪ್ ಸಿಂಗ್ ಅವರು ಹ್ಯಾರಿ ಟೆಕ್ಟರ್ ಅವರನ್ನು ಡಕ್‌ಔಟ್ ಮಾಡಿದರು. ನಂತರ ಶಿವಂ ದುಬೇ ಅವರು 15 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಬೆಂಜಮಿನ್ ಕಾಲಿಡ್ಜ್ ಅವರನ್ನು ಔಟ್ ಮಾಡಿದರು. ಆ ಮೂಲಕ ಆತಿಥೇಯರು 50 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.
Innings Break!
— BCCI (@BCCI) June 26, 2026
3️⃣ wickets for Harshit Rana 🔥
2️⃣ wickets each for Arshdeep Singh and Axar Patel 🔝
Over to our batters to chase down 1️⃣8️⃣3️⃣ 🎯
Updates ▶️ https://t.co/gdoXw2dAKR#TeamIndia | #IREvIND pic.twitter.com/TPyCKD70FF
ಲಾರ್ಕನ್ ಟಕ್ಕರ್ ಅರ್ಧಶತಕ
ಆರಂಭಿಕ ಆಘಾತ ಅನುಭವಿಸಿದ್ದ ಐರ್ಲೆಂಡ್‌ಗೆ ನಾಯಕ ಲಾರ್ಕನ್ ಟಕ್ಕರ್ ಹಾಗೂ ಗೆರೆಥ್ ಡೆಲಾನಿ ಅವರ ತಮ್ಮ ಬ್ಯಾಟಿಂಗ್ ಮೂಲಕ ಆಸರೆಯಾದರು. ಅದ್ಭುತ ಬ್ಯಾಟ್ ಮಾಡಿದ ಈ ಜೋಡಿ ಐದನೇ ವಿಕೆಟ್‌ಗೆ 64 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಮಧ್ಯಮ ಓವರ್‌ಗಳಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ನಾಯಕ ಟಕ್ಕರ್, 36 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅರ್ಧಶತಕವನ್ನು ಗಳಿಸಿ ಔಟ್ ಆದರು.
IND vs IRE: ಬೆಲ್‌ಫಾಸ್ಟ್‌ನಲ್ಲಿ ಟಾಸ್‌ಗೆ ಬಂದು ರೋಹಿತ್ ಶರ್ಮಾರ ದಾಖಲೆ ಮುರಿದ ಶ್ರೇಯಸ್ ಅಯ್ಯರ್!
ನಾಯಕನ ಜೊತೆಗೆ ದೀರ್ಘಾವಧಿ ಸಾಥ್ ನೀಡಿದ್ದ ಗೆರೆಥ್ ಡೆಲಾನಿ 32 ಎಸೆತಗಳಲ್ಲಿ 49 ರನ್ ಗಳಿಸಿ ಅರ್ಧಶತಕದಂಚಿನಲ್ಲಿ ಔಟ್ ಮಾಡದರು. ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರೂ ಅವರು ಜಾರ್ಜ್ ಡಾರ್ಕೆಲ್ (19 ರನ್) ಅವರ ಜೊತೆಗೆ ಕೇವಲ 16 ಎಸೆತಗಳಲ್ಲಿ 49 ರನ್‌ಗಳ ಸ್ಪೋಟಕ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
ಭಾರತದ ಪರ ಹರ್ಷಿತ್ ರಾಣಾ 3 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಸ್ಕೋರ್ ವಿವರ
ಐರ್ಲೆಂಡ್: 20 ಓವರ್‌ಗಳಿಗೆ 182-9 (ಲಾರ್ಕನ್ ಟಕ್ಕರ್ 50, ಗೆರೆಥ್ ಡೆಲಾನಿ 49; ಹರ್ಷಿತ್ ರಾಣಾ 24/3, ಅರ್ಷದೀಪ್ ಸಿಂಗ್ 28/2 ಹಾಗೂ ಅಕ್ಷರ್ ಪಟೇಲ್ 33/2)
ಭಾರತ: 18.5 ಓವರ್‌ಗಳಿಗೆ 148-10 (ಅಭಿಷೇಕ್ ಶರ್ಮಾ 50, ಇಶಾನ್ ಕಿಶನ್ 25; ಮ್ಯಾಥ್ಯೂ ಹಂಫ್ರೀಸ್ 38ಕ್ಕೆ 3, ಜೈ ಮೂಂಡ್ರಾ 26ಕ್ಕೆ 2, ಮ್ಯಾಥ್ಯೂ ಹೊಲಾರ್ಡ್ 28 ಕ್ಕೆ 3
ಪಂದ್ಯ ಶ್ರೇಷ್ಠ ಪ್ರಶಸ್ತಿ: ಮ್ಯಾಥ್ಯೂ ಹೊಲಾರ್ಡ್