ಜೇಸನ್ ಹೋಲ್ಡರ್ ಕಮ್‌ಬ್ಯಾಕ್, 2026ರ ಟಿ20 ವಿಶ್ವಕಪ್‌ಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ!
West Indies T20 World Cup Squad: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಹಲವು ದಿನಗಳ ಬಳಿಕ ಆಲ್‌ರೌಂಡರ್ ಜೇಸನ್ ಹೋಲ್ಡರ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಈ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ವಿಂಡೀಸ್ ತಂಡವನ್ನು ಶೇಯ್ ಹೋಪ್ ಮುನ್ನಡೆಸಲಿಸಲಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ. -
ನವದೆಹಲಿ: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಗೆ 15 ಸದಸ್ಯರ ವೆಸ್ಟ್ ಇಂಡೀಸ್ (West Indies T20 WC Squad) ತಂಡವನ್ನು ಜನವರಿ 26 ರಂದು ಪ್ರಕಟಿಸಲಾಗಿದೆ. ಹಿರಿಯ ಆಲ್‌ರೌಂಡರ್ ಜೇಸನ್ ಹೋಲ್ಡರ್ ಹಾಗೂ ಮಾಜಿ ನಾಯಕ ರೊವ್ಮನ್ ಪೊವೆಲ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಶೇಯ್ ಹೋಪ್ (Shai Hope) ಮುನ್ನಡೆಸಲಿದ್ದಾರೆ. ಕಳೆದ ಸರಣಿಯಲ್ಲಿ ಜೇಸನ್ ಹೋಲ್ಡರ್ ಹಾಗೂ ರೊವ್ಮನ್ ಪೊವೆಲ್‌ಗೆ ವಿಶ್ರಾಂತಿಯನ್ನು ನೀಡಲಾಗಿತ್ತು. ಆದರೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈ ಇಬ್ಬರ ಅನುಭವ ತಂಡಕ್ಕೆ ಅಗತ್ಯವಿದೆ.
ಹಾರ್ಡ್ ಹಿಟ್ಟರ್ ಕ್ವಿಂಟನ್ ಸ್ಯಾಂಪ್ಸನ್ ಅವರಿಗೂ ತಂಡದಲ್ಲಿ ಅವಕಾಶವನ್ನು ನೀಡಲಾಗಿದೆ. ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿ 25ರ ಪ್ರಾಯದ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ದುಬೈನಲ್ಲಿ ನಡೆದಿದ್ದ ಈ ಮೂರು ಇನಿಂಗ್ಸ್‌ಗಳಿಂದ ಸ್ಯಾಂಪ್ಸನ್ ಅವರು ಕೇವಲ 35 ರನ್ ಗಳಿಗೆ ಸೀಮಿತರಾಗಿದ್ದರು. ಇಲ್ಲಿ ವೈಫಲ್ಯ ಅನುಭವಿಸಿದರೂ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಇಲ್ಲಿ ಪರಿಗಣಿಸಲಾಗಿದೆ.
ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಹೇಡನ್!
ಗಯಾನ ಅಮೆಜಾನ್ ವಾರಿಯರ್ಸ್ ಪರ ಆಡಿದ್ದ 9 ಇನಿಂಗ್ಸ್‌ಗಳಿಂದ ಸ್ಯಾಂಪ್ಸನ್ ಅವರು 151.57ರ ಸ್ಟ್ರೈಕ್ ರೇಟ್‌ನಲ್ಲಿ 241 ರನ್‌ಗಳನ್ನು ಸಿಡಿಸಿದ್ದರು. ಇದರ ಫಲವಾಗಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೆ ಅವಕಾಶವನ್ನು ನೀಡಲಾಯಿತು. ಕಳೆದ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ರಾಸ್ಟನ್ ಚೇಸ್, ಅಕೀಲ್ ಹುಸೇನ್ ಹಾಗೂ ಶೆರ್ಫೆನ್ ಋದರ್ಫೋರ್ಡ್ ಇದೀಗ ಟಿ20 ವಿಶ್ವಕಪ್ ವಿಂಡೀಸ್ ತಂಡಕ್ಕೆ ಮರಳಿದ್ದಾರೆ.
Every shot, every celebration & and every moment of hope, we show the world who we are!🌴
— Windies Cricket (@windiescricket) January 26, 2026
Here are the men to carry the hopes and dreams of every West Indian at the ICC Men's T20 World Cup in India & Sri Lanka.🏆 #WT20 #MaroonSpirit pic.twitter.com/R7HoWvyjTz
ಮತ್ತೊಂದು ಗಮನಾರ್ಹ ಸೇರ್ಪಡೆಯೆಂದರೆ ವೇಗದ ಬೌಲರ್ ಶಮರ್ ಜೋಸೆಫ್ ಅವರದು. ಇವರು 2025ರ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿದ್ದರು. 26 ವರ್ಷದ ಅವರು ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯ ಎರಡು ಪಂದ್ಯಗಳಲ್ಲಿ ಆಡಿದ್ದರು ಆದರೆ ತರಬೇತಿಯ ಸಮಯದಲ್ಲಿ ಭುಜದಲ್ಲಿ ನೋವು ಕಾಣಿಸಿಕೊಂಡ ನಂತರ ಬಾಂಗ್ಲಾದೇಶ ವಿರುದ್ಧದ ಒಡಿಐ ಸರಣಿಯಿಂದ ಹೊರಗುಳಿದಿದ್ದರು.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ತಂಡ: ಶೇಯ್ ಹೋಪ್ (ನಾಯಕ), ಶಿಮ್ರಾನ್ ಹೆಟ್ಮಾಯೆರ್, ಜಾನ್ಸನ್ ಚಾರ್ಲ್ಸ್. ಬ್ರ್ಯಾಂಡನ್ ಕಿಂಗ್, ರಾಸ್ಟನ್ ಚೇಸ್, ಜೇಸನ್ ಹೋಲ್ಡರ್, ರೊವ್ಮನ್ ಪೊವೆಲ್, ಶೆರ್ಫೆನ್ ಋದರ್ಫೋರ್ಡ್, ರೊಮ್ಯಾರಿಯೊ ಶೆಫರ್ಡ್, ಕ್ವಿಂಟಿನ್ ಸ್ಯಾಂಪ್ಸನ್ ಅಕೀಲ್ ಹುಸೇನ್, ಗುಡಕೇಶ್ ಮೋಟಿ, ಶಮರ್ ಜೋಸೆಫ್, ಜೇಡನ್ ಸೀಲ್ಸ್, ಮ್ಯಾಥ್ಯೂ ಫಾರ್ಡ್