DC vs PBKS: 152 ರನ್ ಸಿಡಿಸಿ ಅಭಿಷೇಕ್ ಶರ್ಮಾ ದಾಖಲೆ ಮುರಿದ ಕನ್ನಡಿಗ ಕೆಎಲ್ ರಾಹುಲ್!
KL Rahul Scored 152 Runs: ಪಂಜಾಬ್ ಕಿಂಗ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿದರು. ಅವರು 67 ಎಸೆತಗಳಲ್ಲಿ 152 ರನ್ ಗಳಸಿ ಅಭಿಷೇಕ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ.
ಪಂಜಾಬ್ ಕಿಂಗ್ಸ್ ಎದುರು 152 ನ್ ಸಿಡಿಸಿ ಇತಿಹಾಸ ಬರೆದ ಕೆಎಲ್ ರಾಹುಲ್. -
ನವದೆಹಲಿ: ಕೆಎಲ್ ರಾಹುಲ್ (KL Rahul) ಅವರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ವೃತ್ತಿ ಜೀವನದಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಶನಿವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ (DC vs PBKS) 67 ಎಸೆತಗಳಲ್ಲಿ ಅಜೇಯ 152 ರನ್‌ಗಳನ್ನು ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನು ಕಲೆ ಹಾಕಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ನೂತನ ದಾಖಲೆಯನ್ನು ಬರೆದರು. ಆ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಅಭಿಷೇಕ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ. ಅಭಿಷೇಕ್ ಶರ್ಮಾ ಈ ಹಿಂದೆ 141 ರನ್‌ಗಳನ್ನು ಬಾರಿಸಿದ್ದರು.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ತಮ್ಮ ಐಪಿಎಲ್ ವೃತ್ತಿ ಜೀವನದ ಆರನೇ ಶತಕವನ್ನು ಪೂರ್ಣಗೊಳಿಸಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ 9 ಸಿಕ್ಸರ್ ಹಾಗೂ 16 ಬೌಂಡರಿಗಳನ್ನು ಬಾರಿಸಿದರು. ಈ ಇನಿಂಗ್ಸ್ ಮೂಲಕ ಅವರು ಐಪಿಎಲ್ ಟೂರ್ನಿಯಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ.
ʻಇವರು ಕೇವಲ ಕಿಂಗ್ ಮಾತ್ರವಲ್ಲ, ಚೇಸ್ ಮಾಸ್ಟರ್ʼ: ವಿರಾಟ್ ಕೊಹ್ಲಿಗೆ ಸುನೀಲ್ ಗವಾಸ್ಕರ್ ಮೆಚ್ಚುಗೆ!
ಐಪಿಎಲ್ ಟೂರ್ನಿಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಕಲೆ ಹಾಕಿದ ಬ್ಯಾಟರ್ಸ್
ಕ್ರಿಸ್ ಗೇಲ್: 175* ರನ್
ಬ್ರೆಂಡನ್ ಮೆಕಲಮ್: 158* ರನ್
ಕೆಎಲ್ ರಾಹುಲ್: 152* ರನ್
ಅಭಿಷೇಕ್ ಶರ್ಮಾ: 141 ರನ್
The numbers speak for themselves! 📊
— IndianPremierLeague (@IPL) April 25, 2026
A KL-assic of the highest order 🫡
Relive ▶️ https://t.co/CDBc0lXGsa#TATAIPL | #KhelBindaas | #DCvPBKS | @klrahul | @DelhiCapitals pic.twitter.com/DZaSEJKMdy
ಅಗ್ರ ಸ್ಥಾನದಲ್ಲಿ ಕ್ರಿಸ್ ಗೇಲ್
ಐಪಿಎಲ್ ಟೂರ್ನಿಯ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಒಟ್ಟಾರೆ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಆರ್‌ಸಿಬಿ ಮಾಜಿ ಆರಂಭಿಕ ಕ್ರಿಸ್ ಗೇಲ್ ಇದ್ದಾರೆ. ಅವರು 175 ರನ್‌ಗಳನ್ನು ಗಳಿಸಿದ್ದರು. ಬ್ರೆಂಡನ್ ಮೆಕಲಮ್ ಅವರು 158 ರನ್‌ಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ ಇದೀಗ ಮೂರನೇ ಸ್ಥಾನದಲ್ಲಿದ್ದರೆ, ಅಭಿಷೇಕ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ.
Tired, breathless, but firmly holding the Orange Cap! 🧡
— IndianPremierLeague (@IPL) April 25, 2026
🎥 Hear from KL Rahul as he breaks down his sensational 1️⃣5️⃣2️⃣* in the sweltering New Delhi conditions ☀️
Updates ▶️ https://t.co/0oSkMZgNAV#TATAIPL | #KhelBindaas | #DCvPBKS | @DelhiCapitals | @klrahul pic.twitter.com/BfIdkGOAzt
ಎರಡು ಜೀವ ದಾನ ಪಡೆದಿದ್ದ ಕೆಎಲ್ ರಾಹುಲ್
ಕೆಎಲ್ ರಾಹುಲ್ ಅವರು ತಮ್ಮ ಇನಿಂಗ್ಸ್ ವೇಳೆ ಎರಡು ಜೀವದಾನವನ್ನು ಪಡೆದಿದ್ದರು. ಒಂದು ಕ್ಯಾಚ್ ಅನ್ನು ಶಶಾಂಕ್ ಸಿಂಗ್ ಡೀಪ್ ಸ್ಕೈರ್ ಲೆಗ್‌ನಲ್ಲಿ ಕೈ ಚೆಲ್ಲಿದ್ದರು. ಇದಾದ ಬಳಿಕ ವೇಗಿ ವೈಶಾಖ್ ವಿಜಯ್‌ಕುಮಾರ್ ಕೂಡ ಬೌಲಿಂಗ್ ವೇಳೆ ಸುಲಭವಾಗಿ ಕ್ಯಾಚ್ ಅನ್ನು ಕೈ ಚೆಲ್ಲಿದ್ದರು. ಈ ಎರಡೂ ಜೀವದಾನವನ್ನು ಸದುಪಯೋಗಪಡಿಸಿಕೊಂಡಿದ್ದ ಕೆಎಲ್ ರಾಹುಲ್ ತಮ್ಮ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಅನ್ನು ಆಡಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 264 ರನ್‌ಗಳನ್ನು ಕಲೆ ಹಾಕಿತು.
ಕೆಎಲ್ ರಾಹುಲ್ ಜೊತೆಗೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ್ದ ನಿತೀಶ್ ರಾಣಾ, 44 ಎಸೆತಗಳಲ್ಲಿ 91 ರನ್‌ಗಳನ್ನು ಬಾರಿಸಿದ್ದರು. ರಾಹುಲ್ ಹಾಗೂ ರಾಣಾ ಅವರು ಎರಡನೇ ವಿಕೆಟ್‌ಗೆ 220(95) ರನ್‌ಗಳ ಜೊತೆಯಾಟವನ್ನು ಆಡಿದ್ದರು.