ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

5 ವರ್ಷಗಳ ಬಳಿಕ ಭಾರತ ಕ್ರಿಕೆಟ್‌ ತಂಡಕ್ಕೆ ಆರ್‌ಸಿಬಿ ಸ್ಟಾರ್‌ ಕೃಣಾಲ್‌ ಪಾಂಡ್ಯಗೆ ಕಮ್‌ಬ್ಯಾಕ್‌?

ಭಾರತ ಕ್ರಿಕೆಟ್ ತಂಡಕ್ಕೆ ಆರ್‌ಸಿಬಿ ಸ್ಟಾರ್ ಆಟಗಾರ ಕೃಣಾಲ್ ಪಾಂಡ್ಯ ಮರಳುವ ಸಾಧ್ಯತೆ ಇದೆ. 2021ರಲ್ಲಿ ಕೃಣಾಲ್ ಪಾಂಡ್ಯ ಭಾರತ ತಂಡದ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಳೆದ ಎರಡು ಐಪಿಎಲ್‌ ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರ ಫಲವಾಗಿ ಕೃಣಾಲ್‌ಗೆ ಬಿಸಿಸಿಐ, ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಅವಕಾಶ ನೀಡಲು ಮುಂದಾಗಿದೆ.

5 ವರ್ಷಗಳ ಬಳಿಕ ಭಾರತ ತಂಡಕ್ಕೆ ಕೃಣಾಲ್‌ ಪಾಂಡ್ಯ ಕಮ್‌ಬ್ಯಾಕ್‌?

ಭಾರತ ತಂಡಕ್ಕೆ ಕೃಣಾಲ್‌ ಪಾಂಡ್ಯ ಕಮ್‌ಬ್ಯಾಕ್‌ ಸಾಧ್ಯತೆ. -

Profile
Ramesh Kote Aug 31, 2026 9:42 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಕಳೆದ ಎರಡು ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ (Krunal Pandya) ಐದು ವರ್ಷಗಳ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅವರು ಎಡಗೈ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಅವರ ಸ್ಥಾನಕ್ಕೆ ಮರಳಲಿದ್ದಾರೆಂದು ಹೇಳಲಾಗುತ್ತಿದೆ.

ಅಕ್ಷರ್ ಪಟೇಲ್ ಅವರು 2026ರ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದ ಉಪನಾಯಕರಾಗಿದ್ದರು. ಭಾರತ ತಂಡ ಚಾಂಪಿಯನ್ ಆದರೂ, ಐಪಿಎಲ್ ಬಳಿಕ ನಡೆದ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ ಅಕ್ಷರ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಏಳು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಕೇವಲ 4 ವಿಕೆಟ್ ಹಾಗೂ 48 ರನ್ ಗಳಿಸಿದ್ದಾರೆ. ಹೀಗಾಗಿ ಟೀಮ್‌ ಮ್ಯಾನೇಜ್‌ಮೆಂಟ್ ಇದೀಗ ಎಡಗೈ ಸ್ಪಿನ್ನರ್‌ಗಳ ಪೈಕಿ ಆಲ್‌ರೌಂಡರ್‌ಗಳ ಪರ್ಯಾಯ ಆಯ್ಕೆಗಳನ್ನು ಪರಿಶೀಲಿಸುತ್ತಿದೆ. ಭಾರತ ತಂಡ ಸೆಪ್ಟೆಂಬರ್ 13 ರಿಂದ ಅಫ್ಘಾನಿಸ್ತಾನ ವಿರುದ್ಧ ಟಿ20ೈ ಸರಣಿಯನ್ನು ಆಡಲಿದೆ.

Duleep Trophy 2026: ತಿಲಕ್‌ ವರ್ಮಾ ಭರ್ಜರಿ ಶತಕ, ದಕ್ಷಿಣ ವಲಯಕ್ಕೆ 90 ರನ್‌ ಮುನ್ನಡೆ!

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅನುಭವಿ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಟೀಂ ಇಂಡಿಯಾಗೆ ಮರಳುವ ಸಾಧ್ಯತೆಯಿದೆ. ಕೃಣಾಲ್ ಪಾಂಡ್ಯ ಕೊನೆಯ ಬಾರಿ 2021ರಲ್ಲಿ ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡದ ಪರ ಆಡಿದ್ದರು. ಆದರೆ ಐಪಿಎಲ್‌ ಟೂರ್ನಿಯಲ್ಲಿ ಅವರು ಸತತವಾಗಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಆರ್‌ಸಿಬಿ 2025 ಮತ್ತು 2026ರ ಐಪಿಎಲ್‌ ಟೂರ್ನಿಗಳಲ್ಲಿ ಸತತ ಎರಡು ಬಾರಿ ಚಾಂಪಿಯನ್ ಆಗಿದೆ. ಈ ಎರಡೂ ಋತುಗಳಲ್ಲಿ ಕೃಣಾಲ್ ಪಾಂಡ್ಯ ಒಟ್ಟು 31 ವಿಕೆಟ್ ಪಡೆದಿದ್ದು, 8.5ಕ್ಕಿಂತ ಕಡಿಮೆ ಎಕಾನಮಿ ರೇಟ್‌ನಲ್ಲಿ ಬೌಲ್‌ ಮಾಡಿದ್ದಾರೆ. ಇದರ ಜೊತೆಗೆ 15 ಇನಿಂಗ್ಸ್‌ಗಳಲ್ಲಿ 335 ರನ್ ಕೂಡ ಗಳಿಸಿದ್ದಾರೆ. ಈ ಸ್ಥಿರ ಪ್ರದರ್ಶನದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೆ ಕೃಣಾಲ್ ಪಾಂಡ್ಯ ಅವರನ್ನು ಆಯ್ಕೆಗಾರರು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ.

IND vs AFG: ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೂ ಮುನ್ನ ಮೂವರು ಆಲ್‌ರೌಂಡರ್‌ಗಳು ಫಿಟ್‌!

ಕೃಣಾಲ್‌ ಪಾಂಡ್ಯ ಅಂಕಿಅಂಶಗಳು

35ರ ವಯಸ್ಸಿನ ಕೃಣಾಲ್ ಪಾಂಡ್ಯ ಭಾರತ ತಂಡದ ಪರ ಇದುವರೆಗೆ 5 ಏಕದಿನ ಹಾಗೂ 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೃಣಾಲ್ 130 ರನ್, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 124 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಅವರು ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕೃಣಾಲ್ ಪಾಂಡ್ಯ ಅವರು ತಮ್ಮ ಯಶಸ್ವಿ ಐಪಿಎಲ್ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಪರವೂ ಆಡಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಎರಡು ಬಾರಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದ ಏಕೈಕ ಆಟಗಾರ ಎಂಬ ವಿಶೇಷ ದಾಖಲೆಯೂ ಇವರ ಹೆಸರಿನಲ್ಲಿದೆ.