ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಶೆ, ಬೆಂಗಳೂರಿನಲ್ಲಿ ಫೈನಲ್‌ ನಡೆಯುವುದು ಅನುಮಾನ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಪ್ಲೇಆಫ್ಸ್‌ ಮತ್ತು ಫೈನಲ್ ಪಂದ್ಯಗಳ ಆತಿಥ್ಯ ಕುರಿತು ಅನಿಶ್ಚಿತತೆ ಮುಂದುವರಿದಿದೆ. ಬಿಸಿಸಿಐ ಬೆಂಗಳೂರು ನಗರವನ್ನು ಆತಿಥ್ಯ ಸ್ಥಳವಾಗಿ ಮುಂದುವರಿಸಬೇಕೇ ಎಂಬುದನ್ನು ಮರುಪರಿಶೀಲಿಸುತ್ತಿದೆ. ಶಾಸಕರ ಟಿಕೆಟ್‌ಗಳ ಕುರಿತು ಉಂಟಾದ ರಾಜಕೀಯ ವಿವಾದದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ 2026ರ ಐಪಿಎಲ್‌ ಫೈನಲ್‌ ನಡೆಯುವುದು ಅನುಮಾನ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್‌ ನಡೆಯುವುದು ಅನುಮಾನ. -

Profile
Ramesh Kote May 5, 2026 10:18 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ (IPL 2026) ಫೈನಲ್ ಹಾಗೂ ಪ್ಲೇಆಫ್ಸ್‌ ಪಂದ್ಯಗಳಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ (M Chinnaswamy Stadium) ಕ್ರೀಡಾಂಗಣಕ್ಕೆ ಆತಿಥ್ಯ ನೀಡುವ ಸಾಧ್ಯತೆ ಕಡಿಮೆಯಾಗಿದೆ. ಬಿಸಿಸಿಐ ನಾಕೌಟ್‌ ಪಂದ್ಯಗಳ ಆತಿಥ್ಯದ ಸ್ಥಳಗಳ ಬಗ್ಗೆ ಅಂತಿಮ ನಿರ್ಧಾರವನ್ನು ಮರುಪರಿಶೀಲಿಸುತ್ತಿದೆ. ಹಾಗಾಗಿ ಅತಿ ಶೀಘ್ರದಲ್ಲೇ ಪ್ಲೇಆಫ್ಸ್‌ ಹಾಗೂ ಫೈನಲ್ ಪಂದ್ಯಗಳ ಸ್ಥಳಗಳನ್ನು ಘೋಷಿಸುವ ನಿರೀಕ್ಷೆಯಿದೆ. ಎಎನ್‌ಐ ವರದಿ ಪ್ರಕಾರ, ಕಳೆದ ಆವೃತ್ತಿಯ ಫೈನಲಿಸ್ಟ್ ತಂಡಗಳ ತವರು ಅಂಗಣಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಕಡಿಮೆ. ಆರ್‌ಸಿಬಿ (RCB) ಪೈಪೋಟಿಯಲ್ಲಿದ್ದರೂ, ಈ ಬೆಳವಣಿಗೆಗಳಿಂದ ಬೆಂಗಳೂರಿಗೆ ಫೈನಲ್ ಆತಿಥ್ಯ ಸಿಗುವುದು ಅನುಮಾನ.

ಸಾಮಾನ್ಯವಾಗಿ ಐಪಿಎಲ್ ಫೈನಲ್ ಪಂದ್ಯವನ್ನು ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ನಡೆಸುವ ಪರಂಪರೆ ಇದೆ. ಆದರೆ ಬೆಂಗಳೂರಿನಲ್ಲಿ ಉಂಟಾದ ರಾಜಕೀಯ ಸಮಸ್ಯೆಗಳು; ವಿಶೇಷವಾಗಿ ಶಾಸಕರ ಟಿಕೆಟ್‌ಗಳ ಕುರಿತ ವಿವಾದವು ಈ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಇದೇ ವೇಳೆ, ಕಳೆದ ಸೀಸನ್‌ನ ವಿಜಯೋತ್ಸವ ಮೆರವಣಿಗೆಯನ್ನು ಸಮರ್ಪಕವಾಗಿ ನಿರ್ವಹಿಸಲು ಬೆಂಗಳೂರು ನಗರ ವಿಫಲವಾದ ಘಟನೆ ಕೂಡ ಚರ್ಚೆಗೆ ಕಾರಣವಾಗಿದೆ. ಆ ಸಂದರ್ಭದಲ್ಲಿ ಉಂಟಾಗಿದ್ದ ಕಾಲ್ತುಳಿತದಿಂದ ಹಲವು ಸಾವುಗಳು ಸಂಭವಿಸಿದ್ದವು.

IPL 2026 ಟೂರ್ನಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ವೈಫಲ್ಯಕ್ಕೆ ಕಾರಣ ತಿಳಿಸಿದ ರವಿ ಶಾಸ್ತ್ರಿ!

ಸಾಮಾನ್ಯವಾಗಿ ಐಪಿಎಲ್ ಫೈನಲ್ ಪಂದ್ಯವನ್ನು ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ನಡೆಸುವ ಪರಂಪರೆ ಇದೆ. ಆದರೆ ಬೆಂಗಳೂರಿನಲ್ಲಿ ಉಂಟಾದ ರಾಜಕೀಯ ಸಮಸ್ಯೆಗಳು; ವಿಶೇಷವಾಗಿ ಶಾಸಕರ ಟಿಕೆಟ್‌ಗಳ ಕುರಿತ ವಿವಾದವು ಈ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಇದೇ ವೇಳೆ, ಕಳೆದ ಸೀಸನ್‌ನ ವಿಜಯೋತ್ಸವ ಮೆರವಣಿಗೆಯನ್ನು ಸಮರ್ಪಕವಾಗಿ ನಿರ್ವಹಿಸಲು ಬೆಂಗಳೂರು ನಗರ ವಿಫಲವಾದ ಘಟನೆ ಕೂಡ ಚರ್ಚೆಗೆ ಕಾರಣವಾಗಿದೆ. ಆ ಸಂದರ್ಭದಲ್ಲಿ ಉಂಟಾಗಿದ್ದ ಕಾಲ್ತುಳಿತದಿಂದ ಹಲವು ಸಾವುಗಳು ಸಂಭವಿಸಿದ್ದವು.

“2026ರ ಐಪಿಎಲ್ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ವೇದಿಕೆ ಶೀಘ್ರದಲ್ಲೇ ಪ್ರಕಟವಾಗಲಿದೆ. ಪಂದ್ಯಗಳನ್ನು ಪಂಜಾಬ್ ಮತ್ತು ಕರ್ನಾಟಕ ನಡುವೆ ಹಂಚುವ ಸಾಧ್ಯತೆ ಇದೆ. ಪರಂಪರೆಯಂತೆ, ಕಳೆದ ವರ್ಷದ ಚಾಂಪಿಯನ್ ತಂಡದ ಮೈದಾನದಲ್ಲೇ ಫೈನಲ್ ನಡೆಯಬೇಕು. ಆದರೆ ಬೆಂಗಳೂರಿನಲ್ಲಿ ಶಾಸಕರ ಟಿಕೆಟ್‌ಗಳ ವಿಚಾರದ ರಾಜಕೀಯ ಸಮಸ್ಯೆಗಳು ಅಡ್ಡಿಯಾಗುತ್ತಿವೆ. ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಬಿಸಿಸಿಐ ಫೈನಲ್ ಅನ್ನು ಮತ್ತೊಂದು ನಗರಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ,” ಎಂದು ಮೂಲಗಳು ತಿಳಿಸಿರುವುದು ವರದಿಯಾಗಿದೆ.

IPL 2026: ʻಒಂದು ಕಾಲದಲ್ಲಿ ನನ್ನನ್ನು ಟೆಸ್ಟ್‌ ಕ್ರಿಕೆಟ್‌ಗೆ ಸೀಮಿತ ಮಾಡಿದ್ದರುʼ-ಕೆಎಲ್‌ ರಾಹುಲ್‌!

ಕಳೆದ ವರ್ಷವೂ, ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಹವಾಮಾನ ಅಡಚಣೆಗಳ ಸಾಧ್ಯತೆ ಹಾಗೂ ಭಾರತ–ಪಾಕಿಸ್ತಾನ ಗಡಿ ಉದ್ವಿಗ್ನತೆ ಯುದ್ಧದ ಹಂತಕ್ಕೆ ತಲುಪುವ ಭೀತಿ ಹಿನ್ನೆಲೆ ಲಾಜಿಸ್ಟಿಕ್ಸ್ ಸಮಸ್ಯೆಗಳ ಕಾರಣದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ವಿವಾದಕ್ಕೆ ಕಾರಣವೇನು?

ಐಪಿಎಲ್ ಸೀಸನ್ ಆರಂಭದಲ್ಲೇ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಐಪಿಎಲ್ ಪಂದ್ಯಗಳಿಗೆ ಶಾಸಕರಿಗೆ ಉಚಿತ ಟಿಕೆಟ್‌ಗಳನ್ನು ನೀಡಬೇಕು ಎಂದು ಸಾರ್ವಜನಿಕವಾಗಿ ಬೇಡಿಕೆ ಇಟ್ಟಿದ್ದರು. ಶಾಸಕರು “ವಿಐಪಿಗಳು” ಆಗಿರುವುದರಿಂದ ಸಾಮಾನ್ಯ ಅಭಿಮಾನಿಗಳಂತೆ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ ಎಂಬುದು ಅವರ ವಾದವಾಗಿತ್ತು.

ಈ ವಿಷಯ ಗಂಭೀರಗೊಂಡ ಹಿನ್ನೆಲೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಧ್ಯಪ್ರವೇಶಿಸಿದರು. ನಂತರ ಸಮಾಧಾನಾತ್ಮಕ ಕ್ರಮವಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಪ್ರತಿ ಶಾಸಕ, ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಹಾಗೂ ಸಂಸದರಿಗೆ ತಲಾ ಮೂರು ಉಚಿತ ಟಿಕೆಟ್‌ಗಳನ್ನು ನೀಡುವಂತೆ ನಿರ್ಧರಿಸಲಾಯಿತು.

ಅಂದ ಹಾಗೆ ಆರ್‌ಸಿಬಿ ಪ್ರಸ್ತುತ 9 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಪ್ಲೇಆಫ್ಸ್‌ಗೆ ಸನಿಹವಾಗಿದೆ.