IPL 2026: ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿಯಿಂದ ಕಲಿತ ಪಾಠವನ್ನು ತಿಳಿಸಿದ ದೇವದತ್ ಪಡಿಕ್ಕಲ್!
ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಅವರು, ತಮ್ಮ ಸಹ ಆಟಗಾರ ಹಾಗೂ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರಿಂದ ಕಲಿತ ಅಂಶಗಳನ್ನು ವಿವರಿಸಿದ್ದಾರೆ. 2020ರಲ್ಲಿ ಆರ್‌ಸಿಬಿ ಪರ ಐಪಿಎಲ್ ಪದಾರ್ಪಣೆ ಮಾಡಿದ್ದ ಪಡಿಕ್ಕಲ್, ಬಳಿಕ ಲಖನೌ ಸೂಪರ್ ಜಯಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಬಳಿಕ 2025ರಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ.
ವಿರಾಟ್ ಕೊಹ್ಲಿಯಿಂದ ಕಲಿತ ಸಂಗತಿಗಳನ್ನು ತಿಳಿಸಿದ ಪಡಿಕ್ಕಲ್. -
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟರ್ ದೇವದತ್ ಪಡಿಕ್ಕಲ್ (Devdutt Padikkal) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಬ್ಯಾಟಿಂಗ್ ಮಾಡುವುದರಿಂದ ತಾವು ಎಷ್ಟು ಕಲಿಯಲು ಸಾಧ್ಯವಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಪಡಿಕ್ಕಲ್ ಅವರು 2020ರಲ್ಲಿ ಆರ್‌ಸಿಬಿ ಪರವಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದು, ಅಂದು ಅವರು ದಿಗ್ಗಜ ವಿರಾಟ್ ಕೊಹ್ಲಿಯೊಂದಿಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ತಮ್ಮ ಮೊದಲ ಸೀಸನ್‌ನಲ್ಲೇ ಅವರು ಅದ್ಭುತ ಪ್ರದರ್ಶನ ನೀಡಿದ್ದು, 15 ಪಂದ್ಯಗಳಲ್ಲಿ 473 ರನ್ ಗಳಿಸಿದ್ದರು ಮತ್ತು ಸೀಸನ್ ಅಂತ್ಯದಲ್ಲಿ ‘ಎಮರ್ಜಿಂಗ್ ಪ್ಲೇಯರ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ತಮ್ಮ ಆರಂಭಿಕ ವರ್ಷದಲ್ಲಿನ ಅನುಭವಗಳನ್ನು ನೆನಪಿಸಿಕೊಂಡ ಪಡಿಕ್ಕಲ್, ವಿರಾಟ್ ಕೊಹ್ಲಿಯಂತಹ ಮಹಾನ್ ಬ್ಯಾಟ್ಸ್‌ಮನ್ ಜೊತೆ ಬ್ಯಾಟ್ ಮಾಡುವುದರಿಂದ ಪಡೆದ ಅಮೂಲ್ಯ ಪಾಠಗಳು ಹಾಗೂ ಕಲಿಕೆಯ ಅನುಭವಗಳನ್ನು ವಿವರಿಸಿದ್ದಾರೆ.
RCB vs SRH: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ಹೈದರಾಬಾದ್!
ದೇವದತ್ ಪಡಿಕ್ಕಲ್ ಅವರು ಇತ್ತೀಚಿನ ಜಿಯೊಸ್ಟಾರ್ ಸಂದರ್ಶನದಲ್ಲಿ ತಮ್ಮ ಐಪಿಎಲ್ ಪಯಣ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ.
“ನಾನು 2020ರ ಸೀಸನ್‌ನಲ್ಲಿ ಆರ್‌ಸಿಬಿ ಪರವಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗ ನಾನು ಸಂಪೂರ್ಣವಾಗಿ ಸಿದ್ಧನಾಗಿದ್ದೆ ಎಂದು ಭಾಸವಾಯಿತು. ಇದಕ್ಕೂ ಮೊದಲು ದೇಶಿ ಕ್ರಿಕೆಟ್‌ನಲ್ಲಿ ನಾನು ಉತ್ತಮ ಫಾರ್ಮ್‌ನಲ್ಲಿದ್ದೆ. ಆದ್ದರಿಂದ ನನ್ನ ಅವಕಾಶ ಬಂದಾಗ ನಾನು ಸಂಪೂರ್ಣವಾಗಿ ಸಜ್ಜಾಗಿದ್ದು, ಶೇಕಡಾ 100 ರಷ್ಟು ಶ್ರಮ ನೀಡುತ್ತೇನೆ ಎಂಬುದು ನನಗೆ ತಿಳಿದಿತ್ತು,” ಎಂದು ಪಡಿಕ್ಕಲ್ ಹೇಳಿದ್ದಾರೆ.
ಕೊಹ್ಲಿ ಜೊತೆಗಿನ ಅನುಭವ ಹಂಚಿಕೊಂಡ ಪಡಿಕ್ಕಲ್
ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರೊಂದಿಗೆ ಬ್ಯಾಟ್ ಮಾಡುವ ಅನುಭವದ ಬಗ್ಗೆ ಮಾತನಾಡಿದ ಅವರು, “ಆ ವಯಸ್ಸಿನಲ್ಲಿ ಅವರೊಂದಿಗೆ ಇನಿಂಗ್ಸ್ ಕಟ್ಟುವುದನ್ನು ನೋಡಿದಾಗ ನನಗೆ ಬ್ಯಾಟಿಂಗ್ ಇನಿಂಗ್ಸ್ ಅನ್ನು ಹೇಗೆ ನಿರ್ಮಿಸಬೇಕು ಎಂಬುದರ ಬಗ್ಗೆ ಬಹಳ ಸ್ಪಷ್ಟತೆ ಮತ್ತು ಅರ್ಥವಾಯಿತು. ಅದು ನನ್ನ ಬೆಳವಣಿಗೆಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿತು,” ಎಂದು ತಿಳಿಸಿದ್ದಾರೆ.
IPL 2026: ʻಆರ್‌ಸಿಬಿಗೆ ಮರಳಿದ್ದು ನನ್ನ ಪಾಲಿಗೆ ಟರ್ನಿಂಗ್ ಪಾಯಿಂಟ್ʼ-ದೇವದತ್ ಪಡಿಕ್ಕಲ್!
ಸ್ಥಳೀಯ ಆಟಗಾರ ದೇವದತ್ ಪಡಿಕ್ಕಲ್ ಅವರು 2026ರ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಚರ್ಚಿತ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕದ ಈ ಎಡಗೈ ಬ್ಯಾಟರ್ ಅದ್ಭುತ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದು, ಹಾಲಿ ಚಾಂಪಿಯನ್ಸ್ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟ್ ಮಾಡುತ್ತಿದ್ದಾರೆ. ಅವರು 12 ಇನಿಂಗ್ಸ್‌ಗಳಲ್ಲಿ 412 ರನ್‌ಗಳನ್ನು ಸಿಡಿಸಿದ್ದು, 173.10ರ ಸ್ಫೋಟಕ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡಿದ್ದಾರೆ. 2025ರ ಹರಾಜಿನಲ್ಲಿ ತನ್ನ ತವರು ತಂಡಕ್ಕೆ ಮರಳಿದ ನಂತರ, ಅವರು ತಂಡದ ಮೂರನೇ ಕ್ರಮಾಂಕಕ್ಕೆ ಪ್ರಮುಖ ಆಧಾರವಾಗಿದ್ದಾರೆ.
ಆರ್‌ಸಿಬಿ ತಂಡದ ಪರವಾಗಿ ಅವರು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಶಕ್ತಿಯನ್ನು ಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪ್ರದರ್ಶನದ ಮೂಲಕ ಅವರು ಐಪಿಎಲ್ ಟೂರ್ನಿಯಲ್ಲಿ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.