ʻಹಲವರು ರೋಹಿತ್ ಶರ್ಮಾ ವೈಫಲ್ಯಕ್ಕೆ ಕಾಯುತ್ತಿದ್ದಾರೆʼ: ಮೊಹಮ್ಮದ್ ಕೈಫ್ ಅಚ್ಚರಿ ಹೇಳಿಕೆ!
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆಡಲು ಎದುರು ನೋಡುತ್ತಿರುವ ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಹುತೇಕ ಮಂದಿ ರೋಹಿತ್ ಶರ್ಮಾ ಅವರ ವೈಫಲ್ಯಕ್ಕೆ ಕಾಯುತ್ತಿದ್ದಾರೆಂದು ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ರೋಹಿತ್ ಶರ್ಮಾಗೆ ಮೊಹಮ್ಮದ್ ಕೈಫ್ ಬೆಂಬಲ. -
ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2027) ಟೂರ್ನಿಯಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Rohit Sharma) ಅವರ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ತಿಳಿಸಿದ್ದಾರೆ. ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಕಳೆದ ಶನಿವಾರ ನಡೆದದ್ದ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಬಳಿಕ ಕೈಫ್ ಈ ರೀತಿ ಹೇಳಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾಗಿ ಗೆದ್ದು ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
ಆರಂಭಿಕ ಎರಡು ಒಡಿಐ ಪಂದ್ಯಗಳಲ್ಲಿ ಕ್ರಮವಾಗಿ 16 ಮತ್ತು 48 ರನ್‌ಗಳನ್ನು ಗಳಿಸಿದ್ದ ರೋಹಿತ್ ಶರ್ಮಾ , ಮೂರನೇ ಏಕದಿನ ಪಂದ್ಯದಲ್ಲಿ 69 ಎಸೆತಗಳಲ್ಲಿ 79 ರನ್‌ಗಳನ್ನು ಬಾರಿಸಿದ್ದರು. ಇವರ ಜೊತೆಗೆ ಮೊದಲನೇ ವಿಕೆಟ್‌ಗೆ 170 ರನ್‌ಗಳ ಜೊತೆಯಾಟವನ್ನು ಆಡಿದ್ದ ಯಶಸ್ವಿ ಜೈಸ್ವಾಲ್ ಕೂಡ 86 ಎಸೆತಗಳಲ್ಲಿ 110 ರನ್‌ಗಳನ್ನು ಸಿಡಿಸಿದ್ದರು. ಇವರ ಬ್ಯಾಟಿಂಗ್ ಬಲದಿಂದ ಟೀಮ್ ಇಂಡಿಯಾ 219 ರನ್‌ಗಳ ಗುರಿಯನ್ನು ಕೇವಲ 28.4 ಓವರ್‌ಗಳಿಗೆ ತಲುಪಿತ್ತು.
ʻವೈಭವ್ ಸೂರ್ಯವಂಶಿ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದಾರೆʼ: ಆಕಾಶ್ ಚೋಪ್ರಾ!
ಬಹುತೇಕ ಮಂದಿ ರೋಹಿತ್ ಶರ್ಮಾ ಅವರ ವೈಫಲ್ಯಕ್ಕೆ ಕಾಯುತ್ತಿರುವುದು ಏಕೆಂದು ನನಗೆ ತಿಳಿದಿಲ್ಲ. ಕೆಲವೇ ಕೆಲವು ಇನಿಂಗ್ಸ್‌ಗಳಿಂದ ಅವರ ಕ್ಲಾಸ್ ಬ್ಯಾಟಿಂಗ್ ಅನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಭಾರತ ತಂಡದ ಮಾಜಿ ನಾಯಕ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ತೆಗೆದುಕೊಂಡು ಹೋಗಲಿದ್ದಾರೆಂಬ ಬಗ್ಗೆ ಮಾಜಿ ಆಟಗಾರ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನೆಡಯಲಿದೆ.
Can't really understand why so many people want Rohit Sharma to fail. It is admirable how he has taken this challenge head on. He has led India to the Champions Trophy, scored against Australia, NZ and now his 79 against Afghanistan. A few low scores here and there can't judge…
— Mohammad Kaif (@MohammadKaif) June 20, 2026
ರೋಹಿತ್ ಶರ್ಮಾಗೆ ಕೈಫ್ ಬೆಂಬಲ
"ಸಾಕಷ್ಟು ಮಂದಿ ರೋಹಿತ್ ಶರ್ಮಾ ವೈಫಲ್ಯ ಅನುಭವಿಸಬೇಕೆಂದು ಏಕೆ ಕಾಯುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಈ ಸವಾಲನ್ನು ಅವರು ಹೇಗೆ ಸ್ವೀಕರಿಸಿದ್ದಾರೆಂಬುದು ನಿಜಕ್ಕೂ ಸ್ವಾಗತಾರ್ಹವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿದ್ದರು. ಅವರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಎದುರು ರನ್‌ಗಳನ್ನು ಗಳಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಅವರು 79 ರನ್‌ಗಳನ್ನು ಬಾರಿಸಿದ್ದರು. ಕೆಲ ಕಡಿಮೆ ರನ್‌ಗಳನ್ನು ಗಳಿಸಿದ ಬಳಿಕ ಅವರ ಕ್ಲಾಸ್ ಅನ್ನು ನಿರ್ಧರಿಸಲು ಸಾಧ್ಯವಿಲ್ಲ. ಕ್ರಿಕೆಟ್ ಅಭಿಮಾನಿಗಳಂತೆ ನಾವು ಕೂಡ ಇದೇ ಫಾರ್ಮ್ ಅನ್ನು ಅವರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಮುಂದುವರಿಸಬೇಕು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅನುಭವ ಭಾರತ ತಂಡಕ್ಕೆ ಅಗತ್ಯವಿದೆ," ಎಂದು ಮೊಹಮ್ಮದ್ ಕೈಫ್ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಮೂರು ವಿಕೆಟ್ ಕಿತ್ತು ಟಿ20 ವಿಶ್ವಕಪ್ ದಾಖಲೆ ಸರಿಗಟ್ಟಿದ ಶ್ರೀ ಚರಣಿ
ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಗೆ ರೋಹಿತ್ ಶರ್ಮಾ ಆಯ್ಕೆ
ಮುಂದಿನ ಜುಲೈ ತಿಂಗಳಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಭಾರತ ತಂಡದಲ್ಲಿಯೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಕೂಡ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿಯೂ ರೋಹಿತ್ ಶರ್ಮಾ ಅವರು ಅತ್ಯುತ್ತಮ ಫಾರ್ಮ್ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ ರೋಹಿತ್ ಶರ್ಮಾಗೆ ಇಂಗ್ಲೆಂಡ್ ಏಕದಿನ ಸರಣಿ ಅತ್ಯಂತ ಮುಖ್ಯವಾಗಿದೆ.