ಮೂರು ವಿಕೆಟ್ ಕಿತ್ತು ಟಿ20 ವಿಶ್ವಕಪ್ ದಾಖಲೆ ಸರಿಗಟ್ಟಿದ ಶ್ರೀ ಚರಣಿ
Women's T20 World Cup: ಪ್ರಸ್ತುತ ಚರಣಿ ಈ ವರ್ಷದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಹೆಸರಿನಲ್ಲಿದೆ. ಅವರು 2024 ರ ಆವೃತ್ತಿಯಲ್ಲಿ ಆರು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದರು.
N Shree Charani picked up two wickets -
ಮ್ಯಾಂಚೆಸ್ಟರ್, ಜೂ.22: ಭಾನುವಾರ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್(Women's T20 World Cup) ಟೂರ್ನಿಯ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಅಂತರದಿಂದ ಸೋಲು ಕಂಡಿತು. ಸೋಲಿನ ಹೊರತಾಗಿಯೂ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಸ್ಪಿನ್ನರ್ ಶ್ರೀ ಚರಣಿ(Sree Charani) ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಆಂಧ್ರಪ್ರದೇಶದ 21 ವರ್ಷದ ಆಟಗಾರ್ತಿ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಡ್ ಅವರನ್ನು ತಮ್ಮ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಔಟ್ ಮಾಡುವ ಮೂಲಕ ತಮ್ಮ ವಿಕೆಟ್ ಖಾತೆಯನ್ನು ತೆರೆದರು. ನಂತರ ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ಅನ್ನೆರಿ ಡೆರ್ಕ್ಸೆನ್ ಅವರನ್ನು ಔಟ್ ಮಾಡಿದರು. ಪಂದ್ಯದ ಅವರ ಮೂರನೇ ವಿಕೆಟ್ ನಾಡಿನ್ ಡಿ ಕ್ಲರ್ಕ್ ಅವರ ರೂಪದಲ್ಲಿ ಬಂದಿತು. ಈ ವಿಕೆಟ್ ಪಡೆಯುತ್ತಿದ್ದಂತೆ ಅವರು ಮಹಿಳಾ ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಭಾರತೀಯ ಆಟಗಾರ್ತಿಯೊಬ್ಬರು ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಅವರು ಈಗ ಸರಿಗಟ್ಟಿದರು
2020 ರ ಆವೃತ್ತಿಯ ಟೂರ್ನಮೆಂಟ್‌ನಲ್ಲಿ, ಸ್ಪಿನ್ನರ್ ಪೂನಂ ಯಾದವ್ ಭಾರತ ಪರ ಐದು ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದು ಈ ವರೆಗಿನ ದಾಖಲೆಯಾಗಿತ್ತು. ಆದರೆ ಚರಣಿ ಪ್ರಸ್ತುತ ನಡೆಯುತ್ತಿರುವ ಆವೃತ್ತಿಯಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಭಾರತಕ್ಕೆ ಇನ್ನೂ ಎರಡು ಲೀಗ್ ಪಂದ್ಯ ಬಾಕಿ ಇರುವ ಕಾರಣ ದಾಲೆಯನ್ನು ಸರಿಗಟ್ಟಬಹುದು.
92 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆದ ಈಜಿಪ್ಟ್
ಪ್ರಸ್ತುತ ಚರಣಿ ಈ ವರ್ಷದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಹೆಸರಿನಲ್ಲಿದೆ. ಅವರು 2024 ರ ಆವೃತ್ತಿಯಲ್ಲಿ ಆರು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದರು.
ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 19.1 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 161 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮರಿಜನ್ನೆ ಕಾಪ್ (ಔಟಾಗದೆ 81, 45 ಎಸೆತ) ಹಾಗೂ ತಝ್ಮಿನ್ ಬ್ರಿಟ್ಸ್ (40 ರನ್, 36 ಎಸೆತ) ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಈ ಗೆಲುವಿನೊಂದಿಗೆ ಹರಿಣ ಪಡೆ ಸೆಮಿಫೈನಲ್ ಆಸೆ ಜೀವಂತವಿರಿಸಿತು.