ಸತತ 8 ಸಿಕ್ಸರ್, 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದ ಆಕಾಶ್ ಚೌಧರಿ!
ಮೇಘಾಲಯದ ಬ್ಯಾಟ್ಸ್‌ಮನ್ ಆಕಾಶ್ ಚೋಧರಿ ಅವರು ಸತತ 8 ಸಿಕ್ಸರ್‌ಗಳೊಂದಿಗೆ ಕೇವಲ 11 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ. ಅರುಣಾಚಲ ಪ್ರದೇಶ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ ಪ್ಲೇಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನ ಅತ್ಯಂತ ವೇಗದ ಅರ್ಧಶತಕವಾಗಿದೆ.
ರಣಜಿ ಪಂದ್ಯದಲ್ಲಿ ಸತತ 8 ಸಿಕ್ಸರ್ ಬಾರಿಸಿ ದಾಖಲೆ ಬರೆದ ಆಕಾಶ್ ಚೌಧರಿ. -
ನವದೆಹಲಿ: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಎಂಟು ಎಸೆತಗಳಲ್ಲಿ 8 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಮೇಘಾಲಯ (Meghalaya) ತಂಡದ ಆಕಾಶ್ ಚೌಧರಿ (Anil Choudhary) ಬರೆದಿದ್ದಾರೆ. ನವೆಂಬರ್ 9 ರಂದು ಸೂರತ್‌ನ ಭೀಮ್‌ಪುರದ ಪಿತವಾಲ ಕ್ರೀಡಾಂಗಣದಲ್ಲಿ ಅರುಣಾಚಲ ಪ್ರದೇಶ ವಿರುದ್ದದ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಪ್ಲೇಟ್ ಪಂದ್ಯದಲ್ಲಿ ಅವರು ಈ ಸಾಧನೆಗೆ ಭಾಜನರಾಗಿದ್ದಾರೆ. ಸತತ ಎಂಟು ಸಿಕ್ಸರ್‌ಗಳ ಮೂಲಕ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ.
ಆಕಾಶ್ ಚೌಧರಿ ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಮೇಘಾಲಯ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 628 ರನ್‌ಗಳನ್ನು ಕಲೆ ಹಾಕಿ ಡಿಕ್ಲೆರ್ ಮಾಡಿಕೊಂಡಿತು. ತಮ್ಮ ದಾಖಲೆ ಇನಿಂಗ್ಸ್‌ನಲ್ಲಿ ಮೇಘಾಲಯ ಬ್ಯಾಟ್ಸ್‌ಮನ್ ಏಕೈಕ ಓವರ್‌ನಲ್ಲಿ 6 ಸಿಕ್ಸರ್ ಸೇರಿದಂತೆ ಎಂಟು ಎಸೆತಗಳಲ್ಲಿ ಸತತವಾಗಿ 8 ಸಿಕ್ಸರ್ ಅನ್ನು ಬಾರಿಸಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಅವರು ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು 1968ರಲ್ಲಿನಾಟಿಂಗ್‌ಹ್ಯಾಮ್ ಪರ ಆಡುವಾಗ ಈ ದಾಖಲೆಯನ್ನು ಬರೆದಿದ್ದರು. 1984-85ರ ಸಾಲಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರು ಬರೋಡಾ ವಿರುದ್ದದ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದರು.
ಅರುಣಾಚಲ ಪ್ರದೇಶ ತಂಡದ ಎಡಗೈ ಸ್ಪಿನ್ನರ್ ಲಿಮಾರ್ ದಾಬಿ ಅವರು ಕೊನೆಯ ಓವರ್‌ನಲ್ಲಿ ಆಕಾಶ್ ಚೌಧರಿ ಅವರಿಂದ ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದರು. ಪಂದ್ಯದ ಎರಡನೇ ದಿನ 126ನೇ ಓವರ್‌ನಲ್ಲಿ ಆಕಾಶ್ ಈ ಸಿಕ್ಸರ್‌ಗಳನ್ನು ಬಾರಿಸಿದ್ದರು. 25ರ ಪ್ರಾಯದ ಬ್ಯಾಟ್ಸ್‌ಮನ್ ಕೇವಲ 11 ಎಸೆತಗಳಲ್ಲಿಯೇ ಅರ್ಧಶತಕ ಬಾರಿಸಿ, ವೇಯ್ನ್ ವೇಟ್ ಅವರ ದಾಖಲೆಯನ್ನು ಮುರಿದಿದ್ದಾರೆ. 2012ರಲ್ಲಿ ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಲೈಸೆಸ್ಟರ್‌ಶೈರ್ ಪರ ವೇಯ್ನ್ 12 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.
🚨 HISTORY MADE! Meghalaya’s Akash Kumar Choudhary smashes the fastest fifty in Ranji Trophy — reaching his 50 in just 11 balls 🤯🔥@bcci
— GKSBABA (@rock_gaurav00) November 9, 2025
🏏#RanjiTrophy #AkashChoudhary #CricketRecords #Meghalaya #IndianCricket #FastestFifty pic.twitter.com/YXoK3fGEt6
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ಸ್
ಆಕಾಶ್ ಕುಮಾರ್ ಚೌಧರಿ – 50 ರನ್, 11 ಎಸೆತಗಳು (ಮೇಘಾಲಯಾ vs ಅರುಣಾಚಲ ಪ್ರದೇಶ, 2025)
ವೇಯ್ನ್ ವೇಟ್ – 50 ರನ್, 12 ಎಸೆತಗಳು (ಲೆಸಸ್ಟರ್‌ಶೈರ್ vs ಎಸೆಕ್ಸ್, 2012)
ಮೈಕಲ್ ವಾನ್ ವೂರನ್– 50 ರನ್, 13 ಎಸೆತಗಳಯ (ಈಸ್ಟರ್ನ್ ಪ್ರಾಔಿನ್ಸ್ ಬಿ vs ಗ್ರಿಕ್ವಾಲ್ಯಾಂಡ್ ವೆಸ್ಟ್ 1984/85)
ನೆಡ್ ಎಕರ್ಸ್ಲೆ – 50 ರನ್, 14 ಎಸೆಗಳು (ಲೆಸಸ್ಟರ್‌ಶೈರ್ vs ಎಸೆಕ್ಸ್, 2012)
ಬಂದಿಪ್ ಸಿಂಗ್ – 50 ರನ್, 15 ಎಸೆತಗಳು (ಜಮ್ಮು ಮತ್ತು ಕಾಶ್ಮೀರ vs ತ್ರಿಪುರ, 2015/16)
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಬ್ಯಾಟರ್ಸ್
ಸರ್ ಗ್ಯಾರಿಫೀಲ್ಡ್ ಸೋಬರ್ಸ್ – 31 ಆಗಸ್ಟ್ 1968 — ನಾಟಿಂಗ್‌ಹ್ಯಾಮ್‌ಶೈರ್ vs ಗ್ಲಾಮೋರ್ಗನ್ | ಬೌಲರ್: ಮಾಲ್ಕಮ್ ನ್ಯಾಶ್
ರವಿ ಶಾಸ್ತ್ರಿ – 19 ಜನವರಿ 1985 — ಬಾಂಬೆ vs ಬರೋಡಾ (ರಣಜಿ ಟ್ರೋಫಿ) | ಬೌಲರ್: ತಿಲಕ್ ರಾಜ್
ಆಕಾಶ್ ಕುಮಾರ್ ಚೌಧರಿ – 09 ನವೆಂಬರ್ 2025 — ಮೇಘಾಲಯ vs ಅರುಣಾಚಲ ಪ್ರದೇಶ | ಬೌಲರ್: ಲಿಮರ್ ದಾಬಿ