ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಮುಂದಿನ ವರ್ಷಕ್ಕೆ ಬಲಿಷ್ಠ ತಂಡ ಕಟ್ಟುತ್ತೇವೆʼ-2026ರ ಐಪಿಎಲ್‌ ಆಡುವ ಬಗ್ಗೆ ಸುಳಿವು ನೀಡಿದ ಎಂಎಸ್‌ ಧೋನಿ!

MS Dhoni on CSK's loss against MI: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ನಿರಾಶಾದಾಯಕವಾಗಿದೆ. ಆರಂಭಿಕ ಗೆಲುವಿನ ನಂತರ, ಸಿಎಸ್‌ಕೆ ಸತತ ಸೋಲುಗಳನ್ನು ಅನುಭವಿಸಿದೆ. 8 ಪಂದ್ಯಗಳಿಂದ ಕೇವಲ 4 ಅಂಕಗಳೊಂದಿಗೆ ಚೆನ್ನೈ ಪಾಯಿಂಟ್ಸ್ ಟೇಬಲ್‌ನ್ಲಿ ಕೊನೆಯ ಸ್ಥಾನದಲ್ಲಿದೆ. ಭಾನುವಾರ ಮುಂಬೈ ಇಂಡಿಯನ್ಸ್‌ ಎದುರು ಸೋಲಿನ ನಂತರ ಎಂಎಸ್‌ ಧೋನಿ, ತಮ್ಮ ತಂಡದ ಮುಂದಿನ ಆವೃತ್ತಿಯ ಯೋಜನೆಯ ಬಗ್ಗೆ ಮಾತನಾಡಿದ್ದಾರೆ.

MI vs CSK: 2026ರ ಐಪಿಎಲ್‌ ಆಡುವ ಬಗ್ಗೆ ಸುಳಿವು ನೀಡಿದ ಎಂಎಸ್‌ ಧೋನಿ!

ಸಿಎಸ್‌ಕೆ ವೈಫಲ್ಯದ ಬಗ್ಗೆ ಎಂಎಸ್‌ ಧೋನಿ ಹೇಳಿಕೆ.

Profile Ramesh Kote Apr 21, 2025 9:32 AM

ಮುಂಬೈ: ಬೌಲಿಂಗ್‌ ವೈಫಲ್ಯದಿಂದ ಮುಂಬೈ ಇಂಡಿಯನ್ಸ್‌ (Mumbai Indians) ಎದುರು ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಸಿಎಸ್‌ಕೆ ಆರನೇ ಸೋಲು ಅನುಭವಿಸಿದಂತಾಯಿತು. ಇದರೊಂದಿಗೆ ಚೆನ್ನೈ ತಂಡದ ಪ್ಲೇಆಫ್ಸ್‌ ಹಾದಿ ಬಹುತೇಕ ಕಠಿಣವಾಗಿದೆ. ಇನ್ನುಳಿದ 6 ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಬೇಕಾಗಿದೆ. ಅಂದ ಹಾಗೆ ಮುಂಬೈ ಇಂಡಿಯನ್ಸ್‌ ಎದುರು ಸೋಲು ಅನುಭವಿಸಿದ ಬಳಿಕ ಸಿಎಸ್‌ಕೆ ನಾಯಕ ಎಂಎಸ್‌ ಧೋನಿ (MS Dhoni) ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಐಪಿಎಲ್‌ ಟೂರ್ನಿಗೆ ಇಂದಿನಿಂದಲೇ ತಯಾರಿ ನಡೆಸಬೇಕೆಂಬ ಬಗ್ಗೆ ಅವರು ತಿಳಿಸಿದ್ದಾರೆ. ಈ ರೀತಿಯ ಹೇಳಿಕೆ ಮೂಲಕ 2026ರ ಐಪಿಎಲ್‌ ಟೂರ್ನಿಯಲ್ಲಿಯೂ ಮುಂದುವರಿಯುವ ಬಗ್ಗೆ ಎಂಎಸ್‌ ಧೋನಿ ಸುಳಿವು ನೀಡಿದ್ದಾರೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ನಿಗದಿತ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 176 ರನ್‌ಗಳನ್ನು ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್‌ ತಂಡ, ರೋಹಿತ್‌ ಶರ್ಮಾ ಹಾಗೂ ಸೂರ್ಯಕುಮಾರ್‌ ಯಾದವ್‌ ಸ್ಪೋಟಕ ಅರ್ಧಶತಕಗಳ ಬಲದಿಂದ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಮುಂಬೈ ಬ್ಯಾಟ್ಸ್‌ಮನ್‌ಗಳ ಎದುರು ಸಿಎಸ್‌ಕೆ ಬೌಲರ್‌ಗಳ ಯೋಜನೆ ಸಂಪೂರ್ಣ ನೆಲ ಕಚ್ಚಿತು.

MI vs CSK: ರೋಹಿತ್‌-ಸೂರ್ಯ ಅಬ್ಬರ, ಮುಂಬೈ ಇಂಡಿಯನ್ಸ್‌ಗೆ ಹ್ಯಾಟ್ರಿಕ್‌ ಜಯ!

"ನಾವು ತುಂಬಾ ಕೆಳಮಟ್ಟದಲ್ಲಿದ್ದೆವೆಂದು ನಿಮಗೆ ತಿಳಿದಿದೆ. ಇಬ್ಬನಿ ಬೀಳಲಿದೆ ಎಂದು ನಮಗೆ ತಿಳಿದಿತ್ತು ಮತ್ತು ಆ ಮಧ್ಯಮ ಓವರ್‌ಗಳನ್ನು ನಾವು ಬಳಸಿಕೊಳ್ಳುವ ಸ್ಥಿತಿಯಲ್ಲಿದ್ದೆವು. ಬುಮ್ರಾ ವಿಶ್ವದ ಅತ್ಯುತ್ತಮ ಡೆತ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆಂದು ನನಗೆ ಅನಿಸಿತು. ಅವರು ವಾಸ್ತವವಾಗಿ ಸ್ವಲ್ಪ ಮುಂಚಿತವಾಗಿ ತಮ್ಮ ಡೆತ್ ಬೌಲಿಂಗ್ ಅನ್ನು ಪ್ರಾರಂಭಿಸಿದಾಗ, ನಾವು ಅದನ್ನು ಬಂಡವಾಳ ಮಾಡಿಕೊಂಡು ಸ್ವಲ್ಪ ಮುಂಚಿತವಾಗಿ ನಮ್ಮ ಸ್ಲಾಗ್ ಮಾಡುವುದನ್ನು ಪ್ರಾರಂಭಿಸಬೇಕಾಗಿತ್ತು," ಎಂದು ಎಂಎಸ್‌ ಧೋನಿ ಹೇಳಿದ್ದಾರೆ.

"ಕೊನೆಯಲ್ಲಿ ಕೆಲ ಓವರ್‌ಗಳು ಬಾಕಿ ಇರುವಾಗಲೇ ನಾವು ಇನ್ನಷ್ಟು ಹೆಚ್ಚಿನ ರನ್‌ಗಳನ್ನು ಗಳಿಸಬೇಕಾಗಿತ್ತು. ಆ ರನ್‌ಗಳು ನಮಗೆ ಅಗತ್ಯವಿತ್ತು. ಇಬ್ಬನಿ ಬೀಳುತ್ತಿದ್ದಾಗ 175 ರನ್‌ಗಳು ಅಷ್ಟೊಂದು ದೊಡ್ಡ ಮೊತ್ತವಲ್ಲ," ಎಂದು ಸಿಎಸ್‌ಕೆ ನಾಯಕ ತಿಳಿಸಿದ್ದಾರೆ.

IPL 2025: 6 ಪಂದ್ಯಗಳನ್ನು ಸೋತ ಸಿಎಸ್‌ಕೆಗೆ ಪ್ಲೇಆಫ್ಸ್‌ಗೆ ಅವಕಾಶ ಇದೆಯಾ? ಇಲ್ಲಿದೆ ಲೆಕ್ಕಾಚಾರ!

2026ರ ಐಪಿಎಲ್‌ ಆಡುವ ಸುಳಿವು ನೀಡಿದ ಎಂಎಸ್‌ ಧೋನಿ

"ನಾವು ನ್ಯೂನತೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಮುಂದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲು ನಾವು ಒಂದೊಂದೇ ಪಂದ್ಯಗಳನ್ನು ಆಡಬೇಕು ಮತ್ತು ನಾವುಇದರಲ್ಲಿ ಕೆಲವನ್ನು ಸೋತರೆ, ಮುಂದಿನ ವರ್ಷಕ್ಕೆ ಸರಿಯಾದ ಸಂಯೋಜನೆಯನ್ನು ಕಂಡುಹಿಡಿಯುವುದು ನಮಗೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಹೆಚ್ಚಿನ ಆಟಗಾರರನ್ನು ಬದಲಾಯಿಸಲು ನಾವು ಇಷ್ಟಪಡುವುದಿಲ್ಲ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಪ್ರಯುತ್ನಿಸುತ್ತೇವೆ, ಒಂದು ಇದು ಆಗಲಿಲ್ಲವಾದರೆ, ಮುಂದಿನ ವರ್ಷಕ್ಕೆ ಪ್ಲೇಯಿಂಗ್‌ XI ಅನ್ನು ಉಳಿಸಿಕೊಂಡು ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡುತ್ತೇವೆ," ಎಂದು ಎಂಎಸ್‌ ಧೋನಿ ಹೇಳುವ ಮೂಲಕ 2026ರ ಐಪಿಎಲ್‌ನಲ್ಲಿಯೂ ತಾವು ಮುಂದುವರಿಯುವ ಆಶಯವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಸಿಎಸ್‌ಕೆಯ ಪ್ಲೇಆಫ್ಸ್‌ ಲೆಕ್ಕಾಚಾರ

ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಸೋಲು ಅನುಭವಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, 2025ರ ಐಪಿಎಲ್‌ ಟೂರ್ನಿಯಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ, ಇನ್ನುಳಿದ ಆರೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಂದು ಇನ್ನುಳಿದ ಪಂದ್ಯಗಳನ್ನು ಗೆದ್ದರೆ ರನ್‌ ರೇಟ್‌ ಅವಲಂಬನೆ ಇಲ್ಲದೆ ಸಿಎಸ್‌ಕೆ 16 ಅಂಕಗಳೊಂದಿಗೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ 6ರಲ್ಲಿ 5 ಗೆದ್ದರೆ ಸಿಎಸ್‌ಕೆಯ ಪ್ಲೇಆಫ್ಸ್‌ ಭವಿಷ್ಯ ಇತರೆ ತಂಡಗಳನ್ನು ಅವಲಂಬಿಸಿರುತ್ತದೆ.