ʻನನಗೆ ಸಿಕ್ಕಿರುವುದರ ಬಗ್ಗೆ ಖುಷಿಯಾಗಿದ್ದೇನೆʼ: ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಕಾರಣ ತಿಳಿಸಿದ ಮೊಹಮ್ಮದ್ ಶಮಿ!
ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡುವ ಬಗ್ಗೆ ಆಲೋಚನೆಯನ್ನೇ ಬಿಟ್ಟುಕೊಟ್ಟಿದ್ದೇನೆ ಎಂದು ಟೀಮ್ ಇಂಡಿಯಾ ಹಿರಿಯ ವೇಗಿ ಮೊಹಮ್ಮದ್ ಶಮಿ ತಿಳಿಸಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2028ರ ಐಸಿಸಿ ಟಿ20 ವಿಶ್ವಕಪ್ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ಶಮಿ. -
ನವದೆಹಲಿ: ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತ ಕ್ರಿಕೆಟ್ ತಂಡದ ಪರ ಆಡುವ ಆಸೆಯನ್ನು ಬಿಟ್ಟು ಬಿಟ್ಟಿದ್ದೇನೆಂದು ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ತಿಳಿಸಿದ್ದಾರೆ. ಮುಂದಿನ ಏಕದಿನ ವಿಶ್ವಕಪ್ (ODI World Cup 2027) ಟೂರ್ನಿಯನ್ನು ನೋಡದೆ, ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಬಂಗಾಳ ತಂಡದ ಪರ ಆಡುವ ಕಡೆಗೆ ಗಮನ ಕೊಡುತ್ತಿದ್ದೇನೆಂದು ಶಮಿ ಹೇಳಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶಮಿ ಕೊನೆಯ ಬಾರಿ ಭಾರತ ತಂಡದ ಪರ ಕೊನೆಯ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಆಡಿದ್ದರು.
2027ರ ಐಸಿಸಿ ಏಕದಿನ ವಿಶ್ವಕಪ್ ಅಥವಾ 2028ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳು ನಿಮ್ಮ ಯೋಜನೆಯಲ್ಲಿವೆಯಾ ಎಂದು ಕೇಳಿದ ಪ್ರಶ್ನೆಗೆ ಶಮಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವುದೇ ಟೂರ್ನಿಗಳನ್ನು ಎದುರು ನೋಡುತ್ತಿಲ್ಲ ಹಾಗೂ ನನ್ನ ವೃತ್ತಿ ಬದುಕಿನಲ್ಲಿ ಉಳಿದಿರುವ ಕ್ರಿಕೆಟ್ ಅನ್ನು ಆಡಲು ಬಯಸುತ್ತಿದ್ದೇನೆಂದು ಹೇಳಿದ್ದಾರೆ.
"ಈ ಎಲ್ಲಾ ಅಂಶಗಳನ್ನು ಎಣಿಸುವುದನ್ನು ನಾನು ನಿಲ್ಲಿಸಿದ್ದೇನೆ. ಈಗ ನಾನು ನನ್ನ ಆಟದ ಮೇಲೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದೇನೆ. ಆಯ್ಕೆದಾರರು ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಈಗ ನನ್ನ ಮುಂದೆ ಇರುವ ಸಂಗತಿ ಏನೆಂದರೆ, ರಾಜ್ಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡುವ ಕಡೆಗೆ ಗಮನ ಕೊಡುವುದು ಹಾಗೂ ನನ್ನ ಲಯ ಮತ್ತು ಕೌಶಲದ ಹೆಚ್ಚಿನ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿದೆ," ಎಂದು ಮುಂಬೈನಲ್ಲಿ ಮೊಹಮ್ಮದ್ ಶಮಿ ತಿಳಿಸಿದ್ದಾರೆ.
Mohammed shami Test Retirement: ಟೆಸ್ಟ್ ಕ್ರಿಕೆಟ್ಗೆ ಹಠಾತ್ ವಿದಾಯ ಹೇಳಿ ಶಾಕ್ ನೀಡಿದ ಮೊಹಮ್ಮದ್ ಶಮಿ!
ರಣಜಿ ಟ್ರೋಫಿ ಮೊದಲ ಲೆಗ್ ಪಂದ್ಯಗಳನ್ನು ಆಡಿದ ಬಳಿಕ ಈ ತಿಂಗಳ ಆರಂಭದಲ್ಲಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿಯನ್ನು ನೀಡಿದ್ದರು. ಇದಾದ ಬಳಿಕ ಅವರು ಬಂಗಾಳ ತಂಡದ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಆದರೆ, ಗುರುವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಬಂಗಾಳ ತಂಡದ ಟಿ20 ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು.
ಈ ಟೂರ್ನಿಯಲ್ಲಿ ಶಮಿ ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದರು ಹಾಗೂ ಇದಕ್ಕೂ ಮುನ್ನ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಿಂದ 14 ವಿಕೆಟ್ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಆದರೆ, ಅವರು ರಣಜಿ ಟ್ರೋಫಿ ಟೂರ್ನಿಯ ಎರಡನೇ ಲೆಗ್ನಲ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಅವರು ದೇಶಿ ಕ್ರಿಕೆಟ್ನಲ್ಲಿ ಮುಂದುವರಿಯಬೇಕೆಂಬ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.
ಕ್ರೈಸ್ಟ್ಚರ್ಚ್ ಟೆಸ್ಟ್ನಲ್ಲಿ ಬೌಲಿಂಗ್ ಶೈಲಿ ಬದಲಾಯಿಸಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ ಜಸ್ಪ್ರೀತ್ ಬುಮ್ರಾ
ವಿಜಯ್ ಹಝಾರೆ ಟ್ರೋಫಿ ಆಡಲಿರುವ ಶಮಿ
ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೊಹಮ್ಮದ್ ಶಮಿ ಹೌದು ಎಂದು ಹೇಳಿದ್ದಾರೆ. "ಖಚಿತವಾಗಿಯೂ ಆಡುತ್ತೇನೆ. ಆದರೆ, ಯಾವ ಪಂದ್ಯವನ್ನು ಆಡುತ್ತೇನೆ ಹಾಗೂ ಯಾವ ಪಂದ್ಯಗಳನ್ನು ಬಿಡುತ್ತೇನೆಂಬ ಬಗ್ಗೆ ಆಯ್ಕೆ ಮಾಡಬೇಕಾಗಿದೆ. ಇದರಲ್ಲಿ ಯಾವುದೇ ಒತ್ತಡವಿಲ್ಲ. ಇದು ಉತ್ತಮವಾಗಿ ಸಾಗಲಿದೆ ಎಂದು ನಾನು ಭಾವಿಸುತ್ತೇನೆ ಹಾಗೂ ಮುಂದಿನ ಸೀಸನ್ಗೆ ಫಿಟ್ ಆಗಿ ಉಳಿದು ಹಾಗೂ ಆಡುವುದನ್ನು ಮುಂದುವರಿಸುತ್ತೇನೆ," ಎಂದು ಶಮಿ ತಿಳಿಸಿದ್ದಾರೆ.
ಟೆಸ್ಟ್ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿದ ಶಮಿ
ದೇಶಿ ಕ್ರಿಕೆಟ್ನಲ್ಲಿ ಮುಂದುವರಿಯುತ್ತಿದ್ದರೂ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಕಾರಣವೇನೆಂದು ಮೊಹಮ್ಮದ್ ಶಮಿ ವಿವರಿಸಿದ್ದಾರೆ. ದೇಹದ ಬೇಡಿಕೆಗೆ ಅನುಗುಣವಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಹಾಗೂ ಯಾವುದೇ ಒತ್ತಡವಿಲ್ಲದೆ ವೈಟ್ಬಾಲ್ ಕ್ರಿಕೆಟ್ ಆಡುವುದಾಗಿದೆ ಎಂದು ಹೇಳಿದ್ದಾರೆ.
2ನೇ ಟೆಸ್ಟ್ನಲ್ಲೂ ಅವಕಾಶ ಸಿಗದೆ ಸಿರಾಜ್ ಅಳುತ್ತಿದ್ದಾನಾ?; ಮಾಜಿ ಕ್ರಿಕೆಟಿಗ ಪ್ರಶ್ನೆ
"ನನಗೆ ಇದು ಸರಿಯಾದ ನಿರ್ಧಾರ ಎಂದು ಅನಿಸಿತು ಹಾಗೂ ಅದಕ್ಕೆ ಮಾಡಿದ್ದೇನೆ. ನಾನು ಚೆನ್ನಾಗಿ ಸಾಗುತ್ತಿದ್ದೇನೆ ಹಾಗೂ ಅತ್ಯುತ್ತಮವಾಗಿ ಆಡುತ್ತಿದ್ದೇನೆ, ಹಾಗಾಗಿ ಯಾವುದೇ ಒತ್ತಡದವಿಲ್ಲದೆ ವೈಟ್ ಬಾಲ್ ಕ್ರಿಕೆಟ್ ಆಡುತ್ತಿದ್ದೇನೆ. ದೇಹದ ಮೇಲೆ ಹೆಚ್ಚಿನ ಭಾರವನ್ನು ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ರೆಡ್ ಬಾಲ್ ಕ್ರಿಕೆಟ್ನಲ್ಲಿ ನನ್ನ ಕೌಶಲವನ್ನು ಜನರು ಇಷ್ಟಪಡುವುದಿಲ್ಲವಾದರೆ, ನಾನು ವೈಟ್ಬಾಲ್ ಕ್ರಿಕೆಟ್ ಆಡಲು ಬಯಸುತ್ತೇನೆ," ಎಂದು ಮೊಹಮ್ಮದ್ ಶಮಿ ತಿಳಿಸಿದ್ದಾರೆ.