ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೆನ್ನೈನ ಸೆರ್ಕ್ರೂಟ್‌ನಲ್ಲಿ ಸೂಪರ್‌ ಬೈಕ್‌ ರೈಡ್‌ ಮಾಡಿದ ಎಂಎಸ್‌ ಧೋನಿ!

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಸೂಪರ್‌ಬೈಕ್ ಓಡಿಸಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು. ವೇಗದ ಲ್ಯಾಪ್‌ಗಳನ್ನು ಪೂರ್ಣಗೊಳಿಸಿದ ಧೋನಿ, ಟ್ರ್ಯಾಕ್‌ನಿಂದ ಹೊರಬಂದ ಬಳಿಕ ಅಭಿಮಾನಿಗಳತ್ತ ಕೈಬೀಸಿ ಶುಭಾಶಯ ಕೋರಿದರು. ಅವರ ಈ ಬೈಕ್ ರೈಡ್‌ನ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚೆನ್ನೈ ಸರ್ಕ್ಯೂಟ್‌ನಲ್ಲಿ ಸೂಪರ್‌ ಬೈಕ್‌ ರೈಡ್‌ ಮಾಡಿದ ಎಂಎಸ್‌ ಧೋನಿ!

ರೇಸ್‌ ಟ್ರ್ಯಾಕ್‌ನಲ್ಲಿ ಸೂಪರ್‌ ಬೈಕ್‌ ರೈಡ್‌ ಮಾಡಿದ ಎಂಎಸ್‌ ಧೋನಿ. -

Profile
Ramesh Kote Aug 3, 2026 9:49 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ (Indian Cricket team) ಮಾಜಿ ನಾಯಕ ಎಂಎಸ್ ಧೋನಿ (MS Dhoni) ಸೋಮವಾರ ಚೆನ್ನೈ ಸಮೀಪದ ಇರುಂಗಟ್ಟುಕೊಟ್ಟೈಯಲ್ಲಿರುವ ಮದ್ರಾಸ್ ಇಂಟರ್‌ನ್ಯಾಷನಲ್ ರೇಸ್‌ ಸರ್ಕ್ಯೂಟ್‌ನಲ್ಲಿ ಸೂಪರ್‌ಬೈಕ್ ರೈಡ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. ಟಿವಿಎಸ್ ಯುರೋಗ್ರಿಪ್ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧೋನಿ, ಮೋಟಾರ್ ರೇಸಿಂಗ್ ಟ್ರ್ಯಾಕ್‌ನಲ್ಲಿ ವೇಗದ ಲ್ಯಾಪ್‌ಗಳನ್ನು ಪೂರ್ಣಗೊಳಿಸಿ ಕಂಪನಿಯ ಪ್ರಮುಖ ಬೈಕ್ ಟೈರ್‌ಗಳನ್ನು ಪರೀಕ್ಷಿಸಿದರು. ಬಳಿಕ ಕಂಪನಿಯ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಧೋನಿ ಅಂತಾರಾಷ್ಟ್ರೀಯ ರೇಸ್ ಟ್ರ್ಯಾಕ್‌ನಲ್ಲಿ ಬೈಕ್ ಸವಾರಿಯ ರೋಮಾಂಚವನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಿರುವುದು ಕಂಡುಬಂದಿದೆ. ಯಾವುದೇ ಹಿಂಜರಿಕೆಯಿಲ್ಲದೆ ಪೂರ್ಣ ಪ್ರಮಾಣದ ವೇಗದಲ್ಲಿ ಬೈಕ್ ಚಲಾಯಿಸಿ ಹಲವು ವೇಗದ ಲ್ಯಾಪ್‌ಗಳನ್ನು ಪೂರ್ಣಗೊಳಿಸಿದರು. ಅವರು ಪಿಟ್ ಲೇನ್‌ಗೆ ಮರಳುತ್ತಿದ್ದಂತೆ ಛಾಯಾಗ್ರಾಹಕರು ಅವರನ್ನು ಸುತ್ತುವರಿದು ಫೋಟೋಗಳನ್ನು ಸೆರೆಹಿಡಿದರು.

ಭಾರತ ಪ್ರವಾಸದ ಆಸ್ಟ್ರೇಲಿಯಾ ಅಂಡರ್‌-19 ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಮೂಲದ ನೀಲ್‌ ಪಟೇಲ್‌!

45 ವಯಸ್ಸಿನ ಎಂಎಸ್ ಧೋನಿ ತಮ್ಮ ರೇಸ್ ಟ್ರ್ಯಾಕ್ ಸವಾರಿಯನ್ನು ಮುಗಿಸಿದ ಬಳಿಕ ಹೆಲ್ಮೆಟ್ ತೆಗೆದು ಪಿಟ್ ಲೇನ್ ಬಳಿ ನೆರೆದಿದ್ದ ನೂರಾರು ಅಭಿಮಾನಿಗಳತ್ತ ಕೈಬೀಸಿ ಶುಭಾಶಯ ಕೋರಿದರು. ಇದರಿಂದ ಅಭಿಮಾನಿಗಳು ಸಂಭ್ರಮಗೊಂಡಿದ್ದು, ಅವರ ಬೈಕ್ ಸವಾರಿಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲೇ ವೈರಲ್ ಆಗಿವೆ.



ಎಂಎಸ್‌ ಧೋನಿಗೆ ಈ ಕಾರ್ಯಕ್ರಮ ತಮ್ಮ ಬಹುಕಾಲದ ಸೂಪರ್‌ಬೈಕ್ ಹಾಗೂ ಐಷಾರಾಮಿ ಕಾರುಗಳ ಮೇಲಿನ ಆಸಕ್ತಿಯನ್ನು ಮತ್ತೊಮ್ಮೆ ಆಸ್ವಾದಿಸಲು ಉತ್ತಮ ವೇದಿಕೆಯಾಯಿತು. 2026ರ ಐಪಿಎಲ್ ಮುಕ್ತಾಯವಾದ ಬಳಿಕ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ರಾಂಚಿಯಲ್ಲಿರುವ ತಮ್ಮ ವಿಶಾಲ ಗ್ಯಾರೇಜ್‌ನಲ್ಲಿ ಸಮಯ ಕಳೆಯುವುದು, ವಿವಿಧ ಬ್ರ್ಯಾಂಡ್‌ಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಕ್ರಿಕೆಟ್ ಮೈದಾನದಾಚೆಗಿನ ಜೀವನವನ್ನು ಆನಂದಿಸುತ್ತಿದ್ದಾರೆ.

ಎಂಎಸ್‌ ಧೋನಿ ಅಲ್ಲವೇ ಅಲ್ಲ; ಭಾರತೀಯ ಕ್ರಿಕೆಟ್‌ ಸ್ಮಾರ್ಟೆಸ್ಟ್‌ ಮೈಂಡ್‌ ಯಾರೆಂದು ಹೆಸರಿಸಿದ ಮೊಯೀನ್‌ ಅಲಿ!

ಎಂಎಸ್‌ ಧೋನಿ ಈ ಕಾರ್ಯಕ್ರಮದಲ್ಲಿ ಸೂಪರ್‌ಬೈಕ್ ಸವಾರಿ ಹಾಗೂ ಬ್ರ್ಯಾಂಡ್ ಚಟುವಟಿಕೆಗಳತ್ತ ಮಾತ್ರ ಗಮನ ಹರಿಸಿದ್ದರೂ, ಅವರು ತಮಿಳುನಾಡಿನಲ್ಲಿ ಕಾಣಿಸಿಕೊಂಡಿದ್ದೇ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಮತ್ತೊಮ್ಮೆ ಕುತೂಹಲ ಮೂಡಿಸಿದೆ. 2027ರ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮತ್ತೊಮ್ಮೆ ಹಳದಿ ಜೆರ್ಸಿ ತೊಟ್ಟು ಕೊನೆಯ ಆವೃತ್ತಿಯಲ್ಲಿ ಆಡಲಿದ್ದಾರಾ ಅಥವಾ ಈಗಾಗಲೇ ವೃತ್ತಿಜೀವನಕ್ಕೆ ಮೌನವಾಗಿ ತೆರೆ ಎಳೆದಿದ್ದಾರಾ ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಜೋರಾಗಿ ನಡೆಯುತ್ತಿವೆ.

2026ರ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಎಂಎಸ್‌ ಧೋನಿ ಇದ್ದರೂ ಅವರು ಸತತ ಗಾಯಗಳ ಕಾರಣ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ತವರು ಹೊರಗಿನ ಪಂದ್ಯಗಳ ನಿಮಿತ್ತ ಅವರು ತಂಡದ ಜೊತೆಗೆ ಪ್ರಯಾಣ ನಡೆಸಿರಲಿಲ್ಲ. ಕೇವಲ ತವರು ಪಂದ್ಯಗಳ ಸಮಯದಲ್ಲಿ ಮಾತ್ರ ತಂಡದ ಜೊತೆ ಕಾಣಿಸಿಕೊಂಡಿದ್ದರು. ಅಂದ ಹಾಗೆ ಎಂಎಸ್‌ ಧೋನಿ ಅನುಪಸ್ಥಿತಿಯಲ್ಲಿ ಸಿಎಸ್‌ಕೆ ತಂಡ ಪ್ಲೇಆಫ್ಸ್‌ಗೂ ಅರ್ಹತೆ ಪಡೆದಿರಲಿಲ್ಲ.