ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಛತ್ತೀಸ್‌ಗಢ ತಂಡದಲ್ಲಿ ನನ್ನನ್ನು ತುಳಿಯಲಾಗುತ್ತಿದೆʼ: ಶಶಾಂಕ್‌ ಸಿಂಗ್‌ ಗಂಭೀರ ಆರೋಪ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ದೊಡ್ಡ ಹೆಸರು ಮಾಡಿರುವ ಶಶಾಂಕ್‌ ಸಿಂಗ್‌ ಅವರು ತಮ್ಮ ತವರು ರಾಜ್ಯ ಛತ್ತೀಸ್‌ಗಢ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು 2026-27ರ ಸಾಲಿನ ದೇಶಿ ಆವೃತ್ತಿಯಲ್ಲಿ ಪುದುಚೇರಿ ತಂಡದ ಪರ ಆಡಲಿದ್ದಾರೆ. ಈ ಬಗ್ಗೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ.

ಛತ್ತೀಸ್‌ಗಢ ತಂಡವನ್ನು ತೊರೆದು ಪುದುಚೇರಿ ತಂಡಕ್ಕೆ ಸೇರಿದ ಶಶಾಂಕ್‌ ಸಿಂಗ್‌!

ಛತ್ತೀಸ್‌ಗಢ ಕ್ರಿಕೆಟ್‌ ಸಂಸ್ಥೆ ವಿರುದ್ಧ ಶಶಾಂಕ್‌ ಸಿಂಗ್‌ ಗಂಭೀರ ಆರೋಪ. -

Profile
Ramesh Kote Aug 3, 2026 10:49 PM

ನವದೆಹಲಿ: ಮುಂಬರುವ 2026-27ರ ಸಾಲಿನ ದೇಶಿ ಕ್ರಿಕೆಟ್‌ ಆಡಲು ಛತ್ತೀಸ್‌ಗಢ ( Chattisgarh) ತಂಡವನ್ನು ತೊರೆದು ಪುದುಚೇರಿ ತಂಡವನ್ನು ಸೇರಲು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸ್ಟಾರ್‌ ಆಲ್‌ರೌಂಡರ್‌ ಶಶಾಂಕ್‌ ಸಿಂಗ್‌ (Shashank Singh) ನಿರ್ಧರಿಸಿದ್ದಾರೆ. ಹೊಸ ದೇಶಿ ಕ್ರಿಕೆಟ್‌ ಸೀಸನ್‌ಗೆ ತಯಾರಿ ನಡೆಸುತ್ತಿದ್ದ ವೇಳೆ ಹಾಗೂ ಗಾಯದಿಂದ ಗುಣಮುಖರಾಗಿದ್ದ ಅವಧಿಯಲ್ಲಿ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್‌ ಮಂಡಳಿಯಿಂದ ತಮಗೆ ಯಾವುದೇ ಬೆಂಬಲ ಸಿಗಲಿಲ್ಲ ಎಂಬ ಆರೋಪವನ್ನು ಶಶಾಂಕ್‌ ಮಾಡಿದ್ದಾರೆ.

ಮುಂಬೈ ವಿಕೆಟ್‌ ಕೀಪರ್‌ ಪ್ರಸಾದ್‌ ಪವಾರ್‌ ಅವರ ಜೊತೆಗೆ ಅತಿಥಿ ಆಟಗಾರನಾಗಿ ಪುದುಚೇರಿ ತಂಡವನ್ನು ಪ್ರತಿನಿಧಿಸುವ ಸಲುವಾಗಿ ಶಶಾಂಕ್‌ ಸಿಂಗ್‌ ಅವರು ಈಗಾಗಲೇ ಛತ್ತೀಸಗಢ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) 34ರ ವಯಸ್ಸಿನ ಆಟಗಾರ ಪಡೆದುಕೊಂಡಿದ್ದಾರೆ.

ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ,ಕಳೆದ ಸೀಸನ್‌ನಲ್ಲಿ ಗಂಭೀರ ಭುಜದ ಗಾಯವಾಗಿದ್ದ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್‌ ಸಂಸ್ಥೆಯು ನನ್ನ ರಿಕವರಿಗೆ ಯಾವುದೇ ಸಹಕಾರ ನೀಡಿರಲಿಲ್ಲ. ಬೆಂಗಳೂರಿನಲ್ಲಿ ನಡೆದಿದ್ದ ಸೀಸನ್‌ ಪೂರ್ವ ಶಿಬಿರದ ಛತ್ತೀಸ್‌ಗಢ ರಾಜ್ಯ ತಂಡ ಹಾಗೂ ಛತ್ತೀಸ್‌ಗಢ ಕ್ರಿಕೆಟ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ತಂಡದಿಂದಲೂ ಕೈಬಿಡಲಾಗಿತ್ತು. ಇದರ ಬಗ್ಗೆ ಯಾರೂ ಕೂಡ ನನಗೆ ವಿವರಣೆಯನ್ನು ನೀಡಿರಲಿಲ್ಲ.

ʻಮಗ ಡಾಕ್ಟರ್‌ ಆಗಬೇಕೆಂದು ಅಪ್ಪ ಕನಸು ಕಂಡಿದ್ದರುʼ: ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಆಯ್ಕೆಯಾದ ಆಕಿಬ್‌ ನಬಿ ಯಾರು?

"ಕಳೆದ ಋತುವಿನಲ್ಲಿ ನನ್ನ ಭುಜ ಮತ್ತು ಕೈಬೆರಳಿಗೆ ಗಂಭೀರ ಗಾಯಗಳಾಗಿದ್ದವು. ಆದರೆ ಆ ಕಠಿಣ ಸಮಯದಲ್ಲಿ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘ (CSCS) ನನ್ನ ಬೆಂಬಲಕ್ಕೆ ನಿಲ್ಲಲೇ ಇಲ್ಲ," ಎಂದು ಶಶಾಂಕ್ ಸಿಂಗ್ ಹೇಳಿದ್ದಾರೆ.

ಇದಲ್ಲದೆ, ಯಾವುದೇ ಕಾರಣವನ್ನೂ ತಿಳಿಸದೆ 2026ರ ಛತ್ತೀಸ್‌ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್‌ಗೆ ಹಾಗೂ ಬೆಂಗಳೂರಿನಲ್ಲಿ ನಡೆದ ಪೂರ್ವಸಿದ್ಧತಾ ಶಿಬಿರಕ್ಕೆ ತೆರಳಿದ ಛತ್ತೀಸ್‌ಗಢ ತಂಡದಲ್ಲಿಯೂ ತಮ್ಮನ್ನು ಆಯ್ಕೆ ಮಾಡಲಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.

ಎಂಎಸ್‌ ಧೋನಿ ಅಲ್ಲವೇ ಅಲ್ಲ; ಭಾರತೀಯ ಕ್ರಿಕೆಟ್‌ ಸ್ಮಾರ್ಟೆಸ್ಟ್‌ ಮೈಂಡ್‌ ಯಾರೆಂದು ಹೆಸರಿಸಿದ ಮೊಯೀನ್‌ ಅಲಿ!

'ನಾನು ಐಪಿಎಲ್‌ ಅಷ್ಟೇ ಆಡುತ್ತೇನೆ ಎಂಬ ಆರೋಪ ಸತ್ಯವಲ್ಲ': ಶಶಾಂಕ್ ಸಿಂಗ್

"ನಾನು ಐಪಿಎಲ್‌ ಟೂರ್ನಿಯಲ್ಲಿ ಮಾತ್ರ ಆಡಲು ಬಯಸುತ್ತೇನೆ, ಛತ್ತೀಸ್‌ಗಢ ಪರ ದೇಶಿ ಕ್ರಿಕೆಟ್ ಆಡಲು ಆಸಕ್ತಿ ಇಲ್ಲ ಎಂದು ನನಗೆ ಹೇಳಲಾಯಿತು. ಆದರೆ ವಾಸ್ತವ ಬೇರೆ. ಕಳೆದ ವರ್ಷ (ಫೆಬ್ರವರಿ 2025) 2023-24ರ ದೇಶಿ ಸೀಮಿತ ಓವರ್‌ಗಳ ಟೂರ್ನಿಗಳಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗೆ ನೀಡಲಾಗುವ ಪ್ರತಿಷ್ಠಿತ ಲಾಲಾ ಅಮರನಾಥ್ ಪ್ರಶಸ್ತಿಯನ್ನು ಬಿಸಿಸಿಐ ನನಗೆ ನೀಡಿ, ಭಾರತದ ಅತ್ಯುತ್ತಮ ವೈಟ್‌ಬಾಲ್ ಆಲ್‌ರೌಂಡರ್ ಎಂದು ಗೌರವಿಸಿತ್ತು," ಎಂದು ಶಶಾಂಕ್ ಸಿಂಗ್ ಹೇಳಿದ್ದಾರೆ.

ಮುಂದಿನ ಋತುವಿನಲ್ಲಿ ವೈಟ್‌ಬಾಲ್ ಕ್ರಿಕೆಟ್‌ಗೆ ಆದ್ಯತೆ ನೀಡಲಿದ್ದು, ನಿಜವಾದ ಆಲ್‌ರೌಂಡರ್ ಆಗಿ ತಂಡಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ತಾತ್ಕಾಲಿಕವಾಗಿ ರೆಡ್‌ಬಾಲ್ ಕ್ರಿಕೆಟ್‌ನಿಂದ ವಿರಾಮ ಪಡೆಯುವುದಾಗಿ ಅವರು ತಿಳಿಸಿದ್ದಾರೆ.

ಚೆನ್ನೈನ ಸೆರ್ಕ್ರೂಟ್‌ನಲ್ಲಿ ಸೂಪರ್‌ ಬೈಕ್‌ ರೈಡ್‌ ಮಾಡಿದ ಎಂಎಸ್‌ ಧೋನಿ!

"ನನ್ನ ದೇಹ ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಅದಕ್ಕಾಗಿಯೇ ಈ ಋತುವಿನಲ್ಲಿ ವೈಟ್‌ಬಾಲ್ ಕ್ರಿಕೆಟ್‌ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇನೆ ಮತ್ತು ರೆಡ್‌ಬಾಲ್ ಕ್ರಿಕೆಟ್‌ನಿಂದ ವಿರಾಮ ಪಡೆಯುತ್ತಿದ್ದೇನೆ. ಪಾಂಡಿಚೇರಿ ಹಾಗೂ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಟಿ20 ಕ್ರಿಕೆಟ್‌ನಲ್ಲಿ ನನ್ನ ನಾಲ್ಕು ಓವರ್‌ಗಳ ಕೋಟಾವನ್ನು ಸಂಪೂರ್ಣವಾಗಿ ಬೌಲಿಂಗ್‌ನತ್ತ ಗಮನಹರಿಸಿದ್ದೇನೆ," ಎಂದು ಶಶಾಂಕ್ ಸಿಂಗ್‌ ಹೇಳಿದ್ದಾರೆ.