IND vs ENG: ಬೆನ್ ಸ್ಟೋಕ್ಸ್ ಬೌನ್ಸರ್‌ನಲ್ಲಿ ತೆಲೆಗೆ ಪೆಟ್ಟು ತಿಂದ ನಿತೀಶ್ ಕುಮಾರ್ ರೆಡ್ಡಿ!
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಎಸೆದ ಬೌನ್ಸರ್ ನಿತೀಶ್ ಕುಮಾರ್ ರೆಡ್ಡಿ ಅವರ ತಲೆಗೆ ಜೋರಾಗಿ ಬಡಿಯಿತು. ಈ ಹಿನ್ನೆಲೆಯಲ್ಲಿ ನಿತೀಶ್ ರೆಡ್ಡಿ ವಿರಾಮ ಪಡೆದ ಬಳಿಕ ಪುನಃ ಬ್ಯಾಟಿಂಗ್ ಮುಂದುವರಿಸಿದರು.

ನಿತೀಶ್ ರೆಡ್ಡಿಗೆ ತಲೆಗೆ ಬೌನ್ಸರ್ ಎಸೆದ ಬೆನ್ ಸ್ಟೋಕ್ಸ್.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ (IND vs ENG) ತಂಡಗಳು ಇಲ್ಲಿನ ಲಾರ್ಡ್ಸ್ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 387 ರನ್‌ಗಳನ್ನು ಕಲೆ ಹಾಕಿತ್ತು. ಇದಕ್ಕೆ ಪ್ರತಿಯಾಗಿ ಭಾರತ ತಂಡ (India) ಕೂಡ ಅದ್ಭುತವಾಗಿ ಬ್ಯಾಟಿಂಗ್ ನಡೆಸಿತು. ಇದರ ನಡುವೆ ಪಂದ್ಯದ ಮೂರನೇ ದಿನದಂದು ಅಪಾಯಕಾರಿ ಬೌನ್ಸರ್ ಭಾರತೀಯ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಅವರ ಹೆಲ್ಮೆಟ್‌ಗೆ ಬಡಿಯಿತು. ಈ ವೇಳೆ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು.
ಭಾರತ ತಂಡದ ಪ್ರಥಮ ಇನಿಂಗ್ಸ್‌ನ ಸಮಯದಲ್ಲಿ 90ನೇ ಓವರ್‌ನಲ್ಲಿ ಬೆನ್ ಸ್ಟೋಕ್ಸ್, ನಿತೀಶ್ ರೆಡ್ಡಿಗೆ ಬೌನ್ಸರ್ ಹೊಡೆದರು. ಈ ಬೌನ್ಸರ್ ನೇರವಾಗಿ ಅವರ ಹೆಲ್ಮೆಟ್‌ಗೆ ಬಡಿಯಿತು. ಇದರಿಂದಾಗಿ ನಿತೀಶ್ ರೆಡ್ಡಿ ಸ್ವಲ್ಪ ಸಮಯದವರೆಗೆ ತಮ್ಮ ಸ್ಥಾನದಲ್ಲಿ ಕುಳಿತಿದ್ದರು. ಭಾರತ ತಂಡದ ಫಿಸಿಯೊ ಮೈದಾನಕ್ಕೆ ಆಗಮಿಸಿದರು ಮತ್ತು ಈ ವೇಳೆ ಪರಿಸ್ಥಿತಿ ಸ್ವಲ್ಪ ಉದ್ವಿಗ್ನತೆಯಿಂದ ಕೂಡಿತ್ತು. ಆಟ ಸ್ವಲ್ಪ ಸಮಯದವರೆಗೆ ನಿಂತ ನಂತರ ಆಟ ಮತ್ತೆ ಪ್ರಾರಂಭವಾಯಿತು. ಇದರಿಂದಾಗಿ ಭಾರತೀಯ ತಂಡದ ಅಭಿಮಾನಿಗಳ ಉದ್ವಿಗ್ನತೆ ಸ್ವಲ್ಪ ಕಡಿಮೆಯಾಯಿತು.
IND vs ENG: ಅರ್ಧಶತಕ ಸಿಡಿಸಿ ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ರಿಷಭ್ ಪಂತ್!
ಹೆಲ್ಮೆಟ್‌ಗೆ ಚೆಂಡು ತಗುಲಿಸಿಕೊಂಡ ಹೊರತಾಗಿಯೂ ನಿತೀಶ್ ರೆಡ್ಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ 91 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 30 ರನ್ ಗಳಿಸಿದರು ಹಾಗೂ ರವೀಂದ್ರ ಜಡೇಜಾ ಅವರ ಜೊತೆ 72 ರನ್‌ಗಳ ಜೊತೆಯಾಟವನ್ನು ಆಡಿದರು. ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಅವರು ಬೆನ್ ಸ್ಟೋಕ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ರವೀಂದ್ರ ಜಡೇಜಾ ಅರ್ಧ ಶತಕ
ಮೂರನೇ ದಿನ ಅದ್ಭುತ ಬ್ಯಾಟ್ ಮಾಡಿದ ಕೆಎಲ್ ರಾಹುಲ್ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಎರಡನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಆದರೆ, ಶತಕ ಸಿಡಿಸಿದ ತಕ್ಷಣ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದರು. ಆದರೆ ನಿತೀಶ್ ಕುಮಾರ್ ರೆಡ್ಡಿ ಮತ್ತು ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್ ನೇತೃತ್ವದ ಇಂಗ್ಲೆಂಡ್‌ನ ವೇಗದ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದರು. ನಿತೀಶ್ ರೆಡ್ಡಿ ಬೇಗ ವಿಕೆಟ್ ಒಪ್ಪಿಸಿದರೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮುಂದುವರಿಸಿದರು ಹಾಗೂ ಅರ್ಧಶತಕವನ್ನು ಬಾರಿಸಿದರು. 113 ಓವರ್‌ಗಳ ಹೊತ್ತಿಗೆ ರವೀಂದ್ರ ಜಡೇಜಾ 129 ಎಸೆತಗಳಲ್ಲಿ 72 ರನ್‌ಗಳನ್ನು ಕಲೆ ಹಾಕಿದ್ದರು. ಮತ್ತೊಂದು ತುದಿಯಲ್ಲಿ ವಾಷಿಂಗ್ಟನ್ ಸುಂದರ್ ಇದ್ದರು. ಭಾರತ ತಂಡ 113 ಓವರ್‌ಗಳಿಗೆ ಪ್ರಥಮ ಇನಿಂಗ್ಸ್‌ನಲ್ಲಿ 376 ರನ್ ಗಳಿಸಿದೆ.
IND vs ENG: ಲಾರ್ಡ್ಸ್ ಅಂಗಣದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್!
ಲಾರ್ಡ್ಸ್‌ನಲ್ಲಿ ಎರಡನೇ ಶತಕ ಬಾರಿಸಿದ ಕೆಎಲ್ ರಾಹುಲ್
ಕೆಎಲ್ ರಾಹುಲ್ ಅವರು ಮೂರನೇ ದಿನದಾಟದಲ್ಲಿಯೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು 177 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 100 ರನ್‌ಗಳನ್ನು ಗಳಿಸಿದರು. ಆ ಮೂಲಕ ಕ್ರಿಕೆಟ್ ಕಾಶಿ ಲಾರ್ಡ್‌ನಲ್ಲಿ ಎರಡು ಶತಕಗಳನ್ನು ಬಾರಿಸಿದ ಏಷ್ಯಾದ ಮೊದಲ ಆರಂಭಿಕ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕನ್ನಡಿಗ ಬರೆದಿದ್ದಾರೆ.