ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

PAK vs USA: ಫರ್ಹಾನ್‌ ಸ್ಪೋಟಕ ಫಿಫ್ಟಿ, ಯುಎಸ್‌ಎ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ!

Pakistan vs USA Match Highlights: ಸಹಿಬ್ದಾಝಾ ಫರ್ಹಾನ್‌ ಅವರ ಸ್ಪೋಟಕ ಅರ್ಧಶತಕ ಹಾಗೂ ಉಸ್ಮಾನ್‌ ತಾರಿಖ್‌ ಸ್ಪಿನ್‌ ಮೋಡಿಯ ನೆರವಿನಿಂದ ಪಾಕಿಸ್ತಾನ ತಂಡ, ಯುಎಸ್‌ಎ ವಿರುದ್ಧ 32 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ, ಸತತ ಎರಡನೇ ಗೆಲುವು ಪಡೆಯಿತು.

ಯುಎಸ್‌ಎ ವಿರುದ್ಧ ಪಾಕಿಸ್ತಾನ ತಂಡಕ್ಕೆ ಭರ್ಜರಿ ಜಯ!

ಯುಎಸ್‌ಎ ವಿರುದ್ಧ ಸಹಿಬ್ದಾಝಾ ಫರ್ಹಾನ್‌ ಅರ್ಧಶತಕ. -

Profile
Ramesh Kote Feb 10, 2026 10:45 PM

ಕೊಲಂಬೊ: ಸಹಿಬ್ದಾಝಾ ಫರ್ಹಾನ್‌ (73 ರನ್‌) ಅರ್ಧಶತಕ ಹಾಗೂ ಉಸ್ಮಾನ್‌ ತಾರಿಖ್‌ (27ಕ್ಕೆ 3) ಅವರ ಸ್ಪಿನ್‌ ಮೋಡಿಯ ಸಹಾಯದಿಂದ ಪಾಕಿಸ್ತಾನ (Pakistan) ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಪಂದ್ಯದಲ್ಲಿ ಯುಎಸ್‌ಎ (USA) ವಿರುದ್ಧ 32 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಸಲ್ಮಾನ್‌ ಆಘಾ ನಾಯಕತ್ವದ ಪಾಕಿಸ್ತಾನ ತಂಡ, ಸತತ ಎರಡನೇ ಗೆಲುವು ಪಡೆಯುವ ಮೂಲಕ ಡಿ ಗಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು. ಇನ್ನು ಯುಎಸ್‌ಎ ತಂಡ ಸತತ ಎರಡನೇ ಸೋಲು ಅನುಭವಿಸಿ ನಿರಾಶೆ ಅನುಭವಿಸಿತು.

ಮಂಗಳವಾರ ಇಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 191 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಯುಎಸ್‌ಎ, ಶುಭಮನ್‌ ರಂಜನೆ (51), ಶಹನ್‌ ಜಹಂಗೀರ್‌ (49 ರನ್‌) ಹಾಗೂ ಮಿಲಿಂಗ್‌ ಕುಮಾರ್‌ (29) ಅವರ ಹೋರಾಟದ ಹೊರತಾಗಿಯೂ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಗೆ ಸೀಮಿತವಾಯಿತು. ಆ ಮೂಲಕ ಸತತ ಎರಡನೇ ಸೋಲು ಒಪ್ಪಿಕೊಂಡಿತು.

IND vs NAM: ಸಂಜು ಸ್ಯಾಮ್ಸನ್‌ ಇನ್‌? ನಮೀಬಿಯಾ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

ಯುಎಸ್‌ಎ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಶುಭಮ್‌ ರಂಜನೆ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಅವರು ಆಡಿದ 30 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 51 ರನ್‌ ಗಳಿಸಿ ತಂಡವನ್ನು ಗೆಲುವಿನ ಆಸೆಯನ್ನು ಜೀವಂತವಾಗಿಸಿದ್ದರು. ಇವರ ಜೊತೆಗೆ ಆರಂಭದಲ್ಲಿ ಶಹನ್‌ ಜಹಂಗೀರ್‌ ಅವರು ಕೂಡ 34 ಎಸೆತಗಳಲ್ಲಿ 49 ರನ್‌ ಗಳಿಸಿದ್ದರು. ಮಿಲಿಂದ್‌ ಕುಮಾರ್‌ ಕೂಡ 22 ಎಸೆತಗಳಲ್ಲಿ 29 ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಆದರೂ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಪರ ಉಸ್ಮಾನ್‌ ತಾರಿಖ್‌ 3 ವಿಕೆಟ್‌ ಕಿತ್ತರು.



190 ರನ್‌ ಕಲೆ ಹಾಕಿದ್ದ ಪಾಕಿಸ್ತಾನ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಪಾಕಿಸ್ತಾನ ತಂಡ, ಸಹಿಬ್ದಾಝಾ ಫರ್ಹಾನ್‌ (73 ರನ್‌) ಹಾಗೂ ಬಾಬರ್‌ ಆಝಮ್‌ (46 ರನ್‌) ಅವರ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಯುಎಸ್‌ಎ ತಂಡಕ್ಕೆ 191 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಫರ್ಹಾನ್‌ ಮತ್ತು ಆಝಮ್‌ ಜೊತೆಗೆ ಕೊನೆಯಲ್ಲಿ ಶದಾಬ್‌ ಖಾನ್‌ 12 ಎಸೆತಗಳಲ್ಲಿ 30 ರನ್‌ ಸಿಡಿಸಿದ್ದರು.

NZ vs UAE: ಟಿಮ್‌ ಸೀಫರ್ಟ್‌-ಫಿನ್‌ ಆಲೆನ್‌ ಅಬ್ಬರ, ಯುಎಇ ಎದುರು ನ್ಯೂಜಿಲೆಂಡ್‌ಗೆ ದಾಖಲೆಯ ಜಯ!

ಸಹಿಬ್ದಾಝಾ ಫರ್ಹಾನ್‌ ಸ್ಪೋಟಕ ಅರ್ಧಶತಕ

ಪಾಕಿಸ್ತಾನ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಸಹಿಬ್ದಾಝಾ ಫರ್ಹಾನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಸೈಯಮ್‌ ಆಯುಬ್‌ ಅವರ ಜತೆಗೆ ಮೊದಲನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಅಲ್ಲದೆ ಬಾಬರ್‌ ಆಝಮ್‌ ಅವರ ಜೊತೆಗೆ 52 ಎಸೆತಗಳಲ್ಲಿ 81 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಬಾಬರ್‌ ಆಝಮ್‌ ಈ ಪಂದ್ಯದಲ್ಲಿ ಗಮನ ಸೆಳೆದರು. ಅವರು ಆಡಿದ 32 ಎಸೆತಗಳಲ್ಲಿ 46 ರನ್‌ಗಳನ್ನು ಕಲೆ ಹಾಕಿದ್ದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಫರ್ಹಾನ್‌, 41 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 73 ರನ್‌ಗಳನ್ನು ಸಿಡಿಸಿ ವಿಕೆಟ್‌ ಒಪ್ಪಿಸಿದರು.

ಇನ್ನು ಕೊನೆಯ ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಶದಾಬ್‌ ಖಾನ್‌, ಕೇವಲ 12 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 30 ರನ್‌ ಸಿಡಿಸಿದ್ದರು. ಆ ಮೂಲಕ ಪಾಕಿಸ್ತಾನ ತಂಡ 190ರ ಸನಿಹ ತಲುಪಿಸುವಲ್ಲಿ ನೆರವು ನೀಡಿದರು. ಯುಎಸ್‌ಎ ಪರ ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್ 25 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.