ಭಾರತ ಪ್ರಶಸ್ತಿ ಗೆಲ್ಲಲು ಆಡುತ್ತಿದ್ದರೆ, ಪಾಕಿಸ್ತಾನ ಹಣಕ್ಕಾಗಿ ಆಡುತ್ತಿದೆ: ಮೊಹಮ್ಮದ್ ಹಫೀಝ್ ಆರೋಪ!
Champions Trophy 2025: ಪಾಕಿಸ್ತಾನ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯುತ್ತಿರುವ ವೇಳೆ ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಝ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತ ತಂಡ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಆಡುತ್ತಿದೆ ಆದರೆ, ನಮ್ಮ ತಂಡ ಪಾಕಿಸ್ತಾನ ಹಣಕ್ಕಾಗಿ ಆಡುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಮೊಹಮ್ಮದ್ ಹಫೀಝ್ ವಿವಾದಾತ್ಮಕ ಆರೋಪ.

ನವದೆಹಲಿ: ಪ್ರಸ್ತುತ ಪಾಕಿಸ್ತಾನ ಆತಿಥ್ಯದಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡುತ್ತಿದೆ ಹಾಗೂ ಫೈನಲ್‌ಗೆ ಪ್ರವೇಶ ಮಾಡಿದೆ. ಆದರೆ, ಆತಿಥೇಯ ಪಾಕಿಸ್ತಾನ ತಂಡ ತವರು ನೆಲದಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಟೂರ್ನಿಯ ಲೀಗ್ ಹಂತದಿಂದಲೇ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ವಿರುದ್ದ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಇದೀಗ ಇದೀಗ ಪಾಕ್ ಮಾಜಿ ನಾಯಕ ಮೊಹಮ್ಮದ್ ಹಫೀಝ್ ಅವರು, ತಮ್ಮ ತಂಡ ಪಾಕಿಸ್ತಾನದ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.
ಒಂದೆಡೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಬಲವಾದ ಪ್ರದರ್ಶನದ ಆಧಾರದ ಮೇಲೆ ಫೈನಲ್ ತಲುಪಿದೆ, ಮತ್ತೊಂದೆಡೆ, ಅವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ದುಬೈನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡುವುದರಿಂದ ಭಾರತೀಯ ತಂಡಕ್ಕೆ ಅನುಕೂಲವಾಗುತ್ತಿದೆಯೇ ಎಂಬ ಬಗ್ಗೆ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಪ್ರಶ್ನೆಗಳನ್ನು ಎತ್ತಿದ್ದಾರೆ. ಐಸಿಸಿಯಿಂದ ಟೀಮ್ ಇಂಡಿಯಾಗೆ ಲಾಭ ಸಿಗುತ್ತದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಇದರ ನಡುವೆ ಪಾಕ್ ಮಾಜಿ ನಾಯಕ ಮೊಹಮ್ಮದ್ ಹಫೀಝ್, ಪಾಕಿಸ್ತಾನ ತಂಡ ಪ್ರಶಸ್ತಿ ಗೆಲ್ಲಲು ಟೂರ್ನಿಯಲ್ಲಿ ಆಡಿರಲಿಲ್ಲ. ಇದರ ಬದಲು ಹಣ ಮಾಡಲು ಆಡಿತ್ತು ಎಂದು ಆರೋಫ ಮಾಡಿದ್ದಾರೆ.
IND vs NZ Final: ನ್ಯೂಜಿಲೆಂಡ್ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
ದಕ್ಷಿಣ ಆಫ್ರಿಕಾ ಆರ್ಥಿಕವಾಗಿ ಬಲಿಷ್ಠವಾಗಿಲ್ಲ
"ನಾನು 2021ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದೆ ಮತ್ತು ಅವರು ತಮ್ಮ ಆಟಗಾರರನ್ನು ಐಪಿಎಲ್‌ಗೆ ಕಳುಹಿಸಿದರು. ಅವರು ಆರ್ಥಿಕವಾಗಿ ಬಲಿಷ್ಠವಾಗಿಲ್ಲ . ಅವರಿಗೆ ಹಣ ಬೇಕು. ಅವರು ತಮ್ಮ ಸಿ ತಂಡವನ್ನು ಪಾಕಿಸ್ತಾನದ ವಿರುದ್ಧ ಆಡಿಸಿದರು. ನಂತರ, ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ತಮ್ಮ ಆಟಗಾರರನ್ನು ಐಪಿಎಲ್‌ಗೆ ಕಳುಹಿಸಿದರು. ದಕ್ಷಿಣ ಆಫ್ರಿಕಾ20 ಟೂರ್ನಿಯನ್ನು ಹಣ ಮಾಡುವ ಯಂತ್ರದಂತೆ ಪರಿಗಣಿಸಲು ಪ್ರಾರಂಭಿಸಿದರು. ಈ ಟೂರ್ನಿಯಲ್ಲಿ ರಾಜಿ ಮಾಡಿಕೊಳ್ಳಲು ಅವರು ಬಯಸುವುದಿಲ್ಲ. ಇದು ಅವರ ನೀತಿ," ಎಂದು ಮೊಹಮ್ಮದ್ ಹಫೀಝ್ ತಿಳಿಸಿದ್ದಾರೆ.
ಹಣ ಗಳಿಸುವ ಅಗತ್ಯವಿದ್ದ ಕಾರಣ ಪಿಸಿಬಿ ಐಸಿಸಿ ಟೂರ್ನಮೆಂಟ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಒಪ್ಪಿಕೊಂಡಿತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಮೂಲಕ ಪಾಕಿಸ್ತಾನ ಹಣ ಗಳಿಸಿದೆ. ಆದರೆ ಭಾರತದ ವಿಷಯದಲ್ಲಿ ಹಾಗಲ್ಲ, ಏಕೆಂದರೆ ಭಾರತೀಯ ಮಂಡಳಿಯು ಆರ್ಥಿಕವಾಗಿ ಬಲಿಷ್ಠವಾಗಿದ್ದು, ಟೂರ್ನಿಯನ್ನು ಗೆಲ್ಲಲು ಯೋಜಿಸುತ್ತಿದೆ ಎಂದಿದ್ದಾರೆ ಮೊಹಮ್ಮದ್ ಹಫೀಝ್.
IND vs NZ final: ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ
ಪಾಕಿಸ್ತಾನ ಹಣಕ್ಕಾಗಿ ಆಡುತ್ತಿದೆ
"ಹೈಬ್ರಿಡ್ ಮಾದರಿಯಿಂದ ನಮಗೆ ಹಣ ಬಿಟ್ಟರೆ ಬೇರೇನೂ ಸಿಗಲಿಲ್ಲ. ಹಾಗಾಗಿ ನಾವು ಸ್ವಲ್ಪ ಹಣ ಗಳಿಸಲು ಪ್ರಯತ್ನಿಸಿದೆವು. ಆ ಹಣ ನಮ್ಮದು, ನಾವೇ ತೆಗೆದುಕೊಂಡೆವು. ದಕ್ಷಿಣ ಆಫ್ರಿಕಾ ಕೂಡ. ಆದರೆ ಗೆಲ್ಲಲು ಆಡುತ್ತಿರುವುದು ಭಾರತ ತಂಡ. ಗೆಲ್ಲಲು ಆಡುತ್ತಿರುವ ತಂಡ ಭಾರತ. ಅವರು ಐಸಿಸಿ ಟ್ರೋಫಿ ಗೆಲ್ಲಲು ಯೋಜಿಸುತ್ತಿದ್ದಾರೆ. ಅವರು ನಮಗೆ ಮಾಡಿದ ಉಪಕಾರಗಳನ್ನು ಮರಳಿ ಪಡೆಯುವ ಬಗ್ಗೆ ನಾವು ಬಹಳಷ್ಟು ಮಾತನಾಡುತ್ತೇವೆ. ಅವರು ಯಾರಿಂದಲೂ ಯಾವುದೇ ಔದಾರ್ಯವನ್ನು ಪಡೆಯುತ್ತಿಲ್ಲ. ಭಾರತ ಏನೇ ಗಳಿಸಿದರೂ ಅದು ಅವರು ಆಡುವ ಕ್ರಿಕೆಟ್‌ನ ಗುಣಮಟ್ಟದಿಂದಾಗಿ," ಎಂದು ಮೊಹಮ್ಮದ್ ಹಫೀಝ್ ಹೇಳಿದ್ದಾರೆ.