ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶ್ರೇಯಸ್‌ ಅಯ್ಯರ್‌ಗೆ ಏಕೆ ಅವಕಾಶ ನೀಡಿಲ್ಲ? ಗೌತಮ್‌ ಗಂಭೀರ್‌ಗೆ ಆಕಾಶ್‌ ಚೋಪ್ರಾ ಪ್ರಶ್ನೆ!

ನ್ಯೂಜಿಲೆಂಡ್‌ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ಪ್ರಶ್ನೆ ಮಾಡಿದ್ದಾರೆ. ಅಂದ ಹಾಗೆ ಗಾಯಾಳು ಇಶಾನ್‌ ಕಿಶನ್‌ ಅವರ ಬದಲು ವಿಶಾಖಪಟ್ಟಣಂನಲ್ಲಿ ಅರ್ಷದೀಪ್‌ ಸಿಂಗ್‌ಗೆ ಸ್ಥಾನವನ್ನು ನೀಡಲಾಗಿತ್ತು.

ಶ್ರೇಯಸ್‌ ಅಯ್ಯರ್‌ಗೆ ಏಕೆ ಅವಕಾಶ ನೀಡಲ್ಲ? ಆಕಾಶ್‌ ಚೋಪ್ರಾ!

ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ಆಕಾಶ್‌ ಚೋಪ್ರಾ ಪ್ರಶ್ನೆ. -

Profile
Ramesh Kote Jan 29, 2026 7:22 PM

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ಟಿ20ಐ ಸರಣಿಯ (IND vs NZ) ನಾಲ್ಕೂ ಪಂದ್ಯಗಳಲ್ಲಿ ಶ್ರೇಯಸ್‌ ಅಯ್ಯರ್‌ (Shreyas Iyer) ಅವರಿಗೆ ಆಡಲು ಅವಕಾಶ ನೀಡದ ಬಗ್ಗೆ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ (Aakash chopra) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜನವರಿ 28 ರಂದು ವಿಶಾಖಪಟ್ಟಣಂನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಇಶಾನ್‌ ಕಿಶನ್‌ ಗಾಯದ ಕಾರಣ ಆಡಲಿಲ್ಲ. ಇವರ ಬದಲು ಯುವ ವೇಗಿ ಅರ್ಷದೀಪ್‌ ಸಿಂಗ್‌ಗೆ ಅವಕಾಶವನ್ನು ನೀಡಲಾಯಿತು. ಇದನ್ನು ಕ್ರಿಕೆಟ್‌ ನಿರೂಪಕ ಆಕಾಶ್‌ ಚೋಪ್ರಾ ಪ್ರಶ್ನೆ ಮಾಡಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, ಈ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್‌ ಅವರನ್ನು ಆಡಿಸುವ ಯೋಜನೆ ಭಾರತ ತಂಡಕ್ಕೆ ಇಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಇವರ ಬದಲು ಕಡಿಮೆ ಅನುಭವವನ್ನು ಹೊಂದಿರುವ ಶಹಬಾಝ್‌ ಅಹ್ಮದ್‌ ಅಥವಾ ಆಯುಷ್‌ ಬದೋನಿ ಅವರನ್ನು ಅಯ್ಕೆ ಮಾಡಬಹುದಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs NZ: ಟಿ20ಐ ಪಂದ್ಯದಲ್ಲಿ ಗೋಲ್ಡನ್‌ ಡಕ್‌ಔಟ್‌ ಆದ ಭಾರತದ ಟಾಪ್‌ 5 ಬ್ಯಾಟರ್ಸ್‌!

"ನನ್ನ ದೊಡ್ಡದಾದ ಅಂಶವೇನೆಂದರೆ, ಶ್ರೇಯಸ್‌ ಅಯ್ಯರ್‌ ಅವರನ್ನು ತಂಡದಲ್ಲಿ ಏಕೆ ಇಟ್ಟುಕೊಂಡಿದ್ದೀರಿ?ತಿಲಕ್‌ ವರ್ಮಾ ಅವರು ಗಾಯಕ್ಕೆ ತುತ್ತಾದ ಬಳಿಕ, ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಬಾರದಿತ್ತು ಎಂದು ಹೇಳಿದವರ ಪೈಕಿ ನಾನು ಕೂಡ ಒಬ್ಬ ವ್ಯಕ್ತಿ, ಆದರೆ ಅವರ ಹೆಸರು ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ ಇಲ್ಲ. ಇಶಾನ್‌ ಕಿಶನ್‌ ಗಾಯಕ್ಕೆ ತುತ್ತಾದ ಬಳಿಕ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಹೊರಗಡೆ ಉಳಿಯಬಾರದಿತ್ತು," ಎಂದು ಹೇಳಿದ್ದಾರೆ.

ಶ್ರೇಯಸ್‌ ಅಯ್ಯರ್‌ಗೆ ಏಕೆ ಅವಕಾಶ ನೀಡಿಲ್ಲ?

"ಆರಂಭಿಕ ಯೋಜನೆಯಲ್ಲಿ ಶ್ರೇಯಸ್‌ ಅಯ್ಯರ್‌ ಅವರು ಇರಲಿಲ್ಲ, ಹರ್ಷಿತ್‌ ರಾಣಾ ಅವರನ್ನು 7ನೇ ಕ್ರಮಾಂಕದಲ್ಲಿ ಆಡುತ್ತಿದ್ದರೆ, ನೀವು ಏಳು ಮಂದಿ ಬ್ಯಾಟ್ಸ್‌ಮನ್‌ಗಳು ಹಾಗೂ ಐವರು ಬೌಲರ್‌ಗಳನ್ನು ಆಡಿಸಬಾರದು. ಶ್ರೇಯಸ್‌ ಅಯ್ಯರ್‌ ಅವರನ್ನು ಬೆಂಚ್‌ ಏಕೆ ಕಾಯಿಸುತ್ತಿದ್ದೀರಿ?ಎಂದು ನಾನು ಧೈರ್ಯವಾಗಿ ಪ್ರಶ್ನೆ ಮಾಡುತ್ತೇನೆ. ಏಕೆ ಅವರನ್ನು ಆಡಿಸಿಲ್ಲ? ಅಂದ ಹಾಗೆ ಇವರ ಬದಲು ಆಯುಷ್‌ ಬದೋನಿ ಅಥವಾ ಶಹಬಾಝ್‌ ಅಹ್ಮದ್‌ ಅವರನ್ನು ಆಡಿಸಬಹುದಿತ್ತು. ನೀವು ಆಡಿಸಬಹುದಾದ ಇನ್ನೂ ನಾಲ್ವರು ಆಟಗಾರರ ಹೆಸರನ್ನು ನಾನು ತೆಗೆದುಕೊಳ್ಳುತ್ತೇನೆ," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

IND vs NZ:ʻಫುಟ್‌ವರ್ಕ್‌ ಸರಿಯಿಲ್ಲʼ-ಸಂಜು ಸ್ಯಾಮ್ಸನ್‌ ವಿರುದ್ಧ ಗುಡುಗಿದ ಸುನೀಲ್‌ ಗವಾಸ್ಕರ್‌!

ಶ್ರೇಯಸ್‌ ಅಯ್ಯರ್‌ ಒಂದು ಪಂದ್ಯದಲ್ಲಿ ರನ್‌ ಗಳಿಸಿದರೆ ಸಮಸ್ಯೆ ಇಲ್ಲ

"ಶ್ರೇಯಸ್‌ ಅಯ್ಯರ್‌ ಅವರನ್ನು ಆಡಿಸಲು ನಿಮಗೆ ನಾಲ್ಕನೇ ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತು. ಅವರು ರನ್‌ಗಳನ್ನು ಗಳಿಸಿದರೆ, ಸೋಶಿಯಲ್‌ ಮೀಡಿಯಾದಲ್ಲಿ ಗದ್ದಲ ಉಂಟಾಗುತ್ತದೆ ಎಂದು ನೀವು ಭಾವಿಸಬಹುದು. ಆದರೆ, ಇದು ನಡೆಯಲು ನೀವು ಬಿಡಿ. ನಿಮ್ಮ ಕೆಲಸ ಏನೆಂದರೆ, ತಂಡದಲ್ಲಿ ಕನಿಷ್ಠ ಏಳು ಮಂದಿ ಬ್ಯಾಟ್ಸ್‌ಮನ್‌ಗಳನ್ನು ಆಡಿಸುವುದು. ಎಂಟನೇ ಕ್ರಮಾಂಕದಲ್ಲಿ ನಿಮಗೆ ಆಲ್‌ರೌಂಡರ್‌ನ ಅಗತ್ಯವಿದೆ. ಕನಿಷ್ಠ ಪಕ್ಷ ನೀವು ಆ ತತ್ವಶಾಸ್ತ್ರವನ್ನು ಬದಲಿಸಬೇಡಿ," ಎಂದು ಕ್ರಿಕೆಟ್‌ ನಿರೂಪಕ ಸಲಹೆ ನೀಡಿದ್ದಾರೆ.

ಟಿ20 ವಿಶ್ವಕಪ್‌ಗೂ ಮುನ್ನ ಭಾರತದ ದೊಡ್ಡ ಸವಾಲು ತೋರಿಸಿದ ರೋಹಿತ್ ಶರ್ಮಾ

ಶ್ರೇಯಸ್‌ ಅಯ್ಯರ್‌ರನ್ನು ಬೆಂಚ್‌ ಕಾಯಿಸಲು ಯಾವುದೇ ಕಾರಣವಿಲ್ಲ

"ಶ್ರೇಯಸ್‌ ಅಯ್ಯರ್‌ ಅವರನ್ನು ಈ ರೀತಿ ಬೆಂಚ್‌ ಕಾಯಿಸಬೇಡಿ. ಅವನನ್ನು ಬೆಂಚ್ ಮಾಡುವ ನಿರ್ಧಾರ ಸಂಪೂರ್ಣವಾಗಿ ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಅವರನ್ನು ಹೊರಗೆ ಕೂರಿಸಲು ನಿರ್ಧರಿಸಿದ್ದರೆ, ಅವರನ್ನು ಮನೆಗೆ ಕಳುಹಿಸಿ. ಅವರು ಹೋಗಿ ಬೇರೆ ಏನಾದರೂ ಆಡಲು ಬಿಡಿ. ಅವರು ಇಲ್ಲಿರುವ ತರ್ಕವನ್ನು ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ," ಎಂದು ಚೋಪ್ರಾ ಕಿಡಿ ಕಾದಿದ್ದಾರೆ.