WPL 2026: ಯುಪಿ ವಾರಿಯರ್ಸ್ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಆರ್‌ಸಿಬಿ ವನಿತೆಯರು!
RCBW vs UPW Match Highlights: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಜಯ ದಾಖಲಿಸಿತು. ಆ ಮೂಲಕ ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ವನಿತೆಯರು ಫೈನಲ್‌ಗೆ ಪ್ರವೇಶ ಮಾಡಿದರು.
ಯುಪಿ ವಾರಿಯರ್ಸ್ ಎದುರು ಗೆದ್ದು ಫೈನಲ್‌ಗೆ ಪ್ರವೇಶಿಸಿದ ಆರ್‌ಸಿಬಿ. -
ವಡೋದರ: ನಡಿನ್ ಡಿ ಕ್ಲರ್ಕ್ ಮಾರಕ ಬೌಲಿಂಗ್ ಹಾಗೂ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನಾ ಅವರ ಅರ್ಧಶತಕಗಳ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCBW) ತಂಡ, ಯುಪಿ ವಾರಿಯರ್ಸ್ (UPW) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (WPL 2026) ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಖಚಿತಪಡಿಸಿಕೊಂಡು ಫೈನಲ್‌ಗೆ ಅಧಿಕೃತವಾಗಿ ಲಗ್ಗೆ ಇಟ್ಟಿತು. ಇನ್ನು ಸೋಲು ಅನುಭವಿಸಿದ ಮೆಗ್ ಲ್ಯಾನಿಂಗ್ ನಾಯಕತ್ವದ ಯುಪಿ ವಾರಿಯರ್ಸ್ ತಂಡದ ನಾಕೌಟ್ ಹಾದಿ ಕಠಿಣವಾಗಿದೆ.
ಗುರುವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ನೀಡಿದ್ದ 144 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಮಹಿಳಾ ತಂಡ, ಗ್ರೇಸ್ ಹ್ಯಾರಿಸ್ ಹಾಗೂ ಸ್ಮೃತಿ ಮಂಧಾನಾ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ13.1 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಎಂಟು ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಕೊನೆಯ ಎರಡು ಪಂದ್ಯಗಳನ್ನು ಸತತವಾಗಿ ಸೋತಿದ್ದ ಬೆಂಗಳೂರು ತಂಡ, ಇದೀಗ ಗೆಲುವಿನ ಲಯಕ್ಕೆ ಮರಳಿದೆ. ಆ ಮೂಲಕ ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 12 ಅಂಕಗಳೊಂದಿಗೆ ಫೈನಲ್‌ಗೆ ಪ್ರವೇಶ ಮಾಡಿದೆ. ಫೆಬ್ರವರಿ 5 ರಂದು ಇದೇ ಅಂಗಣದಲ್ಲಿ ಆರ್‌ಸಿಬಿ, ಫೈನಲ್ ಪಂದ್ಯವನ್ನು ಆಡಲಿದೆ.
ಶ್ರೇಯಸ್ ಅಯ್ಯರ್‌ಗೆ ಏಕೆ ಅವಕಾಶ ನೀಡಿಲ್ಲ? ಗೌತಮ್ ಗಂಭೀರ್‌ಗೆ ಆಕಾಶ್ ಚೋಪ್ರಾ ಪ್ರಶ್ನೆ!
ಸ್ಮೃತಿ ಮಂಧಾನಾ-ಗ್ರೇಸ್ ಹ್ಯಾರಿಸ್ ಜುಗಲ್‌ಬಂದಿ
144 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇನಿಂಗ್ಸ್ ಆರಂಭಿಸಿದ ಗ್ರೇಸ್ ಹ್ಯಾರಿಸ್ ಹಾಗೂ ನಾಯಕಿ ಸ್ಮೃತಿ ಮಂಧಾನಾ ಅವರು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಯುಪಿ ಬೌಲರ್‌ಗಳ ಎದುರು ಅಬ್ಬರಿಸಿದ ಈ ಜೋಡಿ ಮೊದಲನೇ ವಿಕೆಟ್‌ಗೆ 108 ರನ್‌ಗಳನ್ನು ಕಲೆ ಹಾಕಿತು. ಸ್ಪೋಟಕ ಬ್ಯಾಟ್ ಮಾಡಿದ ಗ್ರೇಸ್ ಹ್ಯಾರಿಸ್, ಕೇವಲ 37 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 75 ರನ್‌ಗಳನ್ನು ಸಿಡಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಕೊನೆಯವರೆಗೂ ಅಜೇಯರಾಗಿ ಕ್ರೀಸ್‌ನಲ್ಲಿ ಉಳಿದ ನಾಯಕಿ ಸ್ಮೃತಿ ಮಂಧಾನಾ, 27 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಎಂಟು ಬೌಂಡರಿಗಳೊಂದಿಗೆ ಅಜೇಯ 54 ರನ್‌ಗಳನ್ನು ಬಾರಿಸಿದರು.
Presenting the first finalist of #TATAWPL 2026 🥳
— Women's Premier League (WPL) (@wplt20) January 29, 2026
Make way for the @RCBTweets ❤️#KhelEmotionKa | #UPWvRCB pic.twitter.com/qXkTOUJzIk
143 ರನ್‌ಗಳನ್ನು ಕಲೆ ಹಾಕಿದ್ದ ಯುಪಿ ವಾರಿಯರ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಯುಪಿ ವಾರಿಯರ್ಸ್ ತಂಡ, ಭರ್ಜರಿ ಆರಂಭ ಪಡೆದ ಹೊರತಾಗಿಯೂ, ನಡಿನ್ ಡಿ ಕ್ಲರ್ಕ್ ಬೌಲಿಂಗ್ ದಾಳಿಗೆ ನಲುಗಿತು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 143 ರನ್‌ಗಳಿಗೆ ಶಕ್ತವಾಯಿತು. ಆ ಮೂಲಕ ಎದುರಾಳಿ ಆರ್‌ಸಿಬಿ ವನಿತೆಯರಿಗೆ 144 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಯುಪಿ ಪರ ಆರಂಭಿಕ ಬ್ಯಾಟರ್‌ಗಳಾದ ದೀಪ್ತಿ ಶರ್ಮಾ ಹಾಗೂ ಮೆಗ್ ಲ್ಯಾನಿಂಗ್ ಕ್ರಮವಾಗಿ 55 ರನ್ ಹಾಗೂ 41 ರನ್‌ಗಳನ್ನು ಗಳಿಸಿದ್ದು ಬಿಟ್ಟರೆ ಇನ್ನುಳಿದ ಆಟಗಾರ್ತಿಯರು ವಿಫಲರಾದರು.
Impact with the ball 👊
— Women's Premier League (WPL) (@wplt20) January 29, 2026
Blitz with the bat 💪
Grace Harris is named the Player of the Match 🏅
Relive her knock ▶️ https://t.co/Yrav1FEB97 #TATAWPL | #KhelEmotionKa | #UPWvRCB pic.twitter.com/9HY3PR2cbA
ದೀಪ್ತಿ ಶರ್ಮಾ ಅರ್ಧಶತಕ
ಯುಪಿ ಪರ ಇನಿಂಗ್ಸ್ ಆರಂಭಿಸಿದ ಮೆಗ್ ಲ್ಯಾನಿಸ್ ಹಾಗೂ ದೀಪ್ತಿ ಶರ್ಮಾ ಅವರು ಆರಂಭದಲ್ಲಿ ಅಬ್ಬರಿಸಿದ್ದರು. ಇವರು ಆರಂಭಿಕ ವಿಕೆಟ್‌ಗೆ 8.1 ಓವರ್‌ಗಳಿಗೆ 74 ರನ್ ಗಳಿಸಿ ಯುಪಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಈ ವೇಳೆ ಯುಪಿ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನಡಿನ್ ಡಿ ಕ್ಲರ್ಕ್, 41 ರನ್ ಗಳಿಸಿ ಆಡುತ್ತಿದ್ದ ಮೆಗ್ ಲ್ಯಾನಿಂಗ್ ಅವರನ್ನು 9ನೇ ಓವರ್ ಮೊದಲನೇ ಎಸೆತದಲ್ಲಿ ಔಟ್ ಮಾಡಿದರು. ಇದಾದ ಬಳಿಕ ಆರ್‌ಸಿಬಿಗೆ ಟರ್ನಿಂಗ್ ಪಾಯಿಂಟ್ ಲಭಿಸಿತು.
Stylish 👌#RCB Captain Smriti Mandhana with an unbeaten knock of 5⃣4⃣(27) to guide her team to the #Final 👏👏
— Women's Premier League (WPL) (@wplt20) January 29, 2026
Updates ▶️ https://t.co/IgbbgWV0xt #TATAWPL | #KhelEmotionKa | #UPWvRCB | @mandhana_smriti pic.twitter.com/21oH9o92wa
ನಡಿನ್ ಡಿ ಕ್ಲರ್ಕ್‌ಗೆ 4 ವಿಕೆಟ್
ಮತ್ತೊಂದು ತುದಿಯಲ್ಲಿ ಯುಪಿ ವಾರಿಯರ್ಸ್ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದರೆ, ಮತ್ತೊಂದು ತುದಿಯಲ್ಲಿ ದೀಪ್ತಿ ಶರ್ಮಾ 19ನೇ ಓವರ್ ತನಕ ಬ್ಯಾಟ್ ಮಾಡಿದ್ದರು. ಅವರು ಆಡಿದ 43 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 55 ರನ್‌ಗಳನ್ನು ಗಳಿಸಿ, ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು. ಆರ್‌ಸಿಬಿ ಪರ ನಡಿನ್ ಡಿ ಕ್ಲರ್ಕ್ ನಾಲ್ಕು ಓವರ್‌ಗಳಿಗೆ 22 ರನ್ ನೀಡಿ 4 ವಿಕೆಟ್ ಕಿತ್ತರು. ಗ್ರೇಸ್ ಹ್ಯಾರಿಸ್ ಬೌಲಿಂಗ್‌ನಲ್ಲಿಯೂ ಎರಡು ವಿಕೆಟ್ ಕಿತ್ತರು.