2027ರ ಏಕದಿನ ವಿಶ್ವಕಪ್‌ಗೆ ಕೊಹ್ಲಿ, ರೋಹಿತ್ ಅನುಮಾನ ಎಂದವರಿಗೆ ಕ್ಲಾಸ್ ತೆಗೆದುಕೊಂಡ ಆರ್ ಅಶ್ವಿನ್!
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದರ ಬಗ್ಗೆ ಅನುಮಾನವನ್ನು ವ್ಯಕ್ತಪಡಸಿದವೃ ವಿರುದ್ಧ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಕಿಡಿಕಾರಿದ್ದಾರೆ. ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಈ ಇಬ್ಬರೂ ಕೀ ಆಟಗಾರರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಆರ್ ಅಶ್ವಿನ್ ಬೆಂಬಲ. -
ನವದೆಹಲಿ: ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ(Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಬೆಂಬಲಿಸಿದ್ದಾರೆ. ಈ ಇಬ್ಬರ ಬಗ್ಗೆ ಅನುಮಾನ ವ್ಯಕ್ತಪಡಿಸಿದವರ ವಿರುದ್ಧವೂ ಸ್ಪಿನ್ ದಂತಕತೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂದಿನ ಏಕದಿನ ವಿಶ್ವಕಪ್ ಟೂರ್ನಿಗೆ ಈ ಇಬ್ಬರೂ ಕೀ ಆಟಗಾರರು ಎಂದು ಹೇಳಿದ್ದಾರೆ. ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಕೊಹ್ಲಿ, ರೋಹಿತ್ 50 ಓವರ್‌ಗಳ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ ಹಾಗೂ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಕೂಡ ಮುಂದುವರಿಸಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ತಮ್ಮ-ತಮ್ಮ ಪಾತ್ರಗಳ ಬಗ್ಗೆ ಸ್ಪಷ್ಟತೆಯನ್ನು ಟೀಮ್ ಮ್ಯಾನೇಜ್‌ಮೆಂಟ್ ಅತಿ ಶೀಘ್ರದಲ್ಲಿಯೇ ನೀಡಲಿದೆ. ಮುಂದುವರಿದು ಮಾತನಾಡಿದ ಅವರು, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ನಾಯಕರಾದ ರೋಹಿತ್ ಮತ್ತು ಕೊಹ್ಲಿ ಅವರ ಸೇವೆ ತಂಡಕ್ಕೆ ಅಗತ್ಯವೆಂದು ಟೀಮ್ ಮ್ಯಾನೇಜ್‌ಮೆಂಟ್ ಭಾವಿಸಿದರೆ, ಈ ಮಹತ್ವದ ಟೂರ್ನಿಗೂ ಮುನ್ನ ಅವರಿಗೆ ಆರಾಮದಾಯಕ ಮತ್ತು ಒತ್ತಡರಹಿತ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.
ಶುಭಮನ್ ಗಿಲ್ ಹುಟ್ಟು ನಾಯಕರಲ್ಲ, ಕಲಿಯುವುದು ಸಾಕಷ್ಟಿದೆ: ಮನೋಜ್ ತಿವಾರಿ!
"ರೋಹಿತ್ ಅಥವಾ ವಿರಾಟ್ ಬಗ್ಗೆ ನಡೆಯುತ್ತಿರುವ ಈ ಊಹಾಪೋಹಗಳು ಒಳ್ಳೆಯದಲ್ಲ. ನಿಜ ಹೇಳಬೇಕೆಂದರೆ, ಈ ಊಹಾಪೋಹಗಳು ಎಲ್ಲಿಂದ ಬರುತ್ತವೆ? ಎಲ್ಲೋ, ಯಾರೋ... ಇವರಿಬ್ಬರೂ ವಿಶ್ವಕಪ್ ಟೂರ್ನಿಗೆ ಹೋಗಬಾರದು ಎಂದು ಯೋಚಿಸುತ್ತಿದ್ದಾರೆ. ಆ ಜನರು ಯಾರು ಎಂಬುದು ನನಗೆ ತಿಳಿದಿಲ್ಲ. ಕೆಲವರಿಗೆ ಅವರ ಬಗ್ಗೆ ಅನುಮಾನಗಳಿರಬಹುದು, ಮತ್ತೊಬ್ಬರು ಅವರನ್ನು ತಂಡದಲ್ಲಿ ನೋಡಲು ಬಯಸಬಹುದು. ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಏನೆಂದರೆ, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್‌ಟೂರ್ನಿಯಲ್ಲಿ ಅನುಭವಿ ಬ್ಯಾಟರ್‌ಗಳ ಅಗತ್ಯ ಭಾರತಕ್ಕೆ ಖಂಡಿತವಾಗಿಯೂ ಇದೆ," ಎಂದು ಅಶ್ವಿನ್ ತಮ್ಮ ಇತ್ತೀಚಿನ ಯೂಟ್ಯೂಬ್ ವಿಡಿಯೊದಲ್ಲಿ ಹೇಳಿದ್ದಾರೆ.
"ಅವರಿಬ್ಬರನ್ನು ತಂಡದಲ್ಲಿ ಬೇಕೆಂದು ನೀವು ಭಾವಿಸಿದರೆ, ಈಗಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಿ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಅವರು ಸಂಪೂರ್ಣವಾಗಿ ಆರಾಮದಾಯಕ ಮತ್ತು ಆತ್ಮವಿಶ್ವಾಸದಿಂದ ಇರಲು ಸಹಾಯ ಮಾಡಿ. ಈಗ ನಿರ್ಧಾರ ತೆಗೆದುಕೊಳ್ಳದಿದ್ದರೆ ಸಮಸ್ಯೆಯಾಗುತ್ತದೆ. ಏಕೆಂದರೆ ಒಂದು ಅಥವಾ ಎರಡು ವೈಫಲ್ಯಗಳ ನಂತರ ಇದೇ ಚರ್ಚೆ ಮತ್ತೆ-ಮತ್ತೆ ಮರುಕಳಿಸುತ್ತಲೇ ಇರುತ್ತದೆ," ಎಂದು ಅವರು ಬಿಸಿಸಿಐಗೆ ಸಲಹೆ ನೀಡಿದ್ದಾರೆ.
IND vs IRE: ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಸ್ಥಾನಕ್ಕೆ ಸುರ್ಯಾಂಶ್ ಶೆಡ್ಗೆಗೆ ಸ್ಥಾನ!
ಕಳೆದ ವಾರ ಅಫ್ಘಾನಿಸ್ತಾನ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲಿ ಭಾರತ ತಂಡ 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧಿಸಿದಾಗ, ರೋಹಿತ್ ಶರ್ಮಾ ತಂಡದ ಭಾಗವಾಗಿದ್ದರು. ಆದರೆ, ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣದಿಂದ ವಿರಾಟ್ ಕೊಹ್ಲಿ ಆ ಸರಣಿಯಿಂದ ಹೊರಗುಳಿದಿದ್ದರು.
ಭಾರತದ ಮುಂದಿನ ಏಕದಿನ ಸರಣಿ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಈ ಸರಣಿಗೆ ರೋಹಿತ್ ಮತ್ತು ಕೊಹ್ಲಿ ಇಬ್ಬರನ್ನೂ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಆದರೆ, ಕೊಹ್ಲಿಯ ಭಾಗವಹಿಸುವಿಕೆ ಅವರು ಸರಣಿ ಆರಂಭಕ್ಕೂ ಮುನ್ನ ಸಂಪೂರ್ಣ ಫಿಟ್‌ನೆಸ್ ಮರಳಿ ಪಡೆಯುತ್ತಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.