RCB vs DC ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಜತೆ ಆತ್ಮೀಯ ಸಂಭಾಷಣೆ ನಡೆಸಿದ್ದ ಅಂಪೈರ್ ಯಾರು ಗೊತ್ತೆ?
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಪಡೆದ ಬಳಿಕ ವಿರಾಟ್ ಕೊಹ್ಲಿ ಹಾಗೂ ಅಂಪೈರ್ ನಡುವೆ ತುಸು ಹೊತ್ತು ಆತ್ಮೀಯ ಸಂಭಾಷಣೆ ನಡೆದಿತ್ತು. ಆ ಫೀಲ್ಡ್ ಅಂಪೈರ್ ಯಾರೆಂದು ತಿಳಿದದರೆ ನೀವು ಖಂಡಿತಾ ಅಚ್ಚರಿ ಪಡುತ್ತೀರಿ!
ವಿರಾಟ್ ಕೊಹ್ಲಿ ಅಂಡರ್-19 ಸಹ ಆಟಗಾರ ಇದೀಗ ಅಂಪೈರ್. -
ನವದೆಹಲಿ: ಏಪ್ರಿಲ್ 27 ರಂದು ಸೋಮವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್‌ಗಳಿಂದ ಹೀನಾಯವಾಗಿ ಸೋಲುಣಿಸಿತ್ತು. ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ (Virat Kohli), ಫೀಲ್ಡ್ ಅಂಪೈರ್ ಜೊತೆ ಕೆಲ ಕಾಲ ಆತ್ಮೀಯವಾಗಿ ಸಂಭಾಷಣೆ ನಡೆಸಿದ್ದರು. ಈ ವಿಡಿಯೊ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಅಂದ ಹಾಗೆ ವಿರಾಟ್ ಕೊಹ್ಲಿ ಜೊತೆ ಕೆಲಕಾಲ ಮಾತನಾಡಿದ್ದ ಅಂಪೈರ್ ಯಾರೆಂದು ನಿಮಗೆ ತಿಳಿದರೆ ಖಂಡಿತಾ ಅಚ್ಚರಿ ಪಡುತ್ತೀರಿ! ಅವರ ಯಾರೆಂದು ಈ ಸುದ್ದಿಯಲ್ಲಿ ವಿವರಿಸಲಾಗಿದೆ.
ಅಂದ ಹಾಗೆ ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಜಾಶ್ ಹೇಝಲ್‌ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕೇವಲ 8 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ ಅಭಿಷೇಕ್ ಪೊರೆಲ್ ಅವರ 30 ರನ್‌ಗಳಿಂದ 75 ರನ್ ಗಳಿಸಿದ ಬಳಿಕ ಡಿಸಿ ಆಲ್‌ಔಟ್ ಆಯಿತು. ಬಳಿಕ ಆರ್‌ಸಿಬಿ ಒಂದು ವಿಕೆಟ್ ನಷ್ಟಕ್ಕೆ ಸುಲಭವಾಗಿ ಗೆದ್ದು ಬೀಗಿತ್ತು. ವಿರಾಟ್ ಕೊಹ್ಲಿ ಅಜೇಯ 23 ರನ್ ಗಳಿಸಿದ್ದರು.
IPL 2206: ಪರಿಪರಿಯಾಗಿ ಕೇಳಿಕೊಂಡರೂ ಆಟೋಗ್ರಾಫ್ ನೀಡದ ವಿರಾಟ್ ಕೊಹ್ಲಿ, ಕಣ್ಣೀರಿಟ್ಟ ಪುಟಾಣಿ ಅಭಿಮಾನಿ! ವಿಡಿಯೊ
ಆರ್‌ಸಿಬಿ ತಂಡವನ್ನು ಗೆಲ್ಲಿಸಿದ ಬಳಿಕ ವಿರಾಟ್ ಕೊಹ್ಲಿ, ತಮ್ಮ ಅಂಡರ್-19 ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ಸಹ ಆಟಗಾರ ಅಜಿತೇಶ್ ಅರ್ಗಲ್ ಅವರ ಜೊತೆ ಕೆಲ ಕಾಲ ಆತ್ಮೀಯವಾಗಿ ಸಂಭಾಷಣೆ ನಡೆಸಿದ್ದರು. ಅಜಿತೀಶ್ ಅರ್ಗಲ್ ಅವರು ಸದ್ಯ 2026ರ ಐಪಿಎಲ್ ಟೂರ್ನಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆ ಸೋಮವಾರ ಡೆಲ್ಲಿ ಹಾಗೂ ಬೆಂಗಳೂರು ನಡುವಣ ಪಂದ್ಯದಲ್ಲಿಯೂ ಅಂಪೈರ್ ಆಗಿ ಕಾಣಿಸಿಕೊಂಡಿದ್ದರು.
ಇದನ್ನು ನೋಡಿದ ಬಳಿಕ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಹಾಗೂ ಅಜಿತೇಶ್ ಅರ್ಗಲ್ ಅವರ ಅಂಡರ್-19 ವಿಶ್ವಕಪ್ ಗೆದ್ದಿದ್ದ ದಿನಗಳನ್ನು ಸ್ಮರಿಸಿಕೊಂಡರು. ಈ ಇಬ್ಬರೂ ಕ್ರಿಕೆಟಿಗರ ವೃತ್ತಿ ಜೀವನದ ಪಯಣವನ್ನು ಮೆಲುಕು ಹಾಕಿದರು.
अजितेश अर्गल की कहानी भारतीय क्रिकेट के सुनहरे दौर से लेकर पर्दे के पीछे की जिम्मेदारियों तक का एक अनूठा सफर है.यह जर्नी विराट कोहली के साथ अंडर 19 विश्व कप की महिमा से लेकर आईपीएल के अधिकारी के रूप में ड्यूटी संभालने तक पूर्ण चक्र में आती है. pic.twitter.com/B4NkGsTqii
— Raushan Raj Rajput (@RaushanRRajput) April 28, 2026
ಅಜಿತೇಶ್ ಅರ್ಗಲ್ ಯಾರು?
2008ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಆಡಿತ್ತು. ಮಳೆ ಬಾಧಿತ ಫೈನಲ್‌ನಲ್ಲಿ ಅಜಿತೇಶ್ ಅವರು 5 ಓವರ್‌ಗಳಿಗೆ 5 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ವೇಳೆ ಭಾರತ ಅಂಡರ್ -19 ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಂತ-ಹಂತವಾಗಿ ತಮ್ಮ ಕ್ರಿಕೆಟ್ ವೃತ್ತಿ ಜೀವನವನ್ನು ಉತ್ತಮಪಡಿಸಿಕೊಂಡಿದ್ದರು. ಆದರೆ, ಅಜಿತೇಶಗೆ ಇದು ಸಾಧ್ಯವಾಗಲಿಲ್ಲ.
2008ರಿಂದ ಇಲ್ಲಿಯವರೆಗೂ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಆಡುತ್ತಾ ಬಂದಿದ್ದಾರೆ. ಆದರೆ, ಅಜಿತೇಶ ಅರ್ಗಲ್ ಅವರು ಮಾತ್ರ 2008ರ ಉದ್ಘಾಟನಾ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ( ಈಗಿನ ಪಂಜಾಬ್ ಕಿಂಗ್ಸ್) ತಂಡದಲ್ಲಿದ್ದರೂ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ. ಅಂದಹಾಗೆ ಬರೋಡಾ ಪರ ದೇಶಿ ಕ್ರಿಕೆಟ್‌ನಲ್ಲಿಯೂ ಅಜಿತೇಶ್‌ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ.
Virat Kohli 9000 Runs: ಐಪಿಎಲ್ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದ ವಿರಾಟ್ ಕೊಹ್ಲಿ!
ಇದರ ಪರಿಣಾಮ ಅರ್ಗಲ್ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರು ಉಳಿದು, ಕ್ರೀಡಾ ಕೋಟಾದಡಿ ಇನ್‌ಕಮ್ ಟ್ಯಾಕ್ಸ್ ಡಿಫಾರ್ಟ್‌ಮೆಂಟ್‌ಗೆ ಸೇರ್ಪಡೆಯಾಗಿದ್ದರು. ಆದರೂ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನ ಉತ್ತಮವಾಗಿರಲಿಲ್ಲ.
2023ರಲ್ಲಿ ಬಿಸಿಸಿಐ ಅಂಪೈರಿಂಗ್ ಪರೀಕ್ಷೆ ಪಾಸ್
2023ರಲ್ಲಿ ಅಜಿತೇಶ್ ಅರ್ಗಲ್ ಅವರು ಬಿಸಿಸಿಐನ ಅಂಪೈರಿಂಗ್ ಪರೀಕ್ಷೆಯನ್ನು ಪಾಸ್ ಮಾಡಿದ್ದರು ಹಾಗೂ ಅಂಪೈರಿಂಗ್ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅಂದಿನಿಂದ ಅವರು ದೇಶಿ ಕ್ರಿಕೆಟ್ ಹಾಗೂ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಐಪಿಎಲ್ ಟೂರ್ನಿಯಲ್ಲಿಯೂ ಅಂಪೈರ್ ಆಗಿದ್ದಾರೆ.