ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT ನಡುವೆ 2026ರ ಐಪಿಎಲ್‌ ಫೈನಲ್‌ ಗೆಲ್ಲುವ ನೆಚ್ಚಿನ ತಂಡ ಯಾವುದು?

RCB vs GT match Prediction: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಇನ್ನು ಕ್ಷಣಗಣನೆ ಶುರುವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದೆಂದು ಕೆಲ ಅಂಶಗಳ ಮೂಲಕ ವಿವರಿಸಲಾಗಿದೆ.

RCB vs GT ನಡುವೆ ಐಪಿಎಲ್‌ ಫೈನಲ್‌ ಗೆಲ್ಲುವ ನೆಚ್ಚಿನ ತಂಡ ಯಾವುದು?

ಆರ್‌ಸಿಬಿ vs ಜಿಟಿ ನಡುವೆ ಐಪಿಎಲ್‌ ಫೈನಲ್‌ ಗೆಲ್ಲುವ ನೆಚ್ಚಿನ ತಂಡ ಯಾವುದು? -

Profile
Ramesh Kote May 30, 2026 9:14 PM

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31 ರಂದು ಭಾನುವಾರ ನಡೆಯುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು (RCB vs GT) ಕಾದಾಟ ನಡೆಸಲಿವೆ. ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ, ಕಳೆದ 2025ರಲ್ಲಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು, ಇದೀಗ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಇನ್ನು ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ ಕೂಡ 2022ರ ಬಳಿಕ ಎರಡನೇ ಟ್ರೋಫಿಯನ್ನು ತವರು ಅಭಿಮಾನಿಗಳ ಎದುರು ಗೆಲ್ಲಲು ಬಯಸುತ್ತಿದೆ.

ಈ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ಜಿಟಿ ತಂಡಗಳು ಮೂರು ಬಾರಿ ಕಾದಾಟ ನಡೆಸಿದ್ದವು. ಈ ಮೂರು ಪಂದ್ಯಗಳ ಪೈಕಿ ಬೆಂಗಳೂರು ತಂಡ ಎರಡು ಬಾರಿ ಗೆದ್ದಿದ್ದರೆ, ಗುಜರಾತ್‌ ಒಮ್ಮೆ ಗೆಲುವು ಪಡೆದುಕೊಂಡಿದೆ. ಅಂದ ಹಾಗೆ ಇದೀಗ ಫೈನಲ್‌ ಪಂದ್ಯ ನಡೆಯುವ ಅಹಮದಾಬಾದ್‌ನಲ್ಲಿ ಆರ್‌ಸಿಬಿ ಹೀನಾಯ ಸೋಲು ಅನುಭವಿಸಿತ್ತು. ಹಾಗಾಗಿ ಇದೇ ವಿಶ್ವಾಸದಲ್ಲಿ ಗುಜರಾತ್‌ ತಂಡ, ಆರ್‌ಸಿಬಿಯನ್ನು ಮಣಿಸಲು ಪ್ರಯತ್ನಿಸಲಿದೆ. ಅಂದ ಹಾಗೆ ಆರ್‌ಸಿಬಿ ಮತ್ತು ಜಿಟಿ ನಡುವೆ ಫೈನಲ್‌ ಗೆಲ್ಲಬಹುದಾದ ತಂಡವನ್ನು ಇಲ್ಲಿ ವಿವರಿಸಲಾಗಿದೆ.

IPL 2026 Final: ಎರಡನೇ ಐಪಿಎಲ್‌ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು, ಸಂಭಾವ್ಯ ಪ್ಲೇಯಿಂಗ್‌ XI,ಪಿಚ್‌ ರಿಪೋರ್ಟ್‌ ವಿವರ!

ಪ್ರಶಸ್ತಿ ಗೆಲ್ಲುನ ನೆಚ್ಚಿನ ತಂಡವಾಗಿ ಆರ್‌ಸಿಬಿ ಫೈನಲ್‌ಗೆ ಪ್ರವೇಶ ಮಾಡಿದೆ. ಆದರೆ, ಅಹಮದಾಬಾದ್‌ ತವರು ಅಂಗಣದಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನು ಮಣಿಸುವುದು ಆರ್‌ಸಿಬಿ ಪಾಲಿಗೆ ಕಠಿಣ ಸವಾಲು. ಕ್ರಿಕೆಟ್‌ ಪಂಡಿತರು ಮತ್ತು ಅಂಕಿ-ಅಂಶಗಳ ವಿಶ್ಲೇಷಕರು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬಲಿಷ್ಠ ಬ್ಯಾಟಿಂಗ್ ಡೆಪ್ತ್‌ ಮತ್ತು ಗುಜರಾತ್‌ ಟೈಟನ್ಸ್‌ ತಂಡದ ವೇಗದ ಮಾರಕ ಬೌಲಿಂಗ್ ದಾಳಿಯ ನಡುವೆ ಅತ್ಯಂತ ಸಮಬಲದ ಹಾಗೂ ರೋಚಕ ಪೈಪೋಟಿ ನಡೆಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

RCB vs GT ತಂಡಗಳ ಬಲಾಬಲ

ಬ್ಯಾಟಿಂಗ್: ಆರ್‌ಸಿಬಿ ತಂಡದ ಸಾಟಿಯಿಲ್ಲದ ಬ್ಯಾಟಿಂಗ್ ಶಕ್ತಿ ಮತ್ತು ಡೆಪ್ತ್‌. ಆರ್‌ಸಿಬಿ ಪರ ಬ್ಯಾಟಿಂಗ್ ವಿಭಾಗದಲ್ಲಿ ನಿರಂತರವಾಗಿ ರನ್‌ಗಳಿಸುತ್ತಿರುವ ಆರಂಭಿಕ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ ಮತ್ತು ದೇವದತ್‌ ಪಡಿಕ್ಕಲ್‌ ಇದ್ದಾರೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಪಂದ್ಯವನ್ನು ಮುಗಿಸುವ ಸಾಮರ್ಥ್ಯ ಹೊಂದಿರುವ ರಜತ್‌ ಪಾಟಿದಾರ್‌ ಮತ್ತು ಟೀಮ್‌ ಡೇವಿಡ್‌ ಅವರಂತಹ ಫಿನಿಷರ್‌ಗಳೂ ತಂಡದ ಬಲವಾಗಿದ್ದಾರೆ.

ಬೌಲಿಂಗ್: ಫೈನಲ್ ಪಂದ್ಯದಲ್ಲಿ ಪ್ರಮುಖ ಪೈಪೋಟಿ ಬೌಲಿಂಗ್ ವಿಭಾಗದಲ್ಲೇ ನಡೆಯುವ ಸಾಧ್ಯತೆ ಇದೆ. ಭುವನೇಶ್ವರ್‌ ಕುಮಾರ್‌ ಈ ಸೀಸನ್‌ನಲ್ಲಿ 26 ವಿಕೆಟ್‌ಗಳನ್ನು ಪಡೆದು ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿಶೇಷವಾಗಿ ಪವರ್‌ಪ್ಲೇ ಓವರ್‌ಗಳಲ್ಲಿ ಅವರು ನಿರಂತರವಾಗಿ ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದ್ದಾರೆ. ಅವರಿಗೆ ಜಾಶ್‌ ಹೇಝಲ್‌ವುಡ್‌, ರಸಿಖ್‌ ಸಲಾಮ್‌ ಹಾಗೂ ಕೃಣಾಲ್‌ ಪಾಂಡ್ಯ ಸಮರ್ಥ ಬೆಂಬಲ ನೀಡಿದ್ದು, ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಮತ್ತಷ್ಟು ಬಲಿಷ್ಠವಾಗಿಸಿದ್ದಾರೆ. ಈ ಬೌಲರ್‌ಗಳ ಪ್ರದರ್ಶನವೇ ಫೈನಲ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿರಬಹುದು.

IPL 2026 Final: ಗುಜರಾತ್‌ ಟೈಟನ್ಸ್‌ ಎದುರು ಅಹಮದಾಬಾದ್‌ನಲ್ಲಿ ಆರ್‌ಸಿಬಿ ತಂಡದ ದಾಖಲೆ ಹೇಗಿದೆ?

ಗುಜರಾತ್‌ ಟೈಟನ್ಸ್

ಬ್ಯಾಟಿಂಗ್‌: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪರಿಚಯ ಗುಜರಾತ್‌ ತಂಡದ ದೊಡ್ಡ ಬಲವಾಗಿದೆ. ಈ ಕ್ರೀಡಾಂಗಣದಲ್ಲಿ ಜಿಟಿ ಉತ್ತಮ ಗೆಲುವಿನ ಶೇಕಡಾವಾರು ದಾಖಲೆಯನ್ನು ಹೊಂದಿದ್ದು, ಬ್ಯಾಟಿಂಗ್‌ನಲ್ಲಿ ಶುಭಮನ್‌ ಗಿಲ್‌ ಮತ್ತು ಸಾಯಿ ಸುದರ್ಶನ್ ಅವರ ಸತತ ಪ್ರದರ್ಶನದ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ.‌ ಗಿಲ್‌ 722 ರನ್‌ ಕಲೆ ಹಾಕಿದ್ದರೆ, ಸುದರ್ಶನ್‌ 710 ರನ್‌ಗಳನ್ನು ಗಳಿಸಿದ್ದಾರೆ. ಇವರ ಜೊತೆಗೆ ಜೋಸ್‌ ಬಟ್ಲರ್‌ 507 ರನ್‌ ಗಳಿಸಿದ್ದಾರೆ.

ಬೌಲಿಂಗ್: ಜಿಟಿ ತಂಡವು ಆರ್‌ಸಿಬಿಯ ಪವರ್‌ಪ್ಲೇ ದಕ್ಷತೆಗೆ ಸರಿಸಾಟಿಯಾಗುವಷ್ಟು ಬಲಿಷ್ಠ ಮತ್ತು ಎದುರಾಳಿಯನ್ನು ಉಸಿರುಗಟ್ಟಿಸುವ ಬೌಲಿಂಗ್ ದಾಳಿಯನ್ನು ಹೊಂದಿದೆ. ಕಗಿಸೋ ರಬಾಡ ಈಗಾಗಲೇ 28 ವಿಕೆಟ್‌ ಕಿತ್ತಿದ್ದರೆ, ಮೊಹ್ಮಮದ್‌ ಸಿರಾಜ್‌ 18 ವಿಕೆಟ್‌ ಕಿತ್ತು ಪವರ್‌ಪ್ಲೇನಲ್ಲಿಯೇ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರ ಜೊತೆಗೆ ರಶೀದ್‌ ಖಾನ್‌, ಜೇಸನ್‌ ಹೋಲ್ಡರ್‌ ಮತ್ತು ಪ್ರಸಿಧ್‌ ಕೃಷ್ಣ ಅವರಂತಹ ಬೌಲರ್‌ಗಳು ಆರಂಭಿಕ ಹಂತದಲ್ಲೇ ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ ಮಧ್ಯದ ಓವರ್‌ಗಳಲ್ಲಿ ರನ್‌ಗಳ ಹರಿವನ್ನು ನಿಯಂತ್ರಿಸುವಲ್ಲಿ ಪರಿಣತರಾಗಿದ್ದಾರೆ.

RCB vs GT: ಗುಜರಾತ್‌ ಟೈಟನ್ಸ್‌ ತಂಡವನ್ನು ಸೋಲಿಸಲು ಆರ್‌ಸಿಬಿ ರೂಪಿಸಬೇಕಾದ ರಣತಂತ್ರಗಳೇನು?

RCB vs GT ನಡುವೆ ಫೈನಲ್‌ ಗೆಲ್ಲುವ ನೆಚ್ಚಿನ ತಂಡ ಯಾವುದು?

ಪ್ರಸ್ತುತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಬಲಾಬಲ ಹಾಗೂ ಫಾರ್ಮ್‌ ಅನ್ನು ಗಮನಿಸಿದರೆ ಆರ್‌ಸಿಬಿ ಗೆಲುವಿನ ಸಾಧ್ಯತೆ ಸ್ವಲ್ಪ ಹೆಚ್ಚು ಎಂದು ಪರಿಗಣಿಸಲಾಗಿದೆ. ಜಿಟಿಗೆ ಹೋಲಿಸಿದರೆ ಬೆಂಗಳೂರು ತಂಡ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎಂದೇ ಹೇಳಬಹುದು.