ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026 Final: ಗುಜರಾತ್‌ ಟೈಟನ್ಸ್‌ ಎದುರು ಅಹಮದಾಬಾದ್‌ನಲ್ಲಿ ಆರ್‌ಸಿಬಿ ತಂಡದ ದಾಖಲೆ ಹೇಗಿದೆ?

RCB vs GT, IPL 2026 Final: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರಂದು ಭಾನುವಾರ ನಡೆಯವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ನಿಮಿತ್ತ ಎರಡೂ ತಂಡಗಳು ಸಜ್ಜಾಗುತ್ತಿವೆ.

RCB vs GT: ಅಹಮಾದಾಬಾದ್‌ನಲ್ಲಿ ಆರ್‌ಸಿಬಿಯ ದಾಖಲೆ ಹೇಗಿದೆ?

ಅಹಮದಾಬಾದ್‌ನಲ್ಲಿ ಆರ್‌ಸಿಬಿ ತಂಡದ ದಾಖಲೆಗಳು. -

Profile
Ramesh Kote May 30, 2026 5:53 PM

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ (RCB vs GT) ತಂಡಗಳ ನಡುವಣ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯ ಮೇ 31 ರಂದು ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ನಿಮಿತ್ತ ಎರಡೂ ತಂಡಗಳು ಸಜ್ಜಾಗುತ್ತಿವೆ. ಅಂದ ಹಾಗೆ ಎರಡೂ ತಂಡಗಳು ಕೂಡ ತಮ್ಮ ಎರಡನೇ ಟ್ರೋಫಿಯನ್ನು ಗೆಲ್ಲಲು ಎದುರು ನೋಡುತ್ತಿವೆ. 2025ರ ಐಪಿಎಲ್‌ ಟೂರ್ನಿಯ ಫೈನಲ್‌ ಇದೇ ಅಂಗಣದಲ್ಲಿ ನಡೆದಿತ್ತು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿ ಆರ್‌ಸಿಬಿ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಈ ಆವೃತ್ತಿಯಲ್ಲಿ ರಜತ್‌ ಪಾಟಿದಾರ್‌ ನಾಯತ್ವದ ಆರ್‌ಸಿಬಿ ತಂಡ ಅದ್ಭುತ ಪ್ರದರ್ಶನವನ್ನು ತೋರಿದೆ. 18 ಅಂಕಗಳ ಮೂಲಕ ಲೀಗ್‌ ಹಂತವನ್ನು ಅಗ್ರ ಸ್ಥಾನದೊಂದಿಗೆ ಮುಗಿಸಿತ್ತು. ಆ ಮೂಲಕ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿತ್ತು. ಅದರಂತೆ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು 92 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತ್ತು. ಇದೇ ವಿಶ್ವಾಸದಲ್ಲಿ ಜಿಟಿ ತಂಟವನ್ನು ಅವರದೇ ನೆಲದಲ್ಲಿ ಎದುರಿಸಲು ಸಜ್ಜಾಗುತ್ತಿದೆ.

IPL 2026 Final: ಎರಡನೇ ಐಪಿಎಲ್‌ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು, ಸಂಭಾವ್ಯ ಪ್ಲೇಯಿಂಗ್‌ XI,ಪಿಚ್‌ ರಿಪೋರ್ಟ್‌ ವಿವರ!

ಆದರೆ, ಆರ್‌ಸಿಬಿ 2026ರ ಐಪಿಎಲ್‌ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ, ಫೈನಲ್‌ ಪಂದ್ಯ ನಡೆಯುತ್ತಿರುವುದು ಗುಜರಾತ್‌ ಟೈಟನ್ಸ್‌ ತಂಡದ ತವರು ಅಂಗಣ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಗೂ ಇಲ್ಲಿ ಶುಭಮನ್‌ ಗಿಲ್‌ ಸಾರಥ್ಯದ ತಂಡ ಉತ್ತಮ ದಾಖಲೆಯನ್ನು ಹೊಂದಿದೆ. ಇಲ್ಲಿ ಆಡಿದ ಅಪಾರ ಅನುಭವವನ್ನು ಜಿಟಿ ಹೊಂದಿದೆ. ಅಲ್ಲದೆ ಲೀಗ್‌ ಹಂತದಲ್ಲಿ ಇದೇ ಅಂಗಣದಲ್ಲಿ ಆರ್‌ಸಿಬಿ ತಂಡ ಸೋಲು ಅನುಭವಿಸಿತ್ತು. ಇದರಿಂದಾಗಿ ಆರ್‌ಸಿಬಿ ಬಹಳ ಎಚ್ಚರಿಕೆಯಿಂದ ಫೈನಲ್‌ ಪಂದ್ಯವನ್ನು ಆಡಬೇಕಾಗುತ್ತದೆ.

ಅಹಮದಾಬಾದ್‌ನಲ್ಲಿ ಆರ್‌ಸಿಬಿಯ ದಾಖಲೆ ಹೇಗಿದೆ?

ಪ್ರಸ್ತುತ ಫಾರ್ಮ್‌ ಅನುಗುಣವಾಗಿ ಫೈನಲ್‌ ಗೆಲ್ಲುವ ನೆಚ್ಚಿನ ತಂಡ ಆರ್‌ಸಿಬಿ ಆದರೂ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡದ ದಾಖಲೆ ಮಿಶ್ರಣದಿಂದ ಕೂಡಿದೆ. ಇಲ್ಲಿಯವರೆಗೂ ಈ ಅಂಗಣದಲ್ಲಿ ಆರ್‌ಸಿಬಿ ಎಂಟು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ನಾಲ್ಕರಲ್ಲಿ ಸೋಲು ಹಾಗೂ ಇನ್ನೂ ನಾಲ್ಕರಲ್ಲಿ ಗೆಲುವು ಪಡೆದಿದೆ. ಪ್ರಸ್ತುತ ಆವೃತ್ತಿಯಲ್ಲಿ ಈ ಎರಡೂ ತಂಡಗಳು ಮೂರು ಬಾರಿ ಕಾದಾಟ ನಡೆಸಿದ್ದವು. ಇದರಲ್ಲಿ ಆರ್‌ಸಿಬಿ 2-1 ಮುನ್ನಡೆಯನ್ನು ಪಡೆದಿದೆ.

ಐಪಿಎಲ್‌ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಈ ಇದರಲ್ಲಿ ಆರ್‌ಸಿಬಿ ಸೋತಿದ್ದು ಇದೇ ಅಂಗಣದಲ್ಲಿ ಎಂಬುದು ಪ್ರಮುಖ ಸಂಗತಿಯಾಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿಯನ್ನು ಜಿಟಿ ಬೌಲರ್‌ಗಳು 19.2 ಓವರ್‌ಗಳಿಗೆ 155 ರನ್‌ಗಳಿಗೆ ಆಲ್‌ಔಟ್‌ ಮಾಡಿದ್ದರು. ಬಳಿಕ ಈ ಗುರಿಯನ್ನು ಗುಜರಾತ್‌ 15.5 ಓವರ್‌ಗಳಿಗೆ ತಲುಪಿತ್ತು. ನಾಯಕ ಶುಭಮನ್‌ ಗಿಲ್‌ ಅವರು 18 ಎಸೆತಗಳಲ್ಲಿ 43 ರನ್‌ಗಳನ್ನು ಕಲೆ ಹಾಕಿದ್ದರು.

2021ರ ಐಪಿಎಲ್‌ ಟೂರ್ನಿಯಲ್ಲಿ ಇದೇ ಅಂಗಣದಲ್ಲಿ ಆರ್‌ಸಿಬಿ, ಎರಡು ಬಾರಿ ಇಲ್ಲಿ ಕಾದಾಟ ನಡೆಸಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಒಂದು ರನ್‌ ರೋಚಕ ಜಯ ಹಾಗೂ ನಂತರ ಪಂಜಾಬ್‌ ಕಿಂಗ್ಸ್‌ ಎದುರು ಸೋಲು ಅನುಭವಿಸಿತ್ತು. 2022ರ ಟೂರ್ನಿಯಲ್ಲಿ ಆರ್‌ಸಿಬಿ, ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು 7 ವಿಕೆಟ್‌ ಸೋಲು ಅನುಭವಿಸಿತ್ತು. 2024ರ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ಎದುರು ಆರ್‌ಸಿಬಿ ಮತ್ತೊಮ್ಮೆ ಸೋತಿತ್ತು.

ಆದರೆ, 2025ರ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಆರ್‌ಸಿಬಿ 6 ರನ್‌ಗಳಿಂದ ಗೆದ್ದು 17 ವರ್ಷಗಳ ಬಳಿಕ ಚೊಚ್ಚಲ ಚಾಂಪಿಯನ್‌ ಆಗಿತ್ತು. ಈ ಗೆಲುವಿನ ವಿಶ್ವಾಸದಲ್ಲಿ ಆರ್‌ಸಿಬಿ ಇದೀಗ ಎರಡನೇ ಬಾರಿ ಫೈನಲ್‌ನಲ್ಲಿ ಆತಿಥೇಯ ಗುಜರಾತ್‌ ತಂಡವನ್ನು ಎದುರಿಸಲಿದೆ.