ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UPL 2025: ಆರ್‌ಸಿಬಿ ವೇಗಿಯ ವಿರುದ್ಧ ಹ್ಯಾಟ್ರಿಕ್‌ ಬೌಂಡರಿ ಬಾರಿಸಿದ ರಿಂಕು ಸಿಂಗ್‌!

ಮುಂಬರುವ ಏಷ್ಯಾ ಕಪ್‌ ಟೂರ್ನಿಗೂ ಮುನ್ನ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಅವರು ಪ್ರಸ್ತುತ ನಡೆಯುತ್ತಿರುವ 2025ರ ಯುಪಿ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಲಖನೌ ಫಾಲ್ಕನ್ಸ್‌ ವಿರುದ್ಧ ಕೇವಲ 27 ಎಸೆತಗಳಲ್ಲಿ 57 ರನ್‌ಗಳನ್ನು ಸಿಡಿಸಿದ್ದಾರೆ.

ಆರ್‌ಸಿಬಿ ವೇಗಿಯ ವಿರುದ್ಧ ಹ್ಯಾಟ್ರಿಕ್‌ ಬೌಂಡರಿ ಬಾರಿಸಿದ ರಿಂಕು ಸಿಂಗ್‌!

ಯುಪಿ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚುತ್ತಿರುವ ರಿಂಕು ಸಿಂಗ್‌.

Profile Ramesh Kote Aug 27, 2025 8:47 PM

ನವದೆಹಲಿ: ಭಾರತ ತಂಡ ಮುಂದಿನ ತಿಂಗಳು 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದೆ. ಸೆಪ್ಟೆಂಬರ್ 10 ರಂದು ನಡೆಯುವ ಮೊದಲ ಪಂದ್ಯದಲ್ಲಿ ಭಾರತ ತಂಡ, ಯುಎಇಯನ್ನು ಎದುರಿಸಲಿದೆ. ಸೆಪ್ಟೆಂಬರ್ 14 ರಂದು ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯದಲ್ಲಿ (IND vs PAK) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಟೀಮ್‌ ಇಂಡಿಯಾ ಎದುರಿಸಲಿದೆ. ಈ ಟೂರ್ನಿಗಾಗಿ ಆಯ್ಕೆದಾರರು ರಿಂಕು ಸಿಂಗ್‌ಗೆ (Rinku Singh) ಭಾರತ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಆದರೆ ರಿಂಕು ಸಿಂಗ್ ಅವರನ್ನು ಪ್ಲೇಯಿಂಗ್ 11 ರಲ್ಲಿ ಸೇರಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಅವರು ಪ್ರಸ್ತುತ ಯುಪಿ ಟಿ20 ಲೀಗ್‌ನಲ್ಲಿ ಒಂದರ ನಂತರ ಒಂದರಂತೆ ಸ್ಪೋಟಕ ಇನಿಂಗ್ಸ್‌ಗಳನ್ನು ಆಡುತ್ತಿದ್ದಾರೆ.

ಭಾರತದ ಟಿ20 ಬ್ಯಾಟ್ಸ್‌ಮನ್ ರಿಂಕು ಸಿಂಗ್ ಮತ್ತೊಮ್ಮೆ ತಮ್ಮ ಬಿರುಗಾಳಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಯುಪಿ ಟಿ20 ಲೀಗ್‌ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಮೀರತ್ ಮೇವರಿಕ್ಸ್ ನಾಯಕ ರಿಂಕು, ಬುಧವಾರ ಲಖನೌ ಫಾಲ್ಕನ್ಸ್ ವಿರುದ್ಧ 27 ಎಸೆತಗಳಲ್ಲಿ 57 ರನ್ ಗಳಿಸಿದರು. ಅವರು 3 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಈ ಇನಿಂಗ್ಸ್‌ನೊಂದಿಗೆ, ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 233 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಟಿ20 ಏಷ್ಯಾ ಕಪ್‌ಗೆ ಮೊದಲು ರಿಂಕು ಸಿಂಗ್ ಅವರ ಉತ್ತಮ ಫಾರ್ಮ್‌ನ ಸೂಚನೆಯಾಗಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ 15 ಸದಸ್ಯರ ಭಾರತೀಯ ತಂಡದಲ್ಲಿ ಅವರು ಇದ್ದಾರೆ.

Asia Cup 2025: ʻಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆʼ-ಹ್ಯಾರಿಸ್‌ ರೌಫ್‌ ಎಚ್ಚರಿಕೆ!

ಐದನೇ ಸ್ಥಾನದಲ್ಲಿ ರಿಂಕು ಸಿಂಗ್ ಬ್ಯಾಟಿಂಗ್‌ಗೆ ಬಂದರು. ಆ ಸಮಯದಲ್ಲಿ ತಂಡ 10 ಓವರ್‌ಗಳಲ್ಲಿ 73 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅವರು ರಿತುರಾಜ್ ಶರ್ಮಾ ಅವರೊಂದಿಗೆ 94 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ರಿತುರಾಜ್ ಶರ್ಮಾ 37 ಎಸೆತಗಳಲ್ಲಿ 74 ರನ್ ಗಳಿಸಿದ ನಂತರ ಅಜೇಯರಾಗಿ ಉಳಿದರು. ರಿಂಕು 18ನೇ ಓವರ್‌ನಲ್ಲಿ 211.11ರ ಸ್ಟ್ರೈಕ್ ರೇಟ್‌ನೊಂದಿಗೆ ಔಟಾದರು. ಅವರು ತಂಡದ ಸ್ಕೋರ್ ಅನ್ನು 167 ಕ್ಕೆ ತಲುಪಿಸಿದರು. ಟೂರ್ನಿಯ ಆರಂಭದಲ್ಲಿ, ರಿಂಕು ಗೋರಖ್‌ಪುರ ಲಯನ್ಸ್ ವಿರುದ್ಧ 48 ಎಸೆತಗಳಲ್ಲಿ 108 ರನ್‌ಗಳ ಅಜೇಯ ಇನಿಂಗ್ಸ್ ಆಡಿದ್ದರು. ಇದರಲ್ಲಿ 7 ಬೌಂಡರಿಗಳು ಮತ್ತು 8 ಸಿಕ್ಸರ್‌ಗಳು ಸೇರಿವೆ.



2023ರ ಐಪಿಎಲ್ ಟೂರ್ನಿಯಲ್ಲಿ ಯಶ್ ದಯಾಳ್ ಅವರ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ಸಿಂಗ್ ಬೆಳಕಿಗೆ ಬಂದಿದ್ದರು. ಇದಾದ ನಂತರ ಅವರು ಭಾರತ ತಂಡದ ಟಿ20ೈ ಕ್ಯಾಪ್ ಪಡೆದಿದ್ದರು. ಅವರು 33 ಟಿ20ಐ ಪಂದ್ಯಗಳಲ್ಲಿ 161 ಸ್ಟ್ರೈಕ್ ರೇಟ್‌ನಲ್ಲಿ 546 ರನ್ ಗಳಿಸಿದ್ದಾರೆ, ಹೆಚ್ಚಾಗಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.