ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಎಂಎಸ್‌ ಧೋನಿಯ ನಡೆಯಿಂದ ಶಾಕ್‌ ಆಗಿತ್ತುʼ: 2019ರ ಘಟನೆಯನ್ನು ನೆನೆದ ಲಾಕಿ ಫರ್ಗ್ಯೂಸನ್‌!

2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿಯ ನಡೆಯ ಬಗ್ಗೆ ನ್ಯೂಜಿಲೆಂಡ್‌ ವೇಗದ ಬೌಲರ್‌ ಲಾಕಿ ಫರ್ಗ್ಯೂಸನ್‌ ಆಘಾತ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು ಹಾಗೂ ಏಕದಿನ ವಿಶ್ವಕಪ್‌ ಟೂರ್ನಿಯಿಂದ ಹೊರ ಬಿದ್ದಿತ್ತು.

ಎಂಎಸ್‌ ಧೋನಿ ನಡೆಯಿಂದ ನನಗೆ ಶಾಕ್‌ ಆಗಿತ್ತು: ಫರ್ಗ್ಯೂಸನ್‌!

ಎಂಎಸ್‌ ಧೋನಿ ಚೆಂಡನ್ನು ಬಿಟ್ಟು ಶಾಕ್‌ ನೀಡಿದ್ದರು ಎಂದ ಲಾಕಿ ಫರ್ಗ್ಯೂಸನ್‌.

Profile Ramesh Kote Aug 27, 2025 8:20 PM

ನವದೆಹಲಿ: ಐಸಿಸಿ 2019ರ ಏಕದಿನ ವಿಶ್ವಕಪ್‌(ODI World Cup 2019) ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಚೇಸಿಂಗ್‌ನಲ್ಲಿ ರನ್‌ಗಳ ಅಗತ್ಯವಿದ್ದ ವೇಳೆ ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಚೆಂಡನ್ನು ಆಡದೆ ವಿಕೆಟ್‌ ಕೀಪರ್‌ಗೆ ಹೋಗುವಂತೆ ಬಿಟ್ಟಿದ್ದ ಘಟನೆಯನ್ನು ನ್ಯೂಜಿಲೆಂಡ್‌ ವೇಗದ ಬೌಲರ್‌ ಲಾಕಿ ಫರ್ಗ್ಯೂಸನ್‌ (Lockie Ferguson) ಸ್ಮರಿಸಿಕೊಂಡಿದ್ದಾರೆ. ಓಲ್ಡ್‌ ಟ್ರಾಫರ್ಡ್‌ನಲ್ಲಿ ಕಿವೀಸ್‌ ನೀಡಿದ್ದ 240 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ ಒತ್ತಡಕ್ಕೆ ಒಳಗಾಗಿತ್ತು. ಕೊನೆಯಲ್ಲಿ ಭಾರತಕ್ಕೆ ರನ್‌ಗಳ ಅಗತ್ಯವಿದ್ದರೂ ಎಂಎಸ್‌ ಧೋನಿ ತಮ್ಮ ಬ್ಯಾಟ್‌ನಿಂದ ಚೆಂಡನ್ನು ಹೊಡೆಯದೆ ಬಿಟ್ಟಿದ್ದರು. ಇದರ ಬಗ್ಗೆ ಎಂಎಸ್‌ ಧೋನಿ ಈಗಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಗುರಿ ಹಿಂಬಾಲಿಸಿದ್ದ ಭಾರತ ತಂಡಕ್ಕೆ ಟ್ರೆಂಟ್‌ ಬೌಲ್ಟ್‌ ಹಾಗೂ ಮ್ಯಾಟ್‌ ಹೆನ್ರಿ ತಮ್ಮ ಮಾರಕ ಬೌಲಿಂಗ್‌ ಮೂಲಕ ಆರಂಭಿಕ ಆಘಾತ ನೀಡಿದ್ದರು. ಆ ಮೂಲಕ ಭಾರತ ಕೇವಲ 5 ರನ್‌ಗೆ 2 ವಿಕೆಟ್‌ ಹಾಗೂ ನಂತರ 24 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್‌ನಲ್ಲಿ ಜೊತೆಯಾಗಿದ್ದ ಎಂಎಸ್‌ ಧೋನಿ ಹಾಗೂ ರವೀಂದ್ರ ಜಡೇಜಾ ಉತ್ತಮ ಜೊತೆಯಾಟದ ಮೂಲಕ ಭಾರತಕ್ಕೆ ಆಸರೆಯಾಗಿದ್ದರು. ಒಂದು ಹಂತದಲ್ಲಿ ಟೀಮ್‌ ಇಂಡಿಯಾಗೆ 31 ಎಸೆತಗಳಲ್ಲಿ 52 ರನ್‌ ಅಗತ್ಯವಿತ್ತು. ಈ ವೇಳೆ ಲಾಕಿ ಫರ್ಗ್ಯೂಸನ್‌ ಅವರ ಎಸೆತವನ್ನು ಎಂಎಸ್‌ ಧೋನಿ ಆಡದೆ ಬಿಟ್ಟಿದ್ದರು. ಆ ಮೂಲಕ ಅಭಿಮಾನಿಗಳಲ್ಲಿದೆ, ಎದುರಾಳಿ ವೇಗಿ ಲಾಕಿ ಫರ್ಗ್ಯೂಸನ್‌ಗೂ ಅಚ್ಚರಿಯಾಗಿತ್ತು.

Asia Cup 2025: ʻಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆʼ-ಹ್ಯಾರಿಸ್‌ ರೌಫ್‌ ಎಚ್ಚರಿಕೆ!

ಕ್ರಿಕ್‌ ಟ್ರ್ಯಾಕರ್‌ ಜೊತೆ ಮಾತನಾಡಿದ ಲಾಕಿ ಫರ್ಗ್ಯೂಸನ್‌, "ಚೇಸಿಂಗ್‌ನ ಸಮಯದಲ್ಲಿ ಭಾರತ ತಂಡಕ್ಕೆ ಏನು ಅಗತ್ಯವಿತ್ತು ಎಂದು ನನಗೆ ನೆನಪಿಲ್ಲ, ಆದರೆ ಅವರಿಗೆ ಕೆಲ ರನ್‌ಗಳ ಅಗತ್ಯವಿದೆ ಎಂಬುದು ಗೊತ್ತಿದೆ. ನನ್ನ ಎಸೆತವನ್ನು ಎಂಎಸ್‌ ಧೋನಿ ಕಟ್‌ ಮಾಡುತ್ತಾರಾ?ಅಥವಾ ಬಿಡುತ್ತಾರ? ಎಂಬುದು ನನ್ನ ಯೋಜನೆಯಾಗಿತ್ತು. ನನಗೆ ಅಂದು ಅಚ್ಚರಿಯಾಗಿತ್ತು, ಏಕೆಂದರೆ, ಚೇಸಿಂಗ್‌ನಲ್ಲಿ ನಿಮಗೆ ರನ್‌ಗಳ ಅಗತ್ಯವಿದ್ದಾಗ, ಚೆಂಡನ್ನು ಆಡದೆ ಬಿಟ್ಟರೆ ಬೌಲರ್‌ ಪಾಲಿಗೆ ಇದು ಉತ್ತಮವಾಗಿರುತ್ತದೆ," ಎಂದು ಹೇಳಿದ್ದಾರೆ.



ಈ ಪಂದ್ಯದ ಡೆತ್‌ ಓವರ್‌ಗಳಲ್ಲಿ ಎರಡೂ ತಂಡಗಳಿಗೆ ಕಠಿಣ ಸನ್ನಿವೇಶ ಎದುರಾಗಿತ್ತು. ಈ ವೇಳೆ ಎಂಎಸ್‌ ಧೋನಿ, ವೇಗಿ ಲಾಕಿ ಫರ್ಗ್ಯೂಸ್‌ ಅವರ ಎಸೆತದಲ್ಲಿ ಅಪ್ಪರ್‌ ಕಟ್‌ ಹೊಡೆದು ಚೆಂಡನ್ನು ಸಿಕ್ಸರ್‌ಗೆ ಕಳುಹಿಸುತ್ತಾರೆ. ಆ ಮೂಲಕ ಎದುರಾಳಿ ವೇಗಿಯ ಮೇಲೆ ಒತ್ತಡವನ್ನು ಹಾಕಿದ್ದರು. ಮುಂದಿನ ಎಸೆತದಲ್ಲಿಯೂ ಅದೇ ಪ್ಲ್ಯಾನ್‌ ಮಾಡಬೇಕೆಂದು ಫರ್ಗ್ಯೂಸನ್‌ ನಿರ್ಧರಿಸಿದ್ದರು. ಆದರೆ, ಈ ವೇಳೆ ಎಂಎಸ್‌ ಧೋನಿ ತಮ್ಮ ಯೋಜನೆಯನ್ನು ಪರಿಪೂರ್ಣಗೊಳಿಸಿದರು.

Asia Cup 2025: ʻಜಸ್‌ಪ್ರೀತ್‌ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡಲ್ಲʼ-ಎಬಿಡಿ ಅಚ್ಚರಿ ಹೇಳಿಕೆ!

"ನಂತರದ ನನ್ನ ಓವರ್‌ನ ಮೊದಲನೇ ಎಸೆತದಲ್ಲಿಯೂ ಅದೇ ಯೋಜನೆಯಲ್ಲಿ ಬೌಲ್‌ ಮಾಡಲು ನಿರ್ಧರಿಸಿದ್ದೆ ಹಾಗೂ ಧೋನಿ ಆ ಎಸೆತದಲ್ಲಿಯೂ ಸಿಕ್ಸರ್‌ ಬಾರಿಸಿದ್ದರು. ಎರಡನೇ ಸಮಯ ನನ್ನ ಯೋಜನೆ ಕೆಲಸ ಮಾಡಿತ್ತು. ಅವರನ್ನು ನಾನು ಔಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದೆ ಹಾಗೂ ಅಂತಿಮವಾಗಿ ನಾವು ಪಂದ್ಯದಲ್ಲಿ ಗೆಲುವು ಪಡೆದಿದ್ದೆವು," ಎಂದು ಲಾಕಿ ಫರ್ಗ್ಯೂಸನ್‌ ಸ್ಮರಿಸಿಕೊಂಡಿದ್ದಾರೆ.