IND vs ENG: ವಿರಾಟ್ ಕೊಹ್ಲಿಯ ಮಹತ್ವದ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್!
Rishabh Pant Eyes to Break Virat Kohli's Big Record: ಇಂಗ್ಲೆಂಡ್ ವಿರುದ್ಧ ಜುಲೈ 2 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಉಪನಾಯಕ ರಿಷಭ್ ಪಂತ್ ಅವರು ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿಯ ದಾಖಲೆ ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಲೀಡ್ಸ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ರಿಷಭ್ ಪಂತ್ ಶತಕಗಳನ್ನು ಬಾರಿಸಿದ್ದರು.

ವಿರಾಟ್ ಕೊಹ್ಲಿ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್.

ನವದೆಹಲಿ: ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಪ್ರಸ್ತುತ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು(IND vs ENG) ಆಡುತ್ತಿದೆ. ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋತಿದ್ದ ಭಾರತ ತಂಡ ಈ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ. ಭಾರತ ತಂಡ ಸೋಲು ಕಂಡರೂ ಎರಡು ಇನಿಂಗ್ಸ್‌ಗಳಲ್ಲಿಯೂ ಶತಕ ಸಿಡಿಸಿದ್ದ ರಿಷಭ್ ಪಂತ್ (Rishabh Pant) ಹಲವು ದಾಖಲೆಗಳನ್ನು ಬರೆದಿದ್ದರು. ಜುಲೈ 2 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದರೆ, ರಿಷಭ್ ಪಂತ್, ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯ (Virat Kohli) ಮಹತ್ವದ ದಾಖಲೆಯನ್ನು ಮುರಿಯಲಿದ್ದಾರೆ. ಪಂತ್ ಅದ್ಭುತ ಫಾರ್ಮ್‌ನಲ್ಲಿದ್ದು, ಈ ಸಾಧನೆ ಮಾಡಬಹುದು.
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದು, 5 ಶತಕ ಸಿಡಿಸಿದ್ದಾರೆ. ರಿಷಭ್ ಪಂತ್ ಕೂಡ ಅಷ್ಟೇ ಶತಕ ಬಾರಿಸಿದ್ದು, ಈಗ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಬಾರಿಸಿದರೆ, ಪಂತ್ 6 ಶತಕಗಳೊಂದಿಗೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ.
IND vs ENG: 49 ವರ್ಷದ ಭಾರತೀಯ ದಾಖಲೆ ಮುರಿಯಲು ಸಜ್ಜಾದ ಜೈಸ್ವಾಲ್
ಇಂಗ್ಲೆಂಡ್ ವಿರುದ್ಧ ಪಂತ್ ಶತಕ
2018ರ ಸೆಪ್ಟೆಂಬರ್ 11 ರಂದು ಲಂಡನ್‌ನ ದಿ ಓವೆಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಮೊದಲ ಶತಕ (114 ರನ್) ಸಿಡಿಸಿದ್ದರು. 2021ರ ಮಾರ್ಚ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 101 ರನ್, ಎಜ್‌ಬಾಸ್ಟನ್‌ನಲ್ಲಿ 2022 ಜುಲೈ ಒಂದರಂದು ನಡೆದಿದ್ದ ಪಂದ್ಯದಲ್ಲಿ 146 ರನ್ ಹಾಗೂ ಪ್ರಸ್ತುತ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ (134 ಮತ್ತು 118 ರನ್ ) ಎರಡು ಶತಕಗಳನ್ನು ಬಾರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯ ಆಟಗಾರರು
ರಾಹುಲ್ ದ್ರಾವಿಡ್ - 21 ಇನಿಂಗ್ಸ್ -7 ಶತಕ
ಸಚಿನ್ ತೆಂಡೂಲ್ಕರ್ - 53 ಇನಿಂಗ್ಸ್ - 7 ಶತಕ
ಮೊಹಮ್ಮದ್ ಅಝರುದ್ದೀನ್ -24 ಇನಿಂಗ್ಸ್ -6 ಶತಕ
ದಿಲೀಪ್ ವೆಂಗಸರ್ಕಾರ್ - 43 ಇನಿಂಗ್ಸ್ - 5 ಶತಕ
ಚೇತೇಶ್ವರ್ ಪೂಜಾರ- 49 ಇನಿಂಗ್ಸ್ -5 ಶತಕ
ವಿರಾಟ್ ಕೊಹ್ಲಿ - 50 ಇನಿಂಗ್ಸ್ - 5 ಶತಕ
IND vs ENG 2nd Test: ದ್ವಿತೀಯ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ ಸೇರಿದ ಯುವ ಸ್ಪಿನ್ನರ್
ದಾಖಲೆಯ ಹೊಸ್ತಿಲಲ್ಲಿ ಜೋ ರೂಟ್
ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಇಂಗ್ಲೆಂಟ್‌ನ ಸ್ಟಾರ್ ಆಟಗಾರ ಜೋ ರೂಟ್ ಇದುವರೆಗೂ ಭಾರತದ ವಿರುದ್ಧ 2927 ರನ್ ಗಳಿಸಿದ್ದು, ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ 73 ರನ್ ಬಾರಿಸಿದರೆ, 3000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್ ಹಾಗೂ ಭಾರತ ನಡುವಣ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಗೆ ರೂಟ್ ಪಾತ್ರರಾಗಲಿದ್ದಾರೆ.
ENG vs IND: ಬರ್ಮಿಂಗ್‌ಹ್ಯಾಮ್ ಟೆಸ್ಟ್ ಹಿನ್ನೋಟ; ಐತಿಹಾಸಿಕ ಗೆಲುವಿಗೆ ಭಾರತ ಕಾತರ
ಇಂಗ್ಲೆಂಡ್ vs ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರು
2927 ರನ್- ಜೋ ರೂಟ್ - ಇಂಗ್ಲೆಂಡ್ - 57 ಇನಿಂಗ್ಸ್
2535 ರನ್- ಸಚಿನ್ ತೆಂಡೂಲ್ಕರ್ - ಭಾರತ -53 ಇನಿಂಗ್ಸ್
2483 ರನ್- ಸುನೀಲ್ ಗವಾಸ್ಕರ್ - ಭಾರತ - 67 ಇನಿಂಗ್ಸ್
2431 ರನ್- ಆಲ್‌ಸ್ಟೈರ್ ಕುಕ್- ಇಂಗ್ಲೆಂಡ್ -54 ಇನಿಂಗ್ಸ್.
1991 ರನ್- ವಿರಾಟ್ ಕೊಹ್ಲಿ- ಭಾರತ-50 ಇನಿಂಗ್ಸ್