IPL 2026: ಕೊಹ್ಲಿ-ಸಾಲ್ಟ್ ಓಪನರ್ಸ್; ಹರಾಜಿನ ಬಳಿಕ ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ XI
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜು ಡಿಸೆಂಬರ್ 16 ರಂದು ಮುಕ್ತಾಯವಾಗಿದೆ. ಈ ಬಾರಿ ಆರ್‌ಸಿಬಿ ತಂಡ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಿರುವುದು ಬ್ಯಾಟಿಂಗ್ ವಿಭಾಗಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಹರಾಜಿನ ಬಳಿಕ ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ XI ಹೇಗಿದೆ ಎಂದು ಇಲ್ಲಿ ವಿವರಿಸಲಾಗಿದೆ.
ಮಿನಿ ಹರಾಜಿನ ಬಳಿಕ ಆರ್‌ಸಿಬಿಯ ಸಂಭಾವ್ಯ ಪ್ಲೇಯಿಂಗ್ XI -
ಅಬುದಾಭಿ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 Mini Auction) ಟೂರ್ನಿಯ 19ರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಂಗಳವಾರ ಅಬುಧಾಬಿಯಲ್ಲಿ ನಡೆದ ಹರಾಜಿನಲ್ಲಿ ಒಟ್ಟು 369 ಆಟಗಾರರು ಭಾಗವಹಿಸಿದ್ದು, 77 ಜನ ಆಟಗಾರರು ಮಾತ್ರ ಸೋಲ್ಡ್ ಆಗಿದ್ದಾರೆ. ಈ ಬಾರಿ ವಿಶೇಷವಾಗಿ ಅನ್‌ಕ್ಯಾಪ್ಡ್ ಆಟಗಾರರು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಇನ್ನು ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 8 ಜನ ಹೊಸ ಆಟಗಾರರನ್ನು ಖರೀದಿಸಿದೆ. ಇದರೊಂದಿಗೆ 2026ರ ಐಪಿಎಲ್‌ಗೆ ಬಲಿಷ್ಠ ಆಟಗಾರರ ಪಡೆಯನ್ನು ರೂಪಿಸಿದೆ. ಆರ್‌ಸಿಬಿ ಖರೀದಿಸಿರುವ ಆ ಎಂಟು ಜನ ಆಟಗಾರರನ್ನು ನೋಡುವುದಾದರೆ, ಟೀಮ್ ಇಂಡಿಯಾ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಅವರನ್ನು ಆರ್‌ಸಿಬಿ ತಂಡ ಬರೋಬ್ಬರಿ 7 ಕೋಟಿ ರು. ಗಳಿಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಕಳೆದ ಬಾರಿಯೂ ಬೆಂಗಳೂರು ಫ್ರಾಂಚೈಸಿ ವೆಂಕಟೇಶ್ ಅಯ್ಯರ್ ಅವರಿಗೆ ಅಂತಿಮ ಹಂತದ ತನಕ ಬಿಡ್ ಮಾಡಿತ್ತು. ಆದರೆ ಕೊನೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಆರ್‌ಸಿಬಿಯನ್ನು ಹಿಂದಿಕ್ಕಿ ಎಡಗೈ ಆಟಗಾರನನ್ನು ಖರೀದಿಸುವಲ್ಲಿ ಸಕ್ಸಸ್ ಕಂಡಿತ್ತು. ಆದರೆ, ಬಾರಿ ಆರ್‌ಸಿಬಿ 7 ಕೋಟಿ ರು ಗಳಿಗೆ ಖರೀದಿಸಿದೆ. ಆ ಮೂಲಕ ತನ್ನ ಮೂರನೇ ಕ್ರಮಾಂಕದಲ್ಲಿ ಆಡಿಸಲು ಯೋಜನೆಯನ್ನು ರೂಪಿಸಿದೆ.
IPL 2026 Auction: ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಟಾಪ್ 10 ಸ್ಟಾರ್ ಆಟಗಾರರು!
ಎರಡನೆಯದಾಗಿ ಅತ್ಯಂತ ಕಡಿಮೆ ಮೊತ್ತಕ್ಕೆ ಆರ್‌ಸಿಬಿ ಪಾಲಾಗಿರುವ ನ್ಯೂಜಿಲೆಂಡ್ ವೇಗದ ಬೌಲರ್ ಜಾಕೋಬ್ ಡಫಿ. 2 ಕೋಟಿ ರು ಮೂಲ ಬೆಲೆಯೊಂದಿಗೆ ಬೆಂಗಳೂರು ತಂಡ ಸೇರಿರುವ ಡಫಿ, ಅಂತಾರಾಷ್ಟ್ರೀಯ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಜಾಶ್ ಹೇಝಲ್‌ವುಡ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವರ ಸ್ಥಾನದಲ್ಲಿ ಡಫಿ ಅವರನ್ನು ಆಡಿಸುವ ಸಾಧ್ಯತೆಯಿದೆ. ಮೂರನೆಯದಾಗಿ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಧ್ಯಪ್ರದೇಶದ ಬೌಲಿಂಗ್ ಆಲ್‌ರೌಂಡರ್ ಮಂಗೇಶ್ ಯಾದವ್ ಅವರನ್ನು ಆರ್‌ಸಿಬಿ 5.20 ಕೋಟಿ ರು ಕೊಟ್ಟು ಖರೀದಿಸಿದೆ. ಇದು ದುಬಾರಿ ಅಂತ ಅನಿಸಿದರೂ ಕೂಡ ಮಂಗೇಶ್ ಯಾದವ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಇವರು ಕೂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
Timmy D welcomes the new recruits. 🥰
— Royal Challengers Bengaluru (@RCBTweets) December 16, 2025
PS. Here’s a pro tip to the new guys. Learn. To. Edit. ✍️ pic.twitter.com/05oOaLTfv9
ಇನ್ನು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಜೋರ್ಡನ್ ಕಾಕ್ಸ್ ಮೂಲ ಬೆಲೆ 75 ಲಕ್ಷ ರು. ದೊಂದಿಗೆ ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಸಾತ್ವಿಕ್ ದೇಸ್ವಾಲ್, ವಿಕ್ಕಿ ಓಸ್ತ್ವಾಲ್, ಕಾನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರ ಅವರನ್ನು ಮೂಲ ಬೆಲೆ 30 ಲಕ್ಷದೊಂದಿಗೆ ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.
ಹರಾಜಿನ ಬಳಿಕ ಆರ್‌ಸಿಬಿಯ ಆಡುವ ಬಳಗವನ್ನು ನೋಡುವುದಾದರೆ, ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಬಹುದು. ಮೂರನೇ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಆಡಿಸಬಹುದು. ನಂತರ ನಂಬರ್ 4ನೇ ಸ್ಥಾನದಲ್ಲಿ ನಾಯಕ ರಜತ್ ಪಟಿದಾರ್ ಕಣಕ್ಕಿಳಿಯಲಿದ್ದಾರೆ. ಐದು ಹಾಗೂ ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮತ್ತು ಟಿಮ್ ಡೇವಿಡ್ ಕಣಕ್ಕಿಳಿಯಬುದು. ಆಲ್‌ರೌಂಡರ್ ಖೋಟಾದಲ್ಲಿ ಮಂಗೇಶ್ ಯಾದವ್ ಮತ್ತು ಕೃಣಾಲ್ ಪಾಂಡ್ಯ ಅವರನ್ನು ಆಡಿಸಬಹುದು.
IPL 2026 Auction: ಮಿನಿ ಹರಾಜಿನ ಬಳಿಕ ಆರ್‌ಸಿಬಿ ತಂಡದ ಬಲಾಬಲ ಹೇಗಿದೆ?
ಬದಲಿಗೆ ಕೆರಿಬಿಯನ್ ದೈತ್ಯ ರೊಮ್ಯಾರಿಯಿ ಶೆಫರ್ಡ್ ಅವರನ್ನು ಕೂಡ ಇಲ್ಲಿ ಕರೆತರಬಹುದು. ಬೌಲಿಂಗ್ ವಿಭಾದಲ್ಲಿ ಭುವನೇಶ್ವರ್ ಕುಮಾರ್, ಕಿವೀಸ್‌ನ ಜಾಕೋಬ್ ಡಫಿ, ಯಶ್ ದಯಾಳ್ ಅವರನ್ನು ಪ್ರಯತ್ನಿಸಬಹುದು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಯಶಸ್ವಿ ಸ್ಪಿನ್ನರ್ ಸುಯಶ್ ಶರ್ಮಾ ಅವರನ್ನ ಕೂಡ ಆಡುವ ಸಾಧ್ಯತೆ ಇರುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ವೆಂಕಟೇಶ್ ಅಯ್ಯರ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ಟಿಮ್ ಡೇವಿಡ್, ಮಂಗೇಶ್ ಯಾದವ್, ಜಾಕೋಬ್ ಡಫಿ, ಭುವನೇಶ್ವರ್ ಕುಮಾರ್, ಯಶ್ ದಯಾಳ್
ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಶರ್ಮಾ/ದೇವದತ್ ಪಡಿಕ್ಕಲ್