ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವಿನ ಬಳಿಕ ರಿಯಾನ್ ಪರಾಗ್ ನಾಯಕತ್ವವನ್ನು ಶ್ಲಾಘಿಸಿದ ರವಿ ಶಾಸ್ತ್ರಿ!
ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಏಸೆತದಲ್ಲಿ 6 ರನ್ ರೋಚಕ ಗೆಲುವು ಪಡೆದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರನ್ನು ಭಾರತ ತಂಡದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಹಾಗೂ ಇರ್ಫಾನ್ ಪಠಾಣ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ರಿಯಾನ್ ಪರಾಗ್ ನಾಯಕತ್ವಕ್ಕೆ ರವಿ ಶಾಸ್ತ್ರಿ ಮೆಚ್ಚುಗೆ. -
ಅಹಮದಾಬಾದ್: ಗುಜರಾತ್ ಟೈಟನ್ಸ್(GT) ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದ ಡೆತ್ ಓವರ್‌ಗಳಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡ ನಾಯಕ ರಿಯಾನ್ ಪರಾಗ್ (Riyan Parag) ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು ಇವರ ನಾಯಕತ್ವಕ್ಕೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ಗಳಾದ ರವಿ ಶಾಸ್ತ್ರಿ ಹಾಗೂ ಇರ್ಫಾನ್ ಪಠಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯದಲ್ಲಿ 211 ರನ್‌ಗಳ ಮೊತ್ತಕ್ಕೆ ಎದರಾಳಿ ಗುಜರಾತ್ ಟೈಟನ್ಸ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದರು. ಕೊನೆಯ 12 ಎಸೆತಗಳಲ್ಲಿ 15 ರನ್ ಅಗತ್ಯವಿದ್ದಾಗ, ಕ್ರೀಸ್‌ನಲ್ಲಿ ರಶೀದ್ ಖಾನ್ ಹಾಗೂ ಕಗಿಸೊ ರಬಾಡ ಇದ್ದರು. ಆ ಸಂದರ್ಭದಲ್ಲಿ ಜಿಟಿ ಗೆಲುವು ಪಡೆಯಲಿದೆ ಎಂದು ಕಣ್ಣಿ ಮುಚ್ಚಿಕೊಂಡು ಹೇಳಬಹುದಿತ್ತು.
IPL 2026: ಆರ್‌ಸಿಬಿ vs ಸಿಎಸ್‌ಕೆ ನಡುವೆ ಪಂದ್ಯ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಆರ್ ಅಶ್ವಿನ್!
ಈ ವೇಳೆ ರಿಯಾನ್ ಪರಾಗ್ 19ನೇ ಓವರ್ ಅನ್ನು ಜೋಫ್ರಾ ಆರ್ಚರ್‌ಗೆ ನೀಡಿದ್ದರು. ಅದರಂತೆ ಬುದ್ದಿವಂತಿಕೆಯಿಂದ ಬೌಲ್ ಮಾಡಿದ ಆರ್ಚರ್ ಕೇವಲ 4 ರನ್‌ಗಳನ್ನು ನೀಡಿದ್ದರು. ಆ ಮೂಲಕ ಕೊನೆಯ 6 ಎಸೆತಗಳಲ್ಲಿ 10 ರನ್ ಬೇಕಿದ್ದಾಗ, ನಾಯಕ ರಿಯಾನ್ ಪರಾಗ್, ತುಷಾರ್ ದೇಶಪಾಂಡೆ ಮೇಲೆ ನಂಬಿಕೆ ಇಟ್ಟರು. ಅದರಂತೆ ಕೊನೆಯ ಓವರ್‌ನಲ್ಲಿ ಯಾವುದೇ ಬೌಂಡರಿ, ಸಿಕ್ಸರ್ ನೀಡದೆ, ಒಂದು ವಿಕೆಟ್ ಪಡೆಯುವ ಜೊತೆಗೆ ಕೇವಲ 4 ರನ್‌ಗೆ ಕಟ್ಟಿ ಹಾಕಿದರು. ಆ ಮೂಲಕ ಆರ್‌ಆರ್ ಸೋಲುವ ಸನಿಹ ಬಂದು ರೋಚಕ ಗೆಲುವು ಪಡೆದಿತ್ತು.
ರಿಯಾನ್ ಪರಾಗ್ ನಾಯಕತ್ವಕ್ಕೆ ರವಿ ಶಾಸ್ತ್ರಿ ಮೆಚ್ಚುಗೆ
ಡೆತ್ ಓವರ್‌ಗಳಲ್ಲಿ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದ ರಿಯಾನ್ ಪರಾಗ್ ಅವರನ್ನು ರವಿ ಶಾಸ್ತ್ರಿ ಶ್ಲಾಘಿಸಿದ್ದಾರೆ. "ಐಪಿಎಲ್ ಇತಿಹಾಸದಲ್ಲಿ ಇದು ಕೂಡ ರೋಚಕ ಪಂದ್ಯಗಳಲ್ಲಿ ಒಂದಾಗಿದೆ. ನೀವು ಇದನ್ನು ಸಾಧಿಸಿದ್ದೀರಿ! ನೀವು ಅತ್ಯುತ್ತಮ ಸ್ಥಿತಪ್ರಜ್ಞೆ ಹೊಂದಿದ್ದೀರಿ ಮತ್ತು ಭವಿಷ್ಯದಲ್ಲಿ ವಿಶೇಷವಾಗಿ ನಾಯಕತ್ವದ ಪಾತ್ರದಲ್ಲಿ ದೊಡ್ಡ ಸಾಧನೆ ಮಾಡುವ ಸಾಮರ್ಥ್ಯವಿದೆ. ಅದ್ಭುತ ಮನೋಭಾವ. ಚೆನ್ನಾಗಿ ಆಡಿದ್ದೀರಿ!” ಎಂದು ಶಾಸ್ತ್ರಿ ಕೊಂಡಾಡಿದ್ದಾರೆ.
IPL 2026: 500 ರನ್‌ಗಳ ಜೊತೆಯಾಟವನ್ನು ಆಡಿ ಎಲೈಟ್ ಲಿಸ್ಟ್ ಸೇರಿದ ವೈಭವ್-ಜೈಸ್ವಾಲ್ ಜೋಡಿ!
ಇರ್ಫಾನ್ ಪಠಾಣ್ ಪ್ರತಿಕ್ರಿಯೆ
ಇನ್ನೊಂದೆಡೆ, ಇರ್ಫಾನ್ ಪಠಾಣ್ ಈ ನಿರ್ಧಾರವನ್ನು ತಾಂತ್ರಿಕ ದೃಷ್ಟಿಕೋನದಿಂದ ವಿಶ್ಲೇಷಿಸಿ, ಓವರ್‌ಗಳ ಕ್ರಮವೇ ಪಂದ್ಯದ ಫಲಿತಾಂಶವನ್ನು ಹೇಗೆ ರೂಪಿಸಿತು ಎಂಬುದನ್ನು ವಿವರಿಸಿದ್ದಾರೆ.
“ಇಲ್ಲಿ ರಿಯನ್ ಪರಾಗ್ ಅವರ ನಾಯಕತ್ವವನ್ನು ತುಂಬಾ ಮೆಚ್ಚಿದ್ದೇನೆ. ಆರ್ಚರ್ 19ನೇ ಓವರ್ ಬೌಲಿಂಗ್ ಮಾಡಬೇಕೋ ಅಥವಾ ಕೊನೆಯ ಓವರ್ ಮಾಡಬೇಕೋ ಎಂಬ ದೊಡ್ಡ ನಿರ್ಧಾರವನ್ನು ಅವರು ಸರಿಯಾಗಿ ತೆಗೆದುಕೊಂಡರು. ಅಂತಿಮ ಓವರ್‌ಗೂ ಮುನ್ನ ಹೆಚ್ಚು ಅನುಭವ ಹೊಂದಿರುವ ವೇಗದ ಬೌಲರ್‌ಗೆ ಅವಕಾಶ ನೀಡಿ, ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದೇ ಪಂದ್ಯ ಗೆಲ್ಲುವ ಕ್ಷಣವಾಗುತ್ತದೆ,” ಎಂದು ಇರ್ಪಾನ್ ಪಠಾಣ್ ಶ್ಲಾಘಿಸಿದ್ದಾರೆ.