ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ತಂಡದ ಗಾಯಾಳುಗಳ ಸಮಸ್ಯೆಗೆ ಗೌತಮ್‌ ಗಂಭೀರ್‌ ಕಾರಣ ಎಂದ ಎಸ್‌ ಬದ್ರಿನಾಥ್!

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೂ ಮನ್ನ ಭಾರತ ತಂಡ ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಜಸ್‌ಪ್ರೀತ್‌ ಬುಮ್ರಾ, ವಾಷಿಂಗ್ಟನ್‌ ಸುಂದರ್‌ ಹಾಗೂ ಸಾಯಿ ಸುದರ್ಶನ್‌ ಅವರು ಟೆಸ್ಟ್‌ ಸರಣಿಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ ಹೆಡ್‌ ಕೋಚ್‌ ಗಂಭೀರ್‌ ಎಂದು ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ ದೂರಿದ್ದಾರೆ.

ಭಾರತ ತಂಡದ ಗಾಯದ ಸಮಸ್ಯೆಗೆ ಗಂಭೀರ್‌ ಕಾರಣ ಎಂದ ಬದ್ರಿನಾಥ್‌!

ಗೌತಮ್‌ ಗಂಭೀರ್‌ ವಿರುದ್ಧ ಎಸ್‌ ಬದ್ರಿನಾಥ್‌ ಬೇಸರ. -

Profile
Ramesh Kote Aug 12, 2026 3:11 PM

ನವದೆಹಲಿ: ಭಾರತ ಹಾಗೂ ಶ್ರೀಲಂಕಾ ತಂಡಗಳು (IND vs SL) ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲು ಸಜ್ಜಾಗುತ್ತಿವೆ. ಆಗಸ್ಟ್‌ 15 ರಂದು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಮೊದಲನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಆದರೆ, ಪ್ರವಾಸಿ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಜಸ್‌ಪ್ರೀತ್‌ ಬುಮ್ರಾ, ಸಾಯಿ ಸುದರ್ಶನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರು ಟೆಸ್ಟ್‌ ಸರಣಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸುಬ್ರಮಣ್ಯ ಬದ್ರಿನಾಥ್‌ (S Badrinath) ಅವರು ಪ್ರತಿಕ್ರಿಯಿಸಿದ್ದಾರೆ. ಇದು ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಕಡೆಯಿಂದ ಉಂಟಾದ ಪ್ರಮಾದವಲ್ಲ, ಇದು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌, ನಾಯಕ ಶುಭಮನ್‌ ಗಿಲ್‌ ಹಾಗೂ ಬಿಸಿಸಿಐ ಸೆಲೆಕ್ಟರ್‌ಗಳಿಂದ ಆಗಿರುವ ಪ್ರಮಾದ ಎಂದು ಎಸ್‌ ಬದ್ರಿನಾಥ್‌ ದೂರಿದ್ದಾರೆ.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಎಸ್‌ ಬದ್ರಿನಾಥ್‌, "ಈ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಾರೆಂದು ನನಗೆ ಗೊತ್ತಿಲ್ಲ. ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಆಟಗಾರರನ್ನು ಆಯ್ಕೆ ಮಾಡುವುದಿಲ್ಲ, ಅಲ್ಲವೇ? ಒಬ್ಬ ಆಟಗಾರನ ದೇಹ ಹಾಗೂ ಫಿಟ್‌ನೆಸ್‌ ಯಾವ ರೀತಿ ಇದೆ ಹಾಗೂ ಅವರು ಪಂದ್ಯಗಳನ್ನು ಆಡಬಹುದಾ ಎಂಬಿತ್ಯಾದಿ ಮಾಹಿತಿಗಳನ್ನು ಮಾತ್ರ ಅವರು ನೀಡಬಲ್ಲರು. ಆದರೆ, ಹೆಡ್‌ ಕೋಚ್‌, ನಾಯಕ ಹಾಗೂ ಬಿಸಿಸಿಐ ಸೆಲೆಕ್ಟರ್‌ಗಳು ಇಂಥಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸಿಒಇ ಕೇವಲ ಮಾಹಿತಿಯನ್ನು ನೀಡುತ್ತದೆ, ಅವರು ಸೆಲೆಕ್ಟರ್‌ಗಳು ಅಲ್ಲ," ಎಂದು ಹೇಳಿದ್ದಾರೆ.

ಶ್ರೀಲಂಕಾ ಟೆಸ್ಟ್ ಸರಣಿಯಿಂದಲೇ ವಾಷಿಂಗ್ಟನ್ ಸುಂದರ್ ಔಟ್‌?

ವಾಷಿಂಗ್ಟನ್‌ ಸುಂದರ್‌ ಅವರು ಸತತವಾಗಿ ಗಾಯಕ್ಕೆ ತುತ್ತಾಗಿರುವ ಸಂಗತಿಯು ಎಸ್‌ ಬದ್ರಿನಾಥ್‌ ಅಸಮಾಧಾನಕ್ಕೆ ಕಾರಣವಾಗಿದೆ. ಅವರು (ಟೀಮ್‌ ಮ್ಯಾನೇಜ್‌ಮೆಂಟ್‌) ಫಿಟ್‌ನೆಸ್ ಆಲ್‌ರೌಂಡರ್‌ನ ಪ್ರಮುಖ ಶಕ್ತಿಯಲ್ಲ ಎಂದು ಹೇಳಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ನಿರಂತರವಾಗಿ ಸ್ಥಾನ ಉಳಿಸಿಕೊಂಡು ತಮ್ಮ ವೃತ್ತಿಜೀವನವನ್ನು ದೀರ್ಘಕಾಲ ಮುಂದುವರಿಸಲು ಬಯಸಿದರೆ, ಅವರು ತಮ್ಮ ಫಿಟ್‌ನೆಸ್‌ ಬಗ್ಗೆ ಗಂಭೀರವಾಗಿ ಕೆಲಸ ಮಾಡಬೇಕು ಎಂದು ಕ್ರಿಕೆಟ್‌ ನಿರೂಪಕ ಸಲಹೆ ನೀಡಿದ್ದಾರೆ.

ಸುಂದರ್ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ಅಗತ್ಯ: ಬದ್ರಿನಾಥ್

“ಇಷ್ಟೊಂದು ಗಾಯಗಳಿಗೆ ಮೂಲ ಕಾರಣವೇನು ಎಂಬುದಕ್ಕೆ ನನ್ನ ಬಳಿ ತಕ್ಷಣಕ್ಕೆ ಉತ್ತರ ಇಲ್ಲ. ಮೊದಲು ಯಾವ ರೀತಿಯ ಗಾಯಗಳು ಸಂಭವಿಸುತ್ತಿವೆ ಎಂಬುದನ್ನು ಗಮನಿಸುವುದು ಮುಖ್ಯ. ಉನ್ನತ ಮಟ್ಟದ ವೃತ್ತಿಪರ ಕ್ರೀಡೆಯಲ್ಲಿ ಗಾಯಗಳು ಸಾಮಾನ್ಯ,” ಎಂದು ಬದ್ರಿನಾಥ್ ಹೇಳಿದ್ದಾರೆ.

ಭಾರತದಂತೆ ಶ್ರೀಲಂಕಾ ತಂಡಕ್ಕೂ ಗಾಯದ ಹೊಡೆತ; ಸ್ಟಾರ್‌ ಆಟಗಾರರು ಅಲಭ್ಯ

“ಸಾಯಿ ಸುದರ್ಶನ್ ಚೆಂಡಿನಿಂದ ಗಾಯಗೊಂಡರು. ಬುಮ್ರಾ ಅವರದ್ದು ಅತಿಯಾದ ಬಳಕೆಯಿಂದ ಉಂಟಾದ ದೀರ್ಘಕಾಲದ ಗಾಯ. ಇನ್ನು ವಾಷಿಂಗ್ಟನ್ ಸುಂದರ್ ಅವರ ಪ್ರಮುಖ ಶಕ್ತಿ ಫಿಟ್‌ನೆಸ್ ಅಲ್ಲ, ಅವರು ಗಾಯಗಳಿಗೆ ಹೆಚ್ಚು ಒಳಗಾಗುತ್ತಾರೆ. ಅವರ ಫಿಟ್‌ನೆಸ್‌ ಮೇಲೆ ಸಾಕಷ್ಟು ಕೆಲಸ ಮಾಡಬೇಕಿದೆ. ಆಟಗಾರರ ನಿರ್ವಹಣೆ ಮತ್ತು ನಿರಂತರ ಮೇಲ್ವಿಚಾರಣೆ ಬಹಳ ಮುಖ್ಯ. ಗಾಯಗಳು ಸಂಭವಿಸುವುದು ಅನಿವಾರ್ಯ. ಅವುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ,” ಎಂದು ಅವರು ತಿಳಿಸಿದ್ದಾರೆ.