ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈಭವ್‌ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್‌ಗೆ ಶಿಕ್ಷೆ ನೀಡಬೇಕೆಂದು ಸಂಜಯ್‌ ಮಾಂಜ್ರೇಕರ್‌ ಆಗ್ರಹ!

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಅವರ ಮೈದಾನದಲ್ಲಿನ ನಡವಳಿಕೆಯ ವಿರುದ್ಧ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಅವರು ಗುಡುಗಿದ್ದಾರೆ ಹಾಗೂ ಈ ಇಬ್ಬರ ಆಟಗಾರರ ವಿರುದ್ಧ ಬಿಸಿಸಿಐ ಹಾಗೂ ಐಸಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ವೈಭವ್‌, ಜೈಸ್ವಾಲ್‌ಗೆ ಶಿಕ್ಷೆ ನೀಡಬೇಕೆಂದು ಸಂಜಯ್‌ ಮಾಂಜ್ರೇಕರ್‌ ಆಗ್ರಹ!

ವೈಭವ್‌, ಜೈಸ್ವಾಲ್‌ಗೆ ಶಿಕ್ಷೆ ನೀಡಬೇಕೆಂದ ಸಂಜಯ್‌ ಮಾಂಜ್ರೇಕರ್‌. -

Profile
Ramesh Kote Aug 26, 2026 3:50 PM

ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ವೈಭವ್‌ ಸೂರ್ಯವಂಶಿ ಅವರ ಮೈದಾನದಲ್ಲಿನ ವರ್ತನೆಯ ವಿರುದ್ಧ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ (Sanjay Manjrekar) ಗುಡುಗಿದ್ದಾರೆ. ಈ ಇಬ್ಬರೂ ಆಟಗಾರರಿಗೆ ಬಿಸಿಸಿಐ ಹಾಗೂ ಐಸಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಕೊಲಂಬೊದ ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಇದೀಗ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಅಸಿತ ಫರ್ನಾಂಡೊ ಅವರ ಜೊತೆಗೆ ಕಿರಿಕ್‌ ಮಾಡಿದ್ದರು. ಇನ್ನು 15ನೇ ವಯಸ್ಸಿನ ವೈಭವ್‌ ಸೂರ್ಯವಂಶಿ ಅವರು ಜೂನ್‌ನಲ್ಲಿ ಶ್ರೀಲಂಕಾ ಎ ವಿರುದ್ಧದ ಪಂದ್ಯದ ವೇಳೆ ಆತಿಥೇಯರ ವಿರುದ್ಧ ಜಗಳ ಮಾಡಿಕೊಂಡಿದ್ದರು.

ಅಂದ ಹಾಗೆ ಯಶಸ್ವಿ ಜೈಸ್ವಾಲ್‌ ಹಾಗೂ ಅಸಿತ ಫೆರ್ನಾಂಡೊಗೆ ಐಸಿಸಿ ಪಂದ್ಯದ ಸಂಭಾವನೆಯಲ್ಲಿ ಶೇ 25 ರಂದು ದಂಡ ಅಗೂ ಒಂದು ಡಿಮೆರಿಟ್‌ ಅಂಕವನ್ನು ನೀಡಿತ್ತು. ಇನ್ನು ವೈಭವ್‌ ಸೂರ್ಯವಂಶಿಗೂ ಕೂಡ ಪಂದ್ಯದ ಸಂಭಾವನೆಯಲ್ಲಿ ಶೇ 50 ರಷ್ಟು ದಂಡವನ್ನು ವಿಧಿಸಲಾಗಿತ್ತು. ಆದರೆ, ಆಗಸ್ಟ್‌ 26 ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ಸಂಜಯ್‌ ಮಾಂಜ್ರೇಕರ್‌ ಅವರು, ಈ ಇಬ್ಬರೂ ಆಟಗಾರರಿಗೆ ಸೂಕ್ತಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿಗೆ ಶಿಕ್ಷೆ ನೀಡದೆ ಹಾಗೆ ಬಿಟ್ಟರೆ, ಅವರ ವರ್ತನೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂಬುದು ಸಂಜಯ್‌ ಮಾಂಜ್ರೇಕರ್‌ ಅವರ ಅಭಿಪ್ರಾಯ. ಇಂಥಾ ವರ್ತನೆಗಳು ಭವಿಷ್ಯದ ಕ್ರಿಕೆಟ್‌ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕ್ರಿಕೆಟ್‌ ನಿರೂಪಕ ವಾರ್ನಿಂಗ್‌ ನೀಡಿದ್ದಾರೆ.

IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್‌ ಜುರೆಲ್‌!

"ಆತ್ಮೀಯ ಐಸಿಸಿ, ಬಿಸಿಸಿಐ... ಭಾರತ ಎ ತಂಡದ ವೈಭವ್‌ ಹಾಗೂ ಇದೀಗ ಜೈಸ್ವಾಲ್‌. ಇಂಥಾ ವರ್ತನೆಗಳ ವಿರುದ್ಧ ನೀವು ಕ್ರಮ ತೆಗೆದುಕೊಳ್ಳದೆ ಬಿಟ್ಟರೆ, ಇದೇ ವರ್ತನೆಗಳನ್ನು ಮುಂದಿನ ದಿನಗಳಲ್ಲಿ ತೋರಿಸಬೇಕೆಂದು ನೀವೇ ತರಬೇತಿ ನೀಡಿದಂತಾಗುತ್ತದೆ. ಇದು ಕ್ರೀಡೆಯ ಭವಿಷ್ಯಕ್ಕೆ ಮಾರಕ ಹಾಗೂ ಇದು ಆಟಗಾರನ ಪಾಲಿಗೂ ಕೂಡ ಒಳ್ಳೆಯದಲ್ಲ," ಎಂದು ಸಂಜಯ್‌ ಮಾಂಜ್ರೇಕರ್‌ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ.

ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯುತ್ತಿರುಬ ಭಾರತ-ಶ್ರೀಲಂಕಾ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನದ ಬೆಳಗಿನ ಅವಧಿಯಲ್ಲಿ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ವೇಗಿ ಅಸಿತ ಫೆರ್ನಾಂಡೊ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ. ಮೈದಾನದಲ್ಲಿ ಆಕ್ರಮಣಕಾರಿ ವರ್ತನೆ ತೋರಿದ ಭಾರತ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅವರಿಗೂ ಶಿಕ್ಷೆ ವಿಧಿಸಲಾಗಿದೆ. ಇಬ್ಬರಿಗೂ ಪಂದ್ಯದ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದ್ದು, ತಲಾ ಒಂದು ಡಿಮೆರಿಟ್‌ ಪಾಯಿಂಟ್‌ ನೀಡಲಾಗಿದೆ.

ಭಾರತ ವಿರುದ್ಧ ಸತತ ಶತಕ ಸಿಡಿಸಿ ದಾಖಲೆ ಬರೆದ ಸೋನಲ್‌ ದಿನುಶಾ; ಲಂಕಾದ ಮೊದಲ ಕ್ರಿಕೆಟಿಗ

ಜೈಸ್ವಾಲ್‌ ಔಟಾದ ಬಳಿಕ ಅಸಿತ ಫೆರ್ನಾಂಡೊ ನಡೆಸಿದ ಆಕ್ರಮಣಕಾರಿ ಸಂಭ್ರಮಾಚರಣೆಯಿಂದ ಭಾರತೀಯ ಬ್ಯಾಟರ್‌ ಅಸಮಾಧಾನಗೊಂಡಿದ್ದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಜೈಸ್ವಾಲ್‌ ಅವರನ್ನು ಅವರ ಸಹ ಆಟಗಾರರು ತಡೆಯುವ ಮುನ್ನವೇ ಅವರು ತಿರುಗಿ ಶ್ರೀಲಂಕಾ ವೇಗಿ ಅಸಿತ ಫೆರ್ನಾಂಡೊ ಕಡೆಗೆ ವೇಗವಾಗಿ ಮುನ್ನುಗ್ಗಿದರು. ಈ ಘಟನೆಯ ಬಳಿಕ ಇಬ್ಬರ ವಿರುದ್ಧವೂ ಐಸಿಸಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ದಾಖಲಾಗಿತ್ತು.