ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಗಿಲ್‌ ಔಟ್‌, ಸಂಜು ಇನ್?‌ ಮೂರನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

India's Probable Playing XI: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಭಾರತ ತಂಡ, ಭಾನುವಾರ ಧರ್ಮಶಾಲಾದಲ್ಲಿ ನಡೆಯುವ ಮೂರನೇ ಟಿ20ಐಗೆ ಸಜ್ಜಾಗುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯನ್ನು ನಾವು ನಿರೀಕ್ಷೆ ಮಾಡಬಹುದು. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

3ನೇ ಟಿ20ಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಮೂರನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI -

Profile
Ramesh Kote Dec 12, 2025 9:45 PM

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ (IND vs SA) ಸೋಲು ಅನುಭವಿಸಿದ್ದ ಭಾರತ ತಂಡ, ಡಿಸೆಂಬರ್‌ 14ರಂದು ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಟಿ20ಐಗೆ ಸಜ್ಜಾಗುತ್ತಿದೆ. ಮೊದಲನೇ ಟಿ20ಐ ಪಂದ್ಯದಲ್ಲಿ 101 ರನ್‌ಗಳಿಂದ ಗೆದ್ದು ಟಿ20ಐ ಸರಣಿಯಲ್ಲಿ ಶುಭಾರಂಭ ಕಂಡಿದ್ದ ಸೂರ್ಯಕುಮಾರ್‌ ಯಾದವ್‌ (Suryakumar yadav) ನಾಯಕತ್ವದ ಟೀಮ್‌ ಇಂಡಿಯಾ, ನಂತರ ಎರಡನೇ ಪಂದ್ಯದಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವೈಫಲ್ಯದಿಂದಾಗಿ 51 ರನ್‌ಗಳಿಂದ ಸೋತಿತ್ತು. ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ಹಾಗಾಗಿ ಟಿ20ಐ ಸರಣಿಯನ್ನು ತನ್ನದಾಗಿಸಿಕೊಳ್ಳಲು ಇನ್ನೂ ಎರಡು ಜಯ ಅಗತ್ಯವಿದೆ. ಹಾಗಾಗಿ ಭಾರತ ತಂಡ (India) ಮೂರನೇ ಪಂದ್ಯಕ್ಕೆ ಬಲಿಷ್ಠ ಪಡೆಯಯೊಂದಿಗೆ ಕಣಕ್ಕೆ ಇಳಿಯಲಿದೆ.

ಭಾರತ ತಂಡದ ಉಪ ನಾಯಕ ಶುಭಮನ್‌ ಗಿಲ್‌ ಅವರು ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಮೊದಲನೇ ಪಂದ್ಯದಲ್ಲಿ ನಾಲ್ಕು ರನ್‌ಗೆ ವಿಕೆಟ್‌ ಒಪ್ಪಿಸಿದ್ದ ಅವರು, ಎರಡನೇ ಟಿ20ಐ ಪಂದ್ಯದಲ್ಲಿ ಗೋಲ್ಡನ್‌ ಡಕ್‌ಔಟ್‌ ಆಗಿದ್ದರು. ಆ ಮೂಲಕ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಭಾರಿ ನಿರಾಶೆ ಮೂಡಿಸಿದ್ದರು. ಈ ಕಾರಣದಿಂದಾಗಿ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಗಿಲ್‌ ಬರುವುದಕ್ಕೂ ಮುನ್ನ ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಿ ಯಶಸ್ವಿಯಾಗಿದ್ದರು. ಅವರು ಮೂರು ಶತಕಗಳನ್ನು ಬಾರಿಸಿದ್ದರು.

IND vs SA: ಎರಡನೇ ಟಿ20ಐ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್‌ ಯಾದವ್‌!

ಶುಭಮನ್‌ ಗಿಲ್‌ ಸ್ಥಾನಕ್ಕೆ ಸಂಜು ಸ್ಯಾಮ್ಸನ್?‌

ಆದರೆ, ಗಿಲ್‌ ಬದಲಾಗಿನಿಂದ ಭಾರತ ತಂಡದ ಆರಂಭಿಕ ವಿಕೆಟ್‌ಗೆ ದೊಡ್ಡ ಜೊತೆಯಾಟ ಮೂಡಿ ಬರುತ್ತಿಲ್ಲ. ಮುಂದಿನ ಟಿ20 ವಿಶ್ವಕಪ್‌ ಟೂರ್ನಿ ಇದೆ. ಹಾಗಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಸಾಧ್ಯವಿಲ್ಲ. ಹಾಗಾಗಿ ಔಟ್‌ ಆಫ್‌ ಫಾರ್ಮ್‌ ಶುಭಮನ್‌ ಗಿಲ್‌ ಅವರನ್ನು ಮೂರನೇ 20ಐ ಪಂದ್ಯಕ್ಕೆ ಕೈ ಬಿಟ್ಟು, ಸಂಜು ಸ್ಯಾಮ್ಸನ್‌ಗೆ ಪುನಃ ಆರಂಭಿಕ ಸ್ಥಾನ ನೀಡುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್‌ 17 ಪಂದ್ಯಗಳಲ್ಲಿ ಇನಿಂಗ್ಸ್‌ ಆರಂಭಿಸಿದ್ದು, 522 ರನ್‌ಗಳನ್ನು ಬಾರಿಸಿದ್ದಾರೆ. 2024ರಲ್ಲಿ ಅವರು ಮೂರು ಟಿ20ಐ ಶತಕಗಳನ್ನು ಬಾರಿಸಿದ್ದಾರೆ.

IND vs SA: ಒಂದೇ ಓವರ್‌ನಲ್ಲಿ 7 ವೈಡ್‌ ಹಾಕಿದ ಅರ್ಷದೀಪ್‌ ಸಿಂಗ್‌ ವಿರುದ್ಧ ಗಂಭೀರ್‌ ಕಿಡಿ!

ಅರ್ಷದೀಪ್‌ ಸಿಂಗ್‌ ಔಟ್‌?

ಎರಡನೇ ಟಿ20ಐ ಪಂದ್ಯದಲ್ಲಿ ಅರ್ಷದೀಪ್‌ ಸಿಂಗ್‌ ಅವರು ನಾಲ್ಕು ಓವರ್‌ಗಳಿಗೆ 54 ರನ್‌ ನೀಡಿದ್ದರು. ಅಲ್ಲದೆ ತಮ್ಮ ಮೂರನೇ ಓವರ್‌ನಲ್ಲಿ 7 ವೈಡ್‌ ಬಾಲ್‌ಗಳನ್ನು ಹಾಕಿದ್ದರು. ಹಾಗಾಗಿ ಇವರ ಸ್ಥಾನಕ್ಕೆ ಬಹುಶಃ ಹರ್ಷಿತ್‌ ರಾಣಾಗೆ ಅವಕಾಶ ನೀಡಬಹುದು. ಜಿತೇಶ್‌ ಶರ್ಮಾ ವಿಕೆಟ್‌ ಕೀಪರ್‌ ಆಗಿ ಮುಂದುವರಿಯಲಿದ್ದಾರೆ ಹಾಗೂ ಮ್ಯಾಚ್‌ ಫಿನಿಷರ್‌ ಆಗಿ ಆಡಲಿದ್ದಾರೆ. ಸಂಜು ವಿಶೇಷ ಬ್ಯಾಟ್ಸ್‌ಮನ್‌ ಆಗಿ ಸ್ಥಾನ ಪಡೆಯಬಹುದು.

ಶಿವಂ ದುಬೇ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ಕೈ ಬಿಟ್ಟು, ಅವರ ಸ್ಥಾನಕ್ಕೆ ವಿಶೇಷ ಸ್ಪಿನ್ನರ್‌ ಆಗಿ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬಹುದು. ಕುಲ್ದೀಪ್‌ಗೆ ವಾಷಿಂಗ್ಟನ್‌ ಸುಂದರ್‌ ಪೈಪೋಟಿ ನೀಡಬಹುದು. ಆದರೆ, ಏಷ್ಯಾ ಕಪ್‌ ಟೂರ್ನಿಯಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದ ಕುಲ್ದೀಪ್‌ ಮೂರನೇ ಪಂದ್ಯದಲ್ಲಿ ಆಡಬಹುದು.

IND vs SA: ಕ್ವಿಂಟಕ್‌ ಡಿ ಕಾಕ್‌ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

ಮೂರನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌ (ನಾಯಕ), ಹಾರ್ದಿಕ್‌ ಪಾಂಡ್ಯ, ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್‌), ಅಕ್ಷರ್‌ ಪಟೇಲ್‌, ಹರ್ಷಿತ್‌ ರಾಣಾ, ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ