Duleep Trophy: ಶುಭಂ ಶರ್ಮಾ ಅದ್ಭುತ ಪ್ರದರ್ಶನದಿಂದ ಭರ್ಜರಿ ಮುನ್ನಡೆ ಸಾಧಿಸಿದ ಕೇಂದ್ರ ವಲಯ!
ರಜತ್ ಪಾಟಿದಾರ್ ಮತ್ತು ಶುಭಂ ಶರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದಾಗಿ ಕೇಂದ್ರ ವಲಯ 2025ರ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಮತ್ತೊಂದು ಸೆಮಿಫೈನಲ್‌ನಲ್ಲಿ ಉತ್ತರ ವಲಯ ತಂಡ ಕಠಿಣ ಹೋರಾಟ ನಡೆಸುತ್ತಿದೆ.

ಪಶ್ಚಿಮ ವಲಯದ ಎದುರು ಕೇಂದ್ರ ವಲಯ ಮುನ್ನಡೆ ಸಾಧಿಸಿದೆ. -

ಬರಹ: ಕೆ. ಎನ್. ರಂಗು, ಚಿತ್ರದುರ್ಗ
ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿಯ ಎರಡನೇ ಸೆಮೆಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ಮತ್ತು ಪಶ್ಚಿಮ ವಲಯ ತಂಡಗಳು ಸೆಣೆಸಾಟ ನಡೆಸುತ್ತಿವೆ. ಸಿಇಜಿ ಮೈದಾನ ಬಿ ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ನಾಯಕ ರಜತ್ ಪಾಟಿದಾರ್(77) ಮತ್ತು ಶುಭಂ ಶರ್ಮಾ (96)ರವರ ಅದ್ಭುತ ಬ್ಯಾಟಿಂಗ್ ನೆರವಿನಿಂದಾಗಿ ಕೇಂದ್ರ ವಲಯ ಮೂರನೇ ದಿನದಾಟದಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸಿದೆ. ಆ ಮೂಲಕ ಕೇಂದ್ರ ವಲಯ ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 556 ರನ್‌ಗಳನ್ನು ಕಲೆಹಾಕಿ 118 ರನ್‌ಗಳ ಮುನ್ನಡೆ ಪಡೆದಿದೆ. ಇನ್ನೂ ಮೂರನೇ ದಿನದಾಟವನ್ನು ಆರಂಭಿಸಿದ ಪಾಟಿದಾರ್ ಮತ್ತು ಶುಭಂ ಶರ್ಮಾ ಅವರ ಬ್ಯಾಟಿನಿಂದ ಆರಂಭದಲ್ಲಿ 69 ರನ್‌ಗಳ ಮಹತ್ವದ ಜೊತೆಯಾಟ ಮೂಡಿ ಬಂದಿತ್ತು ಮತ್ತು ಅದನ್ನು 127ಕ್ಕೆ ವಿಸ್ತರಿಸಿದರು.
ಹೀಗೆ ಅಬ್ಬರದ ಬ್ಯಾಟಿಂಗ್‌ನಿಂದ ಮುಂದೆ ಸಾಗುತ್ತಿದ್ದ ಪಾಟಿದಾರ್, ಧರ್ಮೇಂದ್ರ ಸಿನ್ಹ್ ಜಡೇಜಾ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು. ಇನ್ನೊಂದು ಕಡೆ ಶುಭಂ ಶರ್ಮಾ ಅವರು 96 ರನ್ ಗಳಿಸಿ ಶತಕದಂಚಿನಲ್ಲಿ ಅನಗತ್ಯ ರನ್ ಕದಿಯಲು ಹೋಗಿ ರನೌಟ್ ಆಗಿ ಬೇಸರದಿಂದ ಪೆವಿಲಿಯನತ್ತ ಸಾಗಿದರು.
2025ರ ದುಲೀಪ್ ಟ್ರೋಫಿ ಟೂರ್ನಿಯಿಂದ ತಿಲಕ್ ವರ್ಮಾ ಔಟ್! ಇದಕ್ಕೆ ಕಾರಣ ಇಲ್ಲಿದೆ..
ಇದಲ್ಲದೆ, ಯಶ್ ರಾಥೋರ್ ಅವರು 2 ರನ್‌ಗಳಿಗೆ ಔಟಾದಾಗ ತಂಡ, 322 ರನ್ ಕಲೆಹಾಕಿ 5 ವಿಕೆಟ್ ಕಳೆದುಕೊಂಡು 116 ರನ್‌ಗಳ ಹಿನ್ನಡೆ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದಾಗ್ಯೂ, ಉಪೇಂದ್ರ ಯಾದವ್ (87) ಮತ್ತು ಯಶ್ ದುಬೆ (75) ಆರನೇ ವಿಕೆಟ್‌ಗೆ 134 ರನ್‌ಗಳ ನಿರ್ಣಾಯಕ ಜೊತೆಯಾಟ ಆಡಿತು. ಆ ಮೂಲಕ ಕೇಂದ್ರ ವಲಯವು ಎದರಾಳಿ ಪಶ್ಚಿಮ ವಲಯದ ಮೊದಲ ಇನಿಂಗ್ಸ್ ಮೊತ್ತವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು.
ಇನ್ನು ಮೊದಲ ಸೆಮಿಫೈನಲ್‌ನಲ್ಲಿ ಉತ್ತರ ವಲಯವು ಎಂಟು ಓವರ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕೇವಲ 38 ರನ್ ಕಲೆ ಹಾಕಿ ಭಾರಿ ಹಿನ್ನಡೆ ಅನುಭವಿಸಿತ್ತು. ಈ ವೇಳೆ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ಶುಭಂ ಖಝೂರಿಯಾ ಅವರ ಶತಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ನೆರವು ನೀಡಿತು. ಇದರಿಂದಾಗಿ ಉತ್ತರ ವಲಯವು 5 ವಿಕೆಟ್ ನಷ್ಟಕ್ಕೆ 278 ರನ್ ಕಲೆಹಾಕಿದೆ. 29 ವರ್ಷದ ಶುಭಂ, 20 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 145 ಬಾಲ್‌ಗಳಲ್ಲಿ ಅಜೇಯ 128 ರನ್ ಗಳಿಸಿ ಕೊನೆಯ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. ಇವರಿಗೆ ಇನ್ನೊಂದು ಬದಿಯಲ್ಲಿ ಸಾಥ್ ನೀಡಿದ ನಿಶಾಂತ್ ಸಿಂಧು ಅವರು ನಿಧಾನಗತಿಯಲ್ಲಿ ಸುಲಭವಾಗಿ ರನ್ ಕದಿಯಲು ಪ್ರಯತ್ನಿಸಿದರು.
Duleep Trophy 2025: ಮೊದಲ ಸೆಮಿಫೈನಲ್‌ನಲ್ಲಿ 197 ರನ್ ಗಳಿಸಿದ ಎನ್ ಜಗದೀಸನ್!
ಈ ಇಬ್ಬರು ಆಟಗಾರರ ನೆರವಿನಿಂದಾಗಿ ಉತ್ತರ ವಲಯದ ನಾಲ್ಕನೇ ವಿಕೆಟ್‌ಗೆ 171 ರನ್‌ಗಳ ಬೃಹತ್ ಜೊತೆಯಾಟ ಬಂದಿತು. ಆದರೆ ದುರದೃಷ್ಟವಶಾತ್ ನಿಶಾಂತ್ ಸಿಂಧು 82 ರನ್ ಗಳಿಸಿ ಗುರ್ಜಪ್ನೀತ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆಗಿ ಶತಕ ವಂಚಿತರಾದರು.
ಒಟ್ಟಾರೆಯಾಗಿ ಖಝೂರಿಯಾ ಮತ್ತು ನಿಶಾಂತ್ ಸಿಂಧು ಅವರ ಅಮೋಘ ಪ್ರದರ್ಶನವು ಉತ್ತರ ವಲಯ ತಂಡವನ್ನು ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಸದ್ಯ 258 ರನ್‌ಗಳ ಹಿನ್ನಡೆಯಲ್ಲಿರುವ ಉತ್ತರ ವಲಯ ಕೊನೆಯ ದಿನ ಮುನ್ನಡೆ ಸಾಧಿಸಿ ಫೈನಲ್ ತಲುಪಲು ಎದುರು ನೋಡುತ್ತಿದೆ.