ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ZIM: ಸತತ ಎಂಟನೇ ಬಾರಿ ಟಾಸ್‌ ಗೆದ್ದು 87 ವರ್ಷಗಳ ದಾಖಲೆಯನ್ನು ಸರಿಗಟ್ಟಿದ ಶ್ರೇಯಸ್‌ ಅಯ್ಯರ್‌!

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಶ್ರೇಯಸ್‌ ಅಯ್ಯರ್ ಟಿ20ಐ ಕ್ರಿಕೆಟ್‌ನಲ್ಲಿ ನಾಯಕನಾಗಿ ತಮ್ಮ ಮೊದಲ ಗೆಲುವು ದಾಖಲಿಸಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಅವರು, ಸತತ ಎಂಟನೇ ಬಾರಿ ಟಾಸ್ ಗೆದ್ದ ನಾಯಕ ಎಂಬ ಅಪರೂಪದ ಸಾಧನೆಗೆ ಭಾಜನರಾಗಿದ್ದಾರೆ. ಇದರೊಂದಿಗೆ ಅವರು 87 ವರ್ಷಗಳ ಹಿಂದಿನ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

87 ವರ್ಷಗಳ ದಾಖಲೆಯನ್ನು ಸರಿಗಟ್ಟಿದ ಶ್ರೇಯಸ್‌ ಅಯ್ಯರ್‌!

ಟಾಸ್‌ ಗೆಲ್ಲುವ ಮೂಲಕ 87 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಶ್ರೇಯಸ್‌ ಅಯ್ಯರ್‌. -

Profile
Ramesh Kote Jul 23, 2026 11:07 PM

ಹರಾರೆ: ಜಿಂಬಾಬ್ವೆ ವಿರುದ್ಧ ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಟಿ20ಐ ಪಂದ್ಯದಲ್ಲಿ (IND vs ZIM) ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಹಲವು ದಾಖಲೆಗಳನ್ನು ಬರೆದಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಅಯ್ಯರ್, ಆ ಮೂಲಕ 87 ವರ್ಷಗಳ ಹಿಂದಿನ ವಿಶ್ವದಾಖಲೆಯನ್ನು ಸರಿದೂಗಿಸಿದ್ದಾರೆ. ಇದರ ಜೊತೆಗೆ ಮಾಜಿ ನಾಯಕ ಎಂಎಸ್ ಧೋನಿ ಅವರ ವಿಶೇಷ ದಾಖಲೆಯನ್ನೂ ಮುರಿದಿದ್ದಾರೆ. ಭಾರತದ ಟಿ20 ತಂಡದ ನಾಯಕನಾಗಿ ಆಡಿದ ಎಂಟೂ ಪಂದ್ಯಗಳಲ್ಲೂ ಟಾಸ್ ಗೆದ್ದಿರುವ ಅಪರೂಪದ ಸಾಧನೆ ಇದೀಗ ಶ್ರೇಯಸ್‌ ಅಯ್ಯರ್ ಹೆಸರಾಗಿದೆ.

2026ರ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವ ವಹಿಸಿಕೊಂಡ ಬಳಿಕ, ಜೂನ್‌ನಲ್ಲಿ ಶ್ರೇಯಸ್‌ ಅಯ್ಯರ್ ಟಿ20 ತಂಡದ ಪೂರ್ಣಾವಧಿ ನಾಯಕರಾದರು. ಯುಕೆ ಪ್ರವಾಸವೇ ಅವರ ಮೊದಲ ನಾಯಕತ್ವದ ಸರಣಿಯಾಗಿದ್ದು, ಐರ್ಲೆಂಡ್ ವಿರುದ್ಧ ಎರಡು ಹಾಗೂ ಇಂಗ್ಲೆಂಡ್ ವಿರುದ್ಧ ಐದು ಸೇರಿ ಒಟ್ಟು ಏಳು ಪಂದ್ಯಗಳಲ್ಲೂ ಟಾಸ್ ಗೆದ್ದಿದ್ದರು. ಆದರೆ, ಈ ಎರಡೂ ಸರಣಿಗಳಲ್ಲಿ ಒಂದೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

NEET Protests: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ವಿಶೇಷ ಸಂದೇಶ ರವಾನಿಸಿದ ಶುಭಮನ್‌ ಗಿಲ್!

ಎಂಎಸ್‌ ಧೋನಿ ದಾಖಲೆಯನ್ನು ಮುರಿದ ಶ್ರೇಯಸ್ ಅಯ್ಯರ್

ಭಾರತದ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್, ಸತತ ಎಂಟು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟಾಸ್ ಗೆಲ್ಲುವ ಮೂಲಕ ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದುವರೆಗೆ ಈ ದಾಖಲೆ ಧೋನಿ ಹೆಸರಿನಲ್ಲಿತ್ತು. 2007ರಲ್ಲಿ ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಟ್ಟ ಧೋನಿ, ಸತತ ಏಳು ಟಾಸ್‌ಗಳನ್ನು ಗೆದ್ದ ಭಾರತೀಯ ನಾಯಕನಾಗಿ ಈ ಸಾಧನೆಗೆ ಭಾಜನರಾಗಿದ್ದರು.

ಇದೀಗ ಜಿಂಬಾಬ್ವೆ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಟಾಸ್ ಗೆಲ್ಲುವ ಮೂಲಕ ಶ್ರೇಯಸ್ ಅಯ್ಯರ್ ಸತತ ಎಂಟು ಟಾಸ್‌ಗಳನ್ನು ಗೆದ್ದ ಭಾರತದ ಮೊದಲ ಟಿ20 ನಾಯಕ ಎಂಬ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಅಯ್ಯರ್ ಕೇವಲ ಧೋನಿ ದಾಖಲೆಯನ್ನು ಹಿಂದಿಕ್ಕುವುದಷ್ಟೇ ಅಲ್ಲ, 87 ವರ್ಷಗಳ ಹಿಂದಿನ ವಿಶ್ವದಾಖಲೆಯನ್ನೂ ಸರಿಗಟ್ಟುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಮೈಲುಗಲ್ಲು ತಲುಪಿದ್ದಾರೆ.



ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ನಾಯಕನಾಗಿ ತಮ್ಮ ಮೊದಲ ಎಂಟು ಟಿ20 ಪಂದ್ಯಗಳಲ್ಲೂ ಸತತ ಟಾಸ್ ಗೆದ್ದ ಮೊದಲ ನಾಯಕ ಎಂಬ ಅಪರೂಪದ ಸಾಧನೆ ಅಯ್ಯರ್ ಮಾಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಬಹಾಮಾಸ್ ಕ್ರಿಕೆಟಿಗ ಗ್ರೆಗೊರಿ ಟೇಲರ್ ಹೆಸರಿನಲ್ಲಿತ್ತು. ಅವರು ಟಿ20 ಮಾದರಿಯಲ್ಲಿ ನಾಯಕತ್ವ ವಹಿಸಿದ ತಮ್ಮ ಮೊದಲ ಏಳು ಪಂದ್ಯಗಳಲ್ಲಿ ಸತತವಾಗಿ ಟಾಸ್ ಗೆದ್ದಿದ್ದರು.

ಭಾರತ ತಂಡಕ್ಕೆ ಶುಭಾರಂಭ

ಮೊದಲನೇ ಪಂದ್ಯದಲ್ಲಿ ಟಾಸ್‌ ಗೆದ್ದು ಎದುರಾಳಿ ಜಿಂಬಾಬ್ವೆ ತಂಡವನ್ನು ಮೊದಲ ಬ್ಯಾಟಿಂಗ್‌ ಆಹ್ವಾನಿಸಿದ್ದ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಯೋಜನೆಯನ್ನು ಬೌಲರ್‌ಗಳು ಸಫಲಗೊಳಿಸಿದರು. ಜಿಂಬಾಬ್ವೆ 20 ಓವರ್‌ಗಳಿಗೆ 125 ರನ್‌ಗಳಿಗೆ ಸೀಮಿತವಾಯಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ವೈಭವ್‌ ಸೂರ್ಯವಂಶಿ ಅವರ ಅರ್ಧಶತಕದ ಬಲದಿಂದ 13.2 ಓವರ್‌ಗಳಲ್ಲಿ 126 ರನ್‌ ಗಳಿಸಿ 7 ವಿಕೆಟ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆಯನ್ನು ಪಡೆದಿದ್ದಾರೆ.