ʼʼಅಪ್ಪ ನನಗಾಗಿ 5 ರುಪಾಯಿ ಉಳಿಸಲು ನಡೆದುಕೊಂಡು ಹೋಗುತ್ತಿದ್ದರುʼʼ: ತಂದೆಯನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ದು ಮಗನ ಭಾವುಕ ಪೋಸ್ಟ್
Viral Video: ಮಕ್ಕಳ ಒಳಿತಿಗಾಗಿ ಪೋಷಕರು ಸಾಕಷ್ಟು ತ್ಯಾಗ ಮಾಡಿ ಶಿಕ್ಷಣ ಒದಗಿಸುತ್ತಾರೆ. ಇಡೀ ಜೀವನವನ್ನು ತಮಗಾಗಿ ಮೀಸಲಿಟ್ಟ ಹೆತ್ತವರನ್ನು ಖುಷಿಯಾಗಿ ಇರಿಸುವುದು ಮಕ್ಕಳ ಕರ್ತವ್ಯ ಕೂಡ ಹೌದು. ಇದಕ್ಕೆ ಪೂರಕವಾಗಿ ಯುವಕನೊಬ್ಬ ತನಗೆ ಕಷ್ಟಪಟ್ಟು ಓದಿಸಿದ ತಂದೆಯನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ಯುವ ಮೂಲಕ ಭಾವುಕ ಪೋಸ್ಟ್ ಶೇರ್ ಮಾಡಿದ್ದಾನೆ. ತನ್ನ ತಂದೆ ರಿಕ್ಷಾ ದರದಲ್ಲಿ 5 ರುಪಾಯಿ ಉಳಿಸಲು ತನಗಾಗಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು. ಇಂದು ಅವರನ್ನು ವಂದೇ ಭಾರತ್ ರೈಲಿನಲ್ಲಿ ಕರೆದುಕೊಂಡು ಹೋಗಲು ಹೆಮ್ಮೆ ಎನಿಸಿದೆ ಎಂದಿದ್ದಾರೆ.
ಅಪ್ಪನನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ದು ಮಗ -
ನವದೆಹಲಿ, ಜು. 23: ಬಹುತೇಕ ಎಲ್ಲ ಪೋಷಕರು ಮಕ್ಕಳ ಒಳಿತಿಗಾಗಿ ಕಷ್ಟಪಟ್ಟು, ತ್ಯಾಗ ಮಾಡಿ ಶಿಕ್ಷಣ ಒದಗಿಸುತ್ತಾರೆ. ಇಡೀ ಜೀವನವನ್ನು ತಮಗಾಗಿ ಮೀಸಲಿಟ್ಟ ಹೆತ್ತವರನ್ನು ಖುಷಿಯಾಗಿ ಇರಿಸುವುದು ಮಕ್ಕಳ ಕರ್ತವ್ಯವೂ ಹೌದು. ಇದಕ್ಕೆ ಪೂರಕವಾಗಿ ಯುವಕನೊಬ್ಬ ಕಷ್ಟಪಟ್ಟು ತನ್ನನ್ನು ಓದಿಸಿದ ತಂದೆಯನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ಯುವ ಮೂಲಕ ಭಾವುಕ ಪೋಸ್ಟ್ ಶೇರ್ (Viral News) ಮಾಡಿದ್ದಾರೆ. ತಂದೆ ರಿಕ್ಷಾ ದರದಲ್ಲಿ 5 ರುಪಾಯಿ ಉಳಿಸಲು ತನಗಾಗಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು. ಇಂದು ಅವರನ್ನು ವಂದೇ ಭಾರತ್ ರೈಲಿನಲ್ಲಿ ಕರೆದುಕೊಂಡು ಹೋಗಲು ಹೆಮ್ಮೆ ಎನಿಸಿದೆ ಎಂದು ಬರೆದುಕೊಂಡಿದ್ದಾರೆ.
ಯಶಸ್ಸು ಅನ್ನೋದು ಕೇವಲ ಬಡ್ತಿ ಅಥವಾ ಉಳಿತಾಯಕ್ಕಿಂತ ಹೆಚ್ಚು ಕೆಲವೊಮ್ಮೆ ಅದು ಬಹಳಷ್ಟು ತ್ಯಾಗ ಮಾಡಿದವರಿಗೆ, ವಿಶೇಷವಾಗಿ ಪೋಷಕರಿಗೆ ನೀಡುವ ಸಣ್ಣ ಸಣ್ಣ ಕ್ಷಣಗಳಲ್ಲಿ ಇರುತ್ತದೆ. ಇಡೀ ಜೀವನವನ್ನೇ ಖುಷಿಯಾಗಿ ಇರಿಸಿದ ಪೋಷಕರಿಗೆ ಸಂತೋಷ ನೀಡಿದರೆ ಅದಕ್ಕಿಂತ ಯಶಸ್ಸು ಯಾವುದು ಇಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ.
ವಿಡಿಯೊ ನೋಡಿ:
ಇದೀಗ ದೆಹಲಿಯ ಯುವಕ ತನ್ನ ತಂದೆಯ ತ್ಯಾಗಕ್ಕೆ ಪ್ರತಿಯಾಗಿ ಅತ್ಯಾಧುನಿಕ 'ವಂದೇ ಭಾರತ್' ರೈಲಿನಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದಾನೆ. ಭುಖಾದ್ ಮುಸಾಫಿರ್ ಎಂಬ ಯುವಕ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿರುವ ವಿಡಿಯೊದಲ್ಲಿ, ಒಬ್ಬ ಮಹಿಳೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ವೃದ್ಧ ವ್ಯಕ್ತಿಯನ್ನು ರೈಲಿಗೆ ಹತ್ತಲು ಸಹಾಯ ಮಾಡುವ ದೃಶ್ಯ ಕಾಣಬಹುದು. ಆ ವ್ಯಕ್ತಿ ತನ್ನ ಕಿಟಕಿಯ ಸೀಟಿನಲ್ಲಿ ಆರಾಮವಾಗಿ ಕುಳಿತು ಬಹಳ ಹೆಮ್ಮೆಯಿಂದ ಮುಗುಳ್ನಕ್ಕಿದ್ದಾರೆ.
ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!
"ಅಪ್ಪ ವಂದೇ ಭಾರತ್ ಸವಾರಿಯನ್ನು ಅನುಭವಿಸುತ್ತಿದ್ದಾರೆ" ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದ್ದು, ತಂದೆಯ ವರ್ಷಗಳ ತ್ಯಾಗ ನೆನಪಿಸಿದ್ದಾರೆ. ʼʼಅಪ್ಪ ರಿಕ್ಷಾ ದರದಲ್ಲಿ 5 ರುಪಾಯಿ ಉಳಿಸಲು ತಮ್ಮ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು. ಇಂದು, ನನಗೆ ಅವಕಾಶ ಸಿಕ್ಕರೆ, ನಾನು ಸಂತೋಷದಿಂದ ಸ್ವಲ್ಪ ಹೆಚ್ಚುವರಿ ಖರ್ಚು ಮಾಡುತ್ತೇನೆ. ಜವಾಬ್ದಾರಿಗಳ ಹೊರೆ ಅವರಿಗಿಲ್ಲದೆ ಆರಾಮದಾಯಕ ಸೌಕರ್ಯವನ್ನು ನೀಡಲು ಪ್ರಯತ್ನಿಸುತ್ತಿದ್ದೇನೆʼʼ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿರೊಬ್ಬರು, ʼʼಇದು ನಿಜವಾದ ಯಶಸ್ಸುʼʼ ಎಂದರು. ಮತ್ತೊಬ್ಬರು, ʼʼನಿಮ್ಮ ಹೆತ್ತವರಿಗೆ ಇದಕ್ಕಿಂತ ಖುಷಿ ಬೇರೆಯೇನಿಲ್ಲʼʼ ಎಂದು ಬರೆದಿದ್ದಾರೆ.