IND vs SL: ಕಮಿಂದು ಮೆಂಡಿಸ್‌ರ ಸ್ಟನಿಂಗ್ ಕ್ಯಾಚ್ ಪಡೆದ ಶುಭಮನ್ ಗಿಲ್! ವಿಡಿಯೊ
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯದ ಮೂರನೇ ದಿನ ಪ್ರವಾಸಿ ತಂಡದ ನಾಯಕ ಶುಭಮನ್ ಗಿಲ್ ಫೀಲ್ಡಿಂಗ್‌ನಲ್ಲಿ ಗಮನ ಸೆಳೆದರು. ಅವರು ಕಮಿಂದು ಮೆಂಡಿಸ್ ಅವರ ಸ್ಟನಿಂಗ್ ಕ್ಯಾಚ್ ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಮಿಂದು ಮೆಂಡಿಸ್‌ರ ಸ್ಟನಿಂಗ್ ಕ್ಯಾಚ್ ಪಡೆದ ಶುಭಮನ್ ಗಿಲ್. -
ಗಾಲೆ: ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ (IND vs SL) ಆರಂಭಿಕ ಎರಡು ದಿನಗಳಲ್ಲಿ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡ, ಇದೀಗ ಮೂರನೇ ದಿನವೂ ತನ್ನ ಅಧಿಕಾರಯುತ ಪ್ರದರ್ಶನವನ್ನು ಮುಂದುವರಿಸಿದೆ. ಅದರಲ್ಲಿಯೂ ವಿಶೇಷವಾಗಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ (Shubman Gill) ಅವರು ತಮ್ಮ ಫೀಲ್ಡಿಂಗ್ ಕೌಶಲದಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 462 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಮೂರನೇ ದಿನ ಪ್ರಥಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊಹಮ್ಮದ್ ಸಿರಾಜ್, ಮಾನವ್ ಸುತಾರ್ ಹಾಗೂ ಕುಲ್ದೀಪ್ ಯಾದವ್ ಮೊದಲನೇ ಸೆಷನ್‌ನಲ್ಲಿ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತವನ್ನು ನೀಡಿದ್ದರು. ಭೋಜನ ವಿರಾಮದ ಹೊತ್ತಿಗೆ ಶ್ರೀಲಂಕಾ ತಂಡ 5 ವಿಕೆಟ್‌ಗಳನ್ನು ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು.
ಅಂದ ಹಾಗೆ ಮೊದಲನೇ ಸೆಷನ್‌ನಲ್ಲಿ ನಾಯಕ ಶುಭಮನ್ ಗಿಲ್ ಅವರು ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಗಮನವನ್ನು ಸೆಳೆದಿದ್ದಾರೆ. ಅವರು ಕಮಿಂದು ಮೆಂಡಿಸ್ ಅವರ ಅದ್ಭುತ ಕ್ಯಾಚ್ ಅನ್ನು ಪಡೆದರು. 17ನೇ ಓವರ್‌ನ ಮೊದಲ ಎಸೆತದಲ್ಲಿ ಕಮಿಂದು ಮೆಂಡಿಸ್ ಮುಂದೆ ಬಂದು ಕವರ್ಸ್ ಕಡೆಗೆ ಚೆಂಡೆನ್ನು ಹೊಡೆದರು. ಈ ವೇಳೆ ನಾಯಕ ಶುಭಮನ್ ಗಿಲ್ ಚೆಂಡಿನ ವೇಗವನ್ನು ಅರಿತುಕೊಂಡು ಜಿಂಕೆಯಂತೆ ಹಾರಿ ಒಂದೇ ಕೈನಲ್ಲಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಮೆಂಡಿಸ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಸಫಲರಾದರು.
IND vs SL: ಮೂರನೇ ದಿನ ಟೇಲ್‌ಎಂಡರ್ಸ್ ಆಡಿದ್ದೇಕೆ? ಗಭೀರ್, ಗಿಲ್ ವಿರುದ್ಧ ದೊಡ್ಡ ಗಣೇಶ್ ಕಿಡಿ!
ಶುಭಮನ್ ಗಿಲ್ ಪಡೆದ ಸ್ಟನಿಂಗ್ ಕ್ಯಾಚ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಗಿಲ್ ಅವರ ಅದ್ಭುತ ಕ್ಯಾಚ್ ಅನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಡಿಕ್ವೆಲ್ಲಾ-ಸೊನಲ್ ಕಠಿಣ ಹೋರಾಟ
ಈ ಪಂದ್ಯದ ಬಗ್ಗೆ ಹೇಳುವುದಾದರೆ, ಭಾರತ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ 462 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಶ್ರೀಲಂಕಾ ಪ್ರಥಮ ಇನಿಂಗ್ಸ್ ಆರಂಭಿಸಿ ಬಹುಬೇಗ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ಟೀಮ್ ಇಂಡಿಯಾ ಬೌಲರ್ಸ್, ಲಂಕಾ ತಂಡದ ಮೇಲೆ ಒತ್ತಡವನ್ನು ಹೇರಿದರು.
Left hand, full stretch, absolute stunner from Shubman Gill! 🥵
— Sony Sports Network (@SonySportsNetwk) August 17, 2026
Watch #SLvIND, 1st Test, LIVE NOW on Sony Sports Network TV channels & Sony LIV.#SonySportsNetwork #SonyLIV #BeautifulGameOfTestCricket pic.twitter.com/xe2ldGxkpJ
ನಿಶಾನ್ ಮದುಶಂಕ ಫೆರ್ನಾಂಡೊ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಲಹಿರು ಉದಾರ ಇಗಲಮಗೆ ಅವರು 27 ರನ್‌ಗಳನ್ನು ಗಳಿಸಿದರು. ದಿನೇಶ್ ಚಾಂಡಿಮಾಲ್ ಹಾಗೂ ಕಮಿಂದು ಮೆಂಡಿಸ್ ಕ್ರಮವಾಗಿ 4 ಮತ್ತು 14 ರನ್‌ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಶ್ರೀಲಂಕಾ ತಂಡ 99 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆದರೆ, ಎರಡನೇ ಸೆಷನ್‌ನಲ್ಲಿ ಶ್ರೀಲಂಕಾ ತಂಡದಿಂದ ಉತ್ತಮ ಪೈಪೋಟಿ ಮೂಡಿ ಬಂದಿತು. ಸೋನಲ್ ದಿನುಷಾ ಹಾಗೂ ನಿರೋಶನ್ ಡಿಕ್ವೆಲ್ಲಾ ಅವರ ಅದ್ಭುತ ಜೊತೆಯಾಟದ ಮೂಲಕ ಶ್ರೀಲಂಕಾ ತಂಡ ಅಪಾಯದಿಂದ ಹೊರ ಬಂದಿತು. ಸೋನಲ್ ಹಾಗೂ ಡಿಕ್ವೆಲ್ಲಾ ಜೋಡಿ ಆರನೇ ವಿಕೆಟ್‌ಗೆ 146 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ತಂಡದ ಮೊತ್ತವನ್ನು 236 ರನ್‌ಗಳಿಗೆ ಏರಿಸಿತು. ಈ ಇಬ್ಬರೂ ತಮ್ಮ-ತಮ್ಮ ಅರ್ಧಶತಕಗಳನ್ನು ಪೂರ್ಣಗೊಳಿಸಿದರು.
ರಾಹುಲ್ ಗಾಯದ ಬಗ್ಗೆ ಅಪ್ಡೇಟ್ ಕೊಟ್ಟ ಬ್ಯಾಟಿಂಗ್ ಕೋಚ್
ತಾಳ್ಮೆಯಿಂದ ಬ್ಯಾಟ್ ಮಾಡಿದ ನಿರೋಶನ್ ಡಿಕ್ವೆಲ್ಲಾ 115 ಎಸೆತಗಳಲ್ಲಿ 80 ರನ್‌ಗಳನ್ನು ಗಳಿಸಿದ ಬಳಿಕ ಪ್ರಸಿಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮುಂದುವರಿಸಿದ ಸೋನಲ್, 70 ಓವರ್‌ಗಳ ಅಂತ್ಯಕ್ಕೆ ಅಜೇಯ 80 ರನ್ ಗಳಿಸಿ ಅಜೇಯರಾಗಿದ್ದಾರೆ. ಈ ವೇಳಗೆ ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 252 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ ಹಾಗೂ ಇನ್ನೂ 210 ರನ್‌ಗಳ ಹಿನ್ನಡೆಯಲ್ಲಿದೆ.